Connect with us

ಅಭಿಮಾನಿ ದೇವ್ರು

ಬಿಗ್‌ಬಾಸ್ ಸ್ಪರ್ಧಿಯಾಗಲು ಸುದೀಪ್ ಅಭಿಮಾನಿಯ ವಿಚಿತ್ರ ಸರ್ಕಸ್!

Published

on

ಇದನ್ನು ಹುಚ್ಚು ಅನ್ನಬೇಕೋ? ಬಯಕೆ ಅನ್ನಬೇಕೋ ಪೂರ್ತಿ ಓದಿದ ನಂತರ ನೀವೇ ತೀರ್ಮಾನಿಸಬೇಕು!
ಈ ಹುಡುಗನ ಹೆಸರು ರಘು ಟಿ.ಡಿ.. ಮೇಲುಕೋಟೆಯ ತಾಳೇಕೆರೆ ಗ್ರಾಮದವನು. ಸದ್ಯ ಇರೋದು ಬೆಂಗಳೂರಿನ ಹನುಮಂತನಗರದಲ್ಲಿ. ಇವರ ತಂದೆ ಧನಪಾಲ್ ಆಚಾರ್ಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿಯ ತಪಸ್ವಿ ಭವನ ಎನ್ನುವ ಮದುವೆ ಛತ್ರದಲ್ಲಿ ಮ್ಯಾನೇಜರ್ ಆಗಿದ್ದಾರೆ. ಅದಕ್ಕೂ ಮುಂಚೆ ಅಮಿತಾಬ್ ಬಚ್ಚನ್ ಮನೆಯಲ್ಲಿ ಸರಿಸುಮಾರು ಹದಿನೇಳು ವರ್ಷಗಳ ಕಾಲ ಕೆಲಸಕ್ಕಿದ್ದರಂತೆ.
ಅಲ್ಲಿ ಬಿಗ್ ಬಿಯ ತಂದೆ ತಾಯಿಯ ಸೇವೆ ಮಾಡುತ್ತಲೇ ಬಾಂಬೆಯಲ್ಲಿ ಜೀವನ ಸಾಗಿಸಿದವರು. ಈತನ ತಾಯಿ ಲಲಿತ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದವರು. ಕಳೆದ ವರ್ಷವಷ್ಟೇ ಅನಾರೋಗ್ಯಕ್ಕೆ ತುತ್ತಾಗಿ ಹಣ್ಮುಚ್ಚಿದ್ದಾರೆ. ಈ ತಾಯಿಗೆ ತನ್ನ ಮಗ ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಬೇಕು ಅನ್ನೋ ಮಹದಾಸೆಯಿತ್ತಂತೆ. ಜೀವನ್ಮರಣ ಹೋರಾಟದಲ್ಲಿದ್ದ ತಾಯಿಯ ಆಸೆ ಈಡೇರಿಸಲು ರಘು ಕೂಡಾ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದ. ಆದರದು ಕಳೆದ ಸಲ ಈಡೇರಿರಲಿಲ್ಲ. ತಾಯಿಯ ಬಯಕೆ ಈಡೇರಿಸಲು ಹುಡುಗ ರಘು ಇನ್ನೂ ಪ್ರಯತ್ನವನ್ನು ಹಾಗೇ ಮುಂದುವರೆಸಿದ್ದಾನೆ. ಕಲರ್‍ಸ್ ವಾಹಿನಿಯ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ರಿಂದ ಹಿಡಿದು ಸಿಕ್ಕಸಿಕ್ಕವರ ಬಳಿಯೆಲ್ಲಾ ಪ್ರೋಗ್ರಾಮಿಗೆ ಹೋಗುವಂತೆ ಮಾಡಿ ಎಂದು ಅಂಗಲಾಚುತ್ತಿದ್ದಾನೆ.
ರಘು ಕಿಚ್ಚ ಸುದೀಪ್ ಅವರ ಪರಮ ಅಭಿಮಾನಿಯಾಗಿರೋದರಿಂದ ಈತನ ಸ್ನೇಹಿತರೆಲ್ಲಾ ಇವನನ್ನು ಸುದೀಪ್ ಅಂತಲೇ ಕರೆಯುತ್ತಾನಂತೆ.  ಬೈಕನ್ನು ಸಿಕ್ಕಾಪಟ್ಟೆ ಸ್ಪೀಡಾಗಿ ಓಡಿಸುತ್ತಾನಂತೆ. ಈ ಕಾರಣದಿಂದ `ಟಿಡಿಆರ್ ರೇಸಿಂಗ್ ಸ್ಟಾರ್ ಅನ್ನೋ ಬಿರುದನ್ನೂ ನೀಡಿದ್ದಾರಂತೆ! ಕಿಚ್ಚನ ಮೇಲೆ ಈ ಹುಡುಗನಿಗೆ ಅದ್ಯಾವ ಪರಿ ಕ್ರೇಜ಼ೆಂದರೆ, ಯಾರಾದರೂ ನಿನ್ನ ಹೆಸರೇನು ಅಂದರೆ `ಸುದೀಪ್ ಅಂತಾನೆ! ಹೊಟ್ಟೆಪಾಡಿಗಾಗಿ ಹೆಚ್.ಡಿ.ಬಿ ಬ್ಯಾಂಕಿನ ಇಎಂಐ ಕಲೆಕ್ಷನ್ ಮಾಡಿಕೊಂಡಿರುವ ರಘು ಟೈಮು ಸಿಕ್ಕಾಗಲೆಲ್ಲ ಗಣ್ಯಾತಿಗಣ್ಯರು, ಮಠದ ಸ್ವಾಮೀಜಿಗಳ ಬಳಿಯೆಲ್ಲಾ ಹೋಗಿ ಬಿಗ್ ಬಾಸ್ ಪ್ರೋಗ್ರಾಮಿಗೆ ಹೋಗಲು ಇನ್‌ಫ್ಲೂಯೆನ್ಸ್ ಮಾಡಿ ಅಂತಾ ಬೆನ್ನುಬಿದ್ದು ಅವರಿಂದ ಪತ್ರಗಳನ್ನು ಬರೆಸಿಕೊಂಡು ಜೋಡಿಸಿಟ್ಟುಕೊಂಡಿದ್ದಾನೆ. ಸಿನಿಮಾ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಈತನಗೆ ಉಳಿದುಕೊಳ್ಳಲು ಮನೆ, ಓಡಾಡಲು ಬೈಕು ಎಲ್ಲವನ್ನೂ ಕೊಡಿಸಿದ್ದಾರಂತೆ.
ಮೇಲ್ನೋಟಕ್ಕೆ ಈತನ ವರ್ತನೆಗಳು ಹುಚ್ಚುತನದಂತೆ ಕಂಡರೂ ತಾಯಿಯ ಆಸೆಯನ್ನು ಈಡೇರಿಸಲು ಹೆಣಗಾಡುತ್ತಿರುವ ರೀತಿಯನ್ನು ಕಂಡರೆ ಮರುಕ ಹುಟ್ಟುತ್ತದೆ.

