One N Only Exclusive Cine Portal

ಎಡರುತೊಡರುಗಳನ್ನು ದಾಟಿ ಬಂದ ದಳಪತಿ!

ಪ್ರಶಾಂತ್ ರಾಜ್ ನಿರ್ದೇಶನದ, ಲವ್ಲಿಸ್ಟಾರ್ ಪ್ರೇಮ್ ಅಭಿನಯದ ದಳಪತಿ ಚಿತ್ರ ಇದೇ ತಿಂಗಳ 13ರಂದು ಬಿಡುಗಡೆಯಾಗಲು ಮುಹೂರ್ತ ನಿಗಧಿಯಾಗಿದೆ. ಮೂರೂವರೆ ವರ್ಷದ ಹಿಂದೆ ಅರಂಭವಾಗಿದ್ದ ಈ ಚಿತ್ರ ಆಗಾಗ ಸದ್ದು ಮಡುತ್ತಾ, ಮತ್ತೆ ಮತ್ತೆ ಮುಂದಕ್ಕೆ ಹೋಗಿದ್ದರಿಂದ ಪ್ರೇಕ್ಷಕರಿಗೆ ಒಂದಷ್ಟು ಗೊಂದಲ ಕಾಡಿದ್ದದ್ದು ನಿಜ. ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಪ್ರಶಾಂತ್ ರಾಜ್ ಅದೆಲ್ಲದಕ್ಕೂ ಸಂಕ್ಷಿಪ್ತ ಕಾರಣ, ವಿವರಣೆಗಳನ್ನು ನೀಡಿದ್ದಾರೆ!

ಇದೇ ಸಂದರ್ಭದಲ್ಲಿ ಹಾಜರಿದ್ದ ದಳಪತಿಯ ಬಗ್ಗೆ ಮಾತಾಡಿರುವ ಲವ್ಲಿ ಸ್ಟಾರ್ ಪ್ರೇಮ್, ಈ ಚಿತ್ರ ತಮ್ಮ ಚಿತ್ರಯಾನದಲ್ಲಿ ಒಂದು ಉತ್ತಮ ಚಿತ್ರವಾಗಿ ದಾಖಲಾಗಲಿದೆ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ. ಅವರಿಲ್ಲಿ ಪ್ರೀತಿ ಕಾಯುವ ದಳಪತಿಯಾಗಿ ನಟಿಸಿದ್ದಾರಾ? ಅದರ ಜೊತೆಗೆ ಜನರ ಪ್ರಿತಿಯ ದಲಪತಿಯಾಗಿ ಕಣಿಸಿಕೊಂಡಿದ್ದಾರಾ ಎಂಬ ಬಗ್ಗೆ ವಿವರಗಳು ನಿಗೂಢ. ಆದರೆ ಅವರ ಪಾತ್ರಕ್ಕೆ ಎರಡು ಶೇಡುಗಳಿವೆಯಂತೆ. ಸುದೀರ್ಘಾವಧಿ ತೆಗೆದುಕೊಂಡು ಅದೆರಡಕ್ಕೂ ಪ್ರೇಮ್ ರಿಯಲ್ ಆಗಿಯೇ ಒಗ್ಗಿಕೊಂಡಿದ್ದಾರಂತೆ. ಚಿತ್ರ ತಡವಾಗಲು ಅದೂ ಒಂದು ಕಾರಣವಂತೆ.

ಲವ್ ಗುರು, ಗಾನಬಜಾನಾ, ಝೂಮ್ ಮುಂತಾದ ಯಶಸ್ವೀ ಚಿತ್ರಗಳನ್ನು ನಿದೇಶನ ಮಾಡಿರುವ ಪ್ರಶಾಂತ್ ರಾಜ್ ದಳಪತಿ ಚಿತ್ರಕ್ಕೆ ಭಿನ್ನವಾದ ಕಥೆಯೊಂದನ್ನು ಆರಿಸಿಕೊಂಡಿದ್ದಾರೆ. ಚಂದ್ರು ಅವರು ಬರೆದ ಕಥೆಯ ಬಗ್ಗೆ ಪ್ರೇಮ್ ಜೊತೆ ಪ್ರಶಾಂತ್ ಮಾತುಕತೆ ನಡೆಸಿದ್ದು ಮೂರೂವರೆ ವರ್ಷದ ಹಿಂದೆ. ಅದಕ್ಕೆ ದಳಪತಿ ಎಂಬ ಹೆಸರನ್ನು ಫಿಕ್ಸ್ ಮಾಡಿಕೊಂಡು ಕೃತಿ ಕರಬಂದ ಅವರನ್ನು ನಾಯಕಿಯಾಗಿಯೂ ಆಯ್ಕೆ ಮಾಡಲಾಗಿತ್ತು. ಆದರೆ ಕೃತಿ ಅದಾಗಲೇ ಬೇರೆ ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದರು. ಪ್ರೇಮ್ ಕೂಡಾ ಬ್ಯುಸಿಯಾದೇಟಿಗೆ ಪ್ರಶಾಂತ್ ಝೂಮ್ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ನಂತರ ಝೂಮ್ ಬಿಡುಗಡೆಯಾಗಿ ಯಶ ಕಾಣುತ್ತಲೆ ಧಳಪತಿ ಚಿತ್ರೀಕರಣ ಆರಂಭಿಸಿ ಏರಿಳಿತಗಳ ನಡುವೆಯೂ ಅಂದುಕೊಂಡಂತೆಯೇ ಚಿತ್ರ ಮುಗಿಸಿದ ಖುಷಿ ಪ್ರಶಾಂತ್ ರಾಜ್ ಅವರದ್ದು.

ಒಂದು ಅದ್ಭುತ ತಾಂತ್ರಿಕ ವರ್ಗದ ಸಹಭಾಗಿತ್ವದಲ್ಲಿ ರೆಡಿಯಾಗಿರುವ ದಳಪತಿ ಇದೇ ತಿಂಗಳ ಹದಿಮೂರನೇ ತಾರೀಕು ರಾಜ್ಯದದ್ಯಂತ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

Leave a Reply

Your email address will not be published. Required fields are marked *


CAPTCHA Image
Reload Image