One N Only Exclusive Cine Portal

ಕವಿರತ್ನರ ಗೂಗಲ್ ಸರ್ಚಿಂಗ್ ಫೆಬ್ರವರಿಯಲ್ಲಿ ಶುರು!

ಡಾ. ವಿ ನಾಗೇಂದ್ರ ಪ್ರಸಾದ್ ಹೀರೋ ಆಗಿ ಬಣ್ಣ ಹಚ್ಚಿರೋ ಚಿತ್ರ ಗೂಗಲ್. ಈ ಹಿಂದೆ ಶುಭಾ ಪೂಂಜಾ ಮತ್ತು ನಾಗೇಂದ್ರ ಪ್ರಸಾದ್ ಮದುವೆಯಾಗಿದ್ದಾರಂತೆ ಎಂಬಂಥಾ ರೂಮರಿನ ಮೂಲಕವೇ ಭರ್ಜರಿ ಪ್ರಚಾರ ಪಡೆದಿದ್ದ ಈ ಚಿತ್ರ ಫೆಬ್ರವರಿ ೧೬ರಂದು ತೆರೆ ಕಾಣಲು ಮುಹೂರ್ತ ನಿಗಧಿಯಾಗಿದೆ.


ಚೆಂದದ ಹಾಡುಗಳ ಮೂಲಕ ಗೀತ ಸಾಹಿತಿಯಾಗಿ ಪ್ರಸಿದ್ಧಿ ಪಡೆದುಕೊಂಡಿರುವವರು ನಾಗೇಂದ್ರ ಪ್ರಸಾದ್. ದಶಕದಿಂದೀಚೆಗೆ ಸದಾ ಗುನುಗುವಂಥಾ ಚಿತ್ರ ಗೀತೆಗಳಲ್ಲಿ ಅವರ ಪಾಲು ಹೆಚ್ಚಿನದ್ದಿದೆ. ಆದರೆ ಗೀತ ಸಾಹಿತ್ಯದಾಚೆಗೂ ನಿರ್ದೇಶಕರಾಗಿ ಛಾಪು ಮೂಡಿಸಿರೋ ನಾಗೇಂದ್ರ ಪ್ರಸಾದ್ ಗೂಗಲ್ ಚಿತ್ರದ ಮೂಲಕ ದಶಾವತಾರ ತಳೆದಂತಿದ್ದಾರೆ!
ನಾಗೇಂದ್ರ ಪ್ರಸಾದ್ ಬಹುಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿರೋ ಈ ಚಿತ್ರದಲ್ಲಿ ಅರ್ಧಕ್ಕೂ ಹೆಚ್ಚಿನ ಜವಾಬ್ದಾರಿಗಳನ್ನ ಅವರೇ ನಿರ್ವಹಿಸಿರೋದು ವಿಶೇಷ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿ ಸ್ವತಃ ನಟಿಸಿರೋ ಅವರು ಸಂಗೀತದ ಜವಾಬ್ದಾರಿಯ ಜೊತೆಗೆ ನಿರ್ಮಾಣದ ಭಾರವನ್ನೂ ಹೊತ್ತುಕೊಂಡಿದ್ದಾರೆ.


ಇಷ್ಟೆಲ್ಲ ಜವಾಬ್ದಾರಿ ಹೊತ್ತುಕೊಂಡೂ ಅದನ್ನು ಸಮರ್ಥವಾಗಿ ನಿರ್ವಹಿಸಿರೋ ಖುಷಿಯಲ್ಲಿರುವ ನಾಗೇಂದ್ರ ಪ್ರಸಾದ್ ಹೊಸಾ ಬಗೆಯ ಕಥೆಯೊಂದನ್ನು ಈ ಚಿತ್ರದ ಮೂಲಕ ಹೇಳಿದ್ದಾರಂತೆ. ಈಗಾಗಲೇ ಈ ಚಿತ್ರದ ಹಾಡುಗಳೂ ಕೂಡಾ ವ್ಯಾಪಕವಾಗಿ ಮೆಚ್ಚುಗೆಗೆ ಪಾತ್ರವಾಗಿವೆ. ಅಂದಹಾಗೆ ಗೂಗಲ್ ಎಂಬುದು ಇಂದಿನ ದಿನಮಾನದಲ್ಲಿ ಎಲ್ಲರಿಗೂ ಚಿರಪರಿಚಿತ. ಅದು ಹುಡುಕಾಟಕ್ಕೆ ಫೇಮಸ್ಸು. ಅದೇ ಟೈಟಲ್ ಇಟ್ಟುಕೊಂಡಿರೋ ಈ ಚಿತ್ರದಲ್ಲಿಯೂ ಹುಡುಕಾಟ ಇದೆಯಂತೆ. ಆದರೆ ಅದು ಯಾವ ಥರದ ಹುಡುಕಾಟ? ಯಾವುದಕ್ಕಾಗಿನ ಹುಡುಕಾಟ ಎಂಬ ಪ್ರಶ್ನೆಗೆ ಫೆಬ್ರವರಿಯಲ್ಲಿ ಉತ್ತರ ಸಿಗಲಿದೆ!

Leave a Reply

Your email address will not be published. Required fields are marked *


CAPTCHA Image
Reload Image