One N Only Exclusive Cine Portal

ಚೂರಿಕಟ್ಟೆಯ ಕ್ಷಣಗಣನೆ ಆರಂಭ!

ತನ್ನೊಳಗಿನ ಕಥಾ ಹಂದರದ ಸಣ್ಣ ಸಣ್ಣ ಎಳೆಗಳನ್ನು ಸಾಂದರ್ಭಿಕವಾಗಿ ಬಿಟ್ಟುಕೊಡುವ ಮೂಲಕವೇ ಬಹುನಿರೀಕ್ಷಿತ ಚಿತ್ರವಾಗಿ ಗುರುತಿಸಿಕೊಂಡಿರುವ ಚಿತ್ರ ಚೂರಿಕಟ್ಟೆ. ಸೂಕ್ಷ್ಮ ಮನಸ್ಥಿತಿಯ ಪ್ರತಿಭಾವಂತ ನಿರ್ದೇಶಕ, ಅನುಭವೀ ಕಲಾವಿದರೂ ಸೇರಿದಂತೆ ಚೆಂದದ್ದೊಂದು ತಂಡದ ಸಾರಥ್ಯದಲ್ಲಿ ಅಣಿಗೊಂಡಿರೋ ಈ ಚಿತ್ರ ತೆರೆಕಾಣಲು ಕೆಲವೇ ಘಂಟೆಗಳಷ್ಟೇ ಬಾಕಿ ಇವೆ.


ಸಿಂಪಲ್ಲಾಗ್ ಒನ್ನೊಂದ್ ಲವ್‌ಸ್ಟೋರಿ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸಿರೋ ಪ್ರವೀಣ್ ಈ ಚಿತ್ರದ ನಾಯಕ. ಆತನ ಪಾಲಿಗೆ ಈ ಚಿತ್ರ ವಿಭಿನ್ನ ಅನುಭವ. ಯಾಕೆಂದರೆ ಈ ಚಿತ್ರದ ಕಥೆಯೇ ವಿಶೇಷವಾಗಿದೆ. ಆದ್ದರಿಂದಲೇ ನಿರ್ದೇಶಕರ ಕಲ್ಪನೆಗೆ ತಕ್ಕುದಾಗಿ ಕಾಣಿಸಿಕೊಳ್ಳಲು ನಾನಾ ಕಸರತ್ತು ನಡೆಸಿ ದೇಹವನ್ನು ಟ್ಯೂನ್ ಮಾಡಿಕೊಂಡಿದ್ದಾರಂತೆ. ಈ ಮೂಲಕ ಮಲೆನಾಡು ಸೀಮೆಯ ಎನರ್ಜಿಟಿಕ್ ಪಾತ್ರದಲ್ಲಿ ಮೂರು ಶೇಡ್‌ಗಳಲ್ಲಿ ನಟಿಸಿರೋ ಖುಷಿಯಲ್ಲಿರೋ ಪ್ರವೀಣ್ ಪಾಲಿಗೆ ಈ ಚಿತ್ರ ಹೊಸಾ ದಿಕ್ಕು ತೋರಬಹುದೆಂಬ ನಿರೀಕ್ಷೆಗಳಿವೆ.


ಟಿಂಬರ್ ಮಾಫಿಯಾ, ಪೊಲೀಸ್ ವ್ಯವಸ್ಥೆ ಮತ್ತು ಕಾಡೊಳಗಿನ ಬದುಕನ್ನು ಅನಾವರಣಗೊಳಿಸುವಂಥಾ ರೋಚಕ ಕಥಾ ಹಂದರ ಹೊಂದಿರರುವ ಈ ಚಿತ್ರದಲ್ಲಿ ಶರತ್ ಲೋಹಿತಾಶ್ವ ಟಿಂಬರ್ ಮಾಫಿಯಾ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ. ಮಂಜುನಾಥ ಹೆಗ್ಡೆಯವರದ್ದು ಸ್ವಾರ್ಥಿ ಅರಣ್ಯಾಧಿಕಾರಿಯ ಪಾತ್ರ. ಇದೆಲ್ಲವನ್ನೂ ಸೇರಿಸಿಕೊಂಡು ರಾಘು ಶಿವಮೊಗ್ಗ ಮಾಮೂಲು ಸಿನಿಮಾಗಳಿಗಿಂತ ಬೇರೆಯದ್ದೇ ಫೀಲ್ ಹುಟ್ಟಿಸುವಂತೆ ಚೂರಿಕಟ್ಟೆಯನ್ನು ಕಟ್ಟಿಕೊಟ್ಟಿದ್ದಾರಂತೆ.
ಈಗಾಗಲೇ ನಾನಾ ಥರದಲ್ಲಿ ಕೌತುಕ ಹುಟ್ಟಿಸಿರೋ ಈ ಚಿತ್ರ ತೆರೆಗೆ ಬರಲು ಇದೀಗ ಕ್ಷಣಗಣನೆ ಶುರುವಾಗಿದೆ…

Leave a Reply

Your email address will not be published. Required fields are marked *


CAPTCHA Image
Reload Image