Connect with us

cbn

ಏಪ್ರಿಲ್ 27ರಂದು ಹಾರಾಡಲಿದೆ ಅಶೋಕ್ ಕಶ್ಯಪ್ ಧ್ವಜ!

Published

on

ಛಾಯಾಗ್ರಾಹಕರಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿವಾಯುಗುತ್ತಲೇ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವವರು ಅಶೋಕ್ ಕಶ್ಯಪ್. ಕ್ಯಾಮೆರಾ ಕೈಚಳಕದಿಂದ ಗಮನ ಸೆಳೆಯುತ್ತಲೇ ನಿರ್ದೇಶನಕ್ಕೂ ಸೈ ಎಂದು ಸಾಬೀತು ಪಡಿಸಿರುವ ಕಶ್ಯಪ್ ನಿರ್ದೇಶನದ ಹೊಸಾ ಚಿತ್ರ ‘ಧ್ವಜ’. ಈ ಚಿತ್ರ ಇದೇ ತಿಂಗಳ ೨೭ರಂದು ತೆರೆ ಕಾಣಲು ಮುಹೂರ್ತ ನಿಗಧಿಯಾಗಿದೆ.

ರೀಮೇಕ್ ಬಗ್ಗೆ ಅದೇನೇ ತಕರಾರುಗಳಿದ್ದರೂ ಬೇರೆ ಭಾಷೆಗಳ ಒಳ್ಳೆ ಚಿತ್ರಗಳು ಇಲ್ಲಿನ ನೇಟಿವಿಟಿಗೆ ತಕ್ಕುದಾಗಿ ರೀಮೇಕಾದರೆ ತಪ್ಪೇನಿಲ್ಲ ಎಂಬ ವಾದವೂ ಇದೆ. ಅದಕ್ಕೆ ಸಾಕ್ಷೀಕರಿಸುವಂತೆ ತೆರೆ ಕಾಣಲು ಸಜ್ಜಾಗಿರುವ ಚಿತ್ರ ಧ್ವಜ. ಅಂದಹಾಗೆ ಇದು ತಮಿಳಿನ ಸೂಪರ್ ಹಿಟ್ ಚಿತ್ರ ‘ಕೊಡಿ’ಯ ರೀಮೇಕ್. ಆದರೆ ವರ್ಷಾಂತರಗಳಿಂದಲೂ ಸಿನಿಮಾ ಸಾಹಚರ್ಯದಲ್ಲಿರುವ ಅಶೋಕ್ ಕಶ್ಯಪ್ ಅವರು ಆ ಕಥೆಯನ್ನು ಇಲ್ಲಿನ ನೇಟಿವಿಟಿಗೆ ತಕ್ಕುದಾಗಿ ನಿರ್ದೇಶನ ಮಾಡಿ, ಛಾಯಾಗ್ರಹಣವನ್ನೂ ಅವರೇ ನಿರ್ವಹಿಸಿದ್ದಾರೆ.

ರಾಜಕೀಯ ಮೆಲೋಡ್ರಾಮದ ರೋಚಕ ಕಥೆ ಹೊಂದಿದ್ದ ತಮಿಳಿನ ಕೊಡಿ ಚಿತ್ರದಲ್ಲಿ ಧನುಷ್ ನಾಯಕನಾಗಿದ್ದರು. ಆ ಪಾತ್ರವನ್ನಿಲ್ಲಿ ಹೊಸಾ ಹುಡುಗ ರವಿ ನಿಭಾಯಿಸಿದ್ದಾರೆ. ಮಂಡ್ಯ ಮೂಲದ ರವಿ ಈ ಹಿಂದೆ ಉಪ್ಪಿ ೨ ಚಿತ್ರದಲ್ಲಿಯೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದವರು. ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸುವ ಹಠ ಹೊತ್ತಿರುವ ರವಿ ತಾವೇ ಈ ಚಿತ್ರವನ್ನು ನಿರ್ಮಾಣ ಮಾಡಿ ನಾಯಕನಾಗಿ ನಟಿಸಿದ್ದಾರೆ.

