Connect with us

ರಿಯಾಕ್ಷನ್

ಅರ್ಜುನ್ ಜನ್ಯಾ ಮತ್ತು ಯೋಗರಾಜ್ ಭಟ್ ಬಗ್ಗೆ ಹಂಸಲೇಖ ಹೇಳಿದ್ದೇನು?

Published

on

ಕನ್ನಡ ಚಿತ್ರ ಗೀತೆಗಳ ದಿಕ್ಕು ದೆಸೆಗಳನ್ನೇ ಬದಲಿಸುವ ಮೂಲಕ ನಾದಬ್ರಹ್ಮ ಎಂದೇ ಕನ್ನಡಿಗರ ಪ್ರೀತಿ ಪಾತ್ರರಾಗಿರುವವರು ಹಂಸಲೇಖ. ಎಂದೆಂದಿಗೂ ಸಲ್ಲುವಂಥಾ ಹಾಡುಗಳ ಮೂಲವೇ ಸಂಗೀತ, ಸಾಹಿತ್ಯಕ್ಕೊಂದು ಹೊಸಾ ಆಯಾಮ ಕೊಟ್ಟ ಹಂಸಲೇಖ ಇದ್ದಲ್ಲಿ ನಗು, ಖುಷಿ, ತಮಾಷೆ, ಕಾಲೆಳೆತ ಮತ್ತು ಯಾವುದೇ ಕಿಸುರಿಲ್ಲದ ಮೆಚ್ಚಿಕೊಳ್ಳುವಿಕೆಗಳೆಲ್ಲ ಮಾಮೂಲು. ಅಂಥಾದ್ದೇ ಕ್ಷಣಗಳನ್ನು ಮತ್ತೆ ಎದುರುಗೊಳ್ಳುವಂತೆ ಮಾಡಿದ್ದು ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ತಂಡ.

 

ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟಿಸಿರುವ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಾದಬ್ರಹ್ಮನ ಸಮ್ಮುಖದಲ್ಲಿ ನೆರವೇರಿದೆ. ಈ ಸಂದರ್ಭದಲ್ಲಿ ಹಾಜರಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರುಗಳ ಬಗ್ಗೆ ಹಂಸಲೇಖಾ ಇಂಟರೆಸ್ಟಿಂಗ್ ಆದ ಮಾತುಗಳನ್ನಾಡಿದ್ದಾರೆ.

ಮೊದಲೆಲ್ಲಾ ಯೋಗರಾಜ ಭಟ್ ಉಡಾಫೆಯ ದಾರಿ ಹಿಡಿದಿದ್ದಾರೆಂಬ ಮಾತುಗಳು ಹಂಸಲೇಖ ಅವರ ಕಿವಿಗೆ ಬೀಳುತ್ತಿದ್ದವಂತೆ. ಆದರೆ ಬರ ಬರುತ್ತಾ ಅವರು ಚಲನಚಿತ್ರಗಳ ಸಂಭಾಷಣೆಯ ದಿಕ್ಕನ್ನೇ ಬದಲಾಯಿಸಿದ್ದಾರೆಂಬ ಮೆಚ್ಚುಗೆ ನಾದಬ್ರಹ್ಮನ ಕಡೆಯಿಂದ ಕೇಳಿ ಬಂತು. ತಮಾಷೆ ಮತ್ತು ಉಡಾಫೆ ಮಿಶ್ರಿತವಾದ ಹಾದಿಯಲ್ಲಿಯೇ ಆಧ್ಯಾತ್ಮವನ್ನು ಮುಟ್ಟಲು ಹೊರಟಿರುವ ಯೋಗರಾಜ ಭಟ್ ಕನ್ನಡದ ಕಂಪನ್ನು ಭಾಷೆಯ ಗಡಿ ದಾಟಿಸಿ ಪ್ರಸಿದ್ಧಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಬಹು ಕಾಲದಿಂದಲೂ ಸೈಕಲ್ಲು ಹೊಡೆಯುತ್ತಿದ್ದಾರೆ. ಅದರಲ್ಲಿ ಅವರು ಯಶ ಕಾಣಲೆಂದು ಹಂಸಲೇಖ ಹಾರೈಸಿದರು.

