One N Only Exclusive Cine Portal

ಸೆನ್ಸಾರ್ ಇಕ್ಕಳಕ್ಕೆ ಸಿಕ್ಕಿ ಬಿಕ್ಕಳಿಸುತ್ತಿದೆ ಸ್ಯಾಂಡಲ್‌ವುಡ್!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರಾಘು ಶಿವಮೊಗ್ಗ ನಿರ್ದೇಶನದ ಚೂರಿಕಟ್ಟೆ ಸಿನಿಮಾ ತಂಡ ಚಿತ್ರ ಬಿಡುಗಡೆಯಾಗುತ್ತಿರೋ ಖುಷಿಯ ಜೊತೆಗೇ ಸೆನ್ಸಾರ್ ಮಂಡಳಿಯ ಮೊಂಡಾಟದ ಬಗ್ಗೆ ಚೂರು ಬೇಸರದ ಮೂಡಿನಲ್ಲಿದೆ. ಬೇರೆಯದ್ದೇ ಬಗೆಯ ಭಿನ್ನವಾದೊಂದು ಕಥೆ ಹೊಂದಿದೆಯೆಂಬ ಕಾರಣದಿಂದ ಭಾರೀ ನಿರೀಕ್ಷೆ ಹುಟ್ಟಿಸಿರೋ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೆಟ್ ಕೊಟ್ಟು ಕೈ ತೊಳೆದುಕೊಂಡಿದೆ!


ಅಷ್ಟಕ್ಕೂ ಚೂರಿಕಟ್ಟೆಯಂಥಾ ಸದಭಿರುಚಿಯ ಚಿತ್ರಕ್ಕೆ ಯಾವ ಮಾನದಂಡದ ಆಧಾರದಲ್ಲಿ ಎ ಸರ್ಟಿಫಿಕೇಟು ಕೊಟ್ಟರೋ ಸೆನ್ಸಾರ್ ಅಧಿಕಾರಿಗಳೇ ಹೇಳಬೇಕು. ಈ ಬಗ್ಗೆ ಚಿತ್ರ ತಂಡದ ಪ್ರಶ್ನೆಗೆ, ಈ ಚಿತ್ರದಲ್ಲಿ ಭಾರೀ ಬೆಂಕಿಯ ದೃಷ್ಯಾವಳಿಗಳು ಸೇರಿದಂತೆ ಒಂದಷ್ಟು ಅಂಶಗಳನ್ನು ಪಟ್ಟಿ ಮಾಡಿ ಕೊಡಲಾಗಿದೆ. ಆದರೆ ಅದ್ಯಾವುದೂ ಎ ಸರ್ಟಿಫಿಕೇಟಿಗೆ ಸಮಜಾಯಿಷಿಗಳಲ್ಲ!


ರಾಘು ಶಿವಮೊಗ್ಗ ಭಾರೀ ಕನಸಿಟ್ಟುಕೊಂಡು ನಿರ್ದೇಶನ ಮಾಡಿರೋ ಚಿತ್ರ ಚೂರಿಕಟ್ಟೆ. ಯಾವುದೇ ಚಿತ್ರವಾದರೂ ಚಿತ್ರಮಂದಿರಗಳ ಜೊತೆ ಮಲ್ಟಿಫ್ಲೆಕ್ಸುಗಳಲ್ಲಿಯೂ ಒಳ್ಳೇ ಪ್ರದರ್ಶನ ಕಾಣುವಂತಾದರೆ ಗೆಲುವಿನ ಓಟಕ್ಕೊಂದು ವೇಗ ಬರುತ್ತದೆ. ಆದರೆ ಎ ಸರ್ಟಿಫಿಕೆಟ್ ಚಿತ್ರಗಳನ್ನು ಮಲ್ಟಿಫ್ಲೆಕ್ಸ್‌ಗಳಲ್ಲಿ ಪ್ರದರ್ಶನ ಮಾಡಿದರೂ ೧೮ರ ಒಳಗಿನವರ ಎಂಟ್ರಿಗೆ ಬ್ರೇಕು ಹಾಕುತ್ತಾರೆ. ಈ ಮೂಲಕ ಚೂರಿಕಟ್ಟೆ ಚಿತ್ರಕ್ಕೆ ಸೆನ್ಸಾರ್ ಮಂಡಳಿ ವಿನಾ ಕಾರಣ ಅಡ್ಡಗಾಲಾಗಿದೆ.
ಈ ಸೆನ್ಸಾರ್ ಮಂದಿಯ ಹರಾಕಿರಿಗಳು ಇಂದು ನಿನ್ನೆಯದ್ದಲ್ಲ. ಹಾಗೂ ಹೀಗೂ ಪಡಬಾರದ ಪಾಡು ಪಟ್ಟು ಚಿತ್ರ ಮಾಡಿ ಮುಗಿಸುವ ನಿರ್ದೇಶಕರು, ನಿರ್ಮಾಪಕರಿಗೆ ಬಿಡುಗಡೆಯದ್ದೇ ದೊಡ್ಡ ಚಾಲೆಂಜ್. ಇಂಥಾದ್ದರ ನಡುವೆ ಸೆನ್ಸಾರ್ ಮಂಡಳಿ ಚಿತ್ರಗಳಿಗೆ ಕೊಳ್ಳಿ ಇಡುವ ಕೆಲಸವನ್ನು ಚಾಚೂ ತಪ್ಪದೇ ನಿಷ್ಠೆಯಿಂದ ಮಾಡುತ್ತಿದೆ. ಇದು ಸಾಲದೆಂಬಂತೆ ಹೊಸ ನೀತಿಯೊಂದನ್ನೂ ಜಾರಿಗೆ ತಂದಿದೆ. ಇದರನ್ವಯ ಚಿತ್ರವನ್ನು ಸೆನ್ಸಾರ್ ಮಾಡಲು ಸೆನ್ಸಾರ್ ಮಂಡಳಿಗೆ ಡಿ.ಸಿ.ಪಿ(ಡಿಜಿಟಲ್ ಸಿನಿಮಾ ಪ್ಯಾಕೇಜ್) ಫಾರ್ಮೇಟ್‌ನಲ್ಲೇ ಕೊಡಬೇಕು!