ಅಂದ ಹಾಗೆ ಮೊದಲ ಚಿತ್ರವಾದರೂ ರವಿ ಅವರದ್ದಿಲ್ಲಿ ಪಕ್ಕಾ ಸವಾಲಿನ ಪಾತ್ರ. ಅವರು ಅಣ್ಣ ಮತ್ತು ತಮ್ಮನ ಎರಡು ಶೇಡ್‌ಗಳ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎರಡಕ್ಕೆ ಬೇಕಾದ ದೈಹಿಕ ಬದಲಾವಣೆಗಳನ್ನೂ ಕೂಡಾ ಕಷ್ಟಪಟ್ಟು ಮಾಡಿಕೊಂಡಿದ್ದಾರೆ. ತಮಿಳಿನಲ್ಲಿ ತ್ರಿಶಾ ರಾಜಕಾರಣಿಯಾಗಿ ಬೋಲ್ಡ್ ಆಗಿ ನಟಿಸಿದ್ದರಲ್ಲಾ? ಆ ಪಾತ್ರವನ್ನು ಕನ್ನಡದಲ್ಲಿ ಪ್ರಿಯಾಮಣಿ ನಿಭಾಯಿಸಿದ್ದಾರೆ. ಅವರ ಪಾತ್ರಕ್ಕಿಲ್ಲಿ ರಮ್ಯಾ ಎಂಬ ಹೆಸರಿದೆ. ಆದರೆ ಆ ಪಾತ್ರಕ್ಕೂ, ನಟಿ ಕಂ ರಾಜಕಾರಣಿ ರಮ್ಯಾ ಲೈಫ್ ಸ್ಟೋರಿಗೂ ಯಾವ ಸಂಬಂಧವೂ ಇಲ್ಲ ಅಂತ ಈಗಾಗಲೇ ಚಿತ್ರ ತಂಡ ಸ್ಪಷ್ಟೀಕರಣ ನೀಡಿದೆ.

ಈ ಹಿಂದೆ ನಂದಗೋಕುಲ ಎಂಬ ಧಾರಾವಾಹಿಯನ್ನು ನಿರ್ದೇಶನ ಮಾಡಿ ಯಶ್ ಮತ್ತು ರಾಧಿಕಾ ಪಂಡಿತ್ ಅವರನ್ನು ಕಿರುತೆರೆಗೆ ಪರಿಚಯ ಮಾಡಿದ್ದವರು ಅಶೋಕ್ ಕಶ್ಯಪ್. ಆ ನಂತರ ಐವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಲೇ ನಿರ್ದೇಶನದಲ್ಲಿಯೂ ತೊಡಗಿಸಿಕೊಂಡಿದ್ದ ಅವರ ಮುಂದೆ ಎರಡು ಮರಾಠಿ ಚಿತ್ರಗಳಿವೆ. ಅದಾದ ನಂತರ ಕನ್ನಡದಲ್ಲಿ ಚಿತ್ರ ನಿರ್ದೇಶನ ಮಾಡುವ ಯೋಜನೆ ಹಾಕಿಕೊಂಡಿದ್ದಾರಂತೆ. ಧ್ವಜ ಚಿತ್ರವನ್ನು ಕನ್ನಡದ ಮಟ್ಟಿಗೆ ಹೊಸಾ ಶೈಲಿಯಲ್ಲಿ ಮಾಡಿರೋ ಭರವಸೆ ಹೊಂದಿರುವ ಅಶೋಕ್ ಕಶ್ಯಪ್ ಮತ್ತು ಚಿತ್ರ ತಂಡ ಭರಪೂರ ಗೆಲುವೊಂದರ ನಿರೀಕ್ಷೆಯಲ್ಲಿದೆ. ಪ್ರೇಕ್ಷಕರೂ ಕೂಡಾ ಡಿಫರೆಂಟಾದ ಪೋಸ್ಟರುಗಳು, ಚೆಂದದ ಟ್ರೈಲರ್ ಮತ್ತು ಹಾಡುಗಳಿಂದಾಗಿ ಈ ಚಿತ್ರದ ಬಗ್ಗೆ ಕುತೂಹಲ ಹೊಂದಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ಧ್ವಜ ಚಿತ್ರದ ಹಾಡುಗಳೂ ಕೂಡಾ ಜನ ಮನ ಗೆದ್ದಿವೆ. ಈ ಹಿಂದೆ ರಜನೀಕಾಂತ್ ಅಭಿನಯದ ಕಬಾಲಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ಸಂತೋಷ್ ನಾರಾಯಣ್ ಅವರು ಈ ಚಿತ್ರದ ಹಾಡುಗಳಿಗೂ ಸಂಗೀತ ನೀಡಿರುವುದು ವಿಶೇಷ.