ಅದಾದ ಬಳಿಕ ಹಂಸಲೇಖಾ ಅವರ ಮಾತು ಹೊರಳಿಕೊಂಡಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರತ್ತ. ಇಷ್ಟೊಂದು ಚಿತ್ರಗಳಿಗೆ ಸಂಗೀತ ನೀಡಿ ಹಾಡೆಂದರೆ ಹೀಗಿರ ಬೇಕೆಂಬಂತೆ ಹೊಸಾ ಟ್ರೆಂಡ್ ಕ್ರಿಯೇಟ್ ಮಾಡಿದರೂ ಪೋಸ್ಟರಿನಲ್ಲಿ ಫೋಟೋ ಹಾಕಿಕೊಳ್ಳಲೂ ಜನ್ಯಾ ನಾಚಿಕೆ ಪಡುತ್ತಾರೆ ಅಂದಿರೋ ಹಂಸಲೇಖ ಒಂದು ಕಾಲದಲ್ಲಿ ತಾವು ತಮ್ಮ ಹೆಸರು ಹಾಕಿಕೊಳ್ಳಲು ಮುಜುಗರ ಪಡುತ್ತಿದ್ದುದನ್ನು ನೆನಪಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಹಾಡುಗಳ ಅನಾವರಣ ಕಾರ್ಯಕ್ರಮ ಹಂಸಲೇಖ ಅವರ ಇರುವಿಕೆಯಿಂದ ಬೇರೆಯದ್ದೇ ರಂಗು ಪಡೆದುಕೊಂಡಿದೆ. ಈ ಮೂಲಕ ಈ ಚಿತ್ರದತ್ತ ಪ್ರೇಕ್ಷಕರು ಮತ್ತಷ್ಟು ಆಕರ್ಷಿತರಾಗುವಂತಾಗಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ರಿಯಾಕ್ಷನ್

ತುಪ್ಪದ ಹುಡುಗಿಗೂ ತಪ್ಪಲಿಲ್ಲವೇ ಕಿರುಕುಳದ ಕಂಟಕ?

Published

on

ಇದೀಗ ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ನಟಿಯರನೇಕರು ತಮಗಾದ ಇಂಥಾ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಈಗ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೂಡಾ ಇದರ ಬಗ್ಗೆ ಬಿಡುಬೀಸಾಗಿ ಮಾತಾಡಿದ್ದಾರೆ.

ರಾಗಿಣಿ ದ್ವಿವೇದಿ ಮೀಟೂ ಅಭಿಯಾನದ ಬಗ್ಗೆ ಮಾತಾಡಿರೋದು ಹುಬ್ಬಳ್ಳಿಯಲ್ಲಿ. ಮಾಧ್ಯಮದವರು ಈ ಬಗ್ಗೆ ಕೇಳಿದ ಪ್ರಶ್ನೆಗೆ ರಾಗಿಣಿ ನೇರವಾಗಿಯೇ ಉತ್ತರಿಸಿದ್ದಾರೆ. ಈ ಅಭಿಯಾನ ಹುಟ್ಟಿದ ಬಗೆ, ಅದರ ಉದ್ದೇಶಗಳ ಬಗ್ಗೆ ಗಂಭೀರವಾಗಿಯೇ ಅರಿತುಕೊಂಡಿರೋ ರಾಗಿಣಿ ಕೆಲವರು ಇದನ್ನು ಪ್ರಚಾರಕ್ಕಾಗಿ, ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಂಬ ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ.

ಮೀಟೂ ಎಂಬುದು ಕಿರುಕುಳಕ್ಕೊಳಗಾದವರು ಅದಕ್ಕೆ ಕಾರಣರಾದವರ ವಿರುದ್ಧ ಸಮರ ಸಾರಲು ಹುಟ್ಟಿಕೊಂಡ ಅಭಿಯಾನ. ಇಂಥಾದ್ದೊಂದು ಧೈರ್ಯ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ. ಈ ಮೂಲಕ ಈ ಸಮಾಜದಲ್ಲಿ ಒಂದು ಬದಲಾವಣೆಯ ಗಾಳಿ ಬೀಸುವಂತಾಗಬೇಕು. ಆದರೆ ಕೆಲ ಮಂದಿ ಇದನ್ನೇ ಸ್ವಾರ್ಥಕ್ಕೆ ಮತ್ತು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅನ್ನಿಸುತ್ತಿದೆ. ಆದರೆ ಇಂಥಾ ಕೆಲಸದ ಮೂಲಕ ಈ ಅಭಿಯಾನವನ್ನು ದಿಕ್ಕು ತಪ್ಪಿಸಬಾರದೆಂದು ರಾಗಿಣಿ ಹೇಳಿದ್ದಾರೆ.

