Connect with us

ಪ್ರೆಸ್ ಮೀಟ್

ಬಿಲ್ ಗೇಟ್ಸ್ ಹಾಡಿಗೆ ಖರ್ಚಾದದ್ದು ನಲವತ್ತು ಲಕ್ಷ!

Published

on

ಚಿತ್ರೀಕರಣ ಶುರುವಾದ ಘಳಿಗೆಯಿಂದಲೇ ನಾನಾ ಕಾರಣದಿಂದ ಸದಾ ಸುದ್ದಿಯಲ್ಲಿರುವ ಚಿತ್ರ ಬಿಲ್‌ಗೇಟ್ಸ್. ಈ ಚಿತ್ರ ತಂಡವೀಗ ಮತ್ತೆ ಗಾಂಧಿನಗರವೇ ತಿರುಗಿ ನೋಡುವಂತೆ ಸದ್ದು ಮಾಡಿದೆ. ಅದಕ್ಕೆ ಕಾರಣವಾಗಿರುವುದು ಭರ್ತಿ ನಲವತ್ತು ಲಕ್ಷ ಖರ್ಚು ಮಾಡಿ ರೂಪಿಸಿರುವ ವಿಶೇಷವಾದೊಂದು ಹಾಡು!

ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಚಿತ್ರವನ್ನು ಶ್ರೀನಿವಾಸ್ ಸಿ. ನಿರ್ದೇಶನ ಮಾಡಿದ್ದಾರೆ. ಇದೊಂದು ಮಕ್ಕಳ ಚಿತ್ರ ಎಂಬುದರ ಹೊರತಾಗಿಯೂ ತಾಂತ್ರಿಕವಾಗಿಯೂ ಅದ್ದೂರಿಯಾಗಿರಬೇಕೆಂಬ ಕಾರಣದಿಂದ ಚಿತ್ರ ತಂಡ ವಿಶೇಷವಾದೊಂದು ಹಾಡನ್ನು ರೂಪಿಸಿದೆ. ಈ ಹಾಡಿನಲ್ಲಿ ಬರೀ ಮಕ್ಕಳೇ ನಟಿಸಿದ್ದಾರಂತೆ. ಇದಕ್ಕೆ ಒಟ್ಟಾರೆಯಾಗಿ ಖರ್ಚು ಮಾಡಿರೋ ಮೊತ್ತ ನಲವತ್ತು ಲಕ್ಷ!

ಸಾಮಾನ್ಯವಾಗಿ ಮಕ್ಕಳ ಚಿತ್ರಗಳೆಂದರೆ ಕೈ ಬಿಚ್ಚಿ ಖರ್ಚು ಮಾಡಲು ಹಿಂದೇಟು ಹಾಕಲಾಗುತ್ತದೆ. ಆದರೆ ಔಟ್‌ಪುಟ್ ಚೆನ್ನಾಗಿರಬೇಕೆಂಬ ಕನಸಿನಿಂದ ಯಥೇಚ್ಚವಾಗಿ ಖರ್ಚು ಮಾಡಿ ಈ ಚಿತ್ರವನ್ನು ರೂಪಿಸಲಾಗಿದೆ. ಅದರ ಭಾಗವಾಗಿ ಅಣಿಗೊಂಡಿರೋ ಈ ಹಾಡನ್ನು ಮಂಡ್ಯ, ಮಹದೇವಪುರ, ಸೀತಾಪುರ, ಕೊಳ್ಳೇಗಾಲ ಮುಂತಾದೆಡೆಗಳಲ್ಲಿ ಐದು ದಿನಗಳ ಕಾಲ ಕಲೈ ಅವರ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಇವತ್ತು ಎಷ್ಟೋ ಜನಪದ ಆಟಗಳು ಕಣ್ಮರೆಯಾಗಿವೆ. ಕುಂಟಾಬಿಲ್ಲೆ, ಗೋಲಿಯಿಂದ ಹಿಡಿದು ಪ್ರತಿಯೊಂದೂ ಆಟಗಳನ್ನು ನೆನಪಿಸುವ ಆಟಗಳನ್ನೆಲ್ಲಾ ಸೇರಿಸಿ ಪ್ರತಿಯೊಬ್ಬರನ್ನೂ ತಮ್ಮ ಹಿಂದಿನ ನೆನಪುಗಳಿಗೆ ಕೊಂಡೊಯ್ಯುವಂತಾ ಅಪರೂಪದ ಹಾಡು ಇದಾಗಿದ್ದು ಯುವ ಗೀತಸಾಹಿತಿ ಅರುಣ್ ಇದನ್ನು ಬರೆದಿದ್ದಾರೆ. ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಹಣದಲ್ಲಿ ಮನಮೋಹಕವಾಗಿ ಈ ಹಾಡು ಮೂಡಿಬಂದಿದೆ.