cbn

ಕುಮಾರಿ 21 ಎಫ್ : ಈ ಜನರೇಷನ್ನಿನ ಪ್ರಾತಿನಿಧಿಕ ಪ್ರೇಮ ಕಥನ!

Published

on

ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಣಾಮ್ ಮೊದಲ ಬಾರಿ ನಾಯಕನಾಗುತ್ತಿರೋ ಚಿತ್ರ ಕುಮಾರಿ೨೧ ಎಫ್. ಹೇಳಿಕೇಳಿ ಡೈನಾಮಿಕ್ ಸ್ಟಾರ್ ಸುಪುತ್ರ. ಹಾಗೆಂದ ಮೇಲೆ ಆಕ್ಷನ್ ಚಿತ್ರದ ಮೂಲಕವೇ ಪ್ರಣಾಮ್ ಲಾಂಚ್ ಆಗಬೇಕೆಂದು ಹಿತೈಶಿಗಳು ಬಯಸಿದ್ದರೆ ತಪ್ಪೇನಿಲ್ಲ. ಆದರೆ ಸಾದಾ ಸೀದ ಕಥೆಯೊಂದರ ಮೂಲಕ ಎಂಟ್ರಿ ಕೊಟ್ಟರೂ ಪ್ರಣಾಮ್ ಎಂಟ್ರಿ ಭರ್ಜರಿಯಾಗಿಯೇ ಸೌಂಡು ಮಾಡುತ್ತಿದೆ!
ಟೈಟಲ್ಲೇ ಕುತೂಹಲಕಾರಿಯಾದ್ದರಿಂದ ಈ ಚಿತ್ರದ ಕಥೆಯೇನೆಂದು ಕೆದಕಿದರೂ ಕೂಡಾ ಚಿತ್ರ ತಂಡ ಈ ವರೆಗೂ ಎಲ್ಲವನ್ನೂ ಗೌಪ್ಯವಾಗಿಟ್ಟಿದೆ. ಜಾಹೀರಾಗಿರೋದು ವಿದೇಶದ ಕ್ರೂಸರ್‌ನ ರೆಸ್ಟಾರಾಂಟಿನಲ್ಲಿ ಶೆಪ್ ಆಗೋ ಕನಸು ಹೊತ್ತ ಹುಡುಗ ಮತ್ತು ಆತನ ಬದುಕಿಗೆ ಪ್ರವೇಶವಾಗೋ ಬಿಂದಾಸ್ ಹುಡುಗಿಯ ಸುತ್ತಾ ಕಥೆ ನಡೆಯುತ್ತದೆ ಎಂಬುದು ಮಾತ್ರ!
ಆದರೆ ಈ ಚಿತ್ರ ಈ ಜನರೇಷನ್ನಿನ ಮನೋ ತುಮುಲಗಳನ್ನೊಳಗೊಂಡ ಯೂಥ್‌ಫುಲ್ ಕಥಾನಕ ಹೊಂದಿರೋದಂತೂ ನಿಜ. ಇದರಲ್ಲಿ ಸಾದಾ ಸೀದ ಪಾತ್ರವಾದರೂ ಕೂಡಾ ಪ್ರಣಾಮ್ ನಟನೆಗೆ ಹೆಜ್ಜೆ ಹೆಜ್ಜೆಗೂ ಸವಾಲಿತ್ತಂತೆ. ತಾನೋರ್ವ ನಟನಾಗಿ ರೂಪುಗೊಳ್ಳೋದೇ ಮುಖ್ಯ ಎಂಬ ಮನಸ್ಥಿತಿ ಹೊಂದಿರೋ ಪ್ರಣಾಮ್ ಅಚ್ಚುಕಟ್ಟಾಗಿ ನಟಿಸಿದ್ದಾರಂತೆ.
ಅಷ್ಟಕ್ಕೂ ಪ್ರಣಾಮ್‌ಗೆ ಪರ್ಫೆಕ್ಟ್ ಆದ ಎಂಟ್ರಿಯ ಕನಸಿಲ್ಲದೇ ಹೋಗಿದ್ದಿದ್ದರೆ ಅವರು ಯಾವತ್ತೋ ನಾಯಕ ನಟನಾಗುತ್ತಿದ್ದರು. ತಂದೆ ದೇವರಾಜ್ ಕೂಡಾ ಮಗ ಹೀರೋ ಆಗಲಿ ಎಂದೇ ಬಯಸಿದ್ದರಿಂದ ಅದೇನೂ ಕಷ್ಟದ ಮಾತಾಗಿರಲಿಲ್ಲ. ಈ ಹಿಂದೆ ಒಂದು ಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದ್ದ ಪ್ರಣಾಮ್ ನಾಯಕನಾಗಲು ಅರ್ಜೆಂಟು ಮಾಡಲಿಲ್ಲ. ಆದರೆ ಓದು ಮುಗಿಸಿದ ಘಳಿಗೆಯಲ್ಲಿಯೇ ಸಿಕ್ಕ ಈ ಅವಕಾಶವನ್ನವರು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆಂಬುದು ಚಿತ್ರ ತಂಡದ ಅಭಿಪ್ರಾಯ.
ಶ್ರೀಮಾನ್ ವೇಮುಲ ನಿರ್ದೇಶನದ ಈ ಚಿತ್ರ ಈಗಾಗಲೇ ಟ್ರೈಲರ್‌ನಿಂದ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಕ್ರೇಜ್ ಹರಡಿದೆ. ದೇವರಾಜ್ ಕನ್ನಡ ಚಿತ್ರರಂಗದ ಪ್ರೀತಿಯ ನಟ. ಅವರ ಮಗನ ಮೊದಲ ಚಿತ್ರದ ಮೇಲೆ ಪ್ರೇಕ್ಷಕರೂ ಕೂಡಾ ಕುತೂಹಲದ ಕಣ್ಣಿಟ್ಟು ಕಾಯುತ್ತಿದ್ದಾರೆ.