ಇದೆಲ್ಲ ಇರಲಿ, ರಾಗಿಣಿಯವರೇನಾದರೂ ಇಂಥಾ ಕಿರುಕುಳಕ್ಕೆ ಈಡಾಗಿದ್ದಿದೆಯಾ? ಎಂಬ ಪ್ರಶ್ನೆಗೂ ಕೂಡಾ ರಾಗಿಣಿ ಅಷ್ಟೇ ನೇರವಾದ ಉತ್ತರವನ್ನೇ ಕೊಟ್ಟಿದ್ದಾರೆ. ತಾನು ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಗಿದೆ. ಈ ವರೆಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೂ ಆಗಿದೆ. ಆದರೆ ತನಗ್ಯಾರೂ ಅಂಥಾ ಕಿರುಕುಳ ಕೊಟ್ಟಿಲ್ಲ ಎಂದೂ ರಾಗಿಣಿ ಹೇಳಿದ್ದಾರೆ!

Continue Reading

ರಿಯಾಕ್ಷನ್

ಅಂಬಿಯನ್ನು ನೋಡಿದ ಅಪ್ಪು ಏನಂದ್ರು ಗೊತ್ತಾ?

Published

on

ಅಂಬಿ ನಿಂಗೆ ವಯಸಾಯ್ತೋ ಚಿತ್ರದ ಯಶಸ್ಸಿನ ಓಟ ಅಡೆತಡೆಯಿಲ್ಲದೆ ಮುಂದುವರೆದಿದೆ. ಅತ್ತ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರೋ ಈ ಚಿತ್ರವನ್ನು ಸ್ಯಾಂಡಲ್‌ವುಡ್ ತಾರೆಯರೆಲ್ಲ ಸರದಿಯೋಪಾದಿಯಲ್ಲಿ ನೋಡುತ್ತಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೂ ಕೂಡಾ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ.


ವಾರದ ಹಿಂದೆಯೇ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ನೋಡಲು ಕಾತರರಾಗಿರೋದಾಗಿ ಪುನೀತ್ ಹೇಳಿಕೊಂಡಿದ್ದರು. ಇದೀಗ ಕಡೆಗೂ ಈ ಚಿತ್ರವನ್ನು ನೋಡಿರುವ ಪವರ್‌ಸ್ಟಾರ್ ಖುಷಿಗೊಂಡಿದ್ದಾರೆ. ಅವರು ಅಪಾರವಾಗಿ ಗೌರವಿಸೋ ಅಂಬರೀಶ್ ಅವರ ನಟನೆಯನ್ನು ಕೊಂಡಾಡಿದ್ದಾರೆ. ನಿರ್ದೇಶಕ ಗುರುದತ್ತ ಗಾಣಿಗ ಕಾರ್ಯವೈಖರಿಯನ್ನು ಮೆಚ್ಚಿಕೊಳ್ಳುತ್ತಲೇ ಇಂಥಾ ಚೆಂದದ ಚಿತ್ರವೊಂದನ್ನು ನಿರ್ಮಾಣ ಮಾಡಿರುವ ಜಾಕ್ ಮಂಜು ಅವರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡಾ ಇತ್ತೀಚೆಗೆ ಈ ಚಿತ್ರವನ್ನು ನೋಡಿ ಪ್ರೀತಿಯ ಮಾತುಗಳನ್ನಾಡಿದ್ದರು. ಈಗಾಗಲೇ ಹಲವು ತಾರೆಯರು ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ನೋಡುವ ಹಾದಿಯಲ್ಲಿದ್ದಾರೆ.

Continue Reading

ರಿಯಾಕ್ಷನ್

ಕಾಕತಾಳೀಯ ಸಂಭ್ರಮದ ಬಗ್ಗೆ ನೀನಾಸಂ ಸತೀಶ್ ಹೇಳಿದ್ದೇನು?

