One N Only Exclusive Cine Portal

exclusive : ಉಪೇಂದ್ರ ‘ಮೋದಿ’ ಕತೆ ಕೇಳಿ…!


MODI-1
more-profits-in-producer-hands-udaya-prakash-b1bf162aಇನ್ನುಮುಂದೆ ಜನ ಪ್ರಧಾನಿ ನರೇಂದ್ರ ಮೋದಿಯನ್ನು ಉಪೇಂದ್ರ ಮೋದಿ ಅಂತಾರೋ? ಅಥವಾ ರಿಯಲ್ ಸ್ಟಾರ್ ಉಪ್ಪಿಯನ್ನು ನರೇಂದ್ರ ಮೋದಿ ಅಂತಾರೋ ಗೊತ್ತಿಲ್ಲ.
ಆದರೆ ಉಪೇಂದ್ರ `ಮೋದಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿರೋದು ಕನ್ಫರ್‍ಮ್ ಆಗಿದೆ. ಕಳ್ಳ, ಮಳ್ಳ, ಸುಳ್ಳ,- ಆಟೋರಾಜ, ಡೀಕೆ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಉದಯ ಪ್ರಕಾಶ್ `ಮೋದಿ’ ಸಿನಿಮಾವನ್ನು ಡೈರೆಕ್ಟ್ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೀರ್ಷಿಕೆ ರಿಜಿಸ್ಟರ್ ಕೂಡಾ ಆಗಿದೆ. ಚಿತ್ರದಲ್ಲಿ ನಾಯಕನ ಹೆಸರು ಮೋಹನ್ ದಿವಾಕರ್ ಎಂದಾಗಿದ್ದು `ಮೋದಿ’ ಅಂತಾ ಫೇಮಸ್ಸಾಗಿರ್‍ತಾರಂತೆ. Vinayaka
ಎನ್. ಕುಮಾರ್ ನಿರ್ಮಾಣದಲ್ಲಿ, ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಬೇಕಿರುವ `ಮೋದಿ’ಯ ಪೂರ್ವಭಾವಿ ಕೆಲಸಗಳು ಮುಗಿದಿವೆ. ಸ್ವತಃ ನಿರ್ದೇಶಕ ಉದಯ ಪ್ರಕಾಶ್ ಕಥೆ, ಚಿತ್ರಕತೆ ಬರೆದಿದ್ದು, ಈಗಾಗಲೇ ಸಾಕಷ್ಟು ಟೀವಿ ಶೋಗಳು ಮತ್ತು ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಪತ್ರಕರ್ತ ವಿನಾಯಕರಾಮ ಕಲಗಾರು `ಮೋದಿ’ಗೆ ಮಾತುಗಳನ್ನು ಬರೆದಿದ್ದಾರೆ.
ರಾಜಕೀಯದ ಎಳೆಯನ್ನಿಟ್ಟುಕೊಂಡು ರೂಪಿಸುತ್ತಿರುವ ಈ ಚಿತ್ರದಲ್ಲಿ `ತುಪ್ಪದ ರಾಣಿ’ ರಾಗಿಣಿ ಉಪ್ಪಿಯ ಪರ್ಸನಲ್ ಸೆಕ್ರೇಟರಿ Ragini_Dwivedi_at_South_Indian_International_Movie_Awards_2013_(crop)ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ನಿರ್ದೇಶಕ ಉದಯ ಪ್ರಕಾಶ್ ಅವರ ಕಳ್ಳಮಳ್ಳಸುಳ್ಳದ ಮುಖಾಂತರ ರಾಗಿಣಿಗೆ `ತುಪ್ಪ’ದ ಬೆಡಗಿ ಅನ್ನೋ ಹೆಸರು ಬಂದಿತ್ತು. ಬಹುಶಃ ಅದೇ ತುಪ್ಪದ ಸೆಂಟಿಮೆಂಟಿಗಾಗಿ ನಿರ್ದೇಶಕರು ಮತ್ತೆ ರಾಗಿಣಿಯ ಮೊರೆಹೋಗಿರಬಹುದು!

 ಚಿತ್ರರಂಗದ ಸಮಗ್ರ ಮಾಹಿತಿಗಾಗಿ ಲೈಕ್ ಮಾಡಿ
https://www.facebook.com/cinibuzzkannada/

Leave a Reply

Your email address will not be published. Required fields are marked *


CAPTCHA Image
Reload Image