One N Only Exclusive Cine Portal

ಗೂಗಲ್ ಎಂಜಿನ್‌ನಲ್ಲಿ ಸಿಕ್ಕ ಹಾಟ್ ನ್ಯೂಸ್!

ಈಗಾಗಲೇ ಸದಾ ಗುನುಗುವಂಥಾ ಹಾಡುಗಳಿಂದ ಜನಮನ ಸೆಳೆದಿರೋ ವಿ ನಾಗೇಂದ್ರಪ್ರಸಾದ್ ಗೂಗಲ್ ಚಿತ್ರದ ಮೂಲಕ ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ. ಈ ಚಿತ್ರಕ್ಕೆ ಶುಭಾ ಪೂಂಜಾ ನಾಯಕಿ ಎಂಬ ವಿಚಾರ ಗೊತ್ತಿರುವಂಥಾದ್ದೇ. ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿರುವ ಚಿತ್ರ ಮೊದಲ ಪ್ರದರ್ಶನವನ್ನು ಕಾಣುತ್ತಿದೆ.


ಈ ಹಿಂದೆ ಚಿತ್ರೀಕರಣದ ಸಂದರ್ಭದ ಫೋಟೋ ಒಂದರ ಮೂಲಕ ಇನ್ನೇನು ಶುಭಾ ಮತ್ತು ನಾಗೇಂದ್ರ ಪ್ರಸಾದ್ ಮದುವೆಯಾಗೇ ಬಿಟ್ಟರು ಎಂಬಂಥಾ ಸುದ್ದಿ ಹರಡಿಕೊಂಡಿತ್ತಲ್ಲಾ? ಈಗ ಅಂಥಾದ್ದೇ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಅದು ಶುಭಾ ಕವಿರತ್ನ ನಾಗೇಂದ್ರ ಪ್ರಸಾದ್ ಅವರಿಗೆ ಕೈಕೊಟ್ಟ ಬಗೆಗಿನ ಸ್ಟೋರಿ!
ಹಾಗಂತ ಇದು ನಿಜ ಜೀವನದಲ್ಲಿ ನಡೆದ ಸುದ್ದಿ ಅಂದುಕೊಳ್ಳಬೇಕಿಲ್ಲ. ಯಾಕೆಂದರೆ ಹೆಸರಿಗೆ ಅನ್ವಯವಾಗುವಂತೆಯೇ ಒಂದು ರೋಚಕವಾದ ಹುಡುಕಾಟದ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಅದೇ ರೀತಿ ಈ ಚಿತ್ರದಲ್ಲಿ ನಾಯಕಿ ಶುಭಾ ಪೂಂಜಾ ನಾಗೇಂದ್ರ ಪ್ರಸಾದ್ ಅವರಿಗೆ ಕೈ ಕೊಡುವ ಸನ್ನಿವೇಷವೂ ಇದೆಯಂತೆ. ಇಂಥಾದ್ದೊಂದು ಕಥಾ ಹಂದರದ ಸಣ್ಣ ಎಳೆ ಬಿಟ್ಟುಕೊಡುವಂಥಾ ಸುದ್ದಿಯೇ `ಶುಭಾ ಪೂಂಜಾ ಕೈ ಕೊಟ್ಟಳೆಂಬ ರೆಕ್ಕೆಪುಕ್ಕ ಕಟ್ಟಿಕೊಂಡು ಎಲ್ಲಡೆ ಹಾರಾಡಲಾರಂಭಿಸಿದೆ. ಈ ಹಿಂದೆ ಚಿತ್ರೀಕರಣದ ಫೋಟೋ ಒಂದನ್ನು ನೋಡಿ, ಆ ನಂತರದ ಸುದ್ದಿಯನ್ನು ಗಮನಿಸದೇ ನಾಗೇಂದ್ರ ಪ್ರಸಾದ್ ಶುಭಾ ಪೂಂಜಾಳನ್ನು ಮದುವೆಯಾಗಿದ್ದಾಳೆಂದೇ ನಂಬಿದ ಮಂದಿಯಿದ್ದರೆ ಅಂಥವೆರಲ್ಲ ಈ ಸುದ್ದಿ ತಿಳಿದು ಅರೇ ವರ್ಷವಾಗೋದರೊಳಗೆ ಬ್ರೇಕಪ್ಪಾಯ್ತಾ ಅಂತ ಹೌಹಾರಬಹುದೇನೋ!


ಸಿನಿಮಾದಲ್ಲಿರುವ ಪ್ಯಾಥೋ ಸಾಂಗ್ ಈ ರೀತಿಯ ಗಾಸಿಪ್ ಹರಡಲು ಕಾರಣವಾಗಿದೆ ಎನ್ನಲಾಗುತ್ತಿದೆ. ಇವತ್ತು ಇದ್ದಕ್ಕಿದ್ದಂತೆ ಶುಭಾ ಮತ್ತು ನಾಗೇಂದ್ರ ಪ್ರಸಾದ್ ನಡುವೆ ಬ್ರೇಕಪ್ಪಾಗಿದೆ ಅನ್ನೋ ವಿಚಾರ ಎಲ್ಲರನ್ನೂ ಅಚ್ಛರಿಗೀಡುಮಾಡಿದೆ. ಕವಿರತ್ನರಿಗಂತೂ ಮಾಧ್ಯಮದವರ ಕರೆ ಸ್ವೀಕರಿಸಿ ಉತ್ತರಿಸೋದೇ ದೊಡ್ಡ ಸವಾಲಾಗಿಬಿಟ್ಟಿದೆ. ಗೂಗಲ್ ಚಿತ್ರದ ಬಿಡುಗಡೆ ಬ್ಯುಸಿಯಲ್ಲಿರುವ ನಾಗೇಂದ್ರ ಪ್ರಸಾದ್ ಮತ್ತು ಶುಭಾ ಪೂಂಜಾಗೆ ನಿಜಕ್ಕೂ ಈ ಗಾಳಿಸುದ್ದಿ ತಲೆನೋವು ತರಿಸಿದೆ.


ಅಂತೂ ಈಗಿರೋ ಮಾಹಿತಿಯ ಪ್ರಕಾರವಾಗಿ ಹೇಳ ಹೋದರೆ ಈ ಚಿತ್ರ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸಾ ಹೊಳಹಿನದ್ದೊಂದು ಕಥಾ ಹಂದರ ಹೊಂದಿದೆಯಂತೆ. ಎಲ್ಲ ಭಾವಗಳನ್ನೂ ಮಿಳಿತವಾಗಿಸಿ ನಾಗೇಂದ್ರಪ್ರಸಾದ್ ಅವರು ಈ ಚಿತ್ರಕ್ಕೆ ಕಥೆ ಹೊಸೆದಿದ್ದಾರೆ. ಪ್ರೇಮಿಗಳು, ಸಂಸಾರಸ್ಥರು ಸೇರಿದಂತೆ ಎಲ್ಲರಿಗೂ ಅನ್ವಯವಾಗುವ, ಎಲ್ಲಾ ವರ್ಗದವರನ್ನೂ ಕಾಡುವಂಥಾ ಚೆಂದದ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ!  ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಸಿನಿಮಾದ ಅಸಲೀ ಬಂಡವಾಳ ಹೊರಬೀಳಲಿದೆ.

Leave a Reply

Your email address will not be published. Required fields are marked *


CAPTCHA Image
Reload Image