One N Only Exclusive Cine Portal

ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಮುಕ್ತಾಯ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಳಗ ಡಿ ಕಂಪೆನಿ ಆಯೋಜಿಸಿದ್ದ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡಿದೆ. ಖುದ್ದು ದರ್ಶನ್ ಅವರೇ ಆಗಮಿಸಿ ಕ್ರಿಕೆಟ್ ಆಡಿ ಅಭಿಮಾನಿಗಳ ಜೊತೆ ಬೆರೆತಿರೋದಲ್ಲದೆ ಈ ಟೂರ್ನಿಯನ್ನು ಆಯೋಜಿಸಿದ ಅಭಿಮಾನಿ ಬಳಗವನ್ನು ಮೆಚ್ಚಿಕೊಂಡಿದ್ದಾರೆ.

ಬೆಂಗಳೂರಿನ ಕೆಂಗೇರಿಯಲ್ಲಿರುವ ಎಸ್‌ಜೆಬಿಐಟಿ ಫುಟ್‌ಬಾಲ್ ಮತ್ತು ಕ್ರಿಕೆಟ್ ಕ್ರೀಡಾಂಗಣದಲ್ಲಿ ನೆರವೇರಿದ್ದ ಎರಡು ದಿನಗಳ ಈ ಕ್ರಿಕೆಟ್ ಪಂದ್ಯಾಟ ನೆನ್ನೆ ಮುಕ್ತಾಯಗೊಂಡಿದೆ. ಈ ಕ್ರಿಕೆಟ್ ಸೆಣೆಸಾಟದಲ್ಲಿ ಗಜಪಡೆ ಗ್ಲಾಡಿಯೇಟರ್‍ಸ್ ಕೆಂಗೇರಿ ತಂಡ ಜಯಭೇರಿ ಬಾರಿಸಿದೆ.

ಕರಿಯ ಕಿಂಗ್ಸ್, ದಾಸ ಡೇರ್‌ಡೆವಿಲ್ಸ್ ದಾವಣಗೆರೆ, ಸುಂಟರಗಾಳಿ ಡೆಸ್ಟ್ರಾಯರ್‍ಸ್ ಹುಬ್ಬಳ್ಳಿ, ಶಾಸ್ತ್ರಿ ಸ್ಟೃಕರ್‍ಸ್ ಶಿವಮೊಗ್ಗ, ನವಗ್ರಹ ಚಾಲೆಂಜರ್‍ಸ್ ನೆಲಮಂಗಲ, ಮಂಡ್ಯ ಡಿ ರೆಬೆಲ್ಸ್, ಕುರುಕ್ಷೇತ್ರ ವಾರಿಯರ್‍ಸ್ ಮೈಸೂರು, ಚಕ್ರವರ್ತಿ ಚಾಲೆಂಜರ್‍ಸ್ ಹಾಸನ್, ಗಜಪಡೆ ಗ್ಲಾಡಿಯೇಟರ್‍ಸ್ ಕೆಂಗೇರಿ, ಚಿಂಗಾರಿ ಚಾರ್ಜರ್‍ಸ್ ತಿಪಟೂರು ಸೇರಿದಂತೆ ಹತ್ತು ತಂಡಗಳು ಈ ಸೆಣೆಸಾಟದಲ್ಲಿ ಭಾಗಿಯಾಗಿದ್ದವು. ಎರಡು ದಿನಗಳ ಕಾಲ ಈ ತಂಡಗಳ ನಡುವೆ ರೋಚಕ ಪೈಪೋಟಿ ನಡೆದು ಕಡೆಗೂ ಗಜಪಡೆ ಗ್ಲಾಡಿಯೇಟರ್‍ಸ್ ಕೆಂಗೇರಿ ಗೆಲುವು ಸಾಧಿಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸದಾ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಲೇ ಆಗಾಗ ಇಂಥಾ ಪಂದ್ಯಾಟಗಳನ್ನು ಆಯೋಜಿಸಿ ರಿಲ್ಯಾಕ್ಸ್ ಮೂಡಿಗೆ ಜಾರುತ್ತಾರೆ. ಅಂತೂ ದರ್ಶನ್ ಅವರೇ ಅಭಿಮಾನಿಗಳ ಈ ಚಟುವಟಿಕೆಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. “ಡಿ ಕಂಪೆನಿ ಎಷ್ಟು ವರ್ಷಗಳ ಕಾಲ ಈ ಪಂದ್ಯವನ್ನು ಆಯೋಜಿಸುತ್ತದೋ ಅಷ್ಟೂ ವರ್ಷ ನಾನು ಬಂದೇ ಬರುತ್ತೀನಿ” ಅಂದಾ ದರ್ಶನ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ಸೃಜನ್, ಧರ್ಮ ಕೀರ್ತಿ ಮತ್ತು ಮನೋಜ್ ಒಂದೊಂದು ಪಂದ್ಯ ಆಡಿದರೆ ದರ್ಶನ್ ಅವರ ಸಹೋದರ ದಿನಕರ್, ಮಲ್ಲು ಮುಂತಾದವರು ಬಹುತೇಕ ಆಟಗಳಲ್ಲಿ ಭಾಗಿಯಾಗಿದ್ದದ್ದು ವಿಶೇಷ.

Leave a Reply

Your email address will not be published. Required fields are marked *


CAPTCHA Image
Reload Image