ಅಭಿಮಾನಿ ದೇವ್ರು

ಈತನ ಸಮಾಜಸೇವೆಗೆ ಕಾರಣ ಶಂಕರ್ ನಾಗ್ ಮೇಲಿನ ಅಭಿಮಾನ!

Published

on

ಮರೆಯಾಗಿ ಅದೆಷ್ಟೋ ಸಂವತ್ಸರಗಳು ಕಳೆದ ಬಳಿಕವೂ ಅಭಿಮಾನಿಗಳ ಮನಸಲ್ಲಿ ಹಸಿರಾಗುಳಿದಿರುವವರು ಶಂಕರ್ ನಾಗ್. ಇಂದಿಗೂ ಅದೆಷ್ಟೋ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಅವರೇ ಸ್ಫೂರ್ತಿ. ಅವರೆಡೆಗಿನ ಅಭಿಮಾನವೂ ಕೂಡಾ ಹತ್ತಾರು ಜನರಿಗೆ ಒಳಿತು ಮಾಡುವ ಕೆಲಸ ಕಾರ್ಯಗಳಿಗೇ ಪ್ರೇರಣೆಯಾಗುತ್ತಾ ಬಂದಿದೆ. ಶಂಕರ್ ನಾಗ್ ಹೆಸರಲ್ಲಿ ಅಂಥಾದ್ದೇ ಸಮಾಜಮುಖಿ ಕೆಲಸ ಮಾಡುತ್ತಾ ಅವರ ಅಭಿಮಾನಿಯೊಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ. ಆತ ಆಟೋ ಡ್ರೈವರ್ ಮಲ್ಲಿಕಾರ್ಜುನ!

