Connect with us

ಬ್ರೇಕಿಂಗ್ ನ್ಯೂಸ್

ಹೀಗೊಂದು ಚೆಕ್ ಬೌನ್ಸ್ ಕೇಸು ದಾಖಲಿಸಿದಳಂತೆ ಸಿಂಧೂ ಲೋಕನಾಥ್!

Published

on

ಇತ್ತೀಚೆಗಷ್ಟೇ ‘ಹೀಗೊಂದು ದಿನ’ ಎನ್ನುವ ಸಿನಿಮಾ ತೆರೆಗೆ ಬಂದಿತ್ತು. ಪ್ರಹಿಳಾಪ್ರಧಾನವಾದ ಈ ಸಿನಿಮಾದಲ್ಲಿ ಸಿಂಧೂ ಲೋಕನಾಥ್ ಪ್ರಧಾನ ಪಾತ್ರ ನಿರ್ವಹಿಸಿದ್ದಳು. ಅನ್ ಕಟ್ ಮೂವಿ ಅಂತಾ ಹೆಸರು ಮಾಡಿದ್ದ ’ಹೀಗೊಂದು ದಿನ’ವನ್ನು ನೋಡಿದವರು ಕೂಡಾ ‘ಒಳ್ಳೇ ಸಿನಿಮಾ’ ಅಂದಿದ್ದರು. ಇದರಿಂದ ಹೆಸರು ಬಂತಾದರೂ ಈ ಚಿತ್ರವನ್ನು ನಿರ್ಮಿಸಿದ್ದ ದಿವ್ಯದೃಷ್ಟಿ ಚಂದ್ರಶೇಖರ್ ನಯಾಪೈಸೆಯ ಕಾಸು ಹುಟ್ಟಲಿಲ್ಲ. ಸಬ್ಜೆಕ್ಟು ಚನ್ನಾಗಿದೆ ಅನ್ನೋ ಕಾರಣಕ್ಕೆ ಸಿಂಧೂಲೋಕನಾಥ್‌ಳನ್ನು ನಂಬಿ ಅಷ್ಟು ದೊಡ್ಡ ಮೊತ್ತದ ಹಣ ಇನ್‌ವೆಸ್ಟ್ ಮಾಡಿದ್ದೇ ಬಹುಶಃ ಯಡವಟ್ಟಾಯಿತೋ ಏನೋ? ಪ್ರಿಂಟು ಪಬ್ಲಿಸಿಟಿಗೇ ನಿರ್ಮಾಪಕರು ಮೂವತ್ತು ಲಕ್ಷಕ್ಕಿಂತಾ ಹೆಚ್ಚು ಖರ್ಚು ಮಾಡಿದ್ದರು. ಕೋಟ್ಯಂತರ ರುಪಾಯಿ ಹಣ ಹೂಡಿ ನಿರ್ಮಿಸಿದ ಚಿತ್ರದಿಂದ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಅವರಿಗೆ ವಾಪಾಸು ಬಂದ ದುಡ್ಡೆಷ್ಟು ಅಂತಾ ಕೇಳಿದರೆ ನಿಜಕ್ಕೂ ಗಾಬರಿಯಾಗುತ್ತದೆ! ಸಿಂಗಲ್ ಸ್ಕ್ರೀನುಗಳಿಂದ ಒಂದು ರುಪಾಯಿ ಕೂಡಾ ಲಾಭವಾಗಿಲ್ಲ. ಇನ್ನು ಮಲ್ಟಿಪ್ಲೆಕ್ಸ್‌ಗಳಿಂದ ಬಂದ ಶೇರು ಕೇವಲ ಅರವತ್ತು ಸಾವಿರ ರುಪಾಯಿ. ಅದೂ ಕೂಡಾ ಇನ್ನೂ ನಿರ್ಮಾಪಕರ ಕೈ ಸೇರಿಲ್ಲ. ಈ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಪಬ್ಲಿಸಿಟಿ ವಿಚಾರಕ್ಕೂ ಸಿಂಧೂ ಸರಿಯಾಗಿ ಸಾಥ್ ನೀಡಿರಲಿಲ್ಲ ಅನ್ನೋ ಮಾತುಗಳೂ ಕೇಳಿಬಂದಿದ್ದವು.

