One N Only Exclusive Cine Portal

ಮಕ್ಕಳ ಚಿತ್ರ `ಬೆಟ್ಟದ ದಾರಿ’ಗೆ ವಿಜಯರಾಘವೇಂದ್ರ ಕ್ಲಾಪ್

‘ಬೆಟ್ಟದ ದಾರಿ’ ಎಂಬ ಮಕ್ಕಳ ಚಿತ್ರಕ್ಕೆ ಸೋಮವಾರ ಮುಹೂರ್ತ ನೆರವೇರಿತು. ಚಿನ್ನಾರಿಮುತ್ತ ವಿಜಯರಾಘವೇಂದ್ರ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಈ ಹಿಂದೆ `ಬಂಗಾರಿ’ ನಿರ್ದೇಶನ ಮಾಡಿದ್ದ ಮಾ.ಚಂದ್ರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಚಂದ್ರಕಲಾ ಅವರು ನಿರ್ಮಾಪಕರು. ಈ ಹಿಂದೆ ಇವರು `ಮೂಕ ಹಕ್ಕಿ’ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಇವರ ಸಹೋದರ ಮಂಜುನಾಥ್ ಹೆಚ್.ನಾಯ್ಕ ಅವರು ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.
ಚಿತ್ರದ ಟೈಟಲ್ ಹೇಳುವಂತೆ, ಇದು ಮಕ್ಕಳ ಕುರಿತ ಚಿತ್ರ. ಇಡೀ ಚಿತ್ರದಲ್ಲಿ ಮಕ್ಕಳ ಕಾರುಬಾರು. ಅದು ಇದ್ದರೂ ಸಹ ನಿರ್ದೇಶಕರು ಕಮರ್ಷಿಯಲ್ ಅಂಶಗಳನ್ನು ಬೆರೆಸಿ, ನಿರ್ದೇಶನ ಮಾಡುತ್ತಿದ್ದಾರೆ. `ಬೆಟ್ಟದ ದಾರಿ’ ಚಿತ್ರದಲ್ಲಿ ನಿರ್ದೇಶಕರು ಕುಡಿಯುವ ನೀರಿನ ಸಮಸ್ಯೆ ಕುರಿತು ಹೇಳುತ್ತಿದ್ದಾರೆ. ನಿರ್ದೇಶಕರೇ ಹೇಳುವಂತೆ, ಇದು ಸಂಪೂರ್ಣ ಉತ್ತರಕರ್ನಾಟಕದಲ್ಲಿ ನಡೆಯುವ ಕಥೆ. ಆ ನೆಲದಲ್ಲಿ ಜ್ವಲಂತ ಸಮಸ್ಯೆಯಂತಿರುವ ಕುಡಿಯುವ ನೀರಿನ ವಿಷಯ ಇಟ್ಟುಕೊಂಡು ಕಥೆ ಹೆಣೆದಿzನೆ. ಆ ಭಾಗದ ಜನರು ನೀರಿಗೆ ಪರದಾಡುವುದು ಎಲ್ಲರಿಗೂ ಗೊತ್ತೇ ಇದೆ. ಎಷ್ಟೇ ಸರ್ಕಾರ ಬಂದರೂ, ಅಧಿಕಾರಿಗಳು ಇದ್ದರೂ ಆ ಭಾಗದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಈ ಚಿತ್ರದ ಮೂಲಕ ಒಂದು ಹಳ್ಳಿಯಲ್ಲಿ ನೀರಿಗೆ ಪರದಾಡುತ್ತಿರುವ ತನ್ನೂರಿನ ಜನರನ್ನು ಕಂಡು ಮರಗುವ ಮಕ್ಕಳು, ಅದಕ್ಕೊಂದು ಪರಿಹಾರ ಕಂಡುಹಿಡಿಯುತ್ತಾರೆ. ಅದೇ ಚಿತ್ರದ ತಿರುಳು ಎನ್ನುತ್ತಾರೆ ನಿರ್ದೇಶಕ ಮಾ.ಚಂದ್ರು.