Published

on

ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ಐವತ್ತನೇ ದಿನವನ್ನು ಯಶಸ್ವೀ ಪ್ರದರ್ಶನದೊಂದಿಗೆ ಪೂರೈಸಿದೆ. ಮಂಡ್ಯದ ಸಿದ್ಧಾರ್ಥ ಚಿತ್ರ ಮಂದಿರದಲ್ಲಿಯೂ ಅಯೋಗ್ಯ ಚಿತ್ರ ಐವತ್ತು ದಿನ ಕಂಪ್ಲೀಟ್ ಮಾಡಿದೆ. ಅದರ ಪಕ್ಕದಲ್ಲೇ ಇರುವ ಸಂಜಯ ಚಿತ್ರಮಂದಿರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗೆ ವಯಸಾಯ್ತೋ ಚಿತ್ರದ ಭರಾಟೆ ಜೋರಾಗಿದೆ. ಅತ್ತ ಅಂಬಿಯ ಆಳೆತ್ತರದ ಕಟೌಟ್, ಇತ್ತ ನೀನಾಸಂ ಸತೀಶ್ ಅವರದ್ದೂ ಅದೇ ಗಾತ್ರದ ಕಟೌಟ್…

ಒಂದು ಕಾಲದಲ್ಲಿ ಇದೇ ಚಿತ್ರ ಮಂದಿರಗಳಲ್ಲಿ ಅಂಬಿ ಚಿತ್ರಗಳನ್ನು ಕ್ಯೂನಲ್ಲಿ ನಿಂತು ಟಿಕೆಟು ಪಡೆದು ನೋಡುತ್ತಿದ್ದ ನೀನಾಸಂ ಸತೀಶ್ ಪಾಲಿಗೆ ಇದೊಂದು ಮಹಾ ಸಂಭ್ರಮ. ಈ ಬಗ್ಗೆ ನೀನಾಸಂ ಸತೀಶ್ ಅವರೇ ಖುಷಿ ಹಂಚಿಕೊಂಡಿದ್ದಾರೆ!

‘ಇದೊಂದು ಕಾಕತಾಳೀಯ. ಅಂಬಿ ಅಣ್ಣನ ಅಂಬಿ ನಿಂಗೆ ವಯಸಾಯ್ತೋ ಚಿತ್ರ ಸಿದ್ಧಾರ್ಥ ಚಿತ್ರ ಮಂದಿರದಲ್ಲಿದೆ. ನನ್ನ ಅಯೋಗ್ಯ ಸಂಜಯದಲ್ಲಿದೆ. ನನ್ನ ಚಿತ್ರದ್ದು ಐವತ್ತನೇ ದಿನ. ಇದಲ್ಲವೇ ಹೆಮ್ಮೆಯ ವಿಷಯ. ಒಂದು ಕಾಲದಲ್ಲಿ ಅವರ ಚಿತ್ರಕ್ಕಾಗಿ ಅದೇ ಥೇಟರಿನ ಮುಂದೆ ಟಿಕೆಟಿಗೆ ಕ್ಯೂನಲ್ಲಿ ನಿಂತಿದ್ದೆ. ಇಂದು ಅವರ ಕರ್ವಟ್ ಪಕ್ಕದಲ್ಲಿಯೇ ನನ್ನದೂ ಒಂದು ಕಟೌಟ್ ನಿಂತಿದೆ. ಇದು ನನ್ನ ವೈತ್ತಿ ಬದುಕಿನಲ್ಲಿಯೇ ಶ್ರೇಷ್ಠವಾದ ವಿದ್ಯಮಾನ. ಇವರ ಜೊತೆ ಅಭಿನಯಿಸೋ ಹಂಬಲ ಇನ್ನೂ ಇದೆ. ಅವರ ಆಶೀರ್ವಾದ ನಮ್ಮ ಜೊತೆಗಿದೆ’ ಎಂಬುದು ಸತೀಶ್ ಸಂಭ್ರಮದ ಸಾರಾಂಶ.

ಇದಲ್ಲದೇ ಈ ವಾರವೇ ತಾವೂ ಕೂಡಾ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ನೋಡೋದಾಗಿ ಹೇಳಿಕೊಂಡಿರುವ ನೀನಾಸಂ ಸತೀಶ್ ಎಲ್ಲರೂ ಈ ಚಿತ್ರ ನೋಡುವಂತೆಯೂ ಹೇಳಿದ್ದಾರೆ.

Continue Reading

Trending

Copyright © 2018 Cinibuzz