One N Only Exclusive Cine Portal

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ

ಪತ್ರಕರ್ತರ ವಲಯದಲ್ಲಿ ದೇಶಾದ್ರಿ ಅಂತಲೇ ಹೆಸರಾಗಿರೋ ದೇಶಾದ್ರಿ ಹೊಸ್ಮನೆಯವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಲಭಿಸಿದೆ. ದಮನಿತ ಸಮುದಾಯದೆಡೆಗಿನ ಪ್ರಾಮಾಣಿಕ ಕಾಳಜಿ, ಅವರಿಗಾಗಿನ ಹೋರಾಟಗಳ ಜೊತೆಗೇ ಈಗ್ಗೆ ಎರಡು ದಶಕಗಳಿಂದ ಪತ್ರಕರ್ತರಾಗಿರೋ ದೇಶಾದ್ರಿ ಇದೀಗ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ದಟ್ಟ ಮಲೆನಾಡಿನ ವಾತಾವರಣದಲ್ಲಿ ಬೆಳೆದ ದೇಶಾದ್ರಿ ಹೊಸ್ಮನೆ ಏಕಾಏಕಿ ಫೇಮಸ್ಸಾಗಿ ಬಿಡಬೇಕು ಎಂಬಂಥಾ ಹುಕಿಯಿಂದ ಬಂದವರಲ್ಲ. ನೊಂದ ಅಷ್ಟೂ ಜೀವಗಳ ಒಡಲ ಕುದಿಯನ್ನು ಎದೆಯೊಳಗಿಟ್ಟುಕೊಂಡೇ ಅಕ್ಷರ ಜಗತ್ತಿಗೆ ಅಡಿಯಿರಿಸಿದ ದೇಶಾದ್ರಿ ಆ ಕಾರಣದಿಂದಲೇ ಗಟ್ಟಿತನ ಹೊಂದಿರೋ ಬರಹಗಾರನಾಗಿ, ಕ್ರಿಯಾಶೀಲ ಪತ್ರಕರ್ತನಾಗಿ ನೆಲೆ ಕಂಡುಕೊಂಡಿದ್ದಾರೆ.


ಇದೀಗ ಕನ್ನಡಪ್ರಭ ಪತ್ರಿಕೆಯಲ್ಲಿ ಸಿನಿಮಾ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ದೇಶಾದ್ರಿ ಅವರದ್ದು ಭಾವುಕ ವ್ಯಕ್ತಿತ್ವ. ಅಗಾಧವಾದ ಓದು, ಸ್ವತಂತ್ರವಾದ ಚಿಂತನೆ, ದಮನಿತರೆಡೆಗಿನ ಕಾಳಜಿಯ ಮೂಲಕವೇ ಅಕ್ಷರ ಹೊಸೆಯುತ್ತಾ ಅಖಂಡ ಎರಡು ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜಕೀಯ, ಸಿನಿಮಾವೂ ಸೇರಿದಂತೆ ಎಲ್ಲ ವಿಚಾರಗಳನ್ನೂ ಲೀಲಾಜಾಲವಾಗಿ ಬರೆಯಬಲ್ಲ ಕೆಲವೇ ಕೆಲ ಪತ್ರಕರ್ತರ ಸಾಲಿನಲ್ಲಿ ದೇಶಾದ್ರಿ ಕೂಡಾ ಒಬ್ಬರು. ಅಕ್ಷರಗಳನ್ನೇ ನಂಬಿ ಬದುಕುತ್ತಿರೋ ದೇಶಾದ್ರಿ ಹೊಸ್ಮನೆಯವರಿಗೆ ಇದೀಗ ಲಭಿಸಿರೋ ಪ್ರಶಸ್ತಿ ಹುಮ್ಮಸ್ಸು ಹೆಚ್ಚಿಸಲಿ…


