One N Only Exclusive Cine Portal

ದರ್ಶನ್ ಜೊತೆ ನಟಿಸಲು ನಿರಾಕರಿಸಿದಳಾ ಕೃತಿ ಕರಬಂಧ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕೆಂಬುದು ಬಹುತೇಕ ನಟಿಯರ ಬಯಕೆ. ಅವರದ್ದೊಂದು ಚಿತ್ರ ಘೋಷಣೆಯಾದಾಗ ನಟೀಮಣಿಯರೆಲ್ಲ ಅವಕಾಶ ಗಿಟ್ಟಿಸಿಕೊಳ್ಳಲು ತಿಪ್ಪರಲಾಗ ಹೊಡೆಯೋದು ಮಾಮುಲು. ಅಂತಾದ್ದರಲ್ಲಿ ತಾನಾಗೇ ದರ್ಶನ್ ಅವರಿಗೆ ನಾಯಕಿ ಆಗೋ ಅವಕಾಶ ಕೂಡಿ ಬಂದರೂ ಕೃತಿ ಕರಬಂಧ ‘ಯಜಮಾನ’ ಚಿತ್ರದ ನಾಯಕಿಯಾಗಲು ಸಾಧ್ಯವಾಗಿಲ್ಲ!

ಹಾಗಾದರೆ ಬಾಲಿವುಡ್‌ನಲ್ಲೂ ಮಿಂಚಿರುವ ಕೃತಿ ಕರಬಂಧ ತಾನೇ ತಾನಾಗಿ ಈ ಅವಕಾಶವನ್ನು ನಿರಕರಿಸಿದಳಾ? ಅಂತೊಂದು ಪ್ರಶ್ನೆ ಹುಟ್ಟೊದು ತಪ್ಪೇನಲ್ಲ. ಆದರೆ ಕೃತಿ ಯಜಮಾನನ ಒಡತಿಯಾಗಲು ಸಾಧ್ಯವಾಗದಿರೋದರ ಹಿಂದೆ ಕೆಲ ತಾಂತ್ರಿಕ ಕಾರಣಗಳಿವೆಯಂತೆ!

ಕೃತಿ ಕರಬಂಧ ಕನ್ನಡಕ್ಕೆ ಎಂಟ್ರಿ ಕೊಟ್ಟಾಗ ಆಕೆ ಕೂಡಾ ದರ್ಶನ್ ಅವರ ಜೊತೆ ನಟಿಸ ಬೇಕೆಂಬ ಆಸೆ ಹೊಂದಿದ್ದರೂ ಅಚ್ಚರಿಯೇನಿಲ್ಲ. ಆದರೆ ಬಹು ಕಾಲದ ನಂತರ ಯಜಮಾನ ಚಿತ್ರದ ಮೂಲಕ ಆ ಅವಕಾಶ ಕೂಡಿ ಬಂದಿತ್ತು. ಚಿತ್ರ ತಂಡ ನಾಯಕಿಗಾಗಿ ಹುಡುಕಾಟ ನಡೆಸಿ ಕಡೆಗೂ ಕೃತಿಯನ್ನು ನಿಕ್ಕಿ ಮಾಡಿತ್ತು. ನಿರ್ದೇಶಕ ಪೊನ್ನುಕುಮಾರ್ ನೀಡಿದ ಈ ಪ್ರಪೋಸಲ್ಲು ತಲುಪೊ ಹೊತ್ತಿಗೆಲ್ಲಾ ಆಕೆ ಹಿಂದಿಯ ಯಮ್ಲ ಪಗಲ ದೀವಾನಾ ಚಿತ್ರವನ್ನು ಒಪ್ಪಿಕೊಂಡಿದ್ದಳು. ಅದರ ಶೂಟಿಂಗ್ ಕೂಡಾ ಆರಂಭವಾಗಿದೆ.

ಹೀಗೆ ಕಮಿಟ್ ಆಗಿರೋ ಚಿತ್ರದಿಂದ ಹೊರ ಬರಲಾರದೆ ಕೃತಿ ಅನಿವಾರ್ಯ ಕಾರಣಗಳಿಂದ ಯಜಮಾನ ಚಿತ್ರದ ನಯಕಿಯಗೋ ಅವಕಶವನ್ನು ತಪ್ಪಿಸಿಕೊಂಡಿದ್ದಾಳೆ. ಆಕೆ ಕನ್ನಡದಲ್ಲಿ ನಟಿಸದೆ ಒಂದಷ್ಟು ಕಾಲವಾಗಿತ್ತು. ಹಾಗೇನಾದರೂ ಯಜಮಾನ ಚಿತ್ರದಲ್ಲಿ ನಟಿಸಲು ಸಾಧ್ಯವಾಗಿದ್ದರೆ ಕೃತಿಗೆ ಗ್ರ್ಯಾಂಡ್ ಆದೊಂದು ರೀ ಓಪನಿಂಗ್ ಸಿಕ್ಕಿರುತ್ತಿತ್ತು. ಆದರೆ ಸ್ವತಃ ಕೃತಿಯೇ ಈ ಅವಕಾಶ ತನ್ನ ಕಮೀಟ್‌ಮೆಂಟಿನ ಕಾರಣದಿಂದ ಕೈತಪ್ಪಿದ್ದಕ್ಕೆ ಪರಿತಪಿಸುವಂತಾಗಿದೆ!

 

ದಳಪತಿ ಸಿನಿಮಾದ ಪತ್ರಿಕಾಗೋಷ್ಟಿಯಲ್ಲಿ ಸ್ವತಃ ಕೃತಿ ಈ ವಿಚಾರವನ್ನು ಹೇಳಿಕೊಂಡಳು. ದರ್ಶನ್ ಸರ್ ಜೊತೆ ಮುಂದೆಂದಾದರೂ ನಟಿಸೋ ಅವಕಾಶ ಸಿಕ್ಕರೆ ಖಂಡಿತಾ ಮಿಸ್ ಮಡ್ಕೋಳಲ್ಲ ಅನ್ನೋದು ಕೃತಿಯ ಉವಾಚ!

Leave a Reply

Your email address will not be published. Required fields are marked *


CAPTCHA Image
Reload Image