One N Only Exclusive Cine Portal

ಬಾಕ್ಸಾಫೀಸ್‌ನಲ್ಲಿ ಹೊಸಾ ಚಮಕ್!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕನ್ನಡ ಚಿತ್ರರಂಗಕ್ಕೆ ಭರ್ಜರಿ ಯಶಸ್ಸಿನ ಮಹಾ ಪರ್ವವೊಂದು ಬೇಷರತ್ತಾಗಿ ಪುನರಾಗಮನವಾಯಿತಾ? ಹೀಗೊಂದು ಅಚ್ಚರಿಯ ಪ್ರಶ್ನೆ ಹುಟ್ಟಲು ಕಾರಣವಾಗಿರೋದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಚಮಕ್ ಚಿತ್ರದ ಭರ್ಜರಿ ಕಲೆಕ್ಷನ್!
ಈ ಮೂಲಕ ಸಿಂಪಲ್ ಸುನಿ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣರ ಕಾಂಬಿನೇಷನ್ ಮೋಡಿ ಮಾಡಿದೆ. ಈ ಮಾತಿಗೆ ಚಮಕ್ ಚಿತ್ರದ ಬಾಕ್ಸಾಫೀಸ್ ರಿಪೋರ್ಟ್ ಪಕ್ಕಾ ಸಾಕ್ಷಿ ಒದಗಿಸುತ್ತದೆ!
ಚಮಕ್ ಚಿತ್ರ ಮೊದಲ ದಿನವೇ ೧.೪೦ ಕೋಟಿ ಕಲೆಕ್ಷನ್ ಮಾಡಿತ್ತು. ಅದಾಗಿ ಮರು ದಿನವೇ ಮತ್ತಷ್ಟು ವೇಗ ಪಡೆದುಕೊಂಡ ಚಮಕ್ ದಾಖಲಿಸಿದ ಕಲೆಕ್ಷನ್ ಮೊತ್ತ ಬರೋಬ್ಬರಿ ೧.೨೭ ಕೋಟಿ. ಮೂರನೇ ದಿನದ ಕಲೆಕ್ಷನ್ ೧.೬೦ ಕೋಟಿ. ಈ ಏರುಗತಿಯ ದಾಖಲೆ ಈ ಕ್ಷಣದ ವರೆಗೂ ಅಡೆತಡೆ ಇಲ್ಲದೆ ಮುಂದುವರೆಯುತ್ತಲೇ ಇದೆ!


ಇದು ಇದೇ ಗಣೇಶ್ ಅವರಿಗೆ ಗೋಲ್ಡನ್ ಸ್ಟಾರ್ ಎಂಬ ಬಿರುದು ತಂದುಕೊಟ್ಟು ಭಾರೀ ದಾಖಲೆಯನ್ನೇ ಸೃಷ್ಟಿಸಿದ ಮುಂಗಾರು ಮಳೆಯ ಇತಿಹಾಸ ಪುನರಾವರ್ತನೆಯಾಗೋ ಸ್ಪಷ್ಟ ಸೂಚನೆ. ಚಮಕ್ ಚಿತ್ರ ಬಿಡುಗಡೆಯ ಪೂರ್ವದಲ್ಲಿಯೇ ಮುಂಗಾರುಮಳೆಯ ದಾಖಲೆಯನ್ನು ಸರಿಗಟ್ಟುವ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಸರಿಯಾಗಿ ಮುಂಗಾರು ಮಳೆ ಬಿಡುಗಡೆಯಾದಂದೇ ಚಮಕ್ ಕೂಡಾ ತೆರೆ ಕಂಡಿತ್ತು. ಈಗ ಹತ್ತು ವರ್ಷದ ಹಿಂದೆ ಇದೇ ಸಮಯದಲ್ಲಿ ಅದ್ದೂರಿ ಗೆಲುವು ದಾಖಲಿಸಿದ್ದ ಮುಂಗಾರು ಮಳೆ ಚಮಕ್ ಮೂಲಕ ಪುನರಾವರ್ತನೆಯಾಗುತ್ತದೆಂಬ ಸ್ಪಷ್ಟ ಅಂದಾಜು ಈ ವರೆಗಿನ ಕಲೆಕ್ಷನ್ ಮೂಲಕ ಸಿಕ್ಕಿದರೆ ಅಚ್ಚರಿಯೇನಿಲ್ಲ.
ಅಂತೂ ಚಮಕ್ ಮೂಲಕ ಬಹು ಕಾಲದ ನಂತರ ಗಣೇಶ್ ಅವರಿಗೆ ಭರಪೂರವಾದೊಂದು ಗೆಲುವು ಸಿಕ್ಕಿದೆ. ಇದು ಸುನಿ ಮತ್ತು ಗಣೇಶ್ ಜೋಡಿಯ ಅಸಲೀ ಚಮಕ್!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image