One N Only Exclusive Cine Portal

ಟಿಂಬರ್ ಮಾಫಿಯಾ ಮತ್ತು ಮಲೆನಾಡಿನ ಒಡಲ ಮರ್ಮರ!

ಈ ಮಾಫಿಯಾ ಮೇಲು ನೋಟಕ್ಕೆ ಕಾಣಿಸುವಷ್ಟು ಸಲೀಸಾದದ್ದಲ್ಲ. ಕೆಲವೊಮ್ಮೆ ಇದರಿಂದ ಮಲೆಯೊಳಗಿನ ಬದುಕುಗಳೇ ತಲ್ಲಣಿಸಿವೆ. ಅಲ್ಲಿನ ನಂಬಿಕೆ, ಭಾವನೆಗಳೂ ಅಸ್ತವ್ಯಸ್ತವಾಗಿವೆ. ಕಲಾತ್ಮಕವಾಗಿ ನೋಡೋ ಕಣ್ಣಿದ್ದರೆ ಅದೊಂದು ರೋಮಾಂಚಕ ದೃಷ್ಯಕಾವ್ಯವಾಗಬಲ್ಲದು. ರಾಘು ಶಿವಮೊಗ್ಗ ಮತ್ತು ತಂಡಕ್ಕೆ ಅಂಥಾದ್ದೊಂದು ಒಳಗಣ್ಣಿರೋದರಿಂದಲೇ ಈ ಚಿತ್ರ ಮತ್ತಷ್ಟು ಕುತೂಹಲ ಹುಟ್ಟಿಸಿದೆ.

ರಂಗಭೂಮಿಯ ಹಿನ್ನೆಲೆ ಮತ್ತು ಓದಿನ ಅಭಿರುಚಿ ಪ್ರೇಕ್ಷಕರಿಗೆ ಹೊಸಾ ರುಚಿ ಹತ್ತಿಸೋ ಸರಕುಗಳನ್ನು ಸೃಷ್ಟಿಸುತ್ತಲೇ ಬಂದಿವೆ. ಅಂಥಾ ಎರಡೂ ಕ್ವಾಲಿಟಿಗಳನ್ನು ಹೊಂದಿರೋ ರಾಘು ಶಿವಮೊಗ್ಗ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ ಚೂರಿಕಟ್ಟೆ. ಇನ್ನೇನು ತೆರೆ ಕಾಣಲಿರೋ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಕುತೂಹಲಗೊಂಡಿರೋದಕ್ಕೆ ನಾನಾ ಕಾರಣಗಳಿವೆ.

ಈ ಹಿಂದೆ ಚೌಕಾಬಾರ ಎಂಬ ಕಿರು ಚಿತ್ರದ ಮೂಲಕವೇ ರಾಘು ಶೀವಮೊಗ್ಗ ಒಂದು ಪೂರ್ಣ ಪ್ರಮಾಣದ ಚಿತ್ರಕ್ಕೇ ಸೆಡ್ಡು ಹೊಡೆಯುವಂತೆ ಸುದ್ದಿ ಮಾಡಿದ್ದರು. ಆ ಚಿತ್ರದಲ್ಲಿ ರಾಘು ಅವರ ಸೂಕ್ಷ್ಮವಂತಿಕೆಯ ಚುರುಕು ಗ್ರಹಿಕೆ ಅನಾವರಣಗೊಂಡಿತ್ತು. ಇಂಥಾ ರಾಘು ನಿರ್ದೇಶನ ಮಾಡುತ್ತಿರೋ ಚಿತ್ರವೆಂಬ ಕಾರಣದಿಂದಲೇ ಕುತೂಹಲ ಹುಟ್ಟಿಸಿರೋ ಚೂರಿಕಟ್ಟೆ ತನ್ನ ಶೀರ್ಷಿಕೆಯಿಂದಲೇ ಮತ್ತೊಂದು ನಿಗೂಢ ತರಂಗಗಳನ್ನು ಹರಡುವಲ್ಲಿಯೂ ಗೆದ್ದಿದೆ.