ಇನ್ನೇನು ಪೋಸ್ಟ್ ಪ್ರ್ರೊಡಕ್ಷನ್ ಕಾರ್ಯವೆಲ್ಲ ಮುಕ್ತಾಯದ ಹಂತ ತಲುಪಿರುವುದರಿಂದ ಆದಷ್ಟು ಬೇಗನೆ ಈ ಚಿತ್ರ ತೆರೆ ಕಾಣಲಿದೆ. ಜೆ ಮಲ್ಲಿಕಾರ್ಜುನ್ ಅವರ ಸಂಭಾಷಣೆ, ನೋಬಿನ್ ಪಾಲ್ ಅವರ ಸಂಗೀತ, ಮರಿಸ್ವಾಮಿ ಅವರ ಸಂಕಲನ, ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಕಲೈ ಅವರ ನೃತ್ಯ ನಿರ್ದೇಶನ ಇರುವ ಈ ಚಿತ್ರದಲ್ಲಿ ಶಿಶಿರ್ ಶಾಸ್ತ್ರಿ, ರಶ್ಮಿತಾ, ಅಕ್ಷರಾ ರೆಡ್ಡಿ, ಚಿಕ್ಕಣ್ಣ, ಕುರಿ ಪ್ರತಾಪ್, ಯತಿರಾಜ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

ಟೀಸರ್ / ಟ್ರೇಲರ್

ಕರ್ಷಣಂ ಆಡಿಯೋ ಬಿಡುಗಡೆ ಮಾಡಲಿದ್ದಾರೆ ರಾಕ್‌ಲೈನ್!

Published

on

ಧನಂಜಯ್ ಅತ್ರೆ ನಿರ್ಮಾಣ ಮಾಡಿ ನಾಯಕನಾಗಿ ನಟಿಸಿರೋ ಚಿತ್ರ ಕರ್ಷಣಂ. ವಿಭಿನ್ನವಾದ ಶೀರ್ಷಿಕೆಯಿಂದಲೇ ಪ್ರೇಕ್ಷಕರ ಚಿತ್ರವನ್ನು ತನ್ನತ್ತ ಸೆಳೆದುಕೊಂಡಿರೋ ಈ ಚಿತ್ರದ ಹಾಡುಗಳ ಬಿಡುಗಡೆಗೆ ಮುಹೂರ್ತ ಫಿಕ್ಸಾಗಿದೆ!

ಇದೇ ತಿಂಗಳ ೨೭ರಂದು ಈ ಚಿತ್ರದ ಹಾಡುಗಳನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಕರ್ಷಣಂ ಚಿತ್ರದ ಬಿಡುಗಡೆಯ ಕ್ಷಣಗಳೂ ಹತ್ತಿರಾಗಿವೆ.

