One N Only Exclusive Cine Portal

ಪ್ರೀತಿಗಾಗಿ ಹೋರಾಡುವ ದಳಪತಿ

ಈ ಹಿಂದೆ ರಾಧಿಕಾ ಪಂಡಿತ್ ಅಭಿನಯದ ಗಾನ ಬಜಾನ, ಲವ್ ಗುರು ಅಲ್ಲದೆ ಗಣೇಶ್ ಅಭಿನಯದ ಜೂಮ್ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ್ದ ನಿರ್ದೇಶಕ ಪ್ರಶಾಂತ್ ರಾಜ್ ಈಬಾರಿ ಪಕ್ಕಾ ಆಕ್ಷನ್ ಕಥಾಹಂದರವುಳ್ಳ ದಳಪತಿ ಎಂಬ ಚಲನಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಕಲಾವಿದರ ಡೇಟ್ಸ್ ಸಮಸ್ಯೆ, ವಿಎಫ್‌ಎಕ್ಸ್ ಕೆಲಸ ಇಂಥ ಒಂದಷ್ಟು ತಾಂತ್ರಿಕ ಕಾರಣಗಳಿಂದ ಚಿತ್ರದ ಬಿಡುಗಡೆ ಸ್ಮಲ್ಪ ತಡವಾಗಿದೆ. ಈಗ ಎಲ್ಲಾ ಕೆಲಸ ಮುಗಿದು ಬಿಡುಗಡೆಯಾಗಲು ಸಿದ್ದವಾಗಿದೆ ಎಂದು ಚಿತ್ರದ ಬಿಡುಗಡೆ ಕುರಿತಂತೆ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಪ್ರಶಾಂತ್‌ರಾಜ್ ಹೇಳಿಕೊಂಡರು.

ಇಲ್ಲಿಯವರೆಗೂ ಮಾಡಿದ ಚಿತ್ರಗಳಿಗಿಂತ ಈ ಸಿನಿಮಾ ವಿಭಿನ್ನವಾಗಿದೆ. ಈ ಕತೆಗೆ ದಳಪತಿ ಎಂಬ ಶೀರ್ಷಿಕೆಯೇ ಸೂಕ್ತವಾಗಿದೆ. ಚಿತ್ರದ ನಾಯಕನ ಪಾತ್ರಕ್ಕೆ ಪ್ರೇಮ್ ಅವರನ್ನು ಸಂಪರ್ಕಿಸಿದಾಗ ಅವರು ಚೌಕದಲ್ಲಿ ಬ್ಯುಸಿಯಾಗಿದ್ದರು, ನಾಯಕಿ ಕೃತಿ ಕರಬಂದ ಕೂಡ ಬಾಲಿವುಡ್‌ನಲ್ಲಿ ಕಮಿಟ್ ಆಗಿದ್ದರು. ಹಾಗಾಗಿ ಇದೇ ಗ್ಯಾಪ್‌ನಲ್ಲಿ ಜೂಮ್ ಚಿತ್ರವನ್ನು ಮಾಡಿದೆವು. ನಂತರ ಇಬ್ಬರ ಸಮಯವನ್ನು ಬಳಸಿಕೊಂಡು ದಳಪತಿ ಚಿತ್ರೀಕರಣ ಮಾಡಿ ಮುಗಿಸಲಾಗಿದೆ. ಪ್ರತಿಯೊಬ್ಬ ಹುಡುಗಿಯೂ ನನಗೆ ಇಂಥಾ ಹುಡುಗನೇ ಸಿಗಬೇಕು, ಗಂಡ ಆಗಬೇಕೆಂದು ಆಸೆ ಪಡುತ್ತಾರೆ. ಅದರಂತೆ ಪ್ರತಿ ಹುಡುಗನಿಗೆ ಇದೇ ರೀತಿಯ ಹುಡುಗಿ, ಹೆಂಡತಿಯಾಗಿ ಸಿಗಬೇಕೆಂದು ಬಯಸುತ್ತಾರೆ. ರಾಮಾಯಣ-ಮಹಾಭಾರತದ ಅಂಶಗಳನ್ನು ತೆಗೆದುಕೊಂಡು ಎಂ.ಎಸ್. ರಮೇಶ್ ಸಂಭಾಷಣೆ ಬರೆದಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಹಿರಿಯ ನಟ ಶರತ್ ಲೋಹಿತಾಶ್ವ, ಹಾಸ್ಯಕಲಾವಿದ ಚಿಕ್ಕಣ್ಣ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಪದ್ಮಜರಾವ್ ಕೂಡ ಚಿತ್ರದಲ್ಲಿದ್ದಾರೆ. ಈ ಚಿತ್ರ ಬಿಡುಗಡೆಯಾದ ನಂತರ ನಟ ನೆನಪಿರಲಿ ಪ್ರೇಮ್ ಒಬ್ಬ ಆಕ್ಷನ್ ಹೀರೋ ಆಗಿ ಹೊರಮೊಮ್ಮುತ್ತಾರೆ. ಅವರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗುವುದು ಖಚಿತವೆಂದು ಹೇಳಿದರು.

