One N Only Exclusive Cine Portal

ಭರತ್ ಅನ್ನೇ ನೇನು ಚಿತ್ರದ್ದು ರಿಯಲಿಸ್ಟಿಕ್ ಕಥೆಯಂತೆ!

ಮಹೇಶ್ ಬಾಬು ನಟನೆಯ ಬಹು ನಿರೀಕ್ಷಿತ ಚಿತ್ರ ಭರತ್ ಅನ್ನೇ ನೇನು ಬಿಡುಗಡೆಗೆ ಎರಡು ದಿನವಷ್ಟೇ ಬಾಕಿ ಉಳಿದುಕೊಂಡಿದೆ. ಅದಾಗಲೇ ಈ ಚಿತ್ರದ ಕಥೆ ಏನೆಂಬ ಬಗ್ಗೆ ಎಲ್ಲೆಡೆ ವ್ಯಾಪಕ ಕುತೂಹಲ, ಥರ ಥರದ ಚರ್ಚೆಗಳು ಹುರಿಗಟ್ಟಿಕೊಂಡಿದೆ. ಆದರೆ ಚಿತ್ರ ತಂಡ ಮಾತ್ರ ಇದೊಂದು ಅಪ್ಪಟ ಪೊಲಿಟಿಕಲ್ ಥ್ರಿಲ್ಲರ್ ಎಂಬುದರ ಹೊರತಾಗಿ ಬೇರ‍್ಯಾವ ಸೂಕ್ಷ್ಮಗಳನ್ನೂ ಬಿಟ್ಟುಕೊಟ್ಟಿಲ್ಲ.

ಆದರೆ ಈ ಪೊಲಿಟಿಕಲ್ ಥ್ರಿಲ್ಲರ್ ಎಂಬ ಅಂಶದ ಸುತ್ತಲೇ ಅಭಿಮಾನಿ ವಲಯದಲ್ಲಿ ರಂಗು ರಂಗಾದ ಕಥೆಗಳು ಹರಿದಾಡುತ್ತಿವೆ. ಈ ಚಿತ್ರದಲ್ಲಿ ತಮ್ಮಿಷ್ಟದ ನಟ ಮಹೇಶ್ ಬಾಬು ಆಂಧ್ರದ ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೆ ಮುಖ್ಯಮಂತ್ರಿಯಾಗಿದ್ದುಕೊಂಡು ಸಮಾಜದ ದುಷ್ಟ ಶಕ್ತಿಗಳನ್ನು ನುಗ್ಗಿ ಮಟ್ಟ ಹಾಕುವ ಮಾಸ್ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ ಅಂತೆಲ್ಲ ಸುದ್ದಿಗಳು ಹರಿದಾಡುತ್ತಿವೆ.

ಆದರೆ ಇದೇ ಚಿತ್ರದ ನಿಜವಾದ ಕಥೆ ಎಂಬಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಬಿಬಿಂಬಿತವಾಗುತ್ತಿರೋದರಿಂದ ಚಿತ್ರ ತಂಡ ಅಲರ್ಟ್ ಆಗಿದೆ. ಈ ಚಿತ್ರ ಪೊಲಿಟಿಕಲ್ ಥ್ರಿಲ್ಲರ್ ಎಂಬ ವಿಚಾರ ನಿಜವಾದರೂ ಈಗ ಹರಿದಾಡುತ್ತಿರೋ ಕಥೆಯನ್ನು ಈ ಚಿತ್ರ ಹೊಂದಿಲ್ಲ. ವಾಸ್ತವಕ್ಕೆ ತಿರಾ ಹತ್ತಿರವಾಗಿರುವಂಥಾ ರೀತಿಯಲ್ಲಿ ಮಹೇಶ್ ಬಾಬು ಪಾತ್ರ ಇದೆ ಎಂಬ ಸ್ಪಷ್ಟನೆಯೂ ಚಿತ್ರತಂಡದ ಕಡೆಯಿಂದ ಹೊರ ಬಿದ್ದಿದೆ.

ಅಂದಹಾಗೆ ಮಹೇಶ್ ಬಾಬು ಚಿತ್ರಗಳೆಂದ ಮೇಲೆ ಮಾಸ್ ಸಬ್ಜೆಕ್ಟ್ ಹೊಂದಿರೋದು ಸಹಜ. ಆದರೆ ಈ ವರೆಗಿನ ಎಲ್ಲ ದಾಖಲೆಗಳನ್ನೂ ಮುರಿಯುವಂಥಾ ಅದ್ಭುತವಾದ ಸಾಹಸ ಸನ್ನಿವೇಶಗಳನ್ನು ಈ ಚಿತ್ರ ಒಳಗೊಂಡಿದೆಯಂತೆ. ರಾಮ್ ಲಕ್ಷ್ಮಣ್ ಮತ್ತು ಪೀಟರ್ ಹೇಯ್ನ್ಸ್ ನಿರ್ದೇಶನದಲ್ಲಿ ಮೈ ನವಿರೇಳಿಸುವಂಥಾ ಸಾಹಸ ದೃಷ್ಯಾವಳಿಗಳು ಮೂಡಿ ಬಂದಿವೆಯಂತೆ.

ಇದೆಲ್ಲದರಾಚೆಗೂ ಭರತ್ ಅನ್ನೇ ನೇನು ಚಿತ್ರದಲ್ಲಿ ಮಹೇಶ್ ಬಾಬು ಆಂಧ್ರದ ಮುಖ್ಯಮಂತ್ರಿಯಾಗಿ ನಟಿಸಿದ್ದಾರಾ ಎಂಬ ಕುತೂಹಲವೊಂದು ಮಹೇಶ್ ಬಾಬು ಅವರಲ್ಲಿ ಇದ್ದೇ ಇದೆ.

Leave a Reply

Your email address will not be published. Required fields are marked *


CAPTCHA Image
Reload Image