One N Only Exclusive Cine Portal

ಅತ್ಯುತ್ತಮ ಸಂಭಾಷಣೆ : ಎ.ವಿ. ಚಿಂತನ್

ಇದನ್ನು ಪ್ರಶಸ್ತಿ ಅನ್ನಬೇಕಾ? ಗೌರವದ ಕಾಣಿಕೆ ಅನ್ನಬೇಕಾ ಎಂಬುದು ಓದುಗರಿಗೆ ಬಿಟ್ಟದ್ದು. ಆದರೆ ಒಂದು ವರ್ಷದ ಅಷ್ಟೂ ಚಿತ್ರಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ, ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದ, ಕ್ರಿಯೇಟಿವಿಟಿಯಿಂದ ಗಮನ ಸೆಳೆದವರನ್ನು ವರ್ಷದ ಕೊನೆಯಲ್ಲಿ ನೆನೆಸಿಕೊಂಡು ಗೌರವಿಸೋ ಮಹದಾಸೆಯಿಂದ ಸಿನಿಬಜ಼್ ಸ್ಟಾರ್ ಆಫ್ ದಿ ಇಯರ್ -2017 ರೂಪಿಸಲ್ಪಟ್ಟಿದೆ. ಒಂದು ಸಿನಿಮಾ ರೂಪುಗೊಳ್ಳಬೇಕೆಂದರೆ ಅದರ ವಿವಿಧ ವಿಭಾಗಗಳಲ್ಲಿ ಹಲವು ಮಂದಿ ಕೆಲಸ ಮಾಡಿರುತ್ತಾರೆ. ಅದನ್ನೇ ಉಸಿರಾಡಿರುತ್ತಾರೆ. ಅಂಥಾ ಎಲ್ಲಾ ವಿಭಾಗಗಳನ್ನೂ ಜಾಲಾಡಿ ಒಬ್ಬೊಬ್ಬರನ್ನು ಗೌರವಿಸೋ ಪ್ರಯತ್ನವನ್ನು ನಾವು ಮಾಡಿದ್ದೇವೆ. ಇದರಾಚೆಗೆ ಪುರಸ್ಕಾರಕ್ಕೆ ಪಾತ್ರರಾಗೋ ಅರ್ಹತೆ ಇರುವವರು ಖಂಡಿತಾ ಇದ್ದಾರೆ. ಆದರೆ ಒಂದು ಮಿತಿಯೊಳಗೆ ಗೌರವವನ್ನಿಲ್ಲಿ ಕೊಡಮಾಡಿದ್ದೇವೆ
ನಮ್ಮ ಆಯ್ಕೆಯ ಒಬ್ಬೊರ ಹೆಸರೂ ಒಂದೊಂದು ಪೋಸ್ಟ್ ಮೂಲಕ ಇಲ್ಲಿ ಅನಾವರಣಗೊಳ್ಳಲಿದೆ

ಹಲವಾರು ವರ್ಷಗಳಿಂದ ಡೈಲಾಗ್ ರೈಟರ್ ಆಗಿ ಚಿತ್ರ ರಂಗದ ಭಾಗವಾಗಿರುವವರು ಚಿಂತನ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಹೊರ ಹೊಮ್ಮಿರುವ ಚಿಂತನ್, ಆ ಚಿತ್ರದ ಪವರ್‌ಫುಲ್ ಡೈಲಾಗ್‌ಗಳ ಮೂಲಕವೂ ಗಮನ ಸೆಳೆದಿದ್ದಾರೆ. ದರ್ಶನ್ ಸಿನಿಮಾಗಳಿಗೆ ಡೈಲಾಗ್ ಬರೆದು ಅಭಿಮಾನಿಗಳನ್ನು ಮೋಡಿ ಮಾಡೋದೆಂದರೆ ಸಾಮಾನ್ಯ ವಿಚಾರವಲ್ಲ. ಅದರಲ್ಲಿ ಸಂಪೂರ್ಣವಾಗಿ ಗೆದ್ದಿರೋ ಚಿಂತನ್ ದರ್ಶನ್ ಅವರ ಹೆಚ್ಚಿನ ಚಿತ್ರಗಳಿಗೆ ಸಂಭಾಷಣೆ ಬರೆಯುವ ಮೂಲಕ ಪ್ರತಿಭಾವಂತ ಡೈಲಾಗ್ ರೈಟರ್ ಆಗಿ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image