Connect with us

ಪಿ.ಆರ್.ಓ. ನ್ಯೂಸ್

ಡಂಡುಪಾಳ್ಯ ಗ್ಯಾಂಗು ಸೇರಿದ ತಮಿಳ್ ಸಿಂಗರ್!

Published

on

ಟಗರು ಚಿತ್ರದ ಟೈಟಲ್ ಸಾಂಗಿಗೆ ಧ್ವನಿಯಾಗೋ ಮೂಲಕವೇ ಕನ್ನಡಿಗರಿಗೆಲ್ಲ ಪರಿಚಿತರಾಗಿದ್ದವರು ತಮಿಳು ಜನಪದ ಗಾಯಕ ಆಂತೋಣಿ ದಾಸನ್. ಈ ಗಾಯಕ ಈಗ ದಂಡುಪಾಳ್ಯಂ ಗ್ಯಾಂಗಿನ ಜೊತೆ ಸೇರಿಕೊಂಡಿದ್ದಾರೆ!

ವೆಂಕಟ್ ನಿರ್ಮಾಣದ ದಂಡುಪಾಳ್ಯಂ ೪ ಚಿತ್ರ ಈಗ ನಾನಾ ಕಾರಣದಿಂದ ಸುದ್ದಿಯಾಗುತ್ತಿದೆ. ದಂಡುಪಾಳ್ಯ ಸರಣಿ ಕನ್ನಡದಲ್ಲಿ ಒಂದು ಮಟ್ಟಕ್ಕೆ ಗೆಲುವು ಕಂಡಿತ್ತು. ಇದೀಗ ಮತ್ತೊಂದು ಗೆಲುವು ಕಾಣುವ ನಿರೀಕ್ಷೆಯೊಂದಿಗೆ ದಂಡುಪಾಳ್ಯಂ ೪ ಚಿತ್ರ ರೆಡಿಯಾಗಿದೆ. ಸದ್ಯ ಈ ಚಿತ್ರದ ಹಾಡುಗಳು ಸಿದ್ದಗೊಂಡಿವೆ. ಆನಂದ್ ರಾಜಾ ವಿಕ್ರಮ್ ಸಂಗೀತ ನೀಡಿರೋ ಹಾಡೊಂದಕ್ಕೆ ಆಂಥೋಣಿ ದಾಸನ್ ಧ್ವನಿಯಾಗಿದ್ದಾರೆ. ಈ ಹಾಡು ಟಗರು ಟೈಟಲ್ ಸಾಂಗಿನಂತೆಯೇ ಸದ್ದು ಮಾಡಲಿದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ.

ಇನ್ನುಳಿದಂತೆ ಈ ಚಿತ್ರದಲ್ಲಿ ಎರಡು ಹಾಡುಗಳಿರಲಿವೆ. ಅದರಲ್ಲೊಂದನ್ನು ಆಂತೋಣಿ ದಾಸನ್ ಹಾಡಿದ್ದರೆ ಮತ್ತೊಂದಕ್ಕೆ ರ್‍ಯಾಪರ್ ಚಂದನ್ ಶೆಟ್ಟಿ ಧ್ವನಿಯಾಗಿದ್ದಾರೆ. ಇದಕ್ಕೆ ಸುನೀತಾ ಮತ್ತು ಇಂದೂ ನಾಗರಾಜ್ ಧ್ವನಿಗೂಡಿಸಿದ್ದಾರೆ. ಈ ಎರಡೂ ಹಾಡುಗಳಿಗೆ ನಿರ್ಮಾಪಕರಾದ ವೆಂಕಟ್ ಅವರೇ ಸಾಹಿತ್ಯ ಒದಗಿಸಿರೋದು ವಿಶೇಷ. ಈ ಎರಡು ಹಾಡುಗಳಲ್ಲಿ ಮೊದಲು ಆಂತೋಣಿ ದಾಸನ್ ಹಾಡಿರುವ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಲಿರಿಕಲ್ ವೀಡಿಯೋವನ್ನು ವಾರದೊಪ್ಪತ್ತಿನಲ್ಲಿಯೇ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ಕ್ರೈಮ್ ಸಿನಿಮಾಗಳೆಂದರೆ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಆದರೆ ದಂಡುಪಾಳ್ಯಂ-೪ ಸಿನಿಮಾದಲ್ಲಿ ಹಾಡುಗಳಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಒಂದು ಹಾಡಿನಲ್ಲಿ ಮೂಮೈತ್ ಖಾನ್ ಮೋಹಕವಾಗಿ ಕುಣಿದಿದ್ದಾರೆ. ರಜನಿಕಾಂತ್ ಸೇರಿದಂತೆ ಸಾಕಷ್ಟು ಸೂಪರ್ ಸ್ಟಾರ್ ಗಳ ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿರುವ ತಮಿಳಿನ ಬಾಬಾ ಭಾಸ್ಕರ್ ಎರಡೂ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ.