ತನ್ನ ಮೇಲೆ ಹಣ ಹೂಡಿದ ನಿರ್ಮಾಪಕ ಈ ಮಟ್ಟದ ಲುಕ್ಸಾನು ಅನುಭವಿಸಿರುವ ಹೊತ್ತಿನಲ್ಲೇ ಸಿಂಧೂ ಲೋಕನಾಥ್ ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್ ೨೩ರಲ್ಲಿ ಚೆಕ್ ಬೌನ್ಸ್ ಕುರಿತಂತೆ ಪ್ರಕರಣ ದಾಖಲು ಮಾಡಿದ್ದಾಳೆ ಅನ್ನೋ ಸುದ್ದಿ ಹೊರಬಿದ್ದಿದೆ.

ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಈಕೆಗೆ ಒಂದೂವರೆ ಲಕ್ಷದ ಚೆಕ್ ನೀಡಿದ್ದರಂತೆ. ಆ ನಂತರ ಒಂದೂಕಾಲು ಲಕ್ಷ ಹಣವನ್ನು ನಗದು ರೂಪದಲ್ಲಿ ಕೊಟ್ಟಿದ್ದು ಇನ್ನು ಇಪ್ಪತ್ತನಾಲ್ಕು ಸಾವಿರ ರುಪಾಯಿಗಳು ಬಾಕಿ ಇವೆಯಂತೆ. ಈ ಹಣಕ್ಕಾಗಿ ಸಿಂಧೂ ಪದೇ ಪದೇ ಚಂದ್ರಶೇಖರ್ ಅವರನ್ನು ಕೇಳಿದಾಗ ‘ಸದ್ಯಕ್ಕೆ ಸಿನಿಮಾದಿಂದ ನಷ್ಟ ಅನುಭವಿಸಿ ಕಷ್ಟದಲ್ಲಿದ್ದೀನಿ. ಆದಷ್ಟು ಬೇಗ ಕೊಡ್ತೀನಿ’ ಅಂತಾ ನಿರ್ಮಾಪಕರು ತಿಳಿಸಿದ್ದರಂತೆ. ಆದರೂ ಈಕೆ ಕೋರ್ಟು ಮೆಟ್ಟಿಲೇರಿದ್ದಾಳೆ.

Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಕಲಾವಿದರ ಸಂಘದಲ್ಲಿ ಕೇಸರೀಬಾತ್ ಕಾಟ! ಸರ್ವಾಧಿಕಾರಿ ಶಶಿಕಲಾ ಹಾವಳಿ ರಾಕ್‌ಲೈನ್ ಗಮನಕ್ಕೆ ಬಂದಿಲ್ಲವೇಕೆ?

Published

on


ಕನ್ನಡ ಚಿತ್ರರಂಗಕ್ಕೆ ಸಹಾಯವಾಗುವಂಥಾ ಒಂದು ಭವನ ನಿರ್ಮಿಸಬೇಕು ಅನ್ನೋದು ಡಾ.ರಾಜ್ ಕುಮಾರ್ ಅವರ ಕನಸಾಗಿತ್ತು. ಅದನ್ನು ನನಸು ಮಾಡಲು ಶ್ರಮಿಸಿ ಕಡೆಗೂ ಅದನ್ನು ಸಾರ್ಥಕಗೊಳಿಸಿದವರು ರೆಬೆಲ್ ಸ್ಟಾರ್ ಅಂಬರೀಶ್. ಅದಕ್ಕೆ ಬೆನ್ನೆಲುಬಾಗಿ ನಿಂತವರು ಧೀರ ರಾಕ್ ಲೈನ್ ವೆಂಕಟೇಶ್ ಮತ್ತು ಹಿರಿಯ ನಟ ದೊಡ್ಡಣ್ಣ. ಹಲವಾರು ಅಡೆತಡೆಗಳು, ಅಡ್ಡಿ ಆತಂಕಗಳ ನಡುವೆಯೂ ಕಲಾವಿದರ ಸಂಘಕ್ಕೊಂದು ಸ್ವಂತ ಕಟ್ಟಡ ನಿರ್ಮಾಣಗೊಂಡಿದ್ದು ಈಗ ಇತಿಹಾಸ.