ಈ ಚಿತ್ರದಲ್ಲಿ ಮಾಸ್ಟರ್ ನಿಶಾಂತ್ ಟಿ. ರಾಥೋಡ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾನೆ. ಇವರೊಂದಿಗೆ ಮಾಸ್ಟರ್ ಅಂಕಿತ್ ನವನಿಧಿ, ಬೇಬಿ ಲಕ್ಷ್ಮೀಶ್ರೀ, ಮಾಸ್ಟರ್ ರಂಗಸ್ವಾಮಿ, ಮಾಸ್ಟರ್ ರೋಹಿತ್ ಗೌಡ, ಮಾಸ್ಟರ್ ವಿಘ್ನೇಶ್ ಹಾಗು ಹಿರಿಯ ಕಲಾವಿದರಾದ ಬ್ಯಾಂಕ್ ಜನಾರ್ದನ್, ಉಮೇಶ್ ಸೇರಿದಂತೆ ಅನೇಕರು ಅಭಿನಯಿಸುತ್ತಿದ್ದಾರೆ. `ಬೆಟ್ಟದ ದಾರಿ’ ಚಿತ್ರವನ್ನು ಬಿಜಾಪುರ ಮತ್ತು ದೊಡ್ಡಬಳ್ಳಾಪುರದಲ್ಲಿ ಚಿತ್ರೀಕರಿಸಲಾಗುವುದು. ೩೦ ದಿನಗಳ ಚಿತ್ರೀಕರಣ ಮಾಡುವ ಯೋಚನೆ ಇದೆ ಎನ್ನುತ್ತಾರೆ ನಿರ್ದೇಶಕ ಮಾ.ಚಂದ್ರು.
ನಿರ್ಮಾಪಕಿ ಚಂದ್ರಕಲಾ ಅವರಿಗೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸೆ ಈ ಚಿತ್ರದ ಮೂಲಕ ಈಡೇರುತ್ತಿದೆಯಂತೆ. ಅವರಿಗೆ ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿದ್ದರಿಂದ, ಹಣ ಹೂಡಲು ಮುಂದಾಗಿದ್ದಾರೆ. ಸುಮಾರು ೪೦ ಲಕ್ಷ ರೂ.ಬಜೆಟ್‌ನಲ್ಲಿ ಈ ಮಕ್ಕಳ ಚಿತ್ರವನ್ನು ತಯಾರಿಸುತ್ತಿದ್ದು, ಯಾವುದೇ ಕಮರ್ಷಿಯಲ್ ಸಿನಿಮಾಗಳಿಗೂ ಕಮ್ಮಿ ಇಲ್ಲ ಎಂಬಂತೆ ಚಿತ್ರ ಮಾಡಲಾಗುವುದು. ಮಕ್ಕಳ ಚಿತ್ರಕ್ಕೆ ಹಣ ಮುಖ್ಯವಲ್ಲ. ಕಥೆ ಮುಖ್ಯ. ಇದು ಸಾಮಾಜಿಕ ಸಮಸ್ಯೆ ಸಾರುವ ಚಿತ್ರ. ಇಲ್ಲಿ ಅನೇಕ ಒಳ್ಳೆಯ ಅಂಶಗಳಿವೆ ಎನ್ನುತ್ತಾರೆ ಚಂದ್ರಕಲಾ.


ಚಿತ್ರಕ್ಕೆ ವೀರ್‌ಸಮರ್ಥ್ ಸಂಗೀತ ನೀಡುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ನಾಲ್ಕು ಗೀತೆಗಳಿಗೆ ರಾಗ ಸಂಯೋಜಿಸುತ್ತಿದ್ದಾರೆ. ವಿ. ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್, ವಿಜಯ ಭರಮಸಾಗರ ಹಾಡುಗಳನ್ನು ಬರೆಯುತ್ತಿದ್ದಾರೆ. ಚಿತ್ರದಲ್ಲಿ ಹಳ್ಳಿ ಸೊಗಡು ಕುರಿತ ಹಾಡು ಇದೆ. ಮಕ್ಕಳ ಗೆಳೆತನ ಬಗ್ಗೆ ಒಂದು ಗೀತೆ ಇದೆ. ನೀರಿಗೆ ಪರಿತಪಿಸುವ ಕುರಿತಂತೆಯೂ ಒಂದು ಗೀತೆ. ಅದರ ಜೊತೆಗೆ ಉತ್ತರ ಕರ್ನಾಟಕ ಭಾಷೆಯಲ್ಲೇ ಒಂದು ಹಾಡನ್ನು ಮಾಡಲಾಗುತ್ತದೆ ಎಂದು ವಿವರಿಸಿದರು ವೀರ್‌ಸಮರ್ಥ್.
ಚಿತ್ರಕ್ಕೆ ನಂದಕುಮಾರ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಅವರು ಮಕ್ಕಳ ಚಿತ್ರದಲ್ಲಿ ಚಾಲೆಂಜಿಂಗ್ ಇರುತ್ತದೆ. ಬಹುತೇಕ ನಾವೂ ಮಕ್ಕಳಾಗಿಯೇ ಅವರೊಂದಿಗೆ ಇಳಿದು, ಕೆಲಸ ತೆಗೆದುಕೊಂಡರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಉತ್ತರ ಕರ್ನಾಟಕದ ಪೂರ್ಣ ಹೂರಣವನ್ನು ಸೆರೆಹಿಡಿಯುವ ಪ್ರಯತ್ನ ಮಾಡುವುದಾಗಿ ಹೇಳಿದರು ನಂದಕುಮಾರ್.
ಚಿತ್ರದ ಇನ್ನೊಬ್ಬ ನಿರ್ಮಾಪಕ ಮಂಜುನಾಥ್ ಹೆಚ್.ನಾಯ್ಕ ಅವರಿಗೆ, ನಿರ್ದೇಶಕರು ಹಳೆಯ ಪರಿಚಯವಾದ್ದರಿಂದ ಅವರಿಗೆ ಕಥೆಯ ಮೇಲೆ ನಂಬಿಕೆ ಇದೆಯಂತೆ. ಆ ಉzಶದಿಂದ ಸಮಾಜಕ್ಕೊಂದು ಸಂದೇಶ ಸಾರುವ ಚಿತ್ರ ಕೊಡುವ ಪ್ರಯತ್ನ ಮಾಡುವುದಾಗಿ ಹೇಳಿಕೊಂಡರು. `ಬೆಟ್ಟದ ದಾರಿ’ ಚಿತ್ರದಲ್ಲಿ ನಟಿಸುತ್ತಿರುವ ಮಕ್ಕಳೆಲ್ಲರೂ ಚಿತ್ರದ ಪಾತ್ರ ಬಗ್ಗೆ ಮಾತಾಡಿದರು.

Leave a Reply

Your email address will not be published. Required fields are marked *


CAPTCHA Image
Reload Image