ಶರವಣ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕರ್ಷಣಂ ಚಿತ್ರ ಗೌರಿ ಅತ್ರೆ ಅವರ ಕಥೆಯನ್ನು ಹೊಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರೋ ಈ ಚಿತ್ರದಲ್ಲಿ ಧನಂಜಯ ಅತ್ರೆ ಎರಡ್ಮೂರು ಶೇಡುಗಳಿರೋ ಸವಾಲಿನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ ಎಲೆಕ್ಟ್ರಿಕಲ್ ಇಂಜಿನಿಯರ್. ಆತನಿಗೆ ಸ್ಲಂ ಬೇಸಿನ ಹಿನ್ನೆಲೆಯೂ ಇರೋದರಿಂದ ನಿಜವಾದ ಸ್ಲಂನಲ್ಲಿಯೇ ಶ್ರಮ ವಹಿಸಿ ಚಿತ್ರೀಕರಣ ಮಾಡಲಾಗಿದೆ.

ವಸಂತ ರಾವ್ ಎಂ ಕುಲಕರ್ಣಿ ಕಲಾ ನಿರ್ದೇಶನ, ಮೋಹನ್ ಎಂ ಮುಗುಡೇಶ್ವರ್ ಛಾಯಾಗ್ರಹಣ, ಗೌರಿ ಅತ್ರೆ ಕಥೆ, ವೆಂಕಟೇಶ್ ಸಂಕಲನ, ಎಸ್. ಎಸ್ ಅರ್ಜುನ್ ಸಹ ನಿರ್ದೇಶನ, ಅಶೋಕ್ , ಸತೀಶ್ ಬ್ರಹ್ಮಾವರ್ ಸಾಹಸವಿರೋ ಈ ಚಿತ್ರಕ್ಕೆ ಅನುಷಾ ರಾವ್ ನಾಯಕಿಯಾಗಿದ್ದಾರೆ. ಈ ಚಿತ್ರವನ್ನು ಯಾವುದಕ್ಕೂ ಕೊರತೆಯಾಗದಂತೆ ನಿರ್ಮಾಪಕನಾಗಿಯೂ ಜವಾಬ್ದಾರಿಯಿಂದ ಪೊರೆದಿರುವ ಧನಂಜಯ್ ಅತ್ರೆ, ನಾಯಕನಾಗಿಯೂ ಪಾದಾರ್ಪಣೆ ಮಾಡಿದ್ದಾರೆ. ಇದೇ ಇಪ್ಪತ್ತೇಳರಂದು ಆಡಿಯೋ ರಿಲೀಸಾದ ನಂತರ ಬಿಡುಗಡೆಯ ದಿನಾಂಕವೂ ಘೋಷಣೆಯಾಗಲಿದೆ.

Continue Reading

ಅಪ್‌ಡೇಟ್ಸ್

ಟಕ್ಕರ್ ಸೆಟ್ಟಿಗೆ ದಿನಕರ್ ಸರ್‌ಪ್ರೈಸ್ ವಿಸಿಟ್!

Published

on

ಮಾವಂದಿರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದಿನಕರ್ ಅವರುಗಳ ಮಾರ್ಗದರ್ಶನದಂತೆಯೇ ಮುಂದಡಿಯಿಡುತ್ತಾ ಬಂದಿರುವ ಮನೋಜ್ ಈಗ ಟಕ್ಕರ್ ಚಿತ್ರದ ನಾಯಕ ನಟ. ಈ ಚಿತ್ರದ ಚಿತ್ರೀಕರಣ ಮೈಸೂರು ಸುತ್ತಮುತ್ತ ಬಿಡುವಿರದೆ ನಡೆಸಿ, ಈಗ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ. ಇದೀಗ ದಿನಕರ್ ಮಡದಿ ಮಾನಸಾ ಅವರೊಂದಿಗೆ ಟಕ್ಕರ್ ಸೆಟ್ಟಿಗೆ ಭೇಟಿ ನೀಡಿ ಸೋದರಳಿಯ ಮನೋಜ್ ಅವರನ್ನು ಹುರಿದುಂಬಿಸಿದ್ದಾರೆ!

