One N Only Exclusive Cine Portal

ರಸ್ತೇಲಿ ಸಿಕ್ಕ ಅಭಿಮಾನಿಗೆ ದರ್ಶನ್ ಕೊಟ್ಟ ಸಂದೇಶವೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲದರಲ್ಲಿಯೂ ಭಿನ್ನ. ಹೊರ ಜಗತ್ತಿಗೆ ಕೊಂಚ ಒರಟಾಗಿ ಕಂಡರೂ ಎಲ್ಲರ ಬಗ್ಗೆಯೂ ಪ್ರೀತಿ ಮತ್ತು ಕಾಳಜಿ ಹೊಂದಿರೋದು ಅವರ ಅಸಲೀ ವ್ಯಕ್ತಿತ್ವ. ಬಹುಶಃ ಕರ್ನಾಟಕದಲ್ಲಿ ದರ್ಶನ್ ಅವರು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವುದಕ್ಕೆ ಈ ವ್ಯಕ್ತಿತ್ವವೂ ಒಂದು ಕಾರಣವಾಗಿದ್ದಿರ ಬಹುದು.

ಇತ್ತೀಚೆಗೆ ಮೈಸೂರು ಮುಂತಾದೆಡೆಗಳಲ್ಲಿ ದರ್ಶನ್ ಯಜಮಾನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರಲ್ಲಾ? ಇದನ್ನು ಹೇಗೋ ಕಂಡುಕೊಂಡ ಅಭಿಮಾನಿಗಳೆಲ್ಲ ಹೊಂಚು ಹಾಕಿ ದರ್ಶನ್ ಅವರನ್ನು ಕಂಡು ಮಾತಾಡಿಸುವ ಸರ್ಕಸ್ಸು ನಡೆಸುತ್ತಿದ್ದಾರೆ. ಅವರು ಚಿಕ್ಕಮಗಳೂರಿನಲ್ಲಿ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾಗಲೂ ಇದೇ ಪುನರಾವರ್ತನೆಯಾಗಿತ್ತು. ಆದರೆ ಅಚಾನಕ್ಕಾಗಿ ರಸ್ತೆಯಲ್ಲಿ ಸಿಕ್ಕು ಮಾತಾಡಿಸಿದ ಅಭಿಮಾನಿಯೋರ್ವರಿಗೆ ಕೊಟ್ಟ ಆಟೋಗ್ರಾಫಿನಲ್ಲಿ ದರ್ಶನ್ ಬರೆದಿದ್ದ ಸಂಗತಿ ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ!

ಯಜಮಾನ ಶೂಟಿಂಗ್‌ನಲ್ಲಿದ್ದ ದರ್ಶನ್ ಒಂದು ಮುಖ್ಯರಸ್ತೆಯಲ್ಲಿ ಕಾರಿನೊಳಗಿದ್ದರು. ವಾಹನದಲ್ಲಿ ಪಕ್ಕದಲ್ಲಿ ಬಂದು ನಿಂತ ಅಭಿಮಾನಿಯೊಬ್ಬರು ಇಳಿದು ಓಡೋಡಿ ಬಂದು ದರ್ಶನ್ ಅವರನ್ನು ಮಾತಾಡಿಸಿದ್ದರು. ಬಳಿಕ ಅವರ ಬಳಿ ದುಬಾರಿಯಾದ ಮೊಬೈಲ್ ಮುಂತಾದವುಗಳಿದ್ದರೂ ಪೆನ್ನು ಪೇಪರ್ ಹುಡುಕಿ ತಂದು ಆಟೋಗ್ರಾಫ್ ಪಡೆದಿದ್ದರು. ಅದರಲ್ಲಿ ದರ್ಶನ್ ಅವರು ಬರೆದಿದ್ದ ‘ಡ್ರೈವ್ ಸೇಫ್’ ಎಂಬ ಸಂದೇಶವನ್ನು ನೋಡಿ ಆ ಅಭಿಮಾನಿ ಬೆರಗಾಗಿದ್ದರು.

ಸಾಮಾನ್ಯವಾಗಿ ಸ್ಟಾರ್ ನಟರು ಆಟೋಗ್ರಾಫ್ ಕೊಡುವಾಗ ಸಾಮಾನ್ಯವಾದ ಸಂಗತಿಗಳನ್ನೇ ಅರ್ಜೆಂಟಿನಲ್ಲಿ ಗೀಚಿ ಕೊಡುತ್ತಾರೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡು ರಸ್ತೆಯಲ್ಲಿ ವಾಹನವಿಳಿದು ಬಂದು ತಮ್ಮನ್ನು ಮಾತಾಡಿಸಿದ ಅಭಿಮಾನಿಗೆ ಡ್ರೈವ್ ಸೇಫ್ ಎಂಬ ಸಂದೇಶವಿರುವ ಆಟೋಗ್ರಾಫ್ ಕೊಡುವ ಮೂಲಕ ಕಾಳಜಿ ಮೆರೆದಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image