ಶಂಕರ್ ನಾಗ್ ಅವರ ಅಪ್ರತಿಮ ಅಭಿಮಾನಿಯಾದ ಮಲ್ಲಿಕಾರ್ಜುನ ಆಟೋ ಡ್ರೈವರ್. ಬದುಕು ನಡೆಸೋದಕ್ಕಾಗಿ ಈತ ಆಟೋ ಓಡಿಸುವ ವೃತ್ತಿ ಆರಂಭಿಸಿದ್ದು ಕೂಡಾ ಶಂಕರ್ ನಾಗ್ ಅವರ ಪ್ರೇರಣೆಯಿಂದಲೇ. ತನ್ನ ಆಟೋಗೂ ಸಾಂಗ್ಲಿಯಾನ ಅಂತಲೇ ಹೆಸರು ಹಾಕಿಸಿಕೊಂಡಿರೋ ಮಲ್ಲಿಕಾರ್ಜುನ ಬರೀ ಬಾಯಿ ಮಾತಲ್ಲಿ ಶಂರ್ ನಾಗ್‌ರೆಡೆಗಿನ ಅಭಿಮಾನ ತೋರಿಸದೇ ಅವರ ಆದರ್ಶಗಳನ್ನು ಕಾರ್ಯರೂಪಕ್ಕೆ ತಂದಿದ್ದಾನೆ. ತನ್ನ ಪಾಡಿಗೆ ತಾನು ಜನೋಪಕಾರ ಮಾಡುತ್ತಿರೋ ಇಂಥಾ ಅಪರೂಪದ ಅಭಿಮಾನಿಯನ್ನು ಕನ್ನಡದ ಖ್ಯಾತ ಕಥೆಗಾರರಾದ ಕುಂ ವೀರಭದ್ರಪ್ಪ!Related image

ಯಾದಗಿರಿ ಪಟ್ಟಣ ಮತ್ತು ಆಸುಪಾಸಿನ ಊರುಗಳಲ್ಲಿ ಈ ಮಲ್ಲಿಕಾರ್ಜುನ ಸಾಂಗ್ಲಿಯಾನ ಅಂತಲೇ ಫೇಮಸ್ಸು. ಬಡ ಜನರು, ಕಷ್ಟದಲ್ಲಿರುವವರ ಪಾಲಿಗೆ ಆಪತ್ಭಾಂಧವ. ತನ್ನ ಆಟೋದಲ್ಲಿ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋದಕ್ಕೆ, ಬಡ ರೋಗಿಗಳ ಪ್ರಯಾಣಕ್ಕೆ ಉಚಿತವಾಗಿಯೇ ಸೇವೆ ಒದಗಿಸುತ್ತಿದ್ದಾನೆ. ಅನಾಥ ಕಳೇಬರಗಳನ್ನು ಸ್ಮಶಾನಕ್ಕೆ ಸಾಗಿಸಲೂ ಈತ ಸದಾ ಸಿದ್ಧ. ಆಗಾಗ ಶಂಕರಣ್ಣನ ಹೆಸರಲ್ಲಿ ರಕ್ತ ದಾನ ಮಾಡುತ್ತಾ ಇತರರಿಗೂ ಪ್ರೇರೇಪಿಸುತ್ತಿರುವ ಮಲ್ಲಿಕಾರ್ಜುನ ಈ ಭಾಗದಲ್ಲಿ ಜನರಿಗೆ ಹತ್ತಿರಾಗಿದ್ದಾನೆ.Image result for Shankar nag

ಶಂಕರ್ ನಾಗ್ ಅವರ ಅಂತಿeಮ ಅಭಿಮಾನಿಯಾದ ಈತ ಎಲ್ಲ ನಟರ ಅಭಿಮಾನಿಗಳಿಗೂ ಮಾದರಿ. ಸುಮ್ಮನೆ ಸಮಾರಂಭ, ಮೆರೆದಾಟ ಅಂತ ಕಾಲ ಕಳೆಯೋದರ ಬದಲು ಇಂಥಾ ಸಮಾಜಮುಖಿ ಕೆಲಸ ಕಾರ್ಯ ಮಾಡುವಂತಾದರೆ ಅದು ಆಯಾ ನಟರಿಗೆ ಸಲ್ಲಿಸೋ ನಿಜವಾದ ಗೌರವ…Related image

Continue Reading

ಅಭಿಮಾನಿ ದೇವ್ರು

ಇದು ಕನ್ನಡ ಚಿತ್ರರಂಗದ ಖದರ್!

