One N Only Exclusive Cine Portal

ಭಾಗಮತಿಗೆ ಬಹುಪರಾಕ್ ಎಂದ ತಲೈವ!

ಕಳೆದ ಬಾರಿ ‘ಬಾಹುಬಲಿ ೨’ ಚಿತ್ರದಲ್ಲಿ ತನ್ನ ಮನೋಜ್ಞ ಅಭಿನಯದ ಮೂಲಕ ಎಲ್ಲರನ್ನು ಸಿನಿಪ್ರಿಯರ ಮನಗೆದ್ದಿದ್ದ ನಟಿ ಅನುಷ್ಕಾ ಶೆಟ್ಟಿ, ಇದೀಗ ‘ಭಾಗಮತಿ’ ಚಿತ್ರದ ಮೂಲಕ ಮತ್ತೆ ಸಿನಿಪ್ರಿಯರ ಹೃದಯಕ್ಕೆ ಕನ್ನ ಹಾಕಿದ್ದಾರೆ. ಹೌದು, ಕಳೆದ ಜನವರಿ ೨೬ ರಂದು ಬಿಡುಗಡೆಯಾಗಿದ್ದ ಭಾಗಮತಿ ಚಿತ್ರಕ್ಕೆ ಎಲ್ಲಾ ಕಡೆಗಳಿಂದಲೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಆಂಧ್ರ, ತೆಲಂಗಾಣ, ತಮಿಳುನಾಡು ಕರ್ನಾಟಕ ಮತ್ತು ಉತ್ತರ ಭಾರತದಲ್ಲಿಯೂ ಏಕಕಾಲಕ್ಕೆ ಬಿಡುಗಡೆಯಾದ ‘ಭಾಗಮತಿ’ ಚಿತ್ರ ಎಲ್ಲಾ ಕಡೆಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು ಗಳಿಕೆಯಲ್ಲೂ ಸಾಕಷ್ಟು ಮುಂದಿದ್ದು, ಬಾಕ್ಸಾಫೀಸ್‌ನಲ್ಲಿಯೂ ಸೌಂಡ್ ಮಾಡುತ್ತಿರುವ ‘ಭಾಗಮತಿ’ ಚಿತ್ರದ ಮೊದಲ ವಾರ ಈ ಚಿತ್ರದ ಗಳಿಕೆ 33 ಕೋಟಿ ರೂ. ದಾಟಿದೆ ಎನ್ನುತ್ತಿವೆ ಟಾಲಿವುಡ್ ಮೂಲಗಳು.

ಮತ್ತೊಂದೆಡೆ ‘ಭಾಗಮತಿ’ ಚಿತ್ರದಲ್ಲಿಯ ಅನುಷ್ಕಾ ಶೆಟ್ಟಿ ಅಭಿನಯಕ್ಕೆ ಪ್ರೇಕ್ಷಕರಿಂದ ಮತ್ತು ಚಿತ್ರರಂಗದ ಗಣ್ಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ತೆಲುಗು ಮತ್ತು ತಮಿಳು ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಅನುಷ್ಕಾ ಅಭಿನಯವನ್ನು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ.

ಇನ್ನು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಅನುಷ್ಕಾ ಶೆಟ್ಟಿಯ ನಟನೆಗೆ ಮನಸೋತು, ‘ಭಾಗಮತಿ’ಗೆ ಬಹುಪರಾಕ್ ಎಂದಿದ್ದಾರೆ. ಹೌದು, ಕಳೆದ ವಾರಾಂತ್ಯದಲ್ಲಿ ‘ಭಾಗಮತಿ’ ಚಿತ್ರವನ್ನು ನೋಡಿರುವ ರಜನಿಕಾಂತ್, ನಟಿ ಅನುಷ್ಕಾ ಶೆಟ್ಟಿ ಅಭಿನಯವನ್ನು ಶ್ಲಾಸಿದ್ದಾರೆ. ಅಲ್ಲದೆ ಅನುಷ್ಕಾಗೆ ಸರ್ಪ್ರೈಸ್ ಕಾಲ್ ಕೂಡ ಮಾಡಿ ಮಾತನಾಡಿzರೆ. ಜೊತೆಗೆ ಇಡೀ ಚಿತ್ರತಂಡಕ್ಕೆ ಶುಭ ಕೋರಿzರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ನಟಿ ಅನುಷ್ಕಾ ಶೆಟ್ಟಿ ಈ ವಿಚಾರವನ್ನು ಹಂಚಿಕೊಂಡಿದ್ದು, ತಲೈವಾ ನಮ್ಮ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದು ನನಗೆ ದೊಡ್ಡ ಸಪ್ರೈಸ್ ನೀಡಿದೆ ಎಂದಿzರೆ.
ಸುಮಾ.ಜಿ

Leave a Reply

Your email address will not be published. Required fields are marked *


CAPTCHA Image
Reload Image