One N Only Exclusive Cine Portal

ಮದುವೆ ವಿಚಾರವನ್ನು ಯಾಕೆ ಗೌಪ್ಯವಾಗಿ ಇಡುತ್ತಾರೆ ಚಿರು?

ಸಿನಿಮಾರಂಗದಲ್ಲಿ ಗುಟ್ಟಾಗಿ ಪ್ರೀತಿಸಿ ನಂತರ ಮದುವೆಯಾಗೋದು ಬಹಳ ಹಿಂದಿನಿಂದ ನಡೆದುಕೊಂಡುಬಂದಿರೋ ಪ್ರತೀತಿ. ತೀರಾ ನಿಶ್ಚಿತಾರ್ಥ ಮುಗಿದು ತಿಂಗಳುಗಳು ಕಳೆದಮೇಲೆ, ಅದೂ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚುವ ಹೊತ್ತಿನಲ್ಲಾದರೂ ಗುಟ್ಟು ಮಾಡೋ ಬುದ್ದಿಯನ್ನು ಜನ ಸ್ವಲ್ಪ ಸಡಿಲಿಸಿಕೊಳ್ಳಬೇಕಲ್ಲವಾ?

ಚಿರಂಜೀವಿ ಸರ್ಜಾರನ್ನು `ಸೀಜ಼ರ್’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ `ಮದುವೆ ಯಾವಾಗ?’ ಅಂದರೆ `ನೀವೆಲ್ಲಾ ನನ್ನ ಫ್ಯಾಮಿಲಿ ಇದ್ದಹಾಗೆ. ನಿಮಗೆಲ್ಲಾ ತಿಳಿಸಿಯೇ ಮದುವೆಯಾಗುತ್ತೇನೆ. ಯಾವಾಗ ಅನ್ನೋದನ್ನೂ ಹೇಳುತ್ತೀನಿ’ ಅಂದಿದ್ದರು. ಚಿರು ಹೀಗೆ ಹೇಳೋ ಹೊತ್ತಿಗಾಗಲೇ ಮದುವೆ ಆಮಂತ್ರಣ ಪತ್ರಿಕೆ ಪ್ರಿಂಟಾಗಿ ಬೇಕಾದವರ ಕೈ ಸೇರಿಯೂ ಆಗಿದೆ. ಮೇ ೨ರಂದು ಇವರಿಬ್ಬರ ಮದುವೆ ಪ್ಯಾಲೇಸ್ ಗ್ರೌಂಡಿನಲ್ಲಿ ಏರ್ಪಾಟಾಗಿದೆ. ಹೀಗಿದ್ದೂ ಮದುವೆ ದಿನಾಂಕವನ್ನು ಹೇಳಿಕೊಳ್ಳಲು ಈ ಹುಡುಗನಿಗೆ ನಾಚಿಕೆಯಾ? ಅಥವಾ ಅಲ್ಲೂ ಸೀಕ್ರೇಟು ಮೇಂಟೇನು ಮಾಡೋ ಉಮೇದೋ ಗೊತ್ತಾಗುತ್ತಿಲ್ಲ.

2017ರ ಅಕ್ಟೋಬರ್ 22ರಂದು ನಿಶ್ಚಿತಾರ್ಥದ ದಿನ ಕೂಡಾ ಚಿರು ಹೀಗೆ ಗುಟ್ಟು ಗುಟ್ಟು ಬುದ್ದಿಯನ್ನು ಪ್ರದರ್ಶಿಸಿದ್ದರು. ಮಾದ್ಯಮದ ಪ್ರತಿನಿಧಿಗಳು `ನಿಮ್ಮ ಮತ್ತು ಮೇಘನಾ ರಾಜ್ ಎಂಗೇಜ್‌ಮೆಂಟ್ ಅಂತೆ ನಿಜಾನಾ?’ ಅಂದಿದ್ದಕ್ಕೆ `ಯಾರು ಹೇಳಿದ್ದು ಅದೆಲ್ಲಾ ಸುಳ್ಳು ಸುದ್ದಿ’ ಅಂತಾ ಮೀಡಿಯಾದವನ್ನೇ ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ್ದರು. ಇದರ ನಡುವೆಯೂ ನಿಶ್ಚಿತಾರ್ಥ ನಡೆಯುತ್ತಿರುವ ವಿಚಾರವನ್ನು ಪಕ್ಕಾ ಮಾಡಿಕೊಂಡ ಬಿಟಿವಿ ವಾಹಿನಿ ನಿಜಾಂಶವನ್ನು ಜಾಹೀರು ಮಾಡಿತ್ತು.

ಮದುವೆ ಆಗುತ್ತಿರೋದೇ ಉಂಟಂತೆ ಇನ್ನು ಅದನ್ನು ಬಚ್ಚಿಡೋದರಲ್ಲಿ ಚಿರುಗೆ ಏನು ಖುಷಿಯೋ ಅರ್ಥವಾಗುತ್ತಿಲ್ಲ.

Leave a Reply

Your email address will not be published. Required fields are marked *


CAPTCHA Image
Reload Image