Connect with us

ಟೀಸರ್ / ಟ್ರೇಲರ್

ಫೇಸ್ ಟು ಫೇಸ್ ಆಡಿಯೋ ರಿಲೀಸ್!

Published

on

ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಅಡೆತಡೆಯಿಲ್ಲದೆ ಮುಂದುವರೆಯುತ್ತಿದೆ. ಇದೀಗ ಹೊಸಬರೇ ಹೆಚ್ಚಾಗಿರೋ ತಂಡವೊಂದು ಫೇಸ್ ಟು ಫೇಸ್ ಎಂಬ ಚಿತ್ರವನ್ನು ರೂಪಿಸಿ ಹಾಡುಗಳನ್ನು ಅನಾವರಣಗೊಳಿಸಿದೆ. ಈ ಮೂಲಕವೇ ಸದ್ದು ಶುರುವಿಟ್ಟಿದೆ!

ಸುಮಿತ್ರಾ ಜನಾರ್ಧನ್ ನಿರ್ಮಾಣದ ಫೇಸ್ ಟು ಫೇಸ್ ಚಿತ್ರವನ್ನು ಹೊಸಾ ಹುಡುಗ ಸಂದೀಪ್ ಜನಾರ್ಧನ್ ನಿರ್ದೇಶನ ಮಾಡಿದ್ದಾರೆ. ಇದರ ಹಾಡುಗಳನ್ನು ಹಿರಿಯ ನಟ ಶಿವರಾಂ ಅವರು ಬಿಡುಗಡೆಗೊಳಿಸಿದ್ದಾರೆ. ಪ್ರಥಮ್, ಅನುಪಮಾ, ಜಯಶ್ರೀ, ಕೃಷಿ ತಾಪಂಡ ಮುಂತಾದ ಬಿಗ್ ಬಾಸ್ ಸ್ಪರ್ಧಿಗಳೂ ಈ ಸಮಾರಂಭದಲ್ಲಿ ಹಾಜರಿದ್ದು ಹೊಸಬರ ತಂಡವನ್ನು ಪ್ರೋತ್ಸಾಹಿಸಿದ್ದಾರೆ.

ಈ ಹಿಂದೆ ಉಪೇಂದ್ರ ಅವರ ಬಳಿ ಕಾರ್ಯ ನಿರ್ವಹಿಸಿದ್ದ ಸಂದೀಪ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸುಂದಸರವಾದ ಪ್ರೇಮಕಥಾನಕ ವೊಂದನ್ನು ಹಾಸ್ಯ ಬೆರೆಸಿ ಹೇಳೋ ಪ್ರಯತ್ನವನ್ನಿಲ್ಲಿ ನಿರ್ದೇಶಕರು ಮಾಡಿದ್ದಾರಂತೆ. ದೃಷ್ಯ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿಒದ್ದ ರೋಹಿತ್ ಭಾನುಪ್ರಕಾಶ್ ಈ ಚಿತ್ರದ ಮೂಲಕ ನಾಯಕನಾಗಿದ್ದಾರೆ. ಪೂರ್ವಿ ಜೋಷಿ ಹಾಗೂ ಈ ಹಿಂದೆ ಹುಲಿರಾಯ ಚಿತ್ರದ ನಾಯಕಾಯಾಗಿದ್ದ ದಿವ್ಯಾ ಉರುಡಗ ನಾಯಕಿಯರಾಗಿ ನಟಿಸಿದ್ದಾರೆ.

ಈಗಾಗಲೇ ಈ ಚಿತ್ರದ ಹಾಡುಗಳು ಕ್ರೇಜ್ ಹುಟ್ಟು ಹಾಕಿವೆ. ಈ ಮೂಲಕವೇ ಈ ಚಿತ್ರ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ. ಫೇಸ್ ಟು ಫೇಸ್ ಚಿತ್ರಕ್ಕೆ ಜಯಂತ ಕಾಯ್ಕಿಣಿ ಗೂ ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ಚೆಕ್ಕಮಗಳೂರು, ಬೆಂಗಳೂರು ಮತ್ತು ಮಂಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಿಕೊಂಡಿರೋ ಈ ಚಿತ್ರ ಶೀಘ್ರದಲ್ಲಿಯೇ ತೆರೆ ಕಾಣಲಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಟೀಸರ್ / ಟ್ರೇಲರ್

ಹೊಸಬರ ತಂಡದ ಮುಂದಿನ ಬದಲಾವಣೆ!

