One N Only Exclusive Cine Portal

ಭಾಗಮತಿಯಾಗಿ ಅಬ್ಬರಿಸಿದ ಅನುಷ್ಕಾ ಶೆಟ್ಟಿ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅಪ್ಪಟ ಕನ್ನಡದ ಹುಡುಗಿ ಅನುಷ್ಕಾ ಶೆಟ್ಟಿ ಬಾಹುಬಲಿ ಚಿತ್ರದ ನಂತರ ಭಾರೀ ಸುದ್ದಿಯಲ್ಲಿದ್ದಾಳೆ. ಆಕೆ ಬಾಹುಬಲಿ ನಂತರ ಯಾವ ಚಿತ್ರದಲ್ಲಿ ನಟಿಸುತ್ತಾಳೆಂಬ ಕುತೂಹಲ ದೇಶಾದಂತ ಹುಟ್ಟಿಕೊಂಡಿತ್ತಲ್ಲಾ? ಅದ್ಯಾವುದಕ್ಕೂ ನಿಖರ ಉತ್ತರ ಕೊಡದೇ ಸುಮ್ಮನಿದ್ದ ಅನುಷ್ಕಾ ನಟನೆಯ ಭಾಗಮತಿ ಚಿತ್ರದ ಟ್ರೈಲರ್ ನೋಡಿ ಪ್ರೇಕ್ಷಕರೆಲ್ಲ ಖುಷಿಗೊಂಡಿದ್ದಾರೆ!
ಭಾಗಮತಿ ಚಿತ್ರದ ಅಫಿಷಿಯಲ್ ಟ್ರೈಲರ್ ಲಾಂಚ್ ಆಗಿದೆ. ಆದರೆ ಅದು ಗಂಟೆಗಳು ಕಳೆಯೋದರೊಳಗೆ ಪಡೆದುಕೊಂಡಿರೋದು ಅಕ್ಷರಶಃ ರಾಕೇಟ್ ವೇಗ. ಯಾಕೆಂದರೆ, ಈ ಟ್ರೈಲರ್ ಲಾಂಚ್ ಆಗಿ ಮೂರು ಘಂಟೆ ಕಳೆಯೋದರೊಳಗೆ ಒಂದು ಮಿಲಿಯನ್‌ಗೂ ಮೀರಿದ ವೀವ್ಸ್ ಪಡೆಯೋ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ!


ಈ ಟ್ರೈಲರ್ ಬಿಡುಗಡೆಗೊಂಡಿದ್ದು ಸೋಮವಾರ ಮಧ್ಯಾಹ್ನ ಸರಿಯಾಗಿ 1.35ಕ್ಕೆ. ಅದಾಗಿ ಮೂರು ಘಂಟೆ ಕಳೆಯೋದರೊಳಗೆ ಅದು ವೈರಲ್ ಆಗಿ ಹೋಗಿತ್ತು. ದೇಶ ವಿದೇಶಗಳಲ್ಲಿ ಜನ ಯಾವ ಪರಿ ಹುಚ್ಚೆದ್ದು ನೋಡಿದರೆಂದರೆ, ಮೂರು ಘಂಟೆಯ ಹೊತ್ತಿಗೆಲ್ಲಾ ಒಂದು ಮಿಲಿಯನ್‌ಗೂ ಅಧಿಕ ವೀವ್ಸ್ ದಾಖಲಿಸಿತ್ತು.


ಭಾಗಮತಿ ಚಿತ್ರದ ಟ್ರೈಲರಿನ ಖದರೇ ಅಂಥಾದ್ದಿದೆ. ಒಂದು ಹಳ್ಳಿ ಬ್ಯಾಕ್‌ಡ್ರಾಪಿನಲ್ಲಿ ತೆರೆದುಕೊಳ್ಳೋ ದೃಷ್ಯಾವಳಿಗಳು ನಂತರ ಮೈ ನವಿರೇಳಿಸುವ, ಬೆಚ್ಚಿ ಬೀಳಿಸುವಂಥಾ ಹಾರರ್ ಕಥಾವಳಿಯ ಹೊಳಹಿನೊಂದಿಗೆ ಬಿಚ್ಚಿಕೊಳ್ಳುತ್ತದೆ. ಈ ಚಿತ್ರದಲ್ಲಿ ಅನುಷ್ಕಾ ಬೇರೆ ಬೇರೆ ಶೇಡ್‌ಗಳಲ್ಲಿ ಕಾಣಿಸಿಕೊಂಡಿರೋ ಸುಳಿವನ್ನೂ ಕೂಡಾ ಈ ಟ್ರೈಲರ್ ಬಿಟ್ಟು ಕೊಟ್ಟಿದೆ. ಇನ್ನುಳಿದಂತೆ ಮುದ್ದಾಗಿ ಕಾಣೋ ಅನುಷ್ಕಾಗೆ ಇನ್ನಷ್ಟು ಪ್ರೇಕ್ಷಕರು ಫಿದಾ ಆಗಿದ್ದಾರೆ!


ಆದಿ ಪಿನಿಶೆಟ್ಟಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದರೂ ಪ್ರಧಾನ ಪಾತ್ರ ಮತ್ತು ಆಕರ್ಷಣೆ ಅನುಷ್ಕಾಳದ್ದೇ. ಪಿಲ್ಲ ಜಮಿನ್ದಾರ್ ಸಿನಿಮಾ ಖ್ಯಾತಿಯ ಜಿ ಅಶೋಕ್ ನಿರ್ದೇಶನದ ಈ ಚಿತ್ರ ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಏಕ ಕಾಲದಲ್ಲೇ ತಯಾರಾಗುತ್ತಿದೆ. ಉನ್ನಿ ಮುಕುಂದನ್, ಜಯರಾಂ ಮುಂತಾದವರು ಬಹು ಮುಖ್ಯವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಭಾಗಮತಿಯ ಟ್ರೈಲರ್ ಅಂತೂ ಭಾರೀ ಫೇನಸ್ಸಾಗಿದೆ. ಇದರಲ್ಲಿ ಭಾಗಮತಿಯಾಗಿ ಅನುಷ್ಕಾಳ ಅಬ್ಬರದ ನಟನೆ ಎಲ್ಲರ ಮನಸೂರೆಗೊಂಡಿದೆ. ಇದರ ದೃಷ್ಯ ವೈಭವ ಬಾಹುಬಲಿಯನ್ನೇ ಸರಿಗಟ್ಟುವಂಥಾ ಮತ್ತೊಂದು ಗೆಲುವಿನ ಎಲ್ಲ ಲಕ್ಷಣಗಳನ್ನು ಹೊಮ್ಮಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image