Continue Reading

cbn

ನಾಳೆ ಪತಿಬೇಕು ಡಾಟ್‌ಕಾಮ್ ಚಿತ್ರದ ಟ್ರೈಲರ್ ಬರುತ್ತೆ!

Published

on

ಶೀತಲ್ ಶಿಟ್ಟಿ ನಟಿಸಿರುವ ಪತಿ ಬೇಕು ಡಾಟ್ ಕಾಮ್ ಚಿತ್ರ ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಕಾರಣದಿಂದಲೇ ಜ್ವರವೇರಿಸಿತ್ತು. ಡಿಫರೆಂಟಾದ ಶೀರ್ಷಿಕೆ ಮತ್ತು ಆಗಾಗ ಜಾಹೀರಾಗುತ್ತಿದ್ದ ಅಂಥಾದ್ದೇ ಪೋಸ್ಟರುಗಳಿಂದ ಪ್ರೇಕ್ಷಕರನ್ನು ಸದಾ ತನ್ನ ಮೇಲೆಯೇ ದೃಷ್ಟಿಯಿಡುವಂತೆ ಮಾಡುತ್ತಾ ಬಂದಿದ್ದ ಈ ಚಿತ್ರದ ಟ್ರೈಲರ್ ನಾಳೆ ಬಿಡುಗಡೆಯಾಗಲಿದೆ.

ಪತಿಬೇಕು ಡಾಟ್ ಕಾಮ್ ಚಿತ್ರದ ಈ ಟ್ರೈಲರ್ ಬಿಡುಗಡೆ ಮಾಡಲಿರುವವರು ಕಿಚ್ಚಾ ಸುದೀಪ್. ನಾಳೆ ಸಂಜೆ ಆರು ಘಂಟೆಯ ಹೊತ್ತಿಗೆಲ್ಲ ಸುದೀಪ್ ಈ ಟ್ರೈಲರ್ ಅನ್ನು ಅನಾವರಣಗೊಳಿಸಲಿದ್ದಾರೆ.

