One N Only Exclusive Cine Portal

ಭಾರತದ ಗಡಿ ದಾಟಲಿದ್ದಾನೆ ಭರತ್ ಅನ್ನೇ ನೇನು!

ತೆಲುಗಿನ ಮಹೇಶ್ ಬಾಬು ಚಿತ್ರಗಳಿಗೆ ಕನ್ನಡವೂ ಸೇರಿದಂತೆ ಬೇರೆಬೇರೆ ಭಾಷೆಗಳಲ್ಲಿಯೂ ಭಾರೀ ಬೇಡಿಕೆ ಇದೆ. ಅವರ ಚಿತ್ರಗಳು ಏಕಕಾಲದಲ್ಲಿಯೇ ಭಾರತದಾಧ್ಯಂತ ಬಿಡುಗಡೆಯಾಗಿ ಹಂತ ಹಂತವಾಗಿ ವಿದೇಶಗಳಲ್ಲಿಯೂ ಅಲೆ ಎಬ್ಬಿಸುತ್ತವೆ. ಆದರೆ ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ಭರತ್ ಅನ್ನೇ ನೇನು ಚಿತ್ರ ಇದುವರೆಗಿನ ಎಲ್ಲ ದಾಖಲೆಗಳನ್ನೂ ಬ್ರೇಕ್ ಮಾಡುವ ರೇಂಜಿಗೆ ವಿದೇಶಗಳಲ್ಲಿ ತೆರೆ ಕಾಣಲಿದೆ.

ಮಹೇಶ್ ಬಾಬು ಭರತ್ ಅನ್ನೇ ನೇನು ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯಾಕೆಂದರೆ ಈ ಹಿಂದೆ ಸ್ಪೈಡರ್ ಚಿತ್ರ ಭಾರೀ ನಿರೀಕ್ಷೆಯ ನಡುವೆಯೂ ಮಕಾಡೆ ಬಿದ್ದಿತ್ತು. ಒಂದು ದಾಖಲೆಯನ್ನೇ ಸೃಷ್ಟಿಸುತ್ತದೆ ಎಂಬಂಥಾ ನಿರೀಕ್ಷೆ ಹುಟ್ಟಿಸಿದ್ದ ಸ್ಪೈಡರ್ ದಾಖಲಿಸಿದ್ದು ಅತಿ ಸಾಧಾರಣವಾದ ಗೆಲುವನ್ನಷ್ಟೆ. ಮಹೇಶ್ ಬಾಬು ಪಾಲಿಗೆ ಇದೊಂದು ಮಹಾ ಸೋಲು. ಅದನ್ನು ಮೀರಿಕೊಳ್ಳುವ ಉತ್ಸಾಹದೊಂದಿಗೇ ಅವರು ಭರತ್ ಅನ್ನೇ ನೇನು ಚಿತ್ರದಲ್ಲಿ ನಟಿಸಿದ್ದಾರೆ.

ಆದ್ದರಿಂದಲೇ ಈ ಚಿತ್ರವಲನ್ನು ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿಯೂ ಅದ್ದೂರಿಯಾಗಿ ಬಿಡುಗಡೆ ಮಾಡಿ ವಿದೇಶದಲ್ಲಿಯೂ ಅತಿ ಹೆಚ್ಚು ಸೆಂಟರ್‌ಗಳಲ್ಲಿ ರಿಲೀಸಾಗುವಂತೆ ಮಾಡಲು ಖುದ್ದು ಮಹೇಶ್ ಬಾಬು ಶ್ರಮ ವಹಿಸಿದ್ದಾರೆ. ಮೊದಲ ದಿನವೇ ಈ ಚಿತ್ರ ಕುವೈತ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಮೂವತ್ತಕ್ಕೂ ಹೆಚ್ಚು ಶೋ ಕೊಡೋದು ಪಕ್ಕಾ ಆಗಿದೆ. ಇದಲ್ಲದೇ ಬೇರೆ ಬೇರೆ ದೇಶಗಳಲ್ಲಿಯೂ ಬಾಲಿವುಡ್ ಸಿನಿಮಾಗಳನ್ನೇ ಮೀರಿಸುವಂತೆ ಪ್ರದರ್ಶನ ನೀಡಲು ಈ ಚಿತ್ರ ಅಣಿಯಾಗಿದೆ.

ಕೊರಟಾಲ ಶಿವ ನಿರ್ದೇಶನದ ಈ ಚಿತ್ರ ರಾಜಕೀಯ ಕಥಾ ವಸ್ತುವಿನ ಜೊತೆ ಫ್ಯಾಮಿಲಿ ಸೆಂಟಿಮೆಂಟನ್ನೂ ಹೊಂದಿದೆಯಂತೆ. ಮಹೇಶ್ ಬಾಬು ಇಮೇಜಿಗೆ ಪಕ್ಕಾ ಹೊಂದಿಕೆಯಾಗುವಂಥಾ ಈ ಚಿತ್ರ ದೊಡ್ಡ ಮಟ್ಟದ ಗೆಲುವೊಂದನ್ನು ದಾಖಲಿಸಲಿದೆ ಎಂದೇ ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image