ಬೆಂಗಳೂರಿನ ಹೆಚ್.ಎಂ.ಟಿ, ಕಂಠೀರವ ಸ್ಟುಡಿಯೋ, ನಾಗರಬಾವಿ ಹೀಗೆ.. ಟಕ್ಕರ್ ಚಿತ್ರದ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ಮನೋಜ್ ಮತ್ತು ಭಜರಂಗಿ ಲೋಕಿ ನಡುವಿನ ಮುಖ್ಯವಾದ ಫೈಟ್ ಸೀನುಗಳು ಚಿತ್ರೀಕರಿಸಲ್ಪಡುತ್ತಿವೆ. ಈ ಚಿತ್ರೀಕರಣ ನಡೆಯುತ್ತಿರುವಾಗಲೇ ದಿನಕರ್, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಮಾನಸಾ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಸರ್‌ಪ್ರೈಸ್ ನೀಡಿದ್ದಾರೆ.

ಟಕ್ಕರ್ ಚಿತ್ರ ಆರಂಭವಾದಾಗಿನಿಂದಲೂ ಅದೇನೇ ಕೆಲಸದೊತ್ತಡ ಇದ್ದರೂ ಸೂಕ್ತ ಮಾರ್ಗದರ್ಶನ, ಸಲಹೆ ಸೂಚನೆ ನೀಡುತ್ತಾ ಬಂದಿದ್ದವರು ದಿನಕರ್. ಇದೀಗ ಖುದ್ದಾಗಿ ಟಕ್ಕರ್ ಸೆಟ್ಟಿಗೆ ಭೇಟಿ ನೀಡಿದ ದಿನಕರ್ ಅವರು ಚಿತ್ರದ ಇದುವರೆಗಿನ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡು ಖುಷಿಗೊಂಡಿದ್ದಾರೆ. ಸೋದರಳಿಯ ಮನೋಜ್ ಬೆನ್ತಟ್ಟುತ್ತಲೇ ಇಡೀ ಚಿತ್ರತಂಡಕ್ಕೆ ಹುರುಪು ತುಂಬಿದ್ದಾರೆ.

ದಿನಕರ್ ಮತ್ತು ಅವರ ಮಡದಿ ಮಾನಸಾ ಇದೀಗ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಕೂಡಾ ಅವರು ಟಕ್ಕರ್ ಸೆಟ್ಟಿಗೆ ಭೇಟಿ ನೀಡಿರೋದು ಅವರಿಗೆ ಸೋದರಳಿಯ ಮನೋಜ್ ಮೇಲಿರೋ ಅಪಾರ ಕಾಳಜಿ, ಪ್ರೀತಿಯ ಪ್ರತೀಕ. ದರ್ಶನ್ ಅವರಂತೆಯೇ ಮನೋಜ್‌ಗೆ ಕಾಲ ಕಾಲಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿರುವ ದಿನಕರ್ ಭೇಟಿಯಿಂದ ಟಕ್ಕರ್ ಚಿತ್ರ ತಂಡಕ್ಕೆ ಹೊಸಾ ಹುಮ್ಮಸ್ಸು ಸಿಕ್ಕಿದಂತಾಗಿದೆ.

ಇದೇ ಸಂದರ್ಭದಲ್ಲಿ ದಿನಕರ್ ಅವರ ಜೊತೆ ಸ್ಥಳಕ್ಕಾಗಮಿಸಿದ್ದ ಸೃಜನ್ ಕೂಡಾ ಟಕ್ಕರ್ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

ಅಂದಹಾಗೆ, ಕಮಲಿ ಧಾರಾವಾಹಿ ಖ್ಯಾತಿಯ ನಿರ್ದೇಶಕ ಅರವಿಂದ್ ಕೌಶಿಕ್ ನಿರ್ದೇಶಿಸಿದ್ದ ಹುಲಿರಾಯ ಚಿತ್ರವನ್ನು ನಿರ್ಮಿಸಿದ್ದರಲ್ಲಾ? ನಾಗೇಶ್ ಕೋಗಿಲು.. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಟಕ್ಕರ್. ಪುಟ್ ಗೌರಿ ರಂಜನಿ ರಾಘವನ್ ಈ ಚಿತ್ರದಲ್ಲಿ ಮನೋಜ್ ಗೆ ನಾಯಕಿಯಾಗಿದ್ದಾರೆ.