ಇದೇ ಸಾಲಿನಲ್ಲಿ ಶಿವಮೊಗ್ಗದವರೇ ಆದ ಕೆ. ಗಿರೀಶ್ ಅವರಿಗೂ ಪ್ರಶಸ್ತಿ ಸಂದಾಯವಾಗುತ್ತಿದೆ. ಸರಿಸುಮಾರು ಒಂದೂ ವರೆ ದಶಕಗಳ ಹಿಂದೆಯೇ ಅಮೆರಿಕ ಅಂತರಂಗ ಎಂಬ ಕೃತಿಯನ್ನು ಬರೆದಿದ್ದ, ಜೊತೆಗೆ ಅಗ್ನಿ ಪತ್ರಿಕೆಯ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ, ನಂತರ ಬೆಂಗಳೂರಿಗೆ ಬಂದು ಅದೇ ಅಗ್ನಿ ಪತ್ರಿಕೆಗೆ ಕ್ರೈಮ್, ಸಿನಿಮಾ ಮತ್ತು ರಾಜಕೀಯ ವರದಿಗಳನ್ನೂ ಬರೆಯುತ್ತಿದ್ದರು. ಒಂದಷ್ಟು ದಿನ ಬಾಲಕೃಷ್ಣ ಕಾಕತ್ಕರ್ ಅವರ ಕ್ರೈಮ್ ಸ್ಟೋರಿ ತಂಡದಲ್ಲೂ ದುಡಿದಿದ್ದರು. ಸದ್ಯ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಗಿರೀಶ್ ಅವರಿಗೂ ಈ ಸಾಲಿನ ಪತ್ರಕರ್ತರ ಪ್ರಶಸ್ತಿ ದೊರೆತಿದೆ. ಪ್ರಗತಿಪರ ಚಿಂತನೆ ಮತ್ತು ಸಾಮಾಜಿಕ ಕಾಳಜಿ ಹೊಂದಿರುವ ಇಬ್ಬರು ಪತ್ರಕರ್ತರಿಗೆ ಈ ಸನ್ಮಾನ ದೊರೆತಿರುವುದು ಶಿವಮೊಗ್ಗ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕ್ರಿಯಾಶೀಲ ಪತ್ರಕರ್ತರ ಸಂತಸಕ್ಕೆ ಕಾರಣವಾಗಿದೆ.

__________________________

ಉಳಿದ ಪ್ರಶಸ್ತಿ ವಿಜೇತರ ವಿವರ

ಕರ್ನಾಟಕ ಕಾರ‍್ಯನಿರತ ಪತ್ರಕರ್ತರ ಸಂಘವು ವೃತ್ತಿನಿರತ ಪತ್ರಕರ್ತರ ಸಂಘಟನಾತ್ಮಕ ಸಂಸ್ಥೆಯಾಗಿದ್ದು, ಕಳೆದ ಎಂಟು ದಶಕಗಳನ್ನು ದಾಟಿ ಮುನ್ನೆಡೆದಿದೆ.  ಸಂಘಟನಾತ್ಮಕವಾಗಿ ಅಲ್ಲದೆ ವೃತ್ತಿನಿರತ ಪತ್ರಕರ್ತರ  ಪ್ರತಿಭೆ,ಶ್ರಮ ಮತ್ತು ಬದ್ದತೆಯನ್ನು ಗುರುತಿಸಿ ಉತ್ತೇಜಿಸುವ ಮತ್ತು ಆ ಮೂಲಕ ಗುಣಾತ್ಮಕ  ಬೆಳವಣಿಗೆಗೆ  ಒತ್ತು ನೀಡುವಲ್ಲಿ ಸಂಘವು ಪ್ರತಿವರ್ಷ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಕೊಡ ಮಾಡುತ್ತಿದೆ.

೨೦೧೭-೧೮ ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಪಡಿಸುತ್ತಿದ್ದು, ಈ ಕೆಳಕಂಡ  ಕ್ರೀಯಾಶೀಲ. ಸಾಧಕ ಮತ್ತು ಪ್ರತಿಭಾನ್ವಿತರು ಈ ಕೆಳಕಂಡ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ತಿಳಿಸಲು ಹರ್ಷವಾಗುತ್ತಿದೆ.

