One N Only Exclusive Cine Portal

ಸಿನಿಮಾಗೆ ಗುಡ್ ಬೈ ಹೇಳ್ತಾರಾ… ಜಾಕಿ ಭಾವನಾ..?

ಸಾಮಾನ್ಯವಾಗಿ ಮದುವೆಯಾದ ನಂತರ ಹೀರೋಯಿನ್‌ಗಳಿಗೆ ಡಿಮ್ಯಾಂಡ್ ಕಡಿಮೆಯಾಗುತ್ತೆ ಅನ್ನೋದು ಸಿನಿಮಾರಂಗದಲ್ಲಿ ಚಾಲ್ತಿಯಲ್ಲಿರುವ ಮಾತು. ಕೆಲವು ನಟಿ ಮಣಿಯರು ಮದುವೆಯಾದ ನಂತರ ಸಿನಿಮಾಕ್ಕೆ ತಾವಾಗಿಯೇ ಗುಡ್ ಬೈ ಹೇಳಿದರೆ, ಇನ್ನು ಕೆಲವು ನಟಿಮಣಿಯರಿಗೆ ಅಂದುಕೊಂಡ ಮಟ್ಟದಲ್ಲಿ ಅವಕಾಶಗಳು ಸಿಗದಿರುವುದರಿಂದ ಬೆಳ್ಳಿತೆರೆಗೆ ಗುಡ್ ಬೈ ಹೇಳುತ್ತಾರೆ. ಆದರೆ, ಇದೆಲ್ಲವನ್ನು ಮೀರಿ ಕೆಲವೇ ಕೆಲವು ನಟಿ ಮಣಿಯರು.., ಉದಾಹರಣೆಗೆ ಏಂಜಲೀನಾ ಜೂಲಿ, ಶ್ರೀದೇವಿ, ಐಶ್ವರ್ಯ ರೈ, ಮಾಧುರಿ ದೀಕ್ಷಿತ್, ಶಿಲ್ಪಾ ಶೆಟ್ಟಿ, ರಮ್ಯಾಕೃಷ್ಣ ಅವರಂಥಹವರು ಮದುವೆಯಾಗಲಿ, ಮಕ್ಕಳಾಗಲಿ ತಮ್ಮ ಬೇಡಿಯನ್ನು ಹಾಗೇ ಉಳಿಸಿಕೊಂಡು ಹೋಗುತ್ತಿರುತ್ತಾರೆ.

ಈಗ ಏಕೆ ಈ ವಿಷಯದ ಬಗ್ಗೆ ಮಾತು ಅಂತೀರಾ..? ಅದಕ್ಕೊಂದು ಕಾರಣವಿದೆ. ಇತ್ತೀಚೆಗಷ್ಟೆ ಜಾಕಿ ಸಿನಿಮಾದ ಖ್ಯಾತಿಯ ನಟಿ, ಮಲೆಯಾಳಿ ಕುಟ್ಟಿ ಭಾವನಾ ಹಸೆಮಣೆಯೆರಿದ್ದರು. ಜಾಕಿ ಚಿತ್ರದ ಬಳಿಕ ರೋವಿಯೋ, ಬಚ್ಚನ್, ಚೌಕ ಮೊದಲಾದ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರಿಯರ ಮನಗೆದ್ದ ಭಾವನಾ, ಮದುವೆಗೂ ಮೊದಲು ನಟಿಸಿದ್ದ ಟಗರು ಚಿತ್ರ ಇದೇ ತಿಂಗಳಾಂತ್ಯಕ್ಕೆ ತೆರೆಗೆ ಬರುತ್ತಿದೆ. ಇದಾದ ಬಳಿಕ ಭಾವನಾ ಮುಂದೆ ಸಿನಿಮಾಗಳಲ್ಲಿ ಅಭಿನಯಿಸುತ್ತಾರಾ.., ಅಥವಾ ಬೇರೆ ನಟಿಯರಂತೆ ಸಿನಿಮಾರಂಗಕ್ಕೆ ಗುಡ್ ಬೈ ಹೇಳುತ್ತಾರಾ ಎಂಬ ಕುತೂಹಲದ ಪ್ರಶ್ನೆ, ಅವರ ಅಭಿಮಾನಿಗಳಲ್ಲಿ ಮತ್ತು ಚಿತ್ರೋದ್ಯಮದಲ್ಲಿದೆ.