ಸಾವಿರಾರು ಜನರ ದೇಣಿಗೆ, ನೂರಾರು ಜನರ ಪರಿಶ್ರಮ, ಕನ್ನಡ ಚಿತ್ರರಂಗದ ಹಿರಿಯ ಚೇತನಗಳ ಕನಸೆಲ್ಲಕ್ಕೂ ಈಗ ಯಾರ‍್ಯಾರೋ ಧಣಿಗಳಾಗಿಬಿಟ್ಟಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಅಲ್ಲೊಂದು ಇಲ್ಲೊಂದು ಪಾತ್ರಗಳಲ್ಲಿ ಕಾಣಿಸುವ ಪಳೆಯುಳಿಕೆಯಂಥಾ ನಟಿಯ ಹಾವಳಿ ಕಲಾವಿದರ ಸಂಘದಲ್ಲಿ ಮಿತಿಮೀರಿದೆ. ಈಕೆಯ ಹೆಸರು ಶಶಿಕಲಾ. ಸಿನಿಮಾಗಳಲ್ಲಿ ಸೈಡ್ ಆಕ್ಟಿಂಗ್ ಮಾಡಿಕೊಂಡಿದ್ದ ಈ ಹೆಂಗಸು ಈಗ ಕಲಾವಿದರ ಸಂಘದಲ್ಲಿ ಲೀಡ್ ರೋಲು ನಿಭಾಯಿಸುತ್ತಿದೆ!

ಈಕೆ ಕಲಾವಿದರ ಸಂಘದ ಕಟ್ಟಡದ ಇಂಚಾರ್ಜಂತೆ. ರವಿ ಎನ್ನುವ ಮ್ಯಾನೇಜರ್ ಇದ್ದಾಗ್ಯೂ ಬಿಲ್ಡಿಂಗಿನ ಮೇಂಟೇನೆನ್ಸ್ ನೋಡಿಕೊಳ್ಳುವ ಈಕೆಯ ಅಧಿಕಾರ ಬಲು ಜೋರಾಗಿಬಿಟ್ಟಿದೆ ಅನ್ನೋದು ಬಹುತೇಕರ ಆರೋಪ.

ಕಲಾವಿದರ ಸಂಘದಲ್ಲಿ ಕಾರ್ಯಕ್ರಮವೊಂದನ್ನು ನಡೆಸಬೇಕಾದರೆ ಶಶಿಕಲಾ ಬಳಿಯೇ ಕೆಟರಿಂಗ್ ಆರ್ಡರ್ ಕೊಡಬೇಕಂತೆ. ಒಂದು ವೇಳೆ ಹೊರಗಿನಿಂದ ಆಹಾರ ತರುತ್ತೇವೆಂದರೆ ಅದಕ್ಕೆ ಮೇಡಮ್ಮು ಒಪ್ಪೋದಿಲ್ಲವಂತೆ. ಬೇಕಿದ್ದರೆ ಬುಕ್ ಮಾಡಿ ಇಲ್ಲಾಂದ್ರೆ ಬೇರೆ ಎಲ್ಲಾದ್ರೂ ಮಾಡ್ಕೋ ಹೋಗಿ ಅಂತಾ ಶಶಿಕಲಾ ದರ್ಪದ ಮಾತಾಡುತ್ತಾಳಂತೆ. ಹೋಗಲಿ ಆಕೆಗೇ ಕೆಟರಿಂಗ್ ಆರ್ಡರ್ ಕೊಡೋಣ ಅಂದರೆ ಒಂದು ಉಪ್ಪಿಟ್ಟು, ಕೇಸರೀಬಾತು ಜೊತೆಗೊಂದು ಕಾಫಿ ಕೊಡಲು ಬರೋಬ್ಬರಿ ೮೩ ರುಪಾಯಿ ಚಾರ್ಜಂತೆ. ಹಣತೆ ಬೆಳಗುವ ದೀಪಾಳೆ ಕಂಬಕ್ಕೆ ಒಂದು ಸಾವಿರ ಬಾಡಿಗೆ, ತಾನು ಕರೆಸುವ ನಿರೂಪಕಿಯನ್ನೇ ಒಪ್ಪಬೇಕು… ಹೀಗೆ ಎಲ್ಲೆಲ್ಲಿ ಬೇಕೋ ಅಲ್ಲೆಲ್ಲಾ ಎತ್ತುವಳಿ ಮಾಡಲು ಶಶಿಕಲಾ ಮೇಡಂ ನಿಂತಿದ್ದಾರೆ. ಯಾವುದೇ ಸಿನಿಮಾ ಸಮಾರಂಭವೇ ಆಗಲಿ ಸೀದಾ ಹೋಗಿ ವೇದಿಕೆಯೇರಿ ನಿಲ್ಲೋ ಕೆಟ್ಟ ಚಾಳಿ ಬೇರೆ ಈಕೆಗಿದೆ.

