ಮಲಯಾಳಂ ಚಿತ್ರರಂಗದಲ್ಲಿ ಸದ್ಯಕ್ಕಂತು ಯುವ ನಟರದ್ದೇ ಅಧಿಪತ್ಯ. ಹಿರಿಯ ನಟರ ಚಿತ್ರದೊಂದಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾ ನೀಡಿ ಮುನ್ನುಗ್ಗುತ್ತಿರುವ ಯುವ ನಟರಲ್ಲಿ ದುಲ್ಖರ್ ಸಲ್ಮಾನ್, ನಿವಿನ್ ಪೌಲಿ ಮತ್ತು ಫಹಾದ್ ಫಾಸಿಲ್ ಸದ್ಯ ಮುಂಚೂಣಿಯಲ್ಲಿದ್ದಾರೆ.
ಮಾಲಿವುಡ್’ನ ಈ ಭರವಸೆಯ ತ್ರಿಮೂರ್ತಿಗಳು ಈ ಹಿಂದೆ ಜೊತೆಯಾಗಿ ಅಭಿನಯಿಸಿದ್ದ “ಬ್ಯಾಂಗಳೂರ್ ಡೇಸ್” ಚಿತ್ರವು ಸಿನಿರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಷ್ಟೇ ಅಲ್ಲದೇ ಈ ಚಿತ್ರವು ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಮಲಯಾಳಂ ಸಿನಿರಂಗದಲ್ಲಿ 50ಕೋಟಿ ಗಳಿಸಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಈ ಮೂವರು ಯುವತಾರೆಯರಲ್ಲಿ ನಟ ಫಹದ್, ದುಲ್ಖರ್ ಬಾಲ್ಯ ಸ್ನೇಹಿತರಾಗಿದ್ದರೂ ನಟ ನಿವಿನ್ ಪೌಲಿ ಸಿನಿರಂಗದಿಂದ ಇವರ ಫ್ರೆಂಡ್ಶಿಪ್ ಸಂಪಾದಿಸಿದ್ದರು. ಆದರೆ ಇದೀಗ ಈ ಮೂವರ ಚಿತ್ರಗಳು ಏಕಕಾಲಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ ಎಂಬುದು ಮಲ್ಲುಸ್ ಟಾಕ್ ಆಫ್ ದಿ ಟೌನ್. ಮಮ್ಮುಟ್ಟಿ – ಮೋಹನ್ ಲಾಲ್’ಗೆ ಸೀಮಿತವಾಗಿದ್ದ ಬಾಕ್ಸಾಫೀಸ್ ಕ್ಲ್ಯಾಶ್ ಇದೇ ಮೊದಲ ಬಾರಿ ಯುವ ನಟರ ಮುಂದೆ ಬಂದು ನಿಂತಿದೆ. ನಿರ್ದೇಶಕ ಅಮಲ್ ನೀರದ್, ದುಲ್ಖರ್ ಸಲ್ಮಾನ್’ರನ್ನು ನಾಯಕನಾಗಿ “ಸಿಐಎ” ಚಿತ್ರವನ್ನು ಘೋಷಿಸಿದಾಗ ಮೂಡಿದ ಸಿನಿಪ್ರಿಯರ ಕ್ಯೂರ್ಯಾಸಿಟಿ ಎಪ್ರಿಲ್ ತಿಂಗಳಿನಲ್ಲಿ ರಿಲೀಸ್ ಎಂಬಲ್ಲಿಗೆ ಬಂದು ನಿಂತಿದೆ.
ಅತ್ತ ನಟ ನಿವಿನ್ ಪೌಲಿ ಅಭಿನಯದ ರಾಜಕೀಯ ಬಣ್ಣದ ಕಥೆಯ “ಸಗಾವ್” ಚಿತ್ರ ಕೂಡ ಎಪ್ರಿಲ್’ಗೆ ತೆರೆ ಕಾಣಲು ಸಜ್ಜಾಗಿದೆ. ಹಾಗೆಯೇ ‘ಮಹೇಶಂಡೆ ಪ್ರದಿಗಾರಂ’ ಎಂಬ ಬ್ಲಾಕ್ ಬ್ಲಸ್ಟರ್ ಚಿತ್ರದ ಬಳಿಕ ಫಹದ್ ಫಾಸಿಲ್ ನಟನೆಯ ‘ರೋಲ್ ಮಾಡೆಲ್’ ಚಿತ್ರ ಕೂಡ ಏಪ್ರಿಲ್’ಗೆ ಥಿಯೇಟರನ್ನು ಅಪ್ಪಳಿಸಲಿದೆ ಎಂದು ವರದಿಯಾಗಿದೆ. ಚಿತ್ರರಂಗದ ಬೆಸ್ಟ್ ಫ್ರೆಂಡ್ಸ್ ಲೀಸ್ಟನಲ್ಲಿರುವ ‘ಬ್ಯಾಂಗಲೂರ್ ಡೇಸ್’ ಖ್ಯಾತಿಯ ನಟರ ಚಿತ್ರಗಳು ಏಕಕಾಲಕ್ಕೆ ಬಿಡುಗಡೆ ಕಾಣುತ್ತಿರುವುದು ಅಚ್ಚರಿಯೊಂದಿಗೆ ಸಿನಿಪ್ರಿಯರು ಕೂಡ ಎದುರು ನೋಡುತ್ತಿದ್ದಾರೆ. ಮಾಲಿವುಡ್’ನಲ್ಲಿ ಹೊಸ ಭರವಸೆ ಮೂಡಿಸಿರುವ ನಟರ ಚಿತ್ರಗಳು ಎಪ್ರಿಲ್’ನಲ್ಲಿ ತೆರೆಗೆ ಸಜ್ಜಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಫ್ಯಾನ್ಸ್ ಕೂಡ ಅವರ ನೆಚ್ಚಿನ ನಟನ ಚಿತ್ರದ ಭರ್ಜರಿ ಓಪನಿಂಗೆ ತಯಾರಿ ನಡೆಸುತ್ತಿದ್ದಾರೆ ಎಂಬುದೇ ಸದ್ಯದ ಮಾಲಿವುಡ್ ಸುದ್ದಿ.
- ಅಕ್ಷತಾ ಪೊನ್ನಣ್ಣ