ಅತ್ಯುತ್ತಮ ಕ್ರೀಯಾಶೀಲ ಪತ್ರಕರ್ತರಿಗೆ ಕೊಡಮಾಡುವ ಪ್ರಶಸ್ತಿಗಳು
______

೧.ಶ್ರೀ ಡಿ.ವಿ ಗುಂಡಪ್ಪ ಪ್ರಶಸ್ತಿ:         ಶ್ರೀ ಮಹಾದೇವಪ್ರಕಾಶ್ ಸಂಪಾದಕರು  ಈ ಭಾನುವಾರ ಪತ್ರಿಕೆ
೨. ಶ್ರೀ ಗರುಡನ ಗಿರಿ ನಾಗರಾಜ್ ಪ್ರಶಸ್ತಿ:     ಶ್ರೀ ಗುಡಿಹಳ್ಳಿ ನಾಗರಾಜ್, ಹಿರಿಯ ಪತ್ರಕರ್ತರು
೩. ಶ್ರೀ ಎಸ್.ವಿ ಜಯಶೀಲರಾವ್ ಪ್ರಶಸ್ತಿ:   ಶ್ರೀ ವೀರಭದ್ರಪ್ಪಗೌಡ ಪತ್ರಕರ್ತರು ಬಳ್ಳಾರಿ
೪.ಶ್ರೀ ಡಾ. ಎಂ.ಎಂ ಕಲ್ಬುರ್ಗಿ ಪ್ರಶಸ್ತಿ   :   ಶ್ರೀ ಡಾ. ಸರೂಜ್ ಕಾಟ್ಕರ್  ಹಿರಿಯ ಪತ್ರಕರ್ತರು ಬೆಳಗಾವಿ
೫. ಶ್ರೀ ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ:  ಶ್ರೀ ಬಸವರಾಜಸ್ವಾಮಿ ಸಂಪಾದಕರು ಸುದ್ದಿಮೂಲ     ರಾಯಚೂರು
೬. ಶ್ರೀ ಎಂ. ನಾಗೇಂದ್ರರಾವ್ ಪ್ರಶಸ್ತಿ:       ಶ್ರೀ ದೇಶಾದ್ರಿ ಶಿವಮೊಗ್ಗ. ಕನ್ನಡ ಪ್ರಭ  ಬೆಂಗಳೂರು
೭. ಶ್ರೀ ಹೆಚ್.ಎಸ್ ರಂಗಸ್ವಾಮಿ ಪ್ರಶಸ್ತಿ:      ಶ್ರೀ ಆರ್.ಟಿ ವಿಠಲಮೂರ್ತಿ, ಪತ್ರಕರ್ತರು ಬೆಂಗಳೂರು
೮.ಶ್ರೀ ಮಿಂಚುಶ್ರೀನಿವಾಸ್ ಪ್ರಶಸ್ತಿ:          ಶ್ರೀ ವೈ.ಗ ಜಗದೀಶ್  ಹಿರಿಯ ಪತ್ರಕರ್ತರು ಪ್ರಜಾವಾಣಿ
______

ಲೇಖನ ,ವರದಿ ಬರಹಗಳ ಆಧರಿಸಿ ಕೊಡ ಮಾಡುವ ಪ್ರಶಸ್ತಿಗಳುವಿಶೇಷ ಪ್ರಶಸ್ತಿಗಳು.

ಶ್ರೀಮತಿ ಯಶೋದಮ್ಮ ಜಿ. ನಾರಾಯಣ  ಪ್ರಶಸ್ತಿ( ಗ್ರಾಮಾಂತರ ಭಾಗದಲ್ಲಿ ೨೦ ವರ್ಷ ಸೇವೆ ಸಲ್ಲಿಸಿರುವ ಹಿರಿಯ ಮಹಿಳಾ ಪತ್ರಕರ್ತರಿಗೆ ):   ಶ್ರೀಮತಿ ಎಂ,ಎಚ್ ನೀಳಾ

ಬದರಿನಾಥಹೊಂಬಾಳೆ ಪ್ರಶಸ್ತಿ(ರಾಜ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ನ ಪತ್ರಕರ್ತರೊಬ್ಬರಿಗೆ ): ಜಿ..ಆರ್ ಉದಯಕುಮಾರ್ ಇಂಡಿಯನ್ ಎಕ್ಸ್ ಪ್ರೆಸ್ . ಹಾಸನ

ಪಿ.ಆರ್ ರಾಮಯ್ಯ ಸ್ಮಾರಕ ಪ್ರಶಸ್ತಿ(ಪತ್ರಿಕೋದ್ಯಮದಲ್ಲಿ ಮತ್ತು ಪತ್ರಿಕಾ ಸಂಘಟನೆಗಳಲ್ಲಿ ದೀರ್ಘ ಸೇವೆಸಲ್ಲಿಸಿದವರಿಗೆ ) : ಡಾ. ಕೆ ಉಮೇಶ್ವರ್ ಹಿರಿಯ ಪತ್ರಕರ್ತರು  ಬೆಂಗಳೂರು