Published

on

ಚಿತ್ರರಂಗಕ್ಕೆ ಆಗಮಿಸುತ್ತಿರುವ ಹೊಸಬರಲ್ಲಿ ಬಹುತೇಕರು ಯಾವುದೋ ಬದಲಾವಣೆಯೊಂದರ ಸೂತ್ರ ಹಿಡಿದು ಬಂದವರಂತೆ ಕಾಣಿಸೋದರಲ್ಲಿ ವಿಶೇಷವೇನೂ ಇಲ್ಲ. ಯಾಕೆಂದರೆ ಹೀಗೆ ಬಂದ ಹೊಸಬರನೇಕರು ಗೆದ್ದಿದ್ದಾರೆ. ಸಂಚಲನವನ್ನೇ ಸೃಷ್ಟಿಸಿದ್ದಾರೆ. ಅದರಲ್ಲಿಯೂ ಕೆಲವರು ಟೈಟಲ್ ಮೂಲಕವೇ ಗಮನ ಸೆಳೆಯುತ್ತಾರೆ. ಆ ಸಾಲಿಗೆ ಸೇರುವ ಮತ್ತೊಂದು ಚಿತ್ರ `ಮುಂದಿನ ಬದಲಾವಣೆ’!

ಸಿರಪ್ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಫಣಿ ಭೂಷಣ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಪ್ರವೀಣ್ ಭೂಷಣ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಚಾರವನ್ನು ಕೆಲಸ ಕಾರ್ಯಗಳ ಮೂಲಕವೇ ಪಡೆಯಬೇಕೆಂಬ ಸೂತ್ರವನ್ನು ನೆಚ್ಚಿಕೊಂಡಿರುವ ಚಿತ್ರ ತಂಡ ಸುಸೂತ್ರವಾಗಿ ಚಿತ್ರೀಕರಣ ಮುಗಿಸಿಕೊಂಡು, ಡಬ್ಬಿಂಗ್ ಅನ್ನೂ ಪೂರೈಸಿಕೊಂಡು ಬಿಡುಗಡೆಗಾಗಿ ಮುಹೂರ್ತ ಹುಡುಕಲಾರಂಭಿಸಿದೆ.

ಪ್ರವೀಣ್ ಭೂಷಣ್, ಸಂಗೀತಾ, ಸತೀಶ್, ಪಂಚಗೌರಿ, ಆರ್ಯನ್, ಚಕ್ರವರ್ತಿ, ಮಾಲಾಶ್ರೀ ಮುಂತಾದವರ ತಾರಾಗಣ ಹೊಂದಿರೋ ಈ ಚಿತ್ರ ಯಾವ ಥರದ್ದೆಂಬ ಬಗ್ಗೆ ಪ್ರೇಕ್ಷಕರೇ ಕುತೂಹಲಗೊಂಡಿದ್ದಾರೆ. ಆದರೆ ಚಿತ್ರತಂಡ ಕಥೆಯ ಬಗೆಗಿನ ಯಾವ ಅಂಶವನ್ನು ಬಿಟ್ಟು ಕೊಡದೇ ಗೌಪ್ಯತೆ ಕಾಪಾಡಿಕೊಂಡಿದೆ. ಮುಂದಿನ ಬದಲಾವಣೆ ಎಂಬುದು ಹಾಸ್ಯ ಪ್ರಧಾನವಾದ ಚಿತ್ರ ಎಂಬುದೊಂದೇ ಸುಳಿವು ಸದ್ಯಕ್ಕೆ ಹೊರ ಬಿದ್ದಿದೆ.

ಟೈಟಲ್ಲಿನಂತೆಯೇ ಭಿನ್ನವಾದ ಕಥೆಯೊಂದನ್ನು ಈ ಚಿತ್ರ ಹೊಂದಿದೆಯಂತೆ. ಈಗ ಟೈಟಲ್ ಕಾರಣದಿಂದಲೇ ಗಮನ ಸೆಳೆದಿರೋ ಈ ಚಿತ್ರ ಮುಂದೆ ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯೊಂದಕ್ಕೆ ನಾಂದಿ ಹಾಡಲಿದೆಯಾ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.

