One N Only Exclusive Cine Portal

ದರ್ಶನ್ ಲ್ಯಾಂಬೊರ್ಗಿನಿ ಕಾರಿನ ಅಸಲೀ ಸತ್ಯ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಂಡುಕೊಂಡಿದ್ದರೆನ್ನಲಾಗಿರೋ ಕಾರು ಮಾಧ್ಯಮಗಳ ತುಂಬಾ ಥರಹೇವಾರಿ ರೀತಿಯಲ್ಲಿ ಓಡಾಡಿದೆ. ದರ್ಶನ್ ಲ್ಯಾಂಬೊರ್ಗಿನಿ ಕಾರನ್ನು ಖರೀದಿಸಿಯಾಗಿದೆ ಎಂಬರ್ಥದ ಸುದ್ದಿಗಳೇ ಯದ್ವಾ ತದ್ವ ಹರಿದಾಡಿದ್ದವು.


ಆದರೆ ದರ್ಶನ್ ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಕಾರನ್ನು ಇನ್ನೂ ಕೊಂಡುಕೊಂಡಿಲ್ಲ. ಅದನ್ನವರು ಟೆಸ್ಟ್ ಡ್ರೈವ್ ಗಾಗಿ ತರಿಸಿದ್ದರಷ್ಟೇ. ಇಷ್ಟಕ್ಕೂ ಎಂಟು ಕೋಟಿ ಬೆಲೆಯ ಈ ಐಶಾರಾಮಿ ಕಾರನ್ನು ಬೆಂಗಳೂರಿನಲ್ಲಿ ಸಂಭಾಳಿಸೋದು ಕಷ್ಟ ಎಂಬ ಕಾರಣದಿಂದ ಈ ದುಬಾರಿ ಕಾರು ಖರೀದಿಯ ಪ್ಲಾನನ್ನು ದರ್ಶನ್ ಮುಂದೂಡಿದ್ದಾರೆಂದೂ ಹೇಳಲಾಗುತ್ತಿದೆ.
ಫಾರ್ಮ್ ಹೌಸ್ ತುಂಬಾ ಕುದುರೆಗಳನ್ನ ಸಾಕಿಕೊಂಡು, ಹಸುಗಳ ಆರೈಕೆ ಮಾಡುತ್ತಾ ಪ್ರಾಣಿಪ್ರಿಯ ಅಂತಲೇ ಹೆಸರಾಗಿರುವವರು ಛಾಲೆಂಜಿಂಗ್ ಸ್ಟಾರ್ ದರ್ಶನ್. ಅವರಿಗೆ ಪ್ರಾಣಿಗಳ ಮೇಲೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಕ್ರೇಜ್ ಹೊಸಾ ಮಾಡೆಲ್‌ನ ಹೈಟೆಕ್ ಕಾರುಗಳ ಮೇಲೂ ಇದೆ. ದರ್ಶನ್ ಅವರ ಕಾರ್ ಕ್ರೇಜ್‌ನ ಬಗೆಗೂ ಹಲವಾರು ದಂತಕಥೆಗಳೇ ಇವೆ.
ದರ್ಶನ್ ವರ್ಷದ ಹಿಂದಷ್ಟೇ ಆಡಿ ಆರ್-೮ ಎಂಬ ಹೊಚ್ಚ ಹೊಸಾ ಕಾರನ್ನು ಖರೀದಿಸೋ ಮೂಲಕ ಕ್ರೇಜ್ ಹುಟ್ಟು ಹಾಕಿದ್ದರು. ಎರಡೇ ಎರಡು ಸೀಟ್ ಹೊಂದಿರೋ ಈ ಕಾರು ಕಾರ್‌ಗಳ ಬಗ್ಗೆ ಕ್ರೇಜ್ ಹೊಂದಿರೋ ಪ್ರತಿಯೊಬ್ಬರನ್ನೂ ಹುಚ್ಚೇಳಿಸುವಂಥಾದ್ದು. ಅದು ಕನಿಸಿನಂಥಾದ್ದೂ ಹೌದು.


ಇದೀಗ ಅಂಥಾದ್ದೇ ಐಶಾರಾಮಿ ಕಾರೆಂಬ ಖ್ಯಾತಿ ಹೊಂದಿರುವ, ಇಡೀ ಭಾರತದಲ್ಲಿ ಕೆಲವೇ ಜನರ ಬಳಿಯಿರುವ ಲ್ಯಾಂಬೊರ್ಗಿನಿ ಕಾರನ್ನು ಖರೀದಿಸೋ ಮನಸು ಮಾಡಿ ಟೆಸ್ಟ್ ಡ್ರೈವ್ ಮಾಡಿರೋ ದರ್ಶನ್ ಸದ್ಯಕ್ಕೆ ಅದರ ಖರೀದಿ ವ್ಯವಹಾರವನ್ನು ಮುಂದೂಡಿದಂತಿದೆ.

Leave a Reply

Your email address will not be published. Required fields are marked *


CAPTCHA Image
Reload Image