One N Only Exclusive Cine Portal

ದರ್ಶನ್‌ಗೆ ಹೂವಿನ ಅಲಂಕಾರ!

ದರ್ಶನ್ ಅವರಿಗೆ ಸ್ನೇಹ-ಸ್ನೇಹಿತರು ಎಂದರೆ ಸಿಕ್ಕಾಪಟ್ಟೆ ವ್ಯಾಮೋಹ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿರೋದೇ. ಶಾಲೆಯಲ್ಲಿ ಓದಿದವರು ಮತ್ತು ಕಾಲೇಜ್ ಸಹಪಾಠಿಗಳೆಲ್ಲ ವರ್ಷಕ್ಕೊಮ್ಮೆ ಪ್ರತ್ಯೇಕವಾಗಿ ಒಂದೆಡೆ ಸೇರುತ್ತಾರೆ. ಈ ರೀಯೂನಿಯನ್‌ಗಳಲ್ಲಿ ಸ್ನೇಹಿತರ ತಂಡದ ಪ್ರತಿಯೊಬ್ಬ ಸದಸ್ಯರೂ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಬಂದು ಅಲ್ಲಿ ಹಾಜರಾಗಲೇಬೇಕು ಅನ್ನೋದು ಸ್ನೇಹಿತರೇ ವಿಧಿಸಿಕೊಂಡಿರುವ ನಿಬಂಧನೆ.

ಈ ಬಾರಿ ಹೇಗೂ ಮೈಸೂರು ಬಳಿಯೇ ದರ್ಶನ್ ಅವರ ಯಜಮಾನ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವುದರಿಂದ ರೀಯೂನಿಯನ್ ಸ್ವಲ್ಪ ಜೋರಾಗೇ ನಡೆದಿತ್ತು. ಈ ಸಂದರ್ಭದಲ್ಲಿ ಗೆಳೆಯರೆಲ್ಲಾ ಸೇರಿ ದರ್ಶನ್ ಅವರಿಗೆ ವಿಶೇಷವಾಗಿ ಸನ್ಮಾನಿಸಿದ್ದಾರೆ. ಸಾಮಾನ್ಯವಾಗಿ ಸನ್ಮಾನವೆಂದರೆ ಬಗೆಬಗೆಯ ಶಾಲು, ಹಾರಗಳನ್ನು ಹಾಕೋದು ಮಾಮೂಲು. ಆದರೆ ದರ್ಶನ್ ಅವರ ಸ್ನೇಹಿತರು ಹೂವಿನಿಂದ ಮಾಡಿದ ವಿಶೇಷ ಉಡುಗೆಯನ್ನು ತಂದು ಸ್ನೇಹಿತನನ್ನು ಅಲಂಕರಿಸಿದ್ದರು. ಮೈಸೂರು ಪೇಟ ಮತ್ತು ಹೂವಿನ ಬಟ್ಟೆಯಲ್ಲಿ ಮುಳುಗಿಹೋಗಿದ್ದ ದರ್ಶನ್ ಅವರ ಮುಖದಲ್ಲಿ ದೈವೀಕ ಕಳೆ ಎದ್ದು ಕಾಣುತ್ತಿತ್ತು. ಈ ಸನ್ಮಾನದ ಫೋಟೋಗಳು ಬಹುಶಃ ದರ್ಶನ್ ಅವರನ್ನು ಆರಾಧಿಸುವ ಅಭಿಮಾನಿಗಳ ಕಣ್ಣಿಗೆ ದೇವರೇ ಎದ್ದುಬಂದು ಎದುರು ನಿಂತಂತೆ ಭಾಸವಾದರೂ ಅಚ್ಛರಿಯಿಲ್ಲ!

ಈ ವರ್ಷದ ಸ್ನೇಹಿತರ ಕೂಟದಲ್ಲಿ ಶಾಲಾ-ಕಾಲೇಜು ಸಹಪಾಠಿಗಳೊಂದಿಗೆ ಸಿನಿಮಾ ನಟ ಕಂ ದರ್ಶನ್‌ರ ಆತ್ಮೀಯ ಸೃಜನ್ ಲೋಕೇಶ್, ಛಾಲೆಂಜಿಂಗ್ ಸ್ಟಾರ್ ಅವರ ಹಿಂಬಾಲಕರಾದ ಯಶಸ್ ಸೂರ್ಯ, ಧರ್ಮ ಕೀರ್ತಿ ರಾಜ್ ಮುಂತಾದವರು ಹಾಜರಿದ್ದರು.

zÀgÀ¸ÀºÀ£À ¯ÉÆqÉgÀ

 

 

 

Leave a Reply

Your email address will not be published. Required fields are marked *


CAPTCHA Image
Reload Image