Continue Reading

ಟೀಸರ್ / ಟ್ರೇಲರ್

ಸೂಪರ್ ಕಾಪ್‌ಗಳ ಮಹಾ ಸಂಗಮ!

Published

on

ಕರ್ನಾಟಕ ಪೊಲೀಸ್ ಇಲಾಖೆ ಎಂದೂ ಮರೆಯದೊಂದು ಮನಮಿಡಿಯುವ ಸತ್ಯ ಘಟನೆಯಾಧಾರಿತ ಚಿತ್ರ ಮಿಸ್ಸಿಂಗ್ ಬಾಯ್. ಈ ಚಿತ್ರದ ಟೀಸರ್ ಬಿಡುಗಡೆಯ ನೆಪದಲ್ಲಿ ನಿರ್ದೇಶಕ ರಘುರಾಮ್ ದಕ್ಷ ಪೊಲೀಸ್ ಅಧಿಕಾರಿಗಳ ಮಾಹಾ ಸಂಗಮಕ್ಕೆ ನಾಂದಿ ಹಾಡಿದ್ದಾರೆ. ಪೊಲೀಸ್ ಠಾಣೆಯ ಮೆಟ್ಟಿಲೇರೋ ಪ್ರತೀ ಪ್ರಕರಣಗಳೂ ಅಧಿಕಾರಿಗಳನ್ನು ರೋಷಾವೇಶದಿಂದ ಮುನ್ನುಗ್ಗುವಂತೆ ಮಾಡುತ್ತದಲ್ಲಾ? ಆದರೆ ರಘುರಾಮ್ ಚಿತ್ರವಾಗಿಸಿಕೊಂಡಿರೋ ಈ ಪ್ರಕರಣ ಮಾತ್ರ ತನಿಖಾಧಿಕಾರಿಗಳನ್ನೇ ಹನಿಗಣ್ಣಾಗುವಂತೆ ಮಾಡಿತ್ತು. ಇಂಥಾ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸೂಪ್ ಕಾಪ್‌ಗಳ ಸಮ್ಮಿಲನವಾದದ್ದು ನಿಜಕ್ಕೂ ಅರ್ಥಪೂರ್ಣ.

ಫಸ್ಟ್ ರ್‍ಯಾಂಕ್ ರಾಜು ಖ್ಯಾತಿಯ ಗುರುನಂದನ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಮಿಸ್ಸಿಂಗ್ ಬಾಯ್ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಗೊಳಿಸಿದವರು ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್. ಮುಖ್ಯ ಅತಿಥಿಗಳಾಗಿ ಆಗಮಿಸಿ, ಟೀಸರ್ ಬಿಡುಗಡೆ ಮಾಡಿ ಈ ಚಿತ್ರಕ್ಕೆ ಶುಭ ಕೋರುತ್ತಲೇ ಪೊಲೀಸ್ ಇಲಾಖೆ ಮತ್ತು ನಾಗರಿಕರ ಸಂಬಂಧಗಳ ಸೂಕ್ಷ್ಮ ಸಂಬಂಧವನ್ನು ಎಳೆ ಎಳೆಯಾಗಿ ಬಿಡಿಸಿಟ್ಟವರು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸುನೀಲ್ ಕುಮಾರ್. ಇಂಥಾದ್ದೊಂದು ಮನ ಮಿಡಿಯುವ ಕಥೆಯನ್ನು ರಘುರಾಮ್ ಅವರಿಗೆ ನೀಡಿ, ರಿಯಲ್ಲಾಗಿ ಈ ಘಟನೆಯ ತನಿಖಾಧಿಕಾರಿಯಾಗಿದ್ದ ನಿವೃತ್ತ ಡಿಸಿಪಿ ಲವಕುಮಾರ್ ಸನ್ಮಾನಿತರಾದ ಘಳಿಗೆ… ಒಟ್ಟಾರೆಯಾಗಿ ರಘುರಾಮ್ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ವಿಭಿನ್ನವಾಗಿಯೇ ಆಯೋಜಿಸಿದ್ದರು.

