One N Only Exclusive Cine Portal

ತಿರುಗಿಬಿದ್ದರು ಭಾವನಾ ಬೆಳಗೆರೆ!

ಫೇಸ್ ಬುಕ್ಕೆಂಬುದು ಈವತ್ತಿಗೆ ಪರಿಧಿ ಮೀರಿ ಬೆಳೆದುಕೊಂಡಿದೆ. ಅದರಿಂದ ಅದೇನೇನು ಒಳ್ಳೆಯದ್ದಾಗುತ್ತಿದೆಯೋ… ಆದರೆ ಕೆಟ್ಟದ್ದರ ಪ್ರಮಾಣವೇ ಹೆಚ್ಚು. ಅದರಲ್ಲಿಯೂ ಫೇಸ್ ಬುಕ್ ಖಾತೆ ಹೊಂದಿರೋ ಹೆಣ್ಣುಮಕ್ಕಳ ಪಾಡಂತೂ ಹೇಳತೀರದು. ಹೆಣ್ಣುಮಕ್ಕಳ ಬೇಟೆಗೆಂದೇ ಇನ್‌ಬಾಕ್ಸಲ್ಲಿ ಹೊಂಚಿಕೂತ ಆನ್‌ಲೈನ್ ಕಾಮುಖರ ಹಿಂಡೊಂದು ಫೇಸ್‌ಬುಕ್ಕಲ್ಲಿ ಜಮೆಯಾಗಿದೆ.

ತೀರಾ ಪತ್ರಕರ್ತ ರವಿ ಬೆಳಗೆರೆಯವರ ಮಗಳು, ಶ್ರೀನಗರ ಕಿಟ್ಟಿಯ ಪತ್ನಿ ಭಾವನಾ ಇದೀಗ ಕಿಡಿಗೇಡಿಯೊಬ್ಬನ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಲು ಮುಂದಾಗಿದ್ದಾರೆಂದರೆ ಪರಿಸ್ಥಿತಿ ಅದೆಷ್ಟು ಹದ್ದು ಮೀರಿದೆ ಎಂಬುದು ಎಂಥವರಿಗಾದರೂ ಅರ್ಥವಾಗುತ್ತದೆ!

ಪ್ರದೀಪ್ ಕುಮಾರ್ ಪಾಯಲ್ ಎಂಬ ಫಟಿಂಗನೊಬ್ಬನ ವಿರುದ್ಧ ಸೈಬರ್ ಕ್ರೈಂಗೆ ದೂರು ಕೊಡುತ್ತಿರೋದಾಗಿ ಭಾವನಾ ಫೇಸ್ ಬುಕ್ ಮೂಲಕವೇ ಹೇಳಿಕೊಂಡಿದ್ದಾರೆ. ಈತ ಭಾವನಾಗೆ ಕೆಟ್ಟಾ ಕೊಳಕು ಸಂದೇಶ ಮತ್ತು ಫೋಟೋಗಳನ್ನು ಕಳಿಸುತ್ತಾ ಪದೇ ಪದೆ ಹಿಂಸೆ ನೀಡುತ್ತಿದ್ದಾನಂತೆ. ಈತನ ಕಾಟ ಮಿತಿ ಮೀರಿರೋದರಿಂದ ಭಾವನಾ ಆತನ ಮೇಲೆ ದೂರು ನೀಡಲು ಮುಂದಾಗಿದ್ದಾರೆ.

ಭಾವನಾ ಬಿಗ್‌ಬಾಸ್ ಶೋಗೆ ಹೋಗಿ ಬಂದ ನಂತರ ಪ್ರದೀಪ್ ಕುಮಾರ್ ಎಂಬಾತ ಅವರ ಪರ್ಸನಲ್ ಪೇಜಿಗೆ ರಿಕ್ವೆಸ್ಟ್ ಕಳಿಸಿದ್ದನಂತೆ. ಅದನ್ನು ಅಕ್ಸೆಪ್ಟ್ ಮಾಡಿದ್ದೇ ಮೆತ್ತಗೆ ಈತ ಚೇಷ್ಟೆ ಶುರುವಿಟ್ಟುಕೊಂಡಿದ್ದಾನೆ. ಮೊನ್ನೆಯಿಂದ ವೀಡಿಯೋ ಕಾಲ್ ಮಾಡುತ್ತಿರೋದಲ್ಲದೇ ಅಶ್ಲೀಲ ಮೆಸೇಜ್‌ಗಳನ್ನು ಕಳಿಸುತ್ತಿದ್ದಾನೆಂಬುದು ಭಾವನಾ ಕಂಪ್ಲೇಂಟು.

ರವಿ ಬೆಳಗೆರೆಯವರ ಮಗಳು ಭಾವನಾ ಫೇಸ್ ಬುಕ್‌ನ ಕೆಲ ಕ್ರಿಮಿಗಳಿಂದ ಇಂತಾ ಪಾಡು ಪಡುತ್ತಿದ್ದಾರೆಂದರೆ ಇನ್ನುಳಿದ ಹೆಣ್ಣುಮಕ್ಕಳ ಪಾಡನ್ನು ಊಹಿಸೋದೂ ಕಷ್ಟ. ಆದರೆ ಬಹುತೇಕ ಹೆಣ್ಣುಮಕ್ಕಳು ಇಂಥಾ ಕಾಮುಕರ ವಿರುದ್ಧ ಸೆಡ್ಡು ಹೊಡೆಯಲಾರದೇ ಫೇಸ್ ಬುಕ್ಕಿಂದಲೇ ಹೊರಗುಳಿಯುತ್ತಾರೆ. ಆದರೆ ಭಾವನಾ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಇಂಥಾ ಕೊಳಕು ಮನಸ್ಥಿತಿಯವರನ್ನು ಹತ್ತಿಕ್ಕಲು ಇದು ನಿಜಕ್ಕೂ ಪರಿಣಾಮಕಾರಿ ನಿರ್ಧಾರ.

Leave a Reply

Your email address will not be published. Required fields are marked *


CAPTCHA Image
Reload Image