Continue Reading

ಟೀಸರ್ / ಟ್ರೇಲರ್

ಬಜ಼ಾರ್ ಆಡಿಯೋ ಬಿಡುಗಡೆ ಮಾಡಿದ ಯಜಮಾನ!

Published

on

ಸಿಂಪಲ್ ಸುನಿ ನಿರ್ದೇಶನದ ಬಜ಼ಾರ್ ಚಿತ್ರದ ಹಾಡುಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿರುವ, ಆನಂದ್ ಆಡಿಯೋ ಮೂಲಕ ಹೊರ ಬಂದಿರೋ ಈ ಹಾಡುಗಳನ್ನು ಅನಾವರಣಗೊಳಿಸಿದ ದರ್ಶನ್ ಅವರು ಬಜ಼ಾರ್ ಚಿತ್ರದ ಈ ವರೆಗಿನ ಕೆಲಸ ಕಾರ್ಯಗಳನ್ನು ಮೆಚ್ಚಿಕೊಳ್ಳುತ್ತಲೇ ಶುಭ ಕೋರಿದ್ದಾರೆ.

ಸುನಿ ಬೆಂಗಳೂರಿನಲ್ಲಿ ಈಗಲೂ ಒಳಗೊಳಗೇ ನಡೆಯುತ್ತಿರುವ ಪಾರಿವಾಳ ರೇಸಿನ ಬಗ್ಗೆ ಹೊಸೆದಿರೋ ರೋಚಕ ಕಥೆಯನ್ನು ಬಜ಼ಾರ್ ಚಿತ್ರ ಹೊಂದಿರೋದು ಗೊತ್ತೇ ಇದೆ. ಟೀಸರ್ ನೋಡಿದ ದರ್ಶನ್ ಅವರನ್ನು ಸೆಳೆದಿದ್ದೂ ಸಹ ಇದೇ ಅಂಶವಂತೆ. `ಟೀಸರ್ ನೋಡಿದಾಗಲೇ ಪಾರಿವಾಳ ರೇಸಿನ ಬಗ್ಗೆ ಸುನಿ ಕಥೆ ಮಾಡಿರೋ ವಿಚಾರ ತಿಳಿಯಿತು. ಆ ಕಾರಣದಿಂದಲೇ ಅದು ನನ್ನನ್ನು ಸೆಳೆಯಿತು ಕೂಡಾ. ಯಾಕೆಂದರೆ ಒಂದು ಕಾಲದಲ್ಲಿ ನಾನೂ ಹಕ್ಕಿ ಸಾಕಿದೋನೇ’ ಅನ್ನುವ ಮೂಲಕ ಚಾಲೆಂಜಿಂಗ್ ಸ್ಟಾರ್ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ!