ಡಿವಿಜಿ ಪ್ರಶಸ್ತಿ( ಪತ್ರಕರ್ತರ ರಾಜ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದರವರಿಗೆ): ಜೆ.ಆರ್ ಕೆಂಚೇಗೌಡ,ಸಂಪಾದಕರು ಪ್ರಜೋದಯ ಹಾಸನ

ಕಿಡಿಶೇಷಪ್ಪ ಪ್ರಶಸ್ತಿ( ಸಣ್ಣಮತ್ತು ಮಧ್ಯಮ ಪತ್ರಿಕೆಯ ಸಂಪಾದಕರೊಬ್ಬರಿಗೆ):ಶ್ರೀ ಬಸವೇಗೌಡ ಸಂಪಾದಕರು,ನುಡಿಭಾರತಿ ಮಂಡ್ಯ

ಆರ್.ಶಾಮಣ್ಣ ಪ್ರಶಸ್ತಿ(ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ ನೀಡುವ ಪ್ರಶಸ್ತಿ): ಸುವರ್ಣಟೈಮ್ಸ್ ಆಫ್ ಕರ್ನಾಟಕ ,ಬೆಂಗಳೂರು

ಜಿ,ನಾರಾಯಸ್ವಾಮಿ ಪ್ರಶಸ್ತಿ(ಅತ್ಯುತ್ತಮ ಗ್ರಾಮಾಂತರ ವರದಿಗೆ): ಶ್ರೀಕಾಯಪಂಡ ಶಶಿಸೋಮಯ್ಯ, ವರದಿಗಾರರು ಶಕ್ತಿ ದಿನಪತ್ರಿಕೆ  ಕೊಡಗು

ಪಟೇಲ್ ಭೈರಹನುಮಯ್ಯ ಪ್ರಶಸ್ತಿ( ಅತ್ಯುತ್ತಮ ಮಾನವೀಯ ವರದಿಗೆ): ಮಯಾಶರ್ಮ,ವರದಿಗಾರರು ಎನ್.ಡಿ ಟಿವಿ ಬೆಂಗಳೂರು

ಗಿರಿಧರ್ ಪ್ರಶಸ್ತಿ(ಅತ್ಯುತ್ತಮ ಅಪರಾಧ ವರದಿಗೆ): ಶ್ರೀ ಕೆ.ಗಿರೀಶ್, ವಿಜಯಕರ್ನಾಟಕ ಬೆಂಗಳೂರು

ಬಿ.ಎಸ್ ವೆಂಕಟರಾಂ ಪ್ರಶಸ್ತಿ(ಅತ್ಯುತ್ತಮ ಸ್ಕೂಪ್ ವರದಿ):ಧ್ಯಾನ್ ಪೊಣಚ್ಚ,ವರದಿಗಾರರು ಹೊಸದಿಗಂತ ಬೆಂಗಳೂರು

ಎ.ಎಲ್ ನಾಗೇಶ್ ವಿಜಯಕರ್ನಾಟಕ ಚನ್ನರಾಯಪಟ್ಟಣ

ಖಾದ್ರಿಶಾಮಣ್ಣ ಪ್ರಶಸ್ತಿ( ಅತ್ಯುತ್ತಮ ವಿಮರ್ಶಾತ್ಮಕ ಲೇಖನಕ್ಕೆ): ಕೆಂಚೇಗೌಡ ವಿಜಯ ಕರ್ನಾಟಕ, ರವಿಪ್ರಕಾಶ್ ಪ್ರಜಾವಾಣಿ.

ಕೆ.ಎ ನೆಟ್ಟಕಲ್ಲಪ್ಪ ಪ್ರಶಸ್ತಿ(ಅತ್ಯುತ್ತಮ ಕ್ರೀಡಾವರದಿಗೆ):
ಡಿ.ಪಿ ರಘುನಾಥ್ ವರದಿಗಾರರು ವಿಜಯವಾಣಿ  ಬಿ.ಆರ್ .ವಿಶ್ವನಾಥ್ ಸಂಜೆವಾಣಿ ಬೆಂಗಳೂರು

ಮಂಗಳ ಎಂ.ಸಿ ವರ್ಗಿಸ್ ಪ್ರಶಸ್ತಿ(ವಾರಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ ಚಿತ್ರ ಲೇಖನಕ್ಕೆ ): ಶ್ರೀಮತಿ ಶಾಂತಲಾ ಧರ್ಮರಾಜ್ ಸಂಪಾದಕರು ಕಸ್ತೂರಿ
ಬೆನಕನಹಳ್ಳಿ ಶೇಖರಗೌಡ, ಹಿರಿಯ ಪತ್ರಕರ್ತರು,