ಈ ಚಿತ್ರದ ಕಥೆ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಕಾದಂಬರಿಗಳಲ್ಲಿ ಬರುವಂಥಾ ವಾತಾವರಣ, ಮೈ ನವಿರೇಳಿಸೋ ವಿಭಿನ್ನ ಕಥಾವಳಿಯನ್ನು ಹೊಂದಿರಬಹುದಾ ಎಂಬಂಥಾದ್ದೊಂದು ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ. ಅಷ್ಟಕ್ಕೂ ಮಲೆನಾಡಿನ ನಿಗೂಢಗಳು ಸಿನಿಮಾಗಳ ಪಾಲಿಗೆ ಯಾವತ್ತಿದ್ದರೂ ಕುತೂಹಲದ ವಸ್ತು. ಅದು ಹಂತ ಹಂತವಾಗಿ ಚಿತ್ರವಾಗುತ್ತಾ ಬಂದಿದೆ. ಆದರದು ಅದೆಷ್ಟೇ ಮೊಗೆದರೂ ಮುಗಿಯುವಂಥಾದ್ದಲ್ಲ. ಇದೀಗ ಚೂರಿಕಟ್ಟೆ ಚಿತ್ರದ ಮೂಲಕ ರಾಘು ಶಿವಮೊಗ್ಗ ಅದಕ್ಕೆ ಬೊಗಸೆಯೊಡ್ಡಿರೋ ರೀತಿ ಭಿನ್ನವಾಗಿರುತ್ತದೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿ ಹುಟ್ಟಿಕೊಂಡಿದೆ.


ಯಾವ ಕಾಡಿನಿಂದ ಮಲೆನಾಡು ಅಚ್ಚರಿ ಉಳಿಸಿಕೊಂಡಿದೆಯೋ ಅದೇ ಕಾಡನ್ನು ಟಿಂಬರ್ ಮಾಫಿಯಾದ ಮೂಲಕ ಬರಿದಾಗಿಸೋ ದಂಧೆಯೂ ಲಾಗಾಯ್ತಿನಿಂದ ನಡೆದು ಬಂದಿದೆ. ಈ ಮಾಫಿಯಾ ಮೇಲು ನೋಟಕ್ಕೆ ಕಾಣಿಸುವಷ್ಟು ಸಲೀಸಾದದ್ದಲ್ಲ. ಕೆಲವೊಮ್ಮೆ ಇದರಿಂದ ಮಲೆಯೊಳಗಿನ ಬದುಕುಗಳೇ ತಲ್ಲಣಿಸಿವೆ. ಅಲ್ಲಿನ ನಂಬಿಕೆ, ಭಾವನೆಗಳೂ ಅಸ್ತವ್ಯಸ್ತವಾಗಿವೆ. ಕಲಾತ್ಮಕವಾಗಿ ನೋಡೋ ಕಣ್ಣಿದ್ದರೆ ಅದೊಂದು ರೋಮಾಂಚಕ ದೃಷ್ಯಕಾವ್ಯವಾಗಬಲ್ಲದು. ರಾಘು ಶಿವಮೊಗ್ಗ ಮತ್ತು ತಂಡಕ್ಕೆ ಅಂಥಾದ್ದೊಂದು ಒಳಗಣ್ಣಿರೋದರಿಂದಲೇ ಈ ಚಿತ್ರ ಮತ್ತಷ್ಟು ಕುತೂಹಲ ಹುಟ್ಟಿಸಿದೆ.
ಪ್ರವೀಣ್ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರದ ಹಾಡುಗಳೂ ಕೂಡಾ ಹಂತ ಹಂತವಾಗಿ ಅನಾವರಣಗೊಳ್ಳುತ್ತಿವೆ. ಚಿತ್ರದ ಹಾಡುಗಳನ್ನೂ ಒಂದೊಂದಾಗಿ ಬಿಡುಗಡೆ ಮಾಡುತ್ತಿರೋ ಚಿತ್ರ ತಂಡ ಆ ಮೂಲಕವೂ ಚೂರಿಕಟ್ಟೆಯೆಡೆಗಿನ ನಿರೀಕ್ಷೆ ಇಮ್ಮಡಿಸುವಂತೆ ಮಾಡುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image