ಸಿನಿಮಾ ಕಾರ್ಯಕ್ರಮಗಳನ್ನು ಮಾಡೋರಲ್ಲಿ ಉಳ್ಳವರು, ಇಲ್ಲದವರು ಎಲ್ಲರೂ ಇರುತ್ತಾರೆ. ಕಷ್ಟಪಟ್ಟು ಸಣ್ಣ ಪುಟ್ಟ ಬಜೆಟ್ಟಿನಲ್ಲಿ ಸಿನಿಮಾ ಮಾಡುವ ಬಡ ನಿರ್ಮಾಪಕರು ಶಶಿಕಲಾ ಹೇಳಿದ ರೇಟು ಕೊಟ್ಟು ಸಮಾರಂಭ ನಡೆಸಲು ಸಾಧ್ಯವೇ? ಕಲಾವಿದರ ಭವನ ನಿರ್ಮಾಣವಾಗುವುದರಲ್ಲಿ ಮಹತ್ವದ ಪಾತ್ರ ವಹಿಸಿದ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣರ ಕಿವಿಗೆ ಈಕೆಯ ಹಾವಳಿಯ ಬಗ್ಗೆ ಇನ್ನೂ ಮಾಹಿತಿ ಬಿದ್ದಿಲ್ಲವಾ? ಅಥವಾ ಗೊತ್ತಿದ್ದೂ ಏನೂ ಕ್ರಮ ಜರುಗಿಸಿಲ್ಲವಾ? ಒಂದುವೇಳೆ ನಿಮ್ಮ ಗಮನಕ್ಕೆ ಬರದೇ ಹೋಗಿದ್ದರೆ ಈಗಲಾದರೂ ಎಚ್ಚೆತ್ತುಕೊಂಡು ಶಶಿಕಲಾ ಕಾಟಕ್ಕೆ ಕಡಿವಾಣ ಹಾಕಿ ಪ್ಲೀಸ್… ಸಿನಿಮಾರಂಗದ ಎಂತೆಂಥಾ ಸಮಸ್ಯೆಗಳನ್ನು ಬಗೆಹರಿಸೋ ರಾಕ್ ಲೈನ್ ರಂಥವರಿಗೆ ಚಿತ್ರರಂಗದವರಿಗೆ ತಲೆನೋವಾಗಿರುವ ಈ ಯಕಃಶ್ಚಿತ್ ನಟಿಯ ರಾಜ್ಯಭಾರವನ್ನು ಮಟ್ಟ ಹಾಕೋದಕ್ಕೆ ಎಷ್ಟೊತ್ತು ಬೇಕು?

Continue Reading

ಕಲರ್ ಸ್ಟ್ರೀಟ್

ಕಾಸು ಪಡೆದರೂ ಕುಣಿಯದೇ ಯಾಮಾರಿಸಿದ್ದಳಂತೆ ಸನ್ನಿ ಲಿಯೋನ್!