ಸೆನ್ಸಾರ್ ಮಂಡಳಿ ಮಾಡರ್ನ್ ಟೆಕ್ನಾಲಜಿಯನ್ನು ಕನ್ನಡ ಚಿತ್ರರಂಗಕ್ಕೂ ತಂದಿದೆ. ಆದರೆ, ಇಲ್ಲಿನ ಥೀಯೆಟರ್‌ಗಳಲ್ಲಿ ಡಿ.ಸಿ.ಪಿ ಫಾರ್ಮೇಟ್‌ನ ಚಿತ್ರಗಳನ್ನು ಪ್ರದರ್ಶಿಸುವ ವ್ಯವಸ್ಥೆಯೇ ಇಲ್ಲ. ಇದರಿಂದ ಕೆಲಸ ಹೆಚ್ಚಾಗಿ ನಿರ್ಮಾಪಕರ ಹೊರೆ ಮತ್ತಷ್ಟು ಹೆಚ್ಚಾಗೋದು ಖಚಿತ. ಇನ್ನು ಡಿ.ಸಿ.ಪಿ ಫಾರ್ಮೇಟ್‌ನಲ್ಲಿರುವ ಚಿತ್ರ ಅಪ್ಪಿ ತಪ್ಪಿ ಲೀಕ್ ಆದರೆ ಚಿತ್ರದ ಮ್ಯೂಸಿಕ್ ಟ್ರ್ಯಾಕ್, ಎಫೆಕ್ಟ್ ಟ್ರ್ಯಾಕ್, ಡೈಲಾಗ್ ಟ್ರ್ಯಾಕ್‌ಗಳನ್ನು ಕೇಕ್ ಕತ್ತರಿಸಿದಷ್ಟು ಸುಲಭವಾಗಿ ಎತ್ತಿಕೊಳ್ಳಬಹುದು. ಕಾಮಿಡಿ ಅಂದರೆ, ಸೆನ್ಸಾರ್ ಮಂಡಳಿ ಮೊದಲೇ ಈ ಸಂಬಂಧ ನಿರ್ಮಾಪಕರಿಂದ ‘ಪೈರಸಿ ಆದರೆ ಸೆನ್ಸಾರ್ ಮಂಡಳಿ ಜವಾಬ್ದಾರಿಯಲ್ಲ ಎಂದು ಅಫಡವಿಟ್‌ಗೆ ಸಹಿ ಹಾಕಿಕೊಳ್ಳುತ್ತದೆ!


ಒಂದು ಚಿತ್ರ ಸೆನ್ಸಾರ್ ಮಾಡಿಕೊಡಲು ಅರವತ್ತೆಂಟು ದಿನದ ಗಡುವು ಕೇಳುವ ಇದೇ ಮಂಡಳಿ, ಸ್ಟಾರ್ ಸಿನಿಮಾಗಳಿಗೆ ಚಿತ್ರಗಳಿಗೆ ಒಂದೆರೆಡು ವಾರಕ್ಕೇ ಸರ್ಟಿಫಿಕೇಟ್ ನೀಡುವುದರ ಹಿಂದೆ ಇರುವ ಮನೀಬ್ರೈನ್ ಯಾವುದು? ವಾಣಿಜ್ಯ ಮಂಡಳಿಯ ಅನುಮತಿಯಿಲ್ಲದೇ ‘ದೊಡ್ಡಬ್ಯಾನರ್‌ನ ಚಿತ್ರಗಳು ಹೇಗೆ ಸೆನ್ಸಾರ್ ಆಗುತ್ತವೆ? ಇಂತಹ ಸಾವಿರ ಪ್ರಶ್ನೆಗಳು ಸಾಲುಗಟ್ಟಿ ನಿಂತಿವೆ. ತಮ್ಮ ಚಿತ್ರಗಳ ಬುಡಕ್ಕೆ ಬಂದಾಗ ಮಾತ್ರವೇ ಅಂಡುಸುಟ್ಟ ಬೆಕ್ಕಿನಂತಾಡುವವರು ಈಗಲೆ ಎಚ್ಚೆತ್ತುಕೊಂಡರೆ ಈ ಸೆನ್ಸಾರ್ ಇಕ್ಕಳದಿಂದ ಬಚಾವಾಗಬಹುದು.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image