ನಿರ್ದೇಶನ ಕೆ.ಟಿ. ನಾಯಕ್, ಕ್ಯಾಮರಾ ಆರ್. ಗಿರಿ, ಸಂಕಲನ ಬಾಬು ಎ ಶ್ರೀವತ್ಸ, ಪ್ರೀತಿ ಮೋಹನ್ ಸಂಕಲನ ಈ ಚಿತ್ರಕ್ಕಿದೆ. ಸುಮನ್ ರಂಗನಾಥ್, ಮುಮೈತ್ ಖಾನ್, ಬ್ಯಾನರ್ಜಿ, ರಾಕ್ ಲೈನ್ ಸುಧಾಕರ್, ಸಂಜೀವ್ ಕುಮಾರ್, ಅರುಣ್ ಬಚ್ಚನ್, ಬುಲೆಟ್ ಸೋಮು, ವಿಠ್ಠಲ್ ರಂಗಾಯಣ, ಜೀವಾ ಸೈಮನ್, ರಿಚ್ಚಾ ಶಾಸ್ತ್ರಿ, ಸ್ನೇಹಾ ಮುಂತಾದವರ ತಾರಾಗಣವಿದೆ. ನಿರ್ಮಾಪಕ ವೆಂಕಟ್ ಅವರು ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.

#

Advertisement
Click to comment

Leave a Reply

Your email address will not be published. Required fields are marked *

ಪಿ.ಆರ್.ಓ. ನ್ಯೂಸ್

ಯಕ್ಷಗಾನ ಕಲಾವಿದನ ಬದುಕಿನ ಚಿತ್ರಣ ದಿ ಬೆಸ್ಟ್ ಆಕ್ಟರ್

Published

on

ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲಿ ಹೆಚ್ಚಿನ ಆಸಕ್ತಿ ಮಾಡುತ್ತಿದೆ. ಒಂದು ಕಿರುಚಿತ್ರವು ಅಲ್ಲದ ಅತ್ತ ಕಮರ್ಷಿಯಲ್ ಚಿತ್ರವು ಅಲ್ಲದ ಬ್ರಿಡ್ಜ್ ಸಿನಿಮಾ ರೀತಿ ಹೊಸ ಪ್ರಯೋಗವನ್ನು ನಾಗರಾಜ ಸೋಮಯಾಜಿ ಮತ್ತು ಅವರ ತಂಡ ಮಾಡಿದೆ. ದಿ ಬೆಸ್ಟ್ ಆಕ್ಟರ್ ಎಂಬ ಹೆಸರಿನ ಈ ಚಿತ್ರ ೪೩ ನಿಮಿಷ ಅವಧಿಯಾಗಿದ್ದು, ಒಬ್ಬ ಯಕ್ಷಗಾನ ಕಲಾವಿದನ ಬಣ್ಣದ ಬದುಕನ್ನು ಅನಾವರಣಗೊಳಿಸುವ ಪ್ರಯತ್ನ ಈ ಚಿತ್ರದಲ್ಲಿದೆ. ಕುಂದಾಪುರ ಹಾಗೂ ಸಾಲಿಗ್ರಾಮದಂತಹ ಸ್ಥಳಗಳಲ್ಲಿ ೯ ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದ ಟೀಸರ್ ಅನಾವರಣ ಸಮಾರಂಭ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು.

ಖ್ಯಾತಿಯ ಆದರ್ಶ ಈಶ್ವರಪ್ಪ ಹಾಗೂ ನಟ ಸಂಚಾರಿ ವಿಜಯ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅರ್ಜುನ ರಾಮು, ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಎಸ್.ಕೆ. ರಾವ್, ಕ್ಯಾಮಾರಾ ವರ್ಕ್ ನಿಭಾಯಿಸಿದ್ದಾರೆ. ಕರಾವಳಿ ರಂಗಭೂಮಿ ಪ್ರತಿಭೆ ಮಾಧವ ಕಾರ್ಕಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಾನಾಡಿದ ಚಲನಚಿತ್ರ ನಿರ್ದೇಶಕ ನಾಗರಾಜ ಸೋಮಯಾಜಿ ಹಲವಾರು ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವದ ಮೇಲೆ ಈ ಚಿತ್ರ ನಿರ್ದೇಶಿಸಿದ್ದೇನೆ ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶನ ಮಾಡುವ ಯೋಜನೆಯೂ ಇದೆ.

