One N Only Exclusive Cine Portal

ಕಿಸ್ಸು ಕೊಟ್ಟವನು ರಾಣಾ ದಗ್ಗುಬಾಟಿಯ ತಮ್ಮ!

ಬಾಲಿವುಡ್ ನಟಿ ಶ್ರಿ ರೆಡ್ಡಿ ಕಾಸ್ಟಿಂಗ್ ಕೌಚ್ ವಿರುದ್ಧ ಸಮರ ಸಾರಿ ದಿನಗಳ ಹಿಂದೆ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಹೇಳಿ ಕೇಳಿ ತೆಲುಗು ಚಿತ್ರರಂಗದಲ್ಲಿ ಪುರುಷರದ್ದೇ ಪಾರುಪಥ್ಯ. ಇದರ ಬಲದ ಮೂಲಕವೇ ಶ್ರೀ ರೆಡ್ಡಿಯ ಬಾಯಿ ಮುಚ್ಚಿಸುವ ಪ್ರಯತ್ನಗಳೂ ಅವ್ಯಾಹತವಾಗಿ ನಡೆದಿವೆ. ಇದೆಲ್ಲದರ ನಡುವೆಯೂ ಶ್ರೀ ರೆಡ್ಡಿ ತಳೆದಿರುವ ಕಠಿಣ ನಿರ್ಧಾರ ಮತ್ತು ಎಸೆದೊಂದು ಭಯಾನಕ ಬಾಂಬು ಕಂಡು ಟಾಲಿವುಡ್ ತುಂಬಾ ನಡುಕ ಅರಂಭವಾಗಿದೆ!

ಯಾವಾಗ ನಡು ಬೀದಿಯಲ್ಲಿ ಅರೆ ಬೆತ್ತಲೆಯಾಗಿ ನಿಂತು ಬಾಯಿ ಬಡಕೊಂಡರೂ ನ್ಯಾಯವೆಂಬುದು ಮರೀಚಿಕೆಯಾಯ್ತೋ… ಆಗ ಶ್ರೀ ರೆಡ್ಡಿ ರೊಚ್ಚಿಗೆದ್ದಿದ್ದಾಳೆ. ತನ್ನನ್ನು ಬಲವಂತವಾಗಿ, ಅವಕಾಶ ಕೊಡಿಸುವ ಆಮಿಷವೊಡ್ಡಿ ಕೆಡವಿಕೊಂಡವರ ಪೋಟೋ ಬಿಡುಗಡೆ ಮಾಡುವ ತೀರ್ಮಾನಕ್ಕೆ ಬಂದಿರೋ ಶ್ರೀ ರೆಡ್ಡಿ ಆರಂಭಿಕವಾಗಿ ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿಯ ತಮ್ಮನ ಅಸಲೀಯತ್ತನ್ನು ಹೊರ ಹಾಕಿದ್ದಾಳೆ.

ಶ್ರೀ ರೆಡ್ಡಿ ಮಾಧ್ಯಮಗಳ ಮೂಲಕ ರಾಣಾ ದಗ್ಗುಬಾಟಿ ತಮ್ಮ ಅಭಿರಾಮ್ ಎಂಬಾತನೊಂದಿಗಿನ ಖಾಸಗಿ ಫೋಟೋಗಳನ್ನು ಜಾಹೀರು ಮಾಡಿದ್ದಾಳೆ. ಅಭಿರಾಮ್ ಶ್ರೀರೆಡ್ಡಿಯನ್ನು ಅವುಚಿಕೊಂಡು ಲಿಪ್ ಟು ಲಿಪ್ ಕಿಸ್ ಕೊಡುವ ಚಿತ್ರ ವಿಚಿತ್ರ ಫೊಟೋಗಳು ತೆಲುಗು ಚಿತ್ರ ರಂಗದಲ್ಲಿ ಸಂಚಲನವನ್ನೇ ಸೃಷ್ಟಿಸಿವೆ.

ರಾಣಾ ದಗ್ಗುಬಾಟಿ ಸಭ್ಯ ನಟ ಅಂತಲೇ ಹೆಸರಾದವನು. ಈ ಹಿಂದೆ ತ್ರಿಶಾಳೊಂದಿಗಿನ ಲವ್ವಿನ ರೂಮರಿನ ಹೊರತಾಗಿ ಆತನ ವಿರುದ್ಧ ಬೇರ‍್ಯಾವುದೇ ಆರೋಪಗಳಿಲ್ಲ. ಇಂತಾ ನಟನ ತಮ್ಮ ಅಭಿರಾಮನ ಅವತಾರ ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

ಈ ಮೂಲಕ ಶ್ರೀ ರೆಡ್ಡಿ ತೆಲುಗು ಚಿತ್ರರಂಗದಲ್ಲಿನ ಕಾಸ್ಟ್ ಕೌಚಿಂಗ್ ಕಾಯಿಲೆಯ ವಿರುದ್ಧ ಕಾಲೂರಿ ನಿಂತು ಸಮರ ಸಾರುವ ಸೂಚನೆ ರವಾನಿಸಿದ್ದಾರೆ. ಇದಾದೇಟಿಗೆ ತೆಲುಗಿನಲ್ಲಿ ಸಭ್ಯತೆಯ ಮುಖವಾಡ ತೊಟ್ಟ ಅನೇಕ ನಟರು ನಿರ್ಮಾಪಕರು ಯಾವುದೇ ಕ್ಷಣದಲ್ಲಾದರೂ ತಮ್ಮ ವಿರುದ್ಧ ಬಾಂಬು ಸಿಡಿದು ಬೆತ್ತಲಾಗುವ ಭಯದಲ್ಲಿದ್ದಾರೆ. ಅಂತೂ ಈ ಮೂಲಕ ತೆಲುಗು ಚಿತ್ರ ರಂಗದ ಕರಾಳ ಮುಖವೊಂದು ಹಂತ ಹಂತವಾಗಿ ಅನಾವರಣಗೊಳ್ಳುತ್ತಿದೆ!

Leave a Reply

Your email address will not be published. Required fields are marked *


CAPTCHA Image
Reload Image