Published

on

ಕನ್ನಡ ಚಿತ್ರಗಳ ಗುಣಮಟ್ಟವನ್ನು ಆಡಿಕೊಳ್ಳೋದು, ಯಾವ ಚಿತ್ರಗಳು ತೆರೆ ಕಂಡರೂ ಅದಕ್ಕೆ ಬಾಲಿವುಡ್ ಸೇರಿದಂತೆ ಬೇರೆ ಭಾಷೆಗಳ ಚಿತ್ರಗಳನ್ನು ಹೋಲಿಸಿ ಮೂದಲಿಸೋದು ಕೆಲವರ ಖಯಾಲಿ. ಆದರೆ ಕನ್ನಡ ಚಿತ್ರರಂಗದ ಖದರ್ ಮಾತ್ರ ಇದ್ಯಾವುದರ ಗೊಡವೆಯೂ ಇಲ್ಲದೆ ಗಡಿ ದಾಟಿಕೊಂಡು ಬೇರೆ ಭಾಷೆಗಳಿಗೂ ಪಸರಿಸಿದೆ. ಅಲ್ಲಿನವರನ್ನೂ ಪ್ರಭಾವಿಸಿದೆ!

 

ಈ ಮಾತಿಗೆ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ಯುವ ನಟ ಶ್ರೇಯಸ್ ತಲ್ಪಡೆ ಹಂಚಿಕೊಂಡಿರೋ ವಿಚಾರಗಳಿಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ!

ಶ್ರೇಯಸ್ ಡಾ. ರಾಜ್‌ಕುಮಾರ್ ಅವರ ಅಭಿಮಾನಿ. ಇದುವರೆಗೂ ರಾಜ್‌ಕುಮಾರ್ ಅವರು ನಟಿಸಿರೋ ಅದೆಷ್ಟೋ ಚಿತ್ರಗಳನ್ನು ಶ್ರೇಯಸ್ ನೋಡಿದ್ದಾರಂತೆ. ಈ ಮೂಲಕ ರಾಜಣ್ಣನ ನಟನೆಯಿಂದ ಯಾವ ಪರಿಯಾಗಿ ಶ್ರೇಯಸ್ ಪ್ರಭಾವಿತರಾಗಿದ್ದಾರೆಂದರೆ, ಯಾವಾಗಲೇ ಬಿಡುವು ಸಿಕ್ಕರೂ ಅಣ್ಣವ್ರ ಸಿನಿಮಾಗಳನ್ನು ನೋಡೋ ಹವ್ಯಾಸ ಬೆಳೆಸಿಕೊಂಡಿದ್ದಾರಂತೆ. ಅವರೊಬ್ಬ ಮೇರು ನಟ ಎಂದಿರುವ ಶ್ರೇಯಸ್ ತಾನು ಅವರ ಅಭಿಮಾನಿ ಅಂತ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.

ಇದಲ್ಲದೇ ಕನ್ನಡ ಚಿತ್ರರಂಗದ ಆಗು ಹೋಗುಗಳತ್ತಲೂ ಗಮನ ನೆಟ್ಟಿರೋ ಶ್ರೇಯಸ್‌ಗೆ ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಅಂದರೂ ಇಷ್ಟವಂತೆ. ಇದೇ ಸಂದರ್ಭದಲ್ಲಿ ತನಗೇನಾದರೂ ಕನ್ನಡದಲ್ಲಿ ನಟಿಸೋ ಆಫರ್ ಬಂದರೆ ಖಂಡಿತಾ ಒಪ್ಪಿಕೊಳ್ಳುವುದಾಗಿಯೂ ಹೇಳಿಕೊಂಡಿದ್ದಾರೆ.

ಶ್ರೇಯಸ್‌ಗೆ ಕನ್ನಡ ಚಿತ್ರಗಳು ಮಾತ್ರವಲ್ಲದೆ ಕನ್ನಡಿಗರೆಂದರೂ ಅಚ್ಚುಮೆಚ್ಚು. ಬೆಂಗಳೂರು ಅಂದರಂತೂ ಭಾರತದ ಮತ್ಯಾವ ನಗರಕ್ಕಿಂತಲೂ ಹೆಚ್ಚೇ ಇಷ್ಟ ಅಂದಿದ್ದಾರೆ ಶ್ರೇಯಸ್. ಅವರಿಗೆ ಅತೀ ಹೆಚ್ಚಿನ ಸ್ನೇಹ ವಲಯ ಇರೋದೂ ಕೂಡಾ ಬೆಂಗಳೂರಿನಲ್ಲಿಯೇ. ಆದ್ದರಿಂದಲೇ ಈ ನಗರದ ಜೊತೆಗೆ ನಂಟು ಹೊಂದಿರೋ ಶ್ರೇಯಸ್ ರಾಜಣ್ಣನ ಅಭಿಮಾನಿ ಎಂಬುದಕ್ಕಿಂತ ಖುಷಿಯ ವಿಚಾರ ಮತ್ತೇನಿದೆ?

