One N Only Exclusive Cine Portal

ಇದು ದರ್ಶನ್ ಅಭಿಮಾನಿಗಳ ಸ್ನೇಹ ಸಂಗಮ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗ `ಡಿ ಕಂಪೆನಿ’ ಹಮ್ಮಿಕೊಂಡಿರುವ `ಡಿ ಬ್ರದರ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ಸಿಕ್ಕಿದೆ. ದರ್ಶನ್ ಅವರ ಅಭಿಮಾನಿ ಬಳಗ ಹತ್ತು ತಂಡಗಳಾಗಿ ಈ ಪದ್ಯಾಟದಲ್ಲಿ ಭಾಗಿಯಾಗಿವೆ.

ಬೆಂಗಳೂರಿನ ಕೆಂಗೇರಿಯಲ್ಲಿರುವ ಎಸ್‌ಜೆಬಿಐಟಿ ಫುಟ್‌ಬಾಲ್ ಮತ್ತು ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ಸಿಕ್ಕಿದೆ. ಅಂದಹಾಗೆ ಈ ಕ್ರಿಕೆಟ್ ಪಂದ್ಯಾಟ ಇಂದು ಮತ್ತು ನಾಳೆ ನಡೆಯಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳೆಲ್ಲ ಈ ಕ್ರಿಕೆಟ್ ಪಂದ್ಯಾಟದ ಬಗ್ಗೆ ಕುತೂಹಲಗೊಂಡಿದ್ದಾರೆ. ಕರ್ನಾಟಕದ ನಾನಾ ಭಾಗಗಳಿಂದ ತಂಡೋಪತಂಡವಾಗಿ ಈ ಕ್ರೀಡಾಂಗಣಕ್ಕೆ ಆಗಮಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅಂದಹಾಗೆ ದರ್ಶನ್ ಅಭಿಮಾನಿಗಳು ಹತ್ತು ತಂಡಗಳೊಂದಿಗೆ ಈ ಕ್ರಿಕೆಟ್ ಸೆಣೆಸಾಟದ ಕಣದಲ್ಲಿದ್ದಾರೆ.

ಪ್ರತೀ ಟೀಮಿಗೂ ದರ್ಶನ್ ಅಭಿನಯದ ಹಿಟ್ ಸಿನಿಮಾಗಳ ಹೆಸರನ್ನಿಟ್ಟಿರೋದು ವಿಶೇಷ. ಕರಿಯ ಕಿಂಗ್ಸ್, ದಾಸ ಡೇರ್‌ಡೆವಿಲ್ಸ್ ದಾವಣಗೆರೆ, ಸುಂಟರಗಾಳಿ ಡೆಸ್ಟ್ರಾಯರ್‍ಸ್ ಹುಬ್ಬಳ್ಳಿ, ಶಾಸ್ತ್ರಿ ಸೆಕರ್‍ಸ್ ಶಿವಮೊಗ್ಗ, ನವಗ್ರಹ ಚಾಲೆಂಜರ್‍ಸ್ ನೆಲಮಂಗಲ, ಮಂಡ್ಯ ಡಿ ರೆಬೆಲ್ಸ್, ಕುರುಕ್ಷೇತ್ರ ವಾರಿಯರ್‍ಸ್ ಮೈಸೂರು, ಚಕ್ರವರ್ತಿ ಚಾಲೆಂಜರ್‍ಸ್ ಹಾಸನ್, ಗಜಪಡೆ ಗ್ಲಾಡಿಯೇಟರ್‍ಸ್ ಕೆಂಗೇರಿ, ಚಿಂಗಾರಿ ಚಾರ್ಜರ್‍ಸ್ ತಿಪಟೂರು ಸೇರಿದಂತೆ ಹತ್ತು ತಂಡಗಳು ದರ್ಶನ್ ಅಭಿಮಾನಿ ವಲಯದ ಸ್ನೇಹ ಸಂಗಮದಂತಿರೋ ಈ ಕ್ರಿಕೆಟ್ ಕಣದಲ್ಲಿ ಸೆಣೆಸಲಿವೆ!

Leave a Reply

Your email address will not be published. Required fields are marked *


CAPTCHA Image
Reload Image