ರಾಕೇಶ್ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಚಿತ್ರೀಕರಣ ಶುರುವಾದಂದಿನಿಂದಲೇ ಸದ್ದು ಮಾಡಲಾರಂಭಿಸಿತ್ತು. ಇದೊಂದು ಗಂಭೀರವಾದ ಕಥಾನಕ ಹೊಂದಿದ್ದರೂ ಹಾಸ್ಯ ಪ್ರಧಾನ ಚಿತ್ರ. ಮಧ್ಯಮವರ್ಗದ ಪಡಿಪಾಟಲುಗಳಿಗೆ ಹತ್ತಿರಾದ ಕಥೆ ಹೊಂದಿರೋ ಈ ಸಿನಿಮಾದಲ್ಲಿ ವಯಸ್ಸು ಮೂವತ್ತು ದಾಟಿದ ಮೇಲೆ ಮದುವೆಯಾಗಲು ಹುಡುಗನ ಹುಡುಕಾಟಕ್ಕಿಳಿಯೋ ಹೆಣ್ಣು ಮಗಳಾಗಿ ಶೀತಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಹೆಣ್ಣುಮಕ್ಕಳಿಗೆ ಮೂವತ್ತು ವರ್ಷ ಆದ ನಂತರ ಮದುವೆ ಮಾಡಲು ಮುಂದಾಗೋದರ ಕಷ್ಟ ಅನುಭವಿಸಿದವರಿಗೇ ಮಾತ್ರ ಗೊತ್ತಿರುತ್ತದೆ. ಅದರಲ್ಲಿಯೂ ಮಧ್ಯಮ ವರ್ಗದವರಾದರಂತೂ ಈ ಬಾಧೆ ತುಸು ಹೆಚ್ಚೇ. ಇಂಥಾ ಪಾತ್ರದ ಮೂಲಕ ಶೀತಲ್ ಪ್ರೇಕ್ಷಕರನ್ನು ಸೆಳೆಯಲು ರೆಡಿಯಾಗಿದ್ದಾರೆ.

ಇದೀಗ ಖುದ್ದು ಕಿಚ್ಚಾ ಸುದೀಪ್ ಅವರೇ ಟ್ರೈಲರ್ ಬಿಡುಗಡೆ ಮಾಡುತ್ತಿರೋದರಿಂದ ಕುತೂಹಲದ ಜ್ವರ ಮತ್ತೆ ಏರಿಕೊಂಡಿದೆ. ಅಬ್ಬರದೊಂದಿಗೇ ಈ ಚಿತ್ರವನ್ನು ಆರಂಭಿಸಿ ತಣ್ಣಗೆ ಚಿತ್ರೀಕರಣವಾಗುವಂತೆ ನೋಡಿಕೊಂಡಿರುವವರು ನಿರ್ಮಾಪಕ ರಾಕೇಶ್. ಅವರೀಗ ಚಿತ್ರಕ್ಕೆ ಸೆನ್ಸಾರ್ ಆದ ಮಾರನೇ ದಿನವೇ ಟ್ರೈಲರ್ ಬಿಡುಗಡೆಗೆ ಮುಹೂರ್ತವಿಟ್ಟಿದ್ದಾರೆ. ಅಂದಹಾಗೆ ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾಗೆ ಯಾವುದೇ ಕತ್ತರಿ ಪ್ರಯೋಗವಾಗದೆ ಯು/ಎ ಸರ್ಟಿಫಿಕೇಟ್ ದೊರೆತಿದೆ.

Continue Reading

cbn

ಯಶಸ್ಸಿನತ್ತ ಡಬಲ್ ಇಂಜನ್ ಪಯಣ!