ಈ ಚಿತ್ರದಲ್ಲಿ ಮನರಂಜನೆಯ ಜೊತೆಗೆ ನೇಟಿವಿಟಿಯ ಅನಾವರಣ ಕೂಡ ಇದೆ. ಈ ಚಿತ್ರವನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ರಿಲೀಸ್ ಮಾಡುವ ಉದ್ದೇಶವಿದೆ ಎಂದು ಹೇಳಿದರು. ಈ ಚಿತ್ರಕ್ಕೆ ದಿನೇಶ್ ವೈದ್ಯ ಬಂಡವಾಳ ಹಾಕಿದ್ದಾರೆ. ಕಮರ್ಷಿಯಲ್ ನೀರಿಕ್ಷೆ ಇಟ್ಟುಕೊಂಡು ನಾನು ಈ ಸಿನಿಮಾಗೆ ಬಂಡವಾಳ ಹಾಕಿಲ್ಲ ನಮ್ಮೂರಿನ ಪರಿಸರವನ್ನು ಜನರಿಗೆ ತೋರಿಸುವ ಒಂದು ಸಣ್ಣ ಪ್ರಯತ್ನ ಅಷ್ಟೇ ಎಂದು ಹೇಳಿದರು.

ನಟ ಸಂಚಾರಿ ವಿಜಯ್ ಮಾತಾನಾಡಿ ನಾನು ನಾಗರಾಜು ಇಬ್ಬರು ಸಂಚಾರಿ ಬಳಗದಲ್ಲಿ ಹಲವಾರು ವರ್ಷ ಕೆಲಸ ಮಾಡಿದ್ದೇವೆ. ಗೆಳೆಯನಿಗಾಗಿ ನಾನು ಈ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದೇನೆ. ಒಬ್ಬ ಕಲಾವಿದನ ಬದುಕಿನ ಚಿತ್ರಣ ಇದರಲ್ಲಿದೆ. ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು. ಛಾಯಾಗ್ರಾಹಕ ಎಸ್.ಕೆ.ರಾವ್ ಮಾತಾನಾಡಿ ಈ ಹಿಂದೆ ಎಟಿಎಂ, ನೂರುಂದು ನೆನಪು ಚಿತ್ರಗಳಿಗೆ ವರ್ಕ್ ಮಾಡಿದ್ದೆ. ಇದು ನನ್ನ ಮೂರನೇ ಸಿನಿಮಾ ಎಂದು ಹೇಳಿದರು.

#

Continue Reading

ಪಿ.ಆರ್.ಓ. ನ್ಯೂಸ್

ಮರಳಿ ಬಂದರು ಸುವರ್ಣ ಸುಂದರಿ ಜಯಪ್ರದಾ!

Published

on

ಬಾಹುಬಲಿ ಚಿತ್ರದ ನಂತರ ಅದರಂಥಾದ್ದೇ ಅದ್ದೂರಿತನದೊಂದಿಗೆ ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರ `ಸುವರ್ಣ ಸುಂದರಿ’. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿರೋ ಈ ಭರ್ಜರಿ ಬಜೆಟ್ಟಿನ ಚಿತ್ರದ ಮೂಲಕ ಬಹುಭಾಷಾ ತಾರೆ ಜಯಪ್ರದಾ ಕನ್ನಡಕ್ಕೆ ಮತ್ತೆ ಮರಳಿದ್ದಾರೆ!

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸೋ ಕಥೆ ಹೊಂದಿರುವ ಈ ಚಿತ್ರ ಸೂಕ್ಷ್ಮವಾಗಿ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಎಸ್ ಟೀಮ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಬಗೆಗೀಗ ತೆಲುಗು ಮತ್ತು ಕನ್ನಡದಲ್ಲಿ ಬಾಹುಬಲಿಯಂಥಾದ್ದೇ ಭಾರೀ ನಿರೀಕ್ಷೆ ಮೂಡಿಕೊಳ್ಳಲು ಸಾಕಷ್ಟು ಕಾರಣಗಳಿವೆ!

ಬಾಹುಬಲಿ ಚಿತ್ರ ಜನಮನ ಸೂರೆಗೊಂಡಿದ್ದಕ್ಕೆ ಅದರಲ್ಲಿನ ಗ್ರಾಫಿಕ್ಸ್ ಕೈಚಳಕವೂ ಮೂಲ ಕಾರಣ. ಆದರೆ ಕನ್ನಡದಂಥಾ ಸೀಮಿತ ಮಾರುಕಟ್ಟೆಯಿರೋ ಚಿತ್ರರಂಗದಲ್ಲಿ ಅಂಥಾ ಅದ್ದೂರಿ ಚಿತ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬಂಥಾ ವಾತಾವರಣವಿತ್ತು. ಆದರೆ ಸುವರ್ಣ ಸುಂದರಿ ಚಿತ್ರ ಅದನ್ನು ಸುಳ್ಳು ಮಾಡಿದೆ ಎಂಬುದು ಚಿತ್ರತಂಡದ ಖಚಿತ ಅಭಿಪ್ರಾಯ. ಯಾಕೆಂದರೆ ಈ ಚಿತ್ರದಲ್ಲಿಯೂ ಶೇಖಡಾ ನಲವತ್ತರಷ್ಟು ಭಾಗ ಅದ್ಭುತವಾದ ಗ್ರಾಫಿಕ್ಸ್‌ನಿಂದ ತುಂಬಿದೆ. ಎಲ್ಲಿಯೂ ಅಸಹಜ ಅನ್ನಿಸದಂತೆ ಇದನ್ನು ಕ್ರಿಯೇಟ್ ಮಾಡಲು ಕೋಟಿ ಕೋಟಿ ಖರ್ಚು ಮಾಡಲಾಗಿದೆ.

ಈಗಾಗಲೇ ಈ ಚಿತ್ರದ ಮೋಷನ್ ಪೋಸ್ಟರ್ ಅನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ಶಿವಣ್ಣ ಬಿಡುಗಡೆ ಮಾಡಿರುವ ಮೋಷನ್ ಪೋಸ್ಟರ್ ಸುವರ್ಣ ಸುಂದರಿಯ ಅಸಲೀ ಅದ್ದೂರಿತನವನ್ನು ಧ್ವನಿಸುವಂತಿದೆ. ಟೀಸರ್ ಮತ್ತು ಟ್ರೈಲರ್‌ಗಳನ್ನು ಸಿದ್ಧಪಡಿಸುವ ಕೆಲಸ ಭರದಿಂದ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಅದೂ ಕೂಡಾ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕವೇ ತುಂಬಾ ವರ್ಷಗಳ ನಂತರ ಜಯಪ್ರದಾ ಅವರು ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಡಾ.ರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ನಟಿಸುತ್ತಲೇ ಕನ್ನಡದ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದವರು ಜಯಪ್ರದಾ. ಕವಿರತ್ನ ಕಾಳಿದಾಸ ಚಿತ್ರದಲ್ಲಿನ ಅವರ ಮೋಹಕ ಅಭಿನಯವನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.

ಹಾಗೆ ಕನ್ನಡದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಜಯಪ್ರದಾ ಭಿನ್ನವಾದ ಮುಖ್ಯ ಪಾತ್ರದಲ್ಲಿ ಸುವರ್ಣ ಸುಂದರಿ ಸಿನಿಮಾದ ಮೂಲಕ ಮತ್ತೆ ಬಂದಿದ್ದಾರೆ. ರಿಯಲ್ ಆಗಿಯೂ ಎವರ್‌ಗ್ರೀನ್ ಸುಂದರಿಯಾಗಿರುವ ಜಯಪ್ರದಾ ಈ ಚಿತ್ರದ ಮುಖ್ಯ ಆಕರ್ಷಣೆ. ಈ ಚಿತ್ರಕ್ಕೆ ತೆಲುಗು ಸಿನಿಮಾಗಳಿಗೆ ಕಥೆಯ ರಚನೆಯಲ್ಲಿ ಅನುಭವ ಪಡೆದಿರುವ ಎಂ ಎಸ್ ಎನ್ ಸೂರ್ಯ ಕಥೆ ಬರೆದು ನಿರ್ದೇಶಿಸಿದ್ದಾರೆ. ಸರಿಸುಮಾರು ನಲವತ್ತು ಭಾಗದಷ್ಟು ಅದ್ದೂರಿ ಫ್ಲಾಷ್ ಬ್ಯಾಕ್‌ನೊಂದಿಗೆ ಅದ್ಭುತ ಗ್ರಾಫಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಚಿತ್ರದಲ್ಲಿ ರಾಮ್, ಸಾಕ್ಷಿ, ಪೂರ್ಣ, ಡಾ ಜಯಪ್ರದಾ, ಮಹಮ್ಮದ್ ಖಾನ್, ಸಾಯಿಕುಮಾರ್, ಅವಿನಾಶ್ ಮತ್ತಿತರರು ನಟಿಸಿದ್ದಾರೆ. ಸಾಯಿ ಕಾರ್ತಿಕ್ ಅವರ ಸಂಗೀತ, ಯಲ್ಲುಮಹಂತಿ ಈಶ್ವರ್ ಅವರ ಛಾಯಾಗ್ರಹಣ, ಎಸ್ ಟೀಮ್ ನಿರ್ಮಾಣ, ಪ್ರವೀಣ್ ಪುಡಿ ಸಂಕಲನ ಈ ಚಿತ್ರಕ್ಕಿದೆ. ಎಂ.ಎಲ್ ಲಕ್ಷ್ಮಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

#

Continue Reading

Trending

Copyright © 2018 Cinibuzz