One N Only Exclusive Cine Portal

ವಿಜಯ್ ಭರಮಸಾಗರ ನಿರ್ದೇಶನದಲ್ಲಿ ಭಾರತೀಪುರ ಕ್ರಾಸ್

ಉದಯವಾಣಿ ಪತ್ರಿಕೆಯ ಮೂಲಕ ಸಿನಿಮಾ ಪತ್ರಕರ್ತರಾಗಿ ಗುರುತಿಸಿಕೊಂಡಿರೋ ವಿಜಯ್ ಭರಮಸಾಗರ ಹೊಸಾ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ. ತಮ್ಮ ವೃತ್ತಿಯ ಒತ್ತಡದ ನಡುವೆಯೂ ಅಪಾರವಾದ ಸಿನಿಮಾ ಪ್ರೇಮ ಹೊಂದಿರೋ ವಿಜಯ್ ಸದ್ದಿಲ್ಲದೆ ಒಂದು ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಭಾರತೀಪುರ ಕ್ರಾಸ್ ಎಂಬ ಆ ಕಿರುಚಿತ್ರದ ಫಸ್ಟ್ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ!
ಈಗಾಗಲೇ ಒಂದಷ್ಟು ಚಿತ್ರಗಳಿಗೆ ಹಾಡು, ಸಂಭಾಷಣೆಗಳನ್ನು ಬರೆಯೋ ಮೂಲಕ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದ ವಿಜಯ್ ಪಾಲಿಗೆ ಭಾರತೀಪುರ ಕ್ರಾಸ್ ಹೊಸಾ ಕನಸು. ಸಿನಿಮಾ ಪತ್ರಕರ್ತನಾಗಿದ್ದುಕೊಂಡೇ ಸಿನಿಮಾ ಜಗತ್ತಿನ ಆಳಕ್ಕಿಳಿಯುತ್ತಾ ನಿರ್ದೇಶಕನಾಗೋ ಕನಸು ಕಟ್ಟಿಕೊಂಡಿದ್ದವರು ಭರಮಸಾಗರ. ಅದು ಈ ಕಿರು ಚಿತ್ರದ ಮೂಲಕ ಈಡೇರಿದಂತಾಗಿದೆ.


ಕಿರು ಚಿತ್ರವಾದರೂ ಯಾವುದೇ ಕಮರ್ಷಿಯಲ್ ಚಿತ್ರಕ್ಕೇ ಸೆಡ್ಡು ಹೊಡೆಯುವಂಥಾ ಚೆಂದದ ಪೋಸ್ಟರ್ ಮೂಲಕ ಕುತೂಹಲ ಹುಟ್ಟಿಸಿರೋ ಭಾರತೀಪುರ ಕ್ರಾಸ್ ಒಂದಷ್ಟು ವಿಶೇಷತೆಗಳನ್ನೂ ಹೊಂದಿದೆ. ಅಂದಹಾಗೆ ಈ ಚಿತ್ರಕ್ಕೆ ಕಿಚ್ಚಾ ಸುದೀಪ್ ಅವರು ಹಿನ್ನೆಲೆ ಧ್ವನಿ ನೀಡಿರೋದು ಪ್ರಧಾನ ವಿಶೇಷತೆ. ಇನ್ನುಳಿದಂತೆ ನುರಿತ ತಂತ್ರಜ್ಞರ ತಂಡದ ಸಾಥ್‌ನೊಂದಿಗೆ ಈ ಚಿತ್ರವನ್ನು ಎಲ್ಲರಿಗೂ ಇಷ್ಟವಾಗೋವಂತೆ ಕಟ್ಟಿಕೊಟ್ಟಿರೋ ಖುಷಿ ವಿಜಯ್ ಭರಮಸಾಗರ ಅವರದ್ದು!
ಈ ಚಿತ್ರ ಇನ್ನೇನು ಬಿಡುಗಡೆಯಾಗೋ ಹಂತದಲ್ಲಿದ್ದಾರೆ. ಈ ಮೂಲಕ ತಮ್ಮ ಕನಸಿನ ಹಾದಿಯಲ್ಲಿ ಒಂದು ವಿಶ್ವಾಸದ ಹೆಜ್ಜೆ ಇಟ್ಟಿರೋ ವಿಜಯ್ ಭರಮಸಾಗರ ಅವರಿಗೆ ಭರಪೂರವಾಗ ಯಶಸ್ಸು ಸಿಗಲಿ, ಅವರ ಕನಸುಗಳೆಲ್ಲವೂ ಕೈಗೂಡಲಿ…

Leave a Reply

Your email address will not be published. Required fields are marked *


CAPTCHA Image
Reload Image