One N Only Exclusive Cine Portal

ಚೂರಿಕಟ್ಟೆ ಇದರಲ್ಲಿರೋದು ಬರೀ ಟಿಂಬರ್ ಮಾಫಿಯಾ ಮಾತ್ರವಲ್ಲ!

ಪ್ರೇಕ್ಷಕ ವಲಯದಲ್ಲಿ ತಾನೇ ತಾನಾಗಿ ಸುಪ್ತ ಸಂಚಲನ ಸೃಷ್ಟಿಸಿರುವ ಚಿತ್ರ ಚೂರಿಕಟ್ಟೆ. ರಂಗಭೂಮಿ ಹಿನ್ನೆಲೆಯಿಂದ ಬಂದು ಸಿನಿಮಾ ಜಗತ್ತಿನ ಮಾಮೂಲಿ ವರಸೆಗೆ ಅಪರಿಚಿತರಾಗಿಯೇ ಉಳಿದುಕೊಂಡಿರೋ ರಾಘು ಶಿವಮೊಗ್ಗ ನಿರ್ದೇಶನದ ಈ ಚಿತ್ರ ಗಿಮಿಕ್ಕುಗಳಾಚೆಗೂ ಜನರನ್ನು ಆವರಿಸಿಕೊಂಡಿರೋದೇ ಅದರ ಆರಂಭಿಕ ಗೆಲುವು. ಹೀಗೆ ಸಕಾರಾತ್ಮಕವಾಗಿಯೇ ಸದ್ದು ಮಾಡುತ್ತಾ ಸಾಗಿ ಬಂದ ಈ ಚಿತ್ರಕ್ಕೀಗ ಬಿಡುಗಡೆಯ ಸಂಭ್ರಮ.


ಅಪಾರವಾದ ಓದಿನ ಸಾಂಗತ್ಯ, ರಂಗಭೂಮಿಯ ಅನುಭವಗಳನ್ನೆಲ್ಲ ಧಾರೆ ಎರೆದಂತೆ ರಾಘು ಶಿವಮೊಗ್ಗ ನಿರ್ದೇಶನ ಮಾಡಿರೋ ಈ ಚಿತ್ರ ಮಲೆನಾಡಿನ ಟಿಂಬರ್ ಮಾಫಿಯಾದ ಕಥಾ ಹಂದರ ಹೊಂದಿದೆ ಎಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಆದರೆ ಈ ಟಿಂಬರ್ ಮಾಫಿಯಾ ಅಂದರೆ ಕಾಡೊಳಗಿನ ಮರ ಕಡಿದು ಸಾಮಿಲ್‌ಗೆ ಸಾಗಿಸೋದಷ್ಟೇ ಅಂದುಕೊಳ್ಳೋ ಹಾಗಿಲ್ಲ. ಅದೊಂದು ನಿಗೂಢ ಜಗತ್ತು. ಜನರ ನಂಬಿಕೆಗಳನ್ನೇ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳೋದರಿಂದ ಆರಂಭವಾಗಿ ಮಲೆನಾಡಿನ ಒಡಲೊಳಗಿನ ಒಂದೊಂದು ಊರನ್ನೇ ಅಲ್ಲೋಲಕಲ್ಲೋಲ ಮಾಡಿಬಿಡೋ ಶಕ್ತಿ ಈ ಮಾಫಿಯಾಕ್ಕಿದೆ. ಅಂಥಾ ಮಾಫಿಯಾಕ್ಕೆ ಸಿಕ್ಕ ಊರು ಚೂರಿಕಟ್ಟೆ. ಆ ಊರಿನಿಂದ ಬಿಚ್ಚಿಕೊಳ್ಳುವ ನಾನಾ ಕೊಂಬೆ ಕೋವೆಗಳ ಕಥೆಯನ್ನು ಈ ಚಿತ್ರ ಒಳಗೊಂಡಿದೆ!


ಈ ಚಿತ್ರದಲ್ಲಿ ಭಾವಂತ ನಟ ಅಚ್ಯುತ ಕುಮಾರ್ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ಅವರೂ ಕೂಡಾ ಈ ಹಿಂದಿನ ಕಿರುಚಿತ್ರಗಳಲ್ಲಿ ರಾಘು ಅವರ ಪ್ರತಿಭೆಯನ್ನು ಮನಗಂಡು, ಈ ಚಿತ್ರದ ರೋಮಾಂಚಕ ಕಥೆಗೆ ಮನಸೋತು ನಟಿಸಿದ್ದಾರಂತೆ. ಇನ್ನುಳಿದಂತೆ ಪ್ರವೀಣ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರೋ ಪ್ರೇರಣಾ ಈ ಮೂಲಕವೇ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಆಕೆ ಪಕ್ಕಾ ಮಲೆನಾಡು ಹುಡುಗಿ ಕಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಚಾಲ್ತಿಯಲ್ಲಿರೋ ಹೊಸ ಅಲೆಯ ಚಿತ್ರವಾಗಿ ಗುರುತಿಸಿಕೊಳ್ಳುತ್ತಲೇ ಕಮರ್ಷಿಯಲ್ ಆಗಿಯೂ ಗೆಲ್ಲುವ ಲಕ್ಷಣಗಳನ್ನು ಹೊಂದಿರೋ ಈ ಚಿತ್ರ ತೆರೆಕಾಣುವ ಕ್ಷಣಗಳು ಹತ್ತಿರಾಗಿವೆ!

Leave a Reply

Your email address will not be published. Required fields are marked *


CAPTCHA Image
Reload Image