`ನನಗೆ ಗೊತ್ತಿರುವಂತೆ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ರೌಡಿಸಂ ಶುರುವಾಗುತ್ತಿದ್ದದ್ದೇ ಈ ಪಾರಿವಾಳದ ಹಕ್ಕಿ ಸಾಕೋ ಖಯಾಲಿಯಿಂದಾಗಿ. ಈ ಪಾರಿವಾಳ ರೇಸಿಂಗಿನಲ್ಲಿಯೇ ನಾನಾ ಗೇಮುಗಳಿವೆ. ಅವು ಭಯಾನಕ ಡೇಂಜರಸ್ ಶೋಕಿಗಳು. ಇಂಥಾ ಕಥೆಯನ್ನು ಸಿದ್ದಪಡಿಸಿ ಸುನಿ ಚಿತ್ರ ಮಾಡಿದ್ದಾರೆ. ಸಿಂಪಲ್ ಸುನಿ ಯಾವಾಗಲೂ ಸಮುದ್ರಕ್ಕೆ ಎದುರಾಗಿ ಈಜುವ ಸ್ವಭಾವದವರು. ಎಲ್ಲರೂ ಒಂದು ಹಾದಿ ಹಿಡಿದರೆ ಸುನಿ ಬೇರೆಯದ್ದೇ ದಾರಿ ಕಂಡುಕೊಳ್ಳುತ್ತಾರೆ. ಟೀಸರ್ ಮತ್ತು ಹಾಡುಗಳನ್ನು ನೋಡಿದರೇನೇ ಚಿತ್ರತಂಡ ಪಟ್ಟಿರುವ ಶ್ರಮದ ಅರಿವಾಗುತ್ತೆ. ಹೊಸಾ ಹುಡುಗ ಧನ್ವೀರ್ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ’ ಅಂತ ಪಾರಿವಾಳದ ರೇಸಿನ ಬಗ್ಗೆ ಮಾತಾಡುತ್ತಲೇ ಬಜ಼ಾರ್ ಚಿತ್ರಕ್ಕೆಡ ದರ್ಶನ್ ಅವರು ಹಾರೈಸಿದ್ದಾರೆ.

ಪಾರಿವಾಳ ಸಾಕೋದು ಒಂದು ಚೆಂದದ ಅನುಭವ ಹೌದು. ಆದರೆ ಅದುವೇ ರೇಸಿನ ಹುಚ್ಚನ್ನೂ ಹತ್ತಿಸುತ್ತೆ. ಆದರೆ ದರ್ಶನ್ ಅವರು ಒಂದು ಕಾಲದಲ್ಲಿ ಪಾರಿವಾಳ ಸಾಕಿ ರೇಸಿನ ತೆಕ್ಕೆಗೆ ಬೀಳದೆಯೇ ಆ ಬಗ್ಗೆ ಒಂದಷ್ಟು ಕುತೂಹಲ ಹೊಂದಿದ್ದರಂತೆ. ಇಂದು ಅವರು ಸ್ಟಾರ್ ಆದರೂ ಕಾರಲ್ಲಿ ಹೋಗುವಾಗ ಪಾರಿವಾಳ ಹಾರಾಡುತ್ತಿರೋದನ್ನು ಕಂಡರೆ ಅದಕ್ಕೆ ದಾರ ಕಟ್ಟಿದ್ದಾರಾ? ಆ ದಾರದ ಸೂತ್ರಧಾರ ಯಾವ ಮನೆಯ ತಾರಸಿಯಲ್ಲಿರಬಹುದು ಅಂತೆಲ್ಲ ಅದೇ ಬೆರಗಿನಿಂದ ಕಣ್ಣಾಡಿಸುತ್ತಾರಂತೆ!

ದರ್ಶನ್ ಅವರು ಬಿಡುವು ಮಾಡಿಕೊಂಡು ಬಂದು ಬಜ಼ಾರ್ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದಲ್ಲದೇ ಚಿತ್ರತಂಡದೊಂದಿಗೆ ಬರೆತು ಮುಕ್ತವಾಗಿ ಮಾತಾಡಿದ್ದಾರೆ. ಹೊಸಾ ಹೀರೋಗೆ ಶುಭ ಕೋರುತ್ತಲೇ ಸುನಿಯ ಕಸುಬುದಾರಿಕೆಯನ್ನು ಮೆಚ್ಚಿಕೊಂಡೇ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

 

Continue Reading

Trending

Copyright © 2018 Cinibuzz