ಆದರೆ, ಚಿತ್ರರಂಗದ ಮೂಲಗಳ ಪ್ರಕಾರ ಭಾವನಾ ಇನ್ನೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಭಾವನಾ ಅವರ ಪತಿ ನಿರ್ಮಾಪಕ ನವೀನ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಕೆಲ ಚಿತ್ರಗಳ ನಿರ್ಮಾಣಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿರುವುದರಿಂದ, ಭಾವನಾ ಇನ್ನಷ್ಟು ಸಿನಿಮಾಗಳಲ್ಲಿ ನಟಿಸಲಿ ಎಂಬುದು ಅವರ ಅಪೇಕ್ಷೆಯಂತೆ. ಇನ್ನು ಭಾವನಾ ಕೂಡ, ಮದುವೆ ನಂತರ ನಮ್ಮಲ್ಲಿ ಯಾವುದೇ ವ್ಯತ್ಯಾಸ ಕಾಣಿಸಿಲ್ಲ, ನಾವಿಬ್ಬರೂ ಕಳೆದ ಆರು ವರ್ಷಗಳಿಂದಲೂ ಹೀಗಿಯೇ ಇದ್ದೇವೆ. ನಾನು ಅಭಿನಯ ಮುಂದುವರೆಸಲು ಮನೆಯವರ ಸಹಕಾರ ಕೂಡ ಇದೆ. ಹಾಗಾಗಿ ಸದ್ಯಕ್ಕೆ ಆಕ್ಟಿಂಗ್ ಬಿಡುವ ಯಾವುದೇ ಯೋಚನೆ ಇಲ್ಲ ಎಂದಿದ್ದಾರೆ.

ಇನ್ನು ಮದುವೆಯಾದ ನಂತರ ಭಾವನಾಗೆ ಎಲ್ಲರೂ ನೀವು ಇನ್ನೂ ಆಕ್ಟಿಂಗ್ ಮಾಡ್ತೀರಾ..? ಎಂದು ಪ್ರಶ್ನಿಸುತ್ತಿದ್ದಾರಂತೆ. ಈ ಪ್ರಶ್ನೆಗಳನ್ನು ಕೇಳಿ ಗರಂ ಆಗಿರುವ ಭಾವನಾ, `ಮದುವೆಯಾದ ನಂತರ ಹೀರೋಯಿನ್ಸ್ ಏಕೆ ಪ್ರೊಫೆಷನ್ ಬಿಡಬೇಕು ಎಂಬುದು ನನಗೆ ಅರ್ಥವಾಗುತ್ತಿಲ್ಲ, ಹೀರೋಯಿನ್ಸ್‌ಗೆ ಮಾತ್ರ ಈ ಪ್ರಶ್ನೆ ಕೇಳಲಾಗುತ್ತದೆ. ಯಾವುದೇ ಹೀರೋಗಳು ಮದುವೆಯಾದ ನಂತರ ಅವರಿಗೆ ಪ್ರೊ-ಷನ್ ಬಿಡುತ್ತೀರಾ ಎಂದು ಯಾರೂ…, ಏಕೆ ಕೇಳುವುದಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಮದುವೆ ಅನ್ನೋದು ಯಾವುದೇ ಹೀರೋಯಿನ್‌ಗಳ ಪ್ರೊ-ಷನ್ ಲೈ-ನ ಕೊನೆಯ ಹಂತವಲ್ಲ’ ಎಂದು ಖಡಕ್ ಉತ್ತರವನ್ನು ನೀಡಿದ್ದಾರೆ.

ಅದೇನೆಯಿರಲಿ…, ಜಾಕಿ ಭಾವನಾ ಅವರ ಈ ಮತು ಕೇಳಿ ಅವರ ಫ್ಯಾನ್ಸ್‌ಗಳಂತೂ ಫುಲ್ ಖುಷ್ ಆಗಿದ್ದಾರೆ. ಆದ್ರೆ ಮದುವೆಯಾದ ಬಳಿಕ ಭಾವನಾಗೆ ಎಷ್ಟರ ಮಟ್ಟಿಗೆ ಒಳ್ಳೆಯ ಅವಕಾಶಗಳು ಬರುತ್ತವೆ..? ಎಂಥಹ ಸಿನಿಮಾಗಳನ್ನು ಮಾಡುತ್ತಾರೆ..? ಭಾವನಾ ಮಾತು ಎಷ್ಟರ ಮಟ್ಟಿಗೆ ನಿಜವಾಗುತ್ತದೆ..? ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ.

Leave a Reply

Your email address will not be published. Required fields are marked *


CAPTCHA Image
Reload Image