One N Only Exclusive Cine Portal

ಡಿಸೈನರ್ ಸಾಯಿ ರಿಟೇರ್ಮೆಂಟು!


ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಪುತ್ರ ಹಾಗೂ ಕನ್ನಡ ಚಿತ್ರರಂಗದ ಪ್ರತಿಭಾವಂತ ಪಬ್ಲಿಸಿಟಿ ಡಿಸೈನರ್ ಕೂಡಾ ಅಗಿರುವವರು ಸಾಯಿ.


ಸಾಮಾನ್ಯವಾಗಿ ಕ್ರಿಯಾಶೀಲತೆಯೆಲ್ಲಾ ಬಸಿದುಹೋದಮೇಲೆ ಮಾಡೋ ಕೆಲಸಗಳಿಂದ ನಿವೃತ್ತಿ ಘೋಷಿಸಿಕೊಳ್ಳುವುದು ಸಿನಿಮಾದವರ ವರಸೆ. ಆದರೆ ಸಾಯಿ ಕೈತುಂಬಾ ಕೆಲಸಗಳಿದ್ದು, ಇನ್ನೂ ಸಾಕಷ್ಟು ಹೊಸತನ್ನು ನೀಡೋ ಚೈತನ್ಯವಿರುವಾಗಲೇ ತಮ್ಮ ವಿನ್ಯಾಸ ವೃತ್ತಿಗೆ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಪೋಸ್ಟರ್ ಡಿಸೈನ್ ಮಾಡೋ ಕೆಲಸದೊಂದಿಗೆ ಸಿನಿಮಾ ’ಕ’ ಸಿನಿಮಾದ ಮೂಲಕ ನಿರ್ದೇಶನದ ಕೆಲಸಕ್ಕೂ ಇಳಿದಿದ್ದರು. ಜೊತೆಗೆ ಟೈಗರ್ ಗಲ್ಲಿ, ಡೆಡ್ಲಿ-೨ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನೂ ನಿಭಾಯಿಸಿದ್ದಾರೆ. ಇದೆಲ್ಲದರ ನಡುವೆ ಸಾಯಿ ಬಹುಶಃ ಫುಲ್ ಟೈಮ್ ಡೈರೆಕ್ಟರ್ ಕ್ಯಾಪ್ ಧರಿಸೋ ಮನಸ್ಸು ಮಾಡಿದಂತಿದೆ.


ಯಾವುದೇ ಕೆಲಸ ಖುಷಿ ಕೊಡೋದು ಅದು ವಾಕರಿಕೆ ತರಿಸದಿದ್ದಾಗ ಮಾತ್ರ. ಹೊಸದೇನನ್ನೋ ಕಟ್ಟಿಕೊಡೋ ಕನಸಿಟ್ಟುಕೊಂಡು ಇನ್ನೆಲ್ಲೋ ಕಂಪ್ಯೂಟರಿನ ಮುಂದೆ ಕೂತು ಡಿಸೈನು ರೂಪಿಸುತ್ತಾ ಮತ್ಯಾರದ್ದೋ ಕಲ್ಪನೆಗೆ ಜೀವ ಕೊಡೋ ಕೆಲಸ ಸಾಯಿ ಅವರಿಗೆ ಬೋರು ಹೊಡೆಸಿರಬಹುದು.


ಅಂದಹಾಗೆ ಸಾಯಿ ಡಿಸೈನ್ ಮಾಡುತ್ತಿರುವ ಕೊನೇ ಚಿತ್ರ ರ‍್ಯಾಂಬೋ-೨. ಸಾಯಿಯೇನೋ ತಾವು ಈ ಕೆಲಸ ನಿಲ್ಲಿಸಬೇಕು ಅಂತಾ ತೀರ್ಮಾನಿಸಿದ್ದಾರೆ. ಆದರೆ ನಟ ಶರಣ್ ‘ಸಾಯಿ ಡಿಸೈನ್ ಮಾಡೋದು ಬಿಟ್ಟರೂ ನಾನು ಅವರನ್ನು ಬಿಡಲ್ಲ. ಅವರು ಎಷ್ಟೇ ದೊಡ್ಡ ಡೈರೆಕ್ಟರ್ ಆದರೂ ಕೂಡಾ ನಾನು ಹೋಗಿ ಅವರ ಬಳಿ ನನ್ನ ಸಿನಿಮಾಗಳಿಗೆ ಡಿಸೈನ್ ಮಾಡಿಸಿಕೊಳ್ತೀನಿ. ಅವರನ್ನು ಬಿಟ್ಟು ಬೇರೆ ಡಿಸೈನರುಗಳು ನನಗೆ ಸರಿಹೊಂದೋದಿಲ್ಲ.’ ಅಂತಾ ಹೇಳಿದ್ದಾರೆ. ಯಾಕೆಂದರೆ ಶರಣ್ ಪೂರ್ಣಪ್ರಮಾಣದಲ್ಲಿ ಹೀರೋ ಆದ ರ‍್ಯಾಂಬೋ ಇಂದ ಹಿಡಿದು ಅವರು ನಾಯಕನಾಗಿ ಕಾಣಿಸಿಕೊಂಡ ಬಹುತೇಕ ಚಿತ್ರಗಳಿಗೆ ಸಾಯಿಯವರೇ ಪೋಸ್ಟರ್ ಮೆರುಗು ನೀಡಿದ್ದರು.
ಅದೇನೇ ಇರಲಿ, ಕೆಲಸದಲ್ಲಿ ಶ್ರದ್ದೆಯ ಜೊತೆಗೆ ಸದಾ ಹೊಸತನಕ್ಕಾಗಿ ತುಡಿಯುವ ಸಾಯಿಯ ಕೆರಿಯರ್ ಮತ್ತಷ್ಟು ಕಲರ್ ಫುಲ್ ಆಗಿರಲಿ..

Leave a Reply

Your email address will not be published. Required fields are marked *


CAPTCHA Image
Reload Image