One N Only Exclusive Cine Portal

ಅತ್ಯುತ್ತಮ ಪೋಷಕ ಕಲಾವಿದ : ಗೋಪಾಲ ದೇಶಪಾಂಡೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಇದನ್ನು ಪ್ರಶಸ್ತಿ ಅನ್ನಬೇಕಾ? ಗೌರವದ ಕಾಣಿಕೆ ಅನ್ನಬೇಕಾ ಎಂಬುದು ಓದುಗರಿಗೆ ಬಿಟ್ಟದ್ದು. ಆದರೆ ಒಂದು ವರ್ಷದ ಅಷ್ಟೂ ಚಿತ್ರಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ, ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದ, ಕ್ರಿಯೇಟಿವಿಟಿಯಿಂದ ಗಮನ ಸೆಳೆದವರನ್ನು ವರ್ಷದ ಕೊನೆಯಲ್ಲಿ ನೆನೆಸಿಕೊಂಡು ಗೌರವಿಸೋ ಮಹದಾಸೆಯಿಂದ ಸಿನಿಬಜ಼್ ಸ್ಟಾರ್ ಆಫ್ ದಿ ಇಯರ್ -2017 ರೂಪಿಸಲ್ಪಟ್ಟಿದೆ. ಒಂದು ಸಿನಿಮಾ ರೂಪುಗೊಳ್ಳಬೇಕೆಂದರೆ ಅದರ ವಿವಿಧ ವಿಭಾಗಗಳಲ್ಲಿ ಹಲವು ಮಂದಿ ಕೆಲಸ ಮಾಡಿರುತ್ತಾರೆ. ಅದನ್ನೇ ಉಸಿರಾಡಿರುತ್ತಾರೆ. ಅಂಥಾ ಎಲ್ಲಾ ವಿಭಾಗಗಳನ್ನೂ ಜಾಲಾಡಿ ಒಬ್ಬೊಬ್ಬರನ್ನು ಗೌರವಿಸೋ ಪ್ರಯತ್ನವನ್ನು ನಾವು ಮಾಡಿದ್ದೇವೆ. ಇದರಾಚೆಗೆ ಈ ಪುರಸ್ಕಾರಕ್ಕೆ ಪಾತ್ರರಾಗೋ ಅರ್ಹತೆ ಇರುವವರು ಖಂಡಿತಾ ಇದ್ದಾರೆ. ಆದರೆ ಒಂದು ಮಿತಿಯೊಳಗೆ ಗೌರವವನ್ನಿಲ್ಲಿ ಕೊಡಮಾಡಿದ್ದೇವೆ…

ಅಪ್ಪಟ ರಂಗಭೂಮಿ ಪ್ರತಿಭೆ ಗೋಪಾಲ ದೇಶಪಾಂಡೆ ಪುಟ್‌ಗೌರಿ ಮದುವೆ ಧಾರಾವಾಹಿಯ ಮೂಲಕ ಕನ್ನಡಿಗರ ಮನೆ ಮಾತಾದವರು. ಸೀರಿಯಲ್ಲಿನ ನೂರಾರು ಎಪಿಸೋಡುಗಳ ಏಕತಾನತೆಯಾಚೆಗೂ ಪ್ರತೀ ಕಂತಿನಲ್ಲೂ ಚೆಂದದ ನಟನೆಯ ಮೂಲಕ ಮನ ಗೆದ್ದಿರುವವರು ಗೋಪಾಲ ದೇಶಪಾಂಡೆ. ಅವರು ನನ್ ಮಗಳೇ ಹೀರೋಯಿನ್ ಮತ್ತು ಸಾಹೇಬ ಚಿತ್ರದ ಪೋಷಕ ಪಾತ್ರವೊಂದರ ಮೂಲಕ ಚಿತ್ರ ರಂ ಗದಲ್ಲಿಯೂ ಸಕ್ರಿಯರಾಗಿದ್ದಾರೆ. ಪ್ರತಿಭೆಯ ಬಲದಿಂದಲೇ ಕೈ ತುಂಬಾ ಅವಕಾಶಗಳನ್ನು ಹೊಂದಿರೋ ಅವರ ನಟನೆಗೆ ಪೋಷಕ ನಟನಾಗಿ ಚಿತ್ರಗಳನ್ನು ಆವರಿಸಿಕೊಳ್ಳೋ ಅದ್ಭುತ ಕಸುವು ಕಾಣಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image