ಈ ಹಿಂದೆ ಮಿಸ್ಸಿಂಗ್ ಬಾಯ್ ಚಿತ್ರದ ಬಗ್ಗೆ ಬಿಬಿ ಅಶೋಕ್ ಕುಮಾರ್ ಸೇರಿದಂತೆ ದಕ್ಷ ಅಧಿಕಾರಿಗಳೆಲ್ಲ ಹಂಚಿಕೊಂಡಿದ್ದ ಅಭಿಪ್ರಾಯಗಳನ್ನೂ ಮತ್ತೆ ಅನಾವರಣಗೊಳಿಸಲಾಯಿತು. ಜೊತೆಗೆ ಒಂದು ಅಚ್ಚುಕಟ್ಟಾದ ಮೇಕಿಂಗ್ ವೀಡಿಯೋವನ್ನೂ ಕೂಡಾ ರಘುರಾಮ್ ಅನಾವರಣಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಂಥಾದದ್ದೊಂದು ಮನ ಮಿಡಿಯುವ ಪ್ರಕರಣವನ್ನು ದಕ್ಷತೆಯಿಂದಲೇ ಹ್ಯಾಂಡಲ್ ಮಾಡಿದ್ದ ನಿವೃತ್ತ ಡಿಸಿಪಿ ಲವಕುಮಾರ್ ಅವರನ್ನೂ ಕೂಡಾ ಸನ್ಮಾನಿಸಲಾಯಿತು. ಇದೇ ವೇದಿಕೆಯಲ್ಲಿ ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಶುಭ ಕೋರಿದ ನಗರ ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಅವರು ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕರ ಹಿತಕ್ಕಾಗಿಯೇ ದಿನದ ಇಪ್ಪತ್ನಾಲಕ್ಕು ಘಂಟೆ ಕಾರ್ಯಪ್ರವೃತ್ತರಾಗಿರೋ ಪೊಲೀಸರ ಬಗ್ಗೆ ಜನರಿಗೆ ಪ್ರೀತಿ ಇರಬೇಕಾಗಿತ್ತು. ಆದರೆ ಆ ಜಾಗದಲ್ಲಿ ಭಯವನ್ನು ಕೂರಿಸುವ ಪ್ರಯತ್ನಗಳೇ ಇನ್ನೂ ಇವೆ. ಅಳುವ ಮಗುವಿಗೆ ತುತ್ತು ತಿನ್ನಿಸುವಾಗ ಪೊಲೀಸರು ಬರುತ್ತಾರೆಂದು ಭಯ ಹುಟ್ಟಿಸುವ ಮೂಲಕವೇ ಇಡೀ ಸಮಾಜದಲ್ಲಿ ಪೊಲೀಸರ ಬಗ್ಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಇದರ ಜೊತೆಗೆ ಮಡಿವಂತಿಕೆಯೂ ಸೇರಿಕೊಂಡು ಅದೆಷ್ಟೋ ಪ್ರಕರಣಗಳು ಹೊರ ಬರದೇ ಉಳಿದುಕೊಂಡಿವೆ. ಪೊಲೀಸರು ದುಷ್ಟರಿಗಷ್ಟೇ ಶಿಕ್ಷೆ ನೀಡುತ್ತಾರೆ. ಸಂದರ್ಭಕ್ಕೆ ತಕ್ಕ ಹಾಗೆ ಹೃದಯದಿಂದಲೂ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಅಂಥಾದ್ದೊಂದು ಭಾವುಕತೆ ಖಾಕಿಯೊಳಗೆ ಇರೋದಕ್ಕೆ ಮಿಸ್ಸಿಂಗ್ ಬಾಯ್ ಕಥೆಯೇ ಉದಾಹರಣೆ. ಇದೊಂದು ಅದ್ಭುತ ಕಥೆ ಎಂಬುದು ಸುನೀಲ್ ಕುಮಾರ್ ಅವರ ಮಾತು.