Published

on

ಚಂದ್ರಮೋಹನ್ ನಿರ್ದೇಶನದ ಡಬಲ್ ಇಂಜನ್ ಚಿತ್ರದ ಸವಾರಿ ರಾಜ್ಯಾಂದಂತ ಅಡೆತಡೆಯಿಲ್ಲದೆ ಮುಂದುವರೆಯುತ್ತಿದೆ. ಎಸ್ ಆರ್ ಎಸ್ ಗ್ರೂಪ್ಸ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಒಂದೇ ಒಂದು ಟ್ರೈಲರ್ ಮೂಲಕ ಸೃಷ್ಟಿಸಿದ್ದ ಸಂಚಲನ ಅಚ್ಚರಿದಾಯಕವಾದದ್ದು. ಈ ಟ್ರೈಲರಿನ ಖದರ್ ಕಂಡೇ ಅನೇಕರು ಗೆಲುವಿನ ಭವಿಷ್ಯ ನುಡಿದಿದ್ದರು. ಅದೀಗ ನಿಜವಾಗಿದೆ!

ಟ್ರೈಲರ್‌ನಲ್ಲಿನ ನವಿರಾದ ಡಬಲ್ ಮೀನಿಂಗ್ ಚಮಕ್‌ನಿಂದಲೇ ಸದ್ದು ಮಾಡಿದ್ದ ಡಬಲ್ ಇಂಜಿನ್‌ನೊಳಗೆ ಬೇರೇನೋ ಇದೆ ಎಂಬ ಸೂಚನೆಯನ್ನು ಆರಂಭದಲ್ಲಿಯೇ ನಿರ್ದೇಶಕ ಚಂದ್ರಮೋಹನ್ ಕೊಟ್ಟಿದ್ದರು. ಅಂಥಾ ಕುತೂಹಲಗಳೇ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆತರುತ್ತಿವೆ. ಹಾಗೆ ಬಂದು ಡಬಲ್ ಇಂಜನ್ ಚಿತ್ರ ನೋಡಿದವರಿಗೆಲ್ಲ ಒಳಗಿರೋ ಡಿಫರೆಂಟಾದ ಸರಕು ಇಷ್ಟವಾಗಿದೆ.

ಚಿತ್ರವೊಂದು ಪ್ರೇಕ್ಷಕರ ನಡುವೆ ಹರಡಿಕೊಳ್ಳುವ ಬಾಯಿ ಮಾತಿನ ಪ್ರಚಾರದಿಂದಲೇ ಗೆಲುವಿನತ್ತ ದಾಪುಗಾಲಿಡುತ್ತದೆ. ಡಬಲ್ ಇಂಜನ್ ನೋಡಿದ ಪ್ರೇಕ್ಷಕರೆಲ್ಲರ ಕಡೆಯಿಂದ ಮೊದಲ ದಿನವೇ ಒಳ್ಳೆ ಮಾತುಗಳು ಕೇಳಿ ಬಂದಿದ್ದವು. ಅದರ ಫಲವಾಗಿಯೇ ಡಬಲ್ ಇಂಜಿನ್ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ನಿನಲ್ಲಿಯೂ ಮುಂದಿರೋ ಡಬಲ್ ಇಂಜಿನ್ ನಿರ್ಮಾಪಕರಿಗೂ ತೃಪ್ತಿಯ ಕಳೆ ತುಂಬಿದೆ!

ಎಣಿಸಿದಂತೆಯೇ ಚಿಕ್ಕಣ್ಣ, ಅಶೋಕ್, ಪ್ರಭು ಮತ್ತು ಸುಮನ್ ರಂಗನಾಥ್ ಕಾಂಬಿನೇಷನ್ ಕಮಾಲ್ ಸೃಷ್ಟಿಸಿದೆ. ಗಂಭೀರವಾದ ವಿಚಾರವನ್ನೂ ಕೂಡಾ ಹಾಸ್ಯದ ಮೂಲಕವೇ ದಾಟಿಸುವ ಕಲಾತ್ಮಕ ಕುಸುರಿಯಿಂದಲೇ ಡಬಲ್ ಇಂಜಿನ್ ಪ್ರೇಕ್ಷಕರ ಮನಗೆದ್ದಿದೆ.

Continue Reading

Trending

Copyright © 2017 Zox News Theme. Theme by MVP Themes, powered by WordPress.