Continue Reading

ಅಭಿಮಾನಿ ದೇವ್ರು

ಟೈಗರ್ ಅಲೋಕ್ ಕುಮಾರ್ ಮೇಲೆ ಗಾಂಧಿನಗರದ ಕಣ್ಣು!

Published

on

ಖಡಕ್ ಪೊಲೀಸ್ ಅಧಿಕಾರಿಗಳ ಕಥೆ ಸಿನಿಮಾವಾದ ಉದಾಹರಣೆ ಕನ್ನಡ ಚಿತ್ರರಂಗದಲ್ಲಿಯೇ ಸಾಕಷ್ಟಿದೆ. ಇದೀಗ ಕಣ್ಣೆದುರೇ ಕಾರ್ಯ ನಿರ್ವಹಿಸುತ್ತಿರುವ, ಸಾರ್ವಜನಿಕರ ಕಣ್ಣಲ್ಲಿ ಹೀರೋಗಳಾಗಿ ನೆಲೆಯಾಗಿರುವ ಒಂದಷ್ಟು ಅಧಿಕಾರಿಗಳತ್ತ ಚಿತ್ರರಂಗದ ಮಂದಿಯ ಕಣ್ಣು ನೆಟ್ಟಿದೆ. ಅತ್ತ ರವಿ ಚನ್ನಣ್ಣನವರ್ ಜೀವನಗಾಥೆ ಚಿತ್ರ ರೂಪ ಪಡೆಯೋ ತಯಾರಿಯಲ್ಲಿರೋವಾಗಲೇ, ಇದೀಗ ಸಿಸಿಬಿಗೆ ಹೆಚ್ಚುವರಿ ಆಯುಕ್ತಾರಾಗಿ ಅಬ್ಬರಿಸುತ್ತಿರುವ ಅಲೋಕ್ ಕುಮಾರ್ ಬಗೆಗೂ ಒಂದು ಸಿನಿಮಾ ತಯಾರಾಗಲಿದೆ ಎಂಬ ಸುದ್ದಿ ಹಬ್ಬಿಕೊಂಡಿದೆ.

ಪೊಲೀಸ್ ಅಧಿಕಾರಿಯಾಗಿ ಪ್ರತೀ ಹಂತದಲ್ಲಿಯೂ ಜನಸ್ನೇಹಿಯಾಗಿಯೇ ಗುರಿತಿಸಿಕೊಂಡು ಬಂದವರು ಅಲೋಕ್ ಕುಮಾರ್. ಯಾವುದೇ ವಿಭಾಗಕ್ಕೆ ಹೋದರೂ ತಮ್ಮ ಕಾರ್ಯ ಕ್ಷೇತ್ರದಲ್ಲಿ ಯಾವುದೇ ದುಷ್ಟ ದಂಧೆ ನಡೆಯದಂತೆ ತಡೆಯುವುದು ಅಲೋಕ್ ಕುಮಾರ್ ಅವರ ಕಾರ್ಯ ವೈಖರಿ. ಈ ಹಿಂದೆ ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಅವಧಿಯಲ್ಲಿ ಅಲೋಕ್ ಕುಮಾರ್ ಪಾತಕ ಲೋಕವೂ ಸೇರಿದಂತೆ ಎಲ್ಲ ದಂಧೆ, ಮಾಫಿಯಾಗಳ ಸದ್ದಡಗಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದರು. ಇಂಥಾ ಕ್ರಮಗಳಿಂದಾಗಿಯೇ ಅಲೋಕ್ ಕುಮಾರ್ ಹೆಸರು ಕೇಳಿದರೇನೇ ಪಾತಕಿಗಳ ಅಳ್ಳೆ ಅದುರುತ್ತದೆ. ದುಷ್ಟ ದಂಧೆಗಳ ಲೋಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತೆ. ಇಂಥಾ ಖಡಕ್ ಅಧಿಕಾರಿ ಇದೀಗ ಸಿಸಿಬಿಯ ಹೆಚ್ಚುವರಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಕ್ಷಣದಿಂದಲೇ ಅಖಾಡಕ್ಕಿಳಿದು ಬಿಟ್ಟಿದ್ದಾರೆ.

ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡ ದಿನದೊಪ್ಪತ್ತಿನಲ್ಲಿಯೇ ಪಾತಕಿಗಳನ್ನು ಅಟ್ಟಾಡಿಸಿದ್ದಾರೆ. ಸಿಲಿಕಾನ್ ಸಿಟಿಯ ಸಂದಿಗೊಂದಿಗಳನ್ನೂ ಆವರಿಸಿಕೊಂಡಿರೋ ಒಂದೊಂದೇ ಮಾಫಿಯಾ ಬುಡಕ್ಕೆ ಬಿಸಿ ನೀರು ಕಾಯಿಸಲಾರಂಭಿಸಿದ್ದಾರೆ. ಇವರ ಆಗಮನದ ಮೂಲಕ ಸಿಸಿಬಿಗೆ ಹೊಸಾ ಬಲ ಬಂದಂತಾಗಿದೆ. ಒಟ್ಟಾರೆ ಅಪರಾಧ ಪ್ರಕರಣಗಳನ್ನು ತಹಬಂದಿಗೆ ತರುವಲ್ಲಿ ಪ್ರಧಾನ ಪಾತ್ರ ವಹಿಸುವ ಸಿಸಿಬಿ ಈಗ ಅಲೋಕ್ ಕುಮಾರ್ ಅವರ ಸಾರಥ್ಯದಲ್ಲಿ ಮತ್ತೆ ನಿಗಿ ನಿಗಿಸುವ ಉತ್ಸಾಹದೊಂದಿಗೆ ಅಖಾಡಕ್ಕಿಳಿದಿದೆ.

ಒಂದರ್ಥದಲ್ಲಿ ವೃತ್ತಿ ಜೀವನದುದ್ದಕ್ಕೂ ರಿಯಲ್ ಸಿಂಗಂ ಆಗಿಯೇ ಕಾರ್ಯ ನಿರ್ವಹಿಸುತ್ತಾ ಬಂದಿರುವವರು ಅಲೋಕ್ ಕುಮಾರ್. ಬೆಂಗಳೂರೆಂಬುದು ನಾನಾ ದಂಧೆಗಳ ದಾವಾ ನಲವಾಗಿ, ಬೇರೆ ಬೇರೆ ರಾಜ್ಯಗಳ ಪಾತಕಿಗಳಿಗೂ ಅಡಗುದಾಣವಾಗಿ ಬದಲಾದ ಆತಂಕ ಸಾರ್ವಜನಿಕರಲ್ಲಿತ್ತು. ಸರಗಳ್ಳತನ, ದರೋಡೆ, ಪುಢಾರಿಗಳ ಪುಂಡಾಟದಿಂದ ಇಲ್ಲಿನ ಜನ ರೋಸತ್ತಿದ್ದರು. ಇಂಥವರೆಲ್ಲ ಅಲೋಕ್ ಕುಮಾರ್ ಅವರ ನಿಷ್ಠುರ ಕಾರ್ಯ ವೈಖರಿ ಕಂಡು ಮೆಚ್ಚಿಕೊಂಡಿದ್ದಾರೆ. ಅಲೋಕ್ ಜನ ಸಾಮಾನ್ಯರ ಕಣ್ಣಿನಲ್ಲಿಯೂ ಹೀರೋ ಆಗಿದ್ದಾರೆ. ಇಂಥಾ ದಕ್ಷ ಅಧಿಕಾರಿಯ ಬಗೆಗೊಂದು ಮಾಸ್ ಸಿನಿಮಾ ಮಾಡೋ ದೊಡ್ಡ ಮಟ್ಟದ ತಯಾರಿಯೊಂದು ಈಗ ನಡೆಯುತ್ತಿದೆ.

ಈ ಚಿತ್ರವನ್ನು ಖ್ಯಾತ ನಿರ್ಮಾಪಕರೊಬ್ಬರು ಬಹಳಷ್ಟು ಕನಸಿಟ್ಟುಕೊಂಡು ನಿರ್ಮಾಣ ಮಾಡಲಿದ್ದಾರೆ. ಇದರ ನಿರ್ದೇಶಕರ್‍ಯಾರು, ಅಲೋಕ್ ಕುಮಾರ್ ಅವರ ಪಾತ್ರಕ್ಕೆ ಜೀವ ತುಂಬೋ ನಟನ್ಯಾರು ಎಂಬೆಲ್ಲ ವಿಚಾರಗಳು ಶೀಘ್ರದಲ್ಲಿಯೇ ಹೊರ ಬೀಳಲಿವೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz