One N Only Exclusive Cine Portal

ಶುರುವಾಯ್ತು ದರ್ಶನ್ ಉತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡುರಾತ್ರಿಯಲ್ಲೂ ಹಬ್ಬದ ಸಡಗರ. ಇದು ಯಾವೂರ ದೇವರ ಜಾತ್ರೆಯೋ? ಎನ್ನುವಷ್ಟು ಜನ.. ಎಲ್ಲೆಲ್ಲೂ ‘ಡಿ ಬಾಸ್’ ಅನ್ನೋ ಹರ್ಷೋದ್ಘಾರ.

ಹೌದು! ಇದು ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮದ ಕ್ಷಣಗಳು. ಬರೀ ರಾಜ್ಯವಲ್ಲ, ದೇಶದ ಯಾವ್ಯಾವುದೋ ಮೂಲೆಗಳಿಂದ ಬಂದ ಅಭಿಮಾನಿಗಳು, ದರ್ಶನ್ ಅವರ ಶಾಲಾ ಗೆಳೆಯರು, ಚೆನ್ನೈನಿಂದ ಆಗಮಿಸಿರೋ ಸ್ನೇಹಿತರು… ಹೀಗೆ ಅಗಣಿತ ಸಂಖ್ಯೆಯಲ್ಲಿ ಹಾಜರಿರುವ ಅಭಿಮಾನಿಗಳೊಟ್ಟಿಗೆ ದರ್ಶನ್ ಕೇಕು ಕತ್ತರಿಸುವ ಮೂಲಕ ಹುಟ್ಟು ಹಬ್ಬದ ದಿನಕ್ಕೆ ಚಾಲನೆ ನೀಡಿದ್ದಾರೆ. ಅವರ ಮನೆ ರಸ್ತೆಯನ್ನು ಕಂಗೊಳಿಸುವಂತೆ ಸಿಂಗಾರ ಮಾಡಲಾಗಿದೆ. ರಾಜರಾಜೇಶ್ವರಿ ನಗರದ ರಸ್ತೆ ರಸ್ತೆಗಳೂ ಶುಭಾಶಯ ಫಲಕಗಳಿಂದ ರಾರಾಜಿಸುತ್ತಿವೆ.

ಅಭಿಮಾನಿಗಳ ಹಾಜರಾತಿ, ಅವರ ಖುಷಿ ನೋಡಿದರೆ ದರ್ಶನ್ ಅವರ ಹುಟ್ಟುಹಬ್ಬ ಈ ಹಿಂದಿನ ಎಲ್ಲ ವರ್ಷಗಳಿಗಿಂತ ಹೆಚ್ಚು ಕಳೆಕಟ್ಟಿದಂತೆ ಕಾಣುತ್ತಿದೆ. ಹೆಚ್ಚು ಜನ ಸಂದಣಿಯಾಗುವ ನಿರೀಕ್ಷೆಯಿದ್ದಿದ್ದರಿಂದಲೋ ಏನೋ ಈ ಬಾರಿಯ ಹುಟ್ಟುಹಬ್ಬವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಸ್ವಯಂಸೇವಕರಿಗೆ ಬ್ಯಾಡ್ಜು, ಗಣ್ಯರಿಗೆ ಪಾಸ್ ವ್ಯವಸ್ಥೆ ಸೇರಿದಂತೆ ಎಲ್ಲೂ ಗೊಂದಲವಾಗದ ರೀತಿಯಲ್ಲಿ ಏರ್ಪಾಟು ಮಾಡಿದ್ದಾರೆ.

ದರ್ಶನ್ ಅವರ ಖಾಸಾ ದೋಸ್ತಿಗಳು ಮಾತ್ರವವಲ್ಲದೆ ಚಿತ್ರರಂಗದ ಗಣ್ಯರು, ಅನೇಕ ನಿರ್ದೇಶಕರು, ನಿರ್ಮಾಪಕರೂ ಸಹಾ ರಾತ್ರಿಹೊತ್ತಿಗೆ ದರ್ಶನ್ ಅವರ ಮನೆ ಬಳಿ ಹಾಜರಾಗಿದ್ದಾರೆ. ಟೀವಿ ಮಾಧ್ಯಮದ ಪ್ರತಿನಿಧಿಗಳು ಕೂಡಾ ಸರಿರಾತ್ರಿ ಅನ್ನೋದನ್ನೂ ಮರೆತು ದರ್ಶನ್ ಅವರ ಹುಟ್ಟುಹಬ್ಬದ ಕ್ಷಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.

ದರ್ಶನ್ ಅವರ ಹುಟ್ಟುಹಬ್ಬದ ಈ ಸಂಭ್ರಮದ ಕ್ಷಣಗಳ ಫೋಟೋಗಳು ಇಲ್ಲಿವೆ.

Leave a Reply

Your email address will not be published. Required fields are marked *


CAPTCHA Image
Reload Image