ಆರ್.ಎಲ್ ವಾಸುದೇವರಾವ್ ಪ್ರಶಸ್ತಿ( ವನ್ಯಜೀವಿಗಳ ಕುರಿತ ಅತ್ಯುತ್ತಮವರದಿಗೆ):
ರಶ್ಮಿಭಟ್ ವರದಿಗಾರರು  ದಿ ಹಿಂದೂ ಪತ್ರಿಕೆ

ಮಂಡಿಬೆಲೆ ರಾಜಣ್ಣ ಪ್ರಶಸ್ತಿ(ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ ) : ಎಂ.ಎಸ್ ಬಸವಣ್ಣ ಮೈಸೂರು , ಚಂದ್ರಮೋಹನ್ ಕುಶಾಲನಗರ

ಆರ್. ಎಲ್ ವಾಸುದೇವರಾವ್ ಪ್ರಶಸ್ತಿ ( ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ ):ಶಿವಮೂರ್ತಿ ಜಪ್ತಿಮಠ, ವರದಿಗಾರರು ವಿಜಯಕರ್ನಾಟಕ ಮೈಸೂರು

ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ( ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ-ಗತಿ ಕುರಿತ ವರದಿ):ಹೇಮಾವೆಂಕಟ್ ಪ್ರಜಾವಾಣಿ

ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ( ಗ್ರಾಮೀಣ ಜನಜೀವನ ಕುರಿತ ಅತ್ಯುತ್ತಮ ವರದಿ): ಬಸವರಾಜ್ ಹವಲ್ದಾರ್ , ಪ್ರಜಾವಾಣಿ

ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ(ಬೆಂಗಳೂರು ಜಿಲ್ಲೆ ಅಭಿವೃದ್ದಿ ಕುರಿತು):ಗಿರೀಶ್ ಗರಗ ವಿಜಯವಾಣಿ ,
ನಾಗರತ್ನ , ವಿಶ್ವವಾಣಿ

ಯಜಮಾನ್ ಟಿ ನಾರಾಯಣಪ್ಪ ಸ್ಮಾರಕ ಪ್ರಶಸ್ತಿ(ಅತ್ಯುತ್ತಮ ಕೃಷಿವರದಿ): ಶ್ರೀಮತಿ ಕೀರ್ತನ ಸಂಯುಕ್ತಕರ್ನಾಟಕ ಬೆಳಗಾವಿ.

ಕೀರ್ತಿ ಪ್ರಸಾದ್ ಉದಯವಾಣಿ

ಹಾಸ್ಯ ಚಕ್ರವರ್ತಿ ನಾಡಿಗೆರ ಕೃಷ್ಣರಾಯರ ಸ್ಮಾರಕ ಪ್ರಶಸ್ತಿ( ಅತ್ಯುತ್ತಮ ಲೇಖನಕ್ಕೆ):
ಝಕ್ರೀಯಾ, ಸುವರ್ಣಟೈಮ್ಸ್ ಆಫ್ ಕರ್ನಾಟಕ
ಸಿ.ಎಸ್ ಬೋಪಯ್ಯ  ಹಿರಿಯ ಪತ್ರಕರ್ತರು

ಅಪ್ಪಾಜಿ ಸ್ಮಾರಕ ಪ್ರಶಸ್ತಿ(ಅತ್ಯುತ್ತಮ ಚಲನ ಚಿತ್ರ ವರದಿಗೆ); ಶ್ರೀಶರಣುಹೊನ್ನೂರು ವಿಜಯ ಕರ್ನಾಟಕ ಬೆಂಗಳೂರು.

*ಕರ್ನಾಟಕ ಕಾರ‍್ಯನಿರತ ಪತ್ರಕರ್ತರ ಸಂಘದ ೩೩ನೇ  ರಾಜ್ಯ ಪತ್ರಕರ್ತರ ಸಮ್ಮೇಳನವು ಜ.೨೦ ಮತ್ತು ೨೧ ರಂದು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯಲಿದ್ದು,  ಈ ಸಂದರ್ಭದಲ್ಲಿ ಪ್ರಶಸ್ತಿಗಳನ್ನು  ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎನ್.ರಾಜು ತಿಳಿಸಿದ್ದಾರೆ

Leave a Reply

Your email address will not be published. Required fields are marked *


CAPTCHA Image
Reload Image