ಈ ಸಮಾರಂಭದಲ್ಲಿ ಬಾಲಾಜಿ ವೀರಾಸ್ವಾಮಿ, ನಿರ್ಮಾಪಕ ಕೊಲ್ಲ ಪ್ರವೀಣ್, ಲಹರಿ ವೇಲು, ಸೂರಪ್ಪ ಬಾಬು, ಎನ್.ಎಸ್. ರಾಜ್ ಕುಮಾರ್ ಮುಂತಾದವರೂ ಉಪಸ್ಥಿತರಿದ್ದರು. ವೇಲು ಅವರು ಮಿಸ್ಸಿಂಗ್ ಬಾಯ್ ಕಥೆಯ ತನಿಖಾಧಿಕಾರಿಯಾಗಿದ್ದ ಲವಕುಮಾರ್ ಅವರ ಬಗ್ಗೆ ಒಂದು ಇಂಟರೆಸ್ಟಿಂಗ್ ಆದ ವಿಚಾರವನ್ನೂ ಹೊರಹಾಕಿದರು. ಲವಕುಮಾರ್ ಕರ್ನಾಟಕ ಪೊಲೀಸ್ ಇಲಾಖೆ ಕಂಡ ದಕ್ಷ ಅಧಿಕಾರಿ. ಯಾರ ಮುಲಾಜಿಗೂ ಬೀಳದ ಅವರನ್ನು ಅದೊಂದು ಕಾಲದಲ್ಲಿ ಮಂಗಳೂರಿನ ರಾಜಕಾರಣಿಯೋರ್ವರ ರಕ್ಷಣೆಗೆ ನೇಮಿಸಲಾಗಿತ್ತು. ಈ ರಾಜಕಾರಣಿ ಅದೊಂದು ದಿನ ಅನ್ನ ಬಾರದ ಮಾತನ್ನು ತಪ್ಪಿ ಮಾತಾಡಿದಾಕ್ಷಣ ಸೀದಾ ರೀವಾಲ್ವಾರಿನ ಮೊನೆಯನ್ನು ಆತನ ಬಾಯಿಗೆ ತೂರಿಸಿದ್ದ ಲವಕುಮಾರ್ ಆ ಮಾತನ್ನು ವಾಪಾಸು ತೆಗೆದುಕೊಳ್ಳುವಂತೆ ಅಬ್ಬರಿಸಿದ್ದರಂತೆ. ಇದು ಅವರೆಂಥಾ ಖಡಕ್ ಅಧಿಕಾರಿ ಎಂಬುದರ ಪ್ರತೀಕ ಅಂತ ನೆನಪು ಮಾಡಿಕೊಂಡ ವೇಲು, ಅವರೇ ತನಿಖೆ ನಡೆಸಿದ್ದ ಮಿಸ್ಸಿಂಗ್ ಬಾಯ್ ಕಥೆಯೂ ಭಿನ್ನವಾಗಿದೆ, ರಘುರಾಮ್ ಅವರಿಗೆ ದೊಡ್ಡ ಗೆಲುವು ಸಿಗಲಿ ಅಂತ ಹಾರೈಸಿದರು.

ಈಗಾಗಲೇ ಕೊಂಚ ತಡವಾದರೂ ಕುತೂಹಲವನ್ನು ಕಾಯ್ದಿಟ್ಟುಕೊಂಡಿರೋ ಚಿತ್ರ ಮಿಸ್ಸಿಂಗ್ ಬಾಯ್. ಸಿನಿಮಾವನ್ನೇ ಉಸಿರಾಗಿಸಿಕೊಂಡ ರಘುರಾಮ್ ಅವರ ಮಹಾ ಕನಸಿನಂಥಾ ಚಿತ್ರವಿದು. ಸಾಕಷ್ಟು ಏಳು ಬೀಳು ಸಂಕಟಗಳನ್ನು ಕಂಡುಂಡು ಬಂದಿರೋ ರಘುರಾಮ್ ಅವರಿಗೆ ಈ ಮೂಲಕ ಅದ್ಭುತವೆಂಬಂಥಾ ಗೆಲುವು ದಕ್ಕಲೆಂಬುದು ಎಲ್ಲರ ಹಾರೈಕೆಯಾಗಿತ್ತು.

Continue Reading

ಟೀಸರ್ / ಟ್ರೇಲರ್

ಮನೆ ನಂಬರ್ 67 : ಸಿಟಿ ದೆವ್ವದ ಸಾಂಗು ಬಂತು!