ನಂತರ ನಾಯಕನಟ ಪ್ರೇಮ್ ತನ್ನ ಪಾತ್ರದ ಬಗ್ಗೆ ಮಾತನಾಡುತ್ತ ನಾಯಕ ರಾಮ್ ಆಗಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಸಮಯ ಸಂದರ್ಭ ನೋಡದೆ ಅವಳಿಗಾಗಿ ಕಲಿಯಾಗುತ್ತಾನೆ. ನನ್ನ ಪಾತ್ರ ಶೇ. ೩೦ರಷ್ಟು ಮೃದುವಾಗಿದ್ದು, ಉಳಿದಂತೆ ಹೋರಾಡುವ ಬಿಸಿರಕ್ತದ ಯುವಕನಾಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇದೇ ೧೮ರಂದು ನನ್ನ ಹುಟ್ಟುಹಬ್ಬಕ್ಕೆ ನಿರ್ಮಾಪಕರು ದಳಪತಿಯನ್ನು ಉಡುಗೊರೆಯಾಗಿ ಕೊಡುತ್ತಿದ್ದಾರೆ ಎಂದರು.

ಚಿತ್ರದ ನಾಯಕಿ ಕೃತಿ ಕರಬಂದ ಮಾತನಾಡಿ ಗೂಗ್ಲಿಯಲ್ಲಿ ಸ್ವಾತಿಯ ಪಾತ್ರ ನನಗೆ ಒಳ್ಳೇ ಹೆಸರು ತಂದುಕೊಟ್ಟಂತೆ, ಇದರಲ್ಲಿ ವೈದಿಯಾಗಿ ಎಲ್ಲರಿಗೂ ಇಷ್ಟವಾಗುತ್ತೇನೆ. ಒಂದು ಸನ್ನಿವೇಶದಲ್ಲಿ ಆಯುಧವನ್ನು ಕೂಡ ಹಿಡಿದುಕೊಂಡಿದ್ದೇನೆ ಎಂದು ಹೇಳಿಕೊಂಡರು. ಏಪ್ರಿಲ್ ೧೩ರಂದು ಸುಮಾರು ೨೫೦ ಕೇಂದ್ರಗಳಲ್ಲಿ ಜಯಣ್ಣ ಸಂಸ್ಥೆಯ ಮೂಲಕ ದಳಪತಿ ಚಿತ್ರವನ್ನು ತೆರೆಗೆ ತರಲು ಯೋಜನ ಹಾಕಲಾಗಿದೆ ಎಂದು ಚಿತ್ರದ ನಿರ್ಮಾಪಕ ನವೀನ್ ಹೇಳಿಕೊಂಡರು.

Leave a Reply

Your email address will not be published. Required fields are marked *


CAPTCHA Image
Reload Image