One N Only Exclusive Cine Portal

ಚಮಕ್ ಮೂಲಕ ಮತ್ತೆ ಮೋಡಿ ಮಾಡ್ತಾರಾ ಸಿಂಪಲ್ ಸುನಿ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ನಿನ ಚಮಕ್ ಚಿತ್ರ ಸದ್ಯ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ರಶ್ಮಿಕಾ ಮಂದಣ್ಣ ಮತ್ತು ಗಣೇಶ್ ಜೋಡಿಯ ನಟನೆ ಟೀಸರ್ ಮೂಲಕ ಈಗಾಗಲೇ ಪ್ರೇಕ್ಷಕರನ್ನು ಸೆಳೆದಿದೆ. ಮುಂಗಾರುಮಳೆಯಂಥಾದ್ದೇ ಮತ್ತೊಂದು ಭರಪೂರ ಗೆಲುವಿನ ರೂವಾರಿಯಾಗಬಹುದಾ ಎಂಬಂಥಾ ಚರ್ಚೆಯನ್ನು ಪ್ರೇಕ್ಷಕರಲ್ಲಿ ಹುಟ್ಟು ಹಾಕೋ ಮೂಲಕ ಚಮಕ್ ಗೆಲುವಿನ ಒಂದು ಮೆಟ್ಟಿಲು ಹತ್ತಿ ನಿಂತಿದೆ!
ಕಿರಿಕ್ ಪಾರ್ಟಿ ಚಿತ್ರದ ಮೂಲಕವೇ ಅಪಾರ ಅಭಿಮಾನಿ ಬಳಗ ಗಳಿಸಿಕೊಂಡಿರೋ ರಶ್ಮಿಕಾ ಪಾಲಿಗಿದು ಎರಡನೇ ಚಿತ್ರ. ಮೊದಲ ಗೆಲುವಿನ ನಂತರ ಸಾಲು ಸಾಲಾಗಿ ಅವಕಾಶ ಬಂದಿದ್ದರೂ ರಶ್ಮಿಕಾ ಸುನಿ ಹೇಳಿದ ಈ ಕಥೆಯನ್ನು ಒಪ್ಪಿಕೊಂಡಿದ್ದೇ ಈ ಚಿತ್ರದ ಕಥೆಯ ಗಟ್ಟಿತನಕ್ಕೆ ಸಾಕ್ಷಿ. ಚಮಕ್ ಬಗ್ಗೆ ಈ ಪಾಟಿ ಕ್ರೇಜ್ ಸೃಷ್ಟಿಯಾಗಲು ಅದೂ ಪ್ರಮುಖ ಕಾರಣ.
ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಈ ಚಿತ್ರದಲ್ಲಿ ಪಕ್ಕಾ ಸ್ಟೈಲಿಶ್ ಲುಕ್ ಮೂಲಕ ಅಭಿಮಾನಿಗಳಿಗೆ ಕಚಗುಳಿ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಗೈನಾಕಾಲಜಿಸ್ಟ್ ಪಾತ್ರ. ಗಣೇಶ್ ಮತ್ತು ರಶ್ಮಿಕಾರ ಫಸ್ಟ್ ನೈಟ್ ಮೂಡಿನ ಟೀಸರ್ ಅಂತೂ ವೈರಲ್ ಆಗಿದೆ. ಈ ಬಗ್ಗೆ ಹೈದ್ರಾಬಾದ್ ದಿಕ್ಕಿನಿಂದಲೂ ಮೆಚ್ಚುಗೆಗಳು ಕೇಳಿ ಬಂದಿವೆ.
ಸಿಂಪಲ್ಲಾಗೊಂದ್ ಲವ್ ಸ್ಟೋರಿ ಚಿತ್ರದ ಮೂಲಕ ಗಮನ ಸೆಳೆದಿರೋ ನಿರ್ದೇಶಕ ಸುನಿ ಚಿಕ್ಕ ಸಂಗತಿಗಳನ್ನೆತ್ತಿಕೊಂಡು ಕಾಡುವಂಥಾ ಕಥೆ ಹೊಸೆಯೋದರಲ್ಲಿ, ನವಿರಾದ ದೃಷ್ಯ ಕಟ್ಟೋದರಲ್ಲಿ ನಿಷ್ಣಾತರು. ಅಂಥಾದ್ದೊಂದು ಸೂಕ್ಷ್ಮ ಕುಸುರಿಯ ಮೂಲಕವೇ ಅಣಿಗೊಂಡಿರೋ ಚಮಕ್‌ಗೆ ಪ್ರೇಕ್ಷಕರು ಫಿದಾ ಆಗುತ್ತಾರಾ ಎಂಬುದಷ್ಟೇ ಅಸಲೀ ಕುತೂಹಲ.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image