Published

on

ಕನ್ನಡ ಚಿತ್ರರಂಗದ ಪಾಲಿಗಿದು ಹಾರರ್ ಜಮಾನಾ ಎಂಬುದು ಪ್ರತೀ ವಾರವೂ ಸಾಬೀತಾಗುತ್ತಿದೆ. ಸದ್ದೇ ಇಲ್ಲದೆ ಹಾರರ್ ಚಿತ್ರಗಳು ರೆಡಿಯಾಗುತ್ತಿವೆ. ಹಾಗೆಯೇ ತಮ್ಮ ಪಾಡಿಗೆ ತಾವು ಚಿತ್ರೀಕರಣ ಮುಗಿಸಿಕೊಂಡಿರುವ `ಮನೆ ನಂಬರ್ 67′ ಚಿತ್ರತಂಡ ಅಚ್ಚುಕಟ್ಟಾದ ಸಮಾರಂಭವೊಂದರ ಮೂಲಕ ಹಾಡುಗಳನ್ನು ಬಿಡುಗಡೆಗೊಳಿಸಿದೆ.

ಜಯಕುಮಾರ್ ನಿರ್ದೇಶನದ ಈ ಚಿತ್ರ ರಿಯಲ್ ಭೂತಚೇಷ್ಠೆಯ ಕಥೆಯೊಂದನ್ನಿಟ್ಟುಕೊಂಡು ಅಣಿಯಾಗಿದೆ. ಸತ್ಯಜಿತ್ ಈ ಮೂಲಕ ನಾಯಕನಾಗಿ ಅಡಿಯಿರಿಸುತ್ತಿದ್ದಾರೆ. ವಸಂತಿ, ಸುಮಿತ್ರಾ, ಗಾಯತ್ರಿ ಮತ್ತು ಸ್ವಪ್ನಾ ಎಂಬ ನಾಲ್ವರು ನಾಯಕಿಯರು ಸತ್ಯಜಿತ್‌ಗೆ ಜೊತೆಯಾಗಿ ನಟಿಸಿದ್ದಾರೆ.

ಸಾಮಾನ್ಯವಾಗಿ ದೆವ್ವ ಭೂತದ ಚಿತ್ರಗಳು ಊರ ಹೊರಗಿನ, ಕಾಡೊಳಗಿನ ಒಂಟಿ ಮನೆಗಳಲ್ಲಿ ಚಿತ್ರೀಕರಿಸಲ್ಪಟ್ಟಿರುತ್ತವೆ. ಬಹು ಹಿಂದಿನಿಂದಲೂ ಈ ರೀತಿಯಾಗಿ ಊರ ಹೊರ ಭಾಗಗಳಿಗೆ ಗದುಮಲ್ಪಟ್ಟಿದ್ದ ದೆವ್ವವನ್ನೂ ಕೂಡಾ ಮುಖ್ಯಭೂಮಿಕೆಗೆ ತರುವ ಕೆಲಸವನ್ನು ಚಿತ್ರತಂಡ ಮಾಡಿದೆ. ಈ ಚಿತ್ರದ ಒಟ್ಟಾರೆ ಕಥೆ ನಗರದ ಮನೆಯೊಂದರಲ್ಲಿ ನಡೆಯುತ್ತದೆಯಂತೆ!

ಕೆಲ ವರ್ಷಗಳ ಹಿಂದೆ ಹಲಸೂರಿನ ಹತ್ತಿರದ ಗೌತಂಪುರಂ ಎಂಬ ನಗರದಲ್ಲೊಬ್ಬಳಿಗೆ ದೆವ್ವ ಅಟಕಾಯಿಸಿಕೊಂಡಿತ್ತಂತೆ. ಆ ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಜಯಕುಮಾರ್ ಕಥೆ ರಚಿಸಿದ್ದಾರಂತೆ. ಒಟ್ಟಾರೆಯಾಗಿ ಮಾಮೂಲು ಹಾರರ್ ಕಥೆಯನ್ನು ಮಾತ್ರವಲ್ಲದೇ ಮೈ ನವಿರೇಳಿಸುವ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನೂ ಈ ಚಿತ್ರ ಹೊಂದಿದೆ ಎಂಬುದು ನಿರ್ದೇಶಕರ ಸ್ಪಷ್ಟನೆ.

Continue Reading

Trending

Copyright © 2018 Cinibuzz