Published

on


ನೀಲಿ ಚಿತ್ರಗಳ ಪ್ರಭೆಯಾಚೆಗೆ ಸನ್ನಿ ಲಿಯೋನ್ ನಟಿಯಾಗಿ ರೂಪುಗೊಂಡಿದ್ದಾಳೆ. ಸದ್ಯಕ್ಕೆ ದೊಡ್ಡ ದೊಡ್ಡ ಅವಕಾಶಗಳೇ ಸನ್ನಿಯನ್ನು ಹುಡುಕಿ ಬರಲಾರಂಭಿಸಿವೆ. ಈಕೆ ಸುಳಿದಾಡಿದರೂ ದೇಶಾಧ್ಯಂತ ಸುದ್ದಿಯಾಗೋದರಿಂದ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಸನ್ನಿಗೆ ಬೇಡಿಕೆ ಇದೆ. ಅದರ ಭರಾಟೆ ಎಂಥಾದ್ದಿದೆಯೆಂದರೆ, ಕೆಲವೊಮ್ಮೆ ಡೇಟು ಹೊಂದಿಸಿಕೊಳ್ಳೋದೇ ಕಷ್ಟವಾಗುವಂಥಾ ವಾತಾವರಣವೂ ಇದೆ. ಈ ಕಾರಣದಿಂದಲೇ ಸನ್ನಿ ಈಗ ಕಾಸು ತೆಗೆದುಕೊಂಡು ಕುಣಿಯದೇ ಯಾಮಾರಿಸಿದ ಆರೋಪವೊಂದಕ್ಕೆ ಗುರಿಯಾಗಿದ್ದಾಳೆ!
ಇಂಥಾದ್ದೊಂದು ಆರೋಪವನ್ನು ಸನ್ನಿ ಮೇಲೆ ಹೊರಿಸಿದಾತ ಮೂರು ವರ್ಷದ ಹಿಂದೆ ತೆರೆ ಕಂಡಿದ್ದ ಪಟೇಲಿ ಕಿ ಪಂಜಾಬಿ ಶಾದಿ ಚಿತ್ರದ ನಿರ್ಮಾಪಕ ಭರತ್. ಈ ಪುಣ್ಯಾತ್ಮ ಇಷ್ಟು ವರ್ಷಗಳಾದ ಮೇಲೆ ಅದ್ಯಾಕೆ ಈ ಆರೋಪ ಮಾಡಿದ್ದಾನೋ ಗೊತ್ತಿಲ್ಲ. ಆದರೆ ಕಾರಣವನ್ನಂತೂ ಕೊಟ್ಟಿದ್ದಾನೆ.
ಪಂಜಾಬಿ ಶಾದಿ ಚಿತ್ರದ ಹಾಡೊಂದರಲ್ಲಿ ಕುಣಿಯಲು ಈ ಚಿತ್ರತಂಡ ಸನ್ನಿಯನ್ನು ಒಪ್ಪಿಸಿತ್ತಂತೆ. ಇದಕ್ಕಾಗಿ ನಲವತ್ತು ಲಕ್ಷಕ್ಕೆ ಮಾತುಕತೆ ನಡೆದು ಅಡ್ವಾನ್ಸ್ ರೂಪದಲ್ಲಿ ಐದು ಲಕ್ಷವನ್ನು ಕೊಡಲಾಗಿತ್ತಂತೆ. ಆದರೆ ಆ ಹೊತ್ತಿಗೆಲ್ಲಾ ಸನ್ನಿ ಲಿಯೋನ್ ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಳು. ಕಡೆಗೂ ಆಕೆಗೆ ಡೇಟು ಹೊಂದಾಣಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಹೋಗಲಿ, ಕಾಸನ್ನೂ ವಾಪಾಸು ಕೊಡದೆ ಸನ್ನಿ ಸತಾಯಿಸಿದ್ದಾಳೆ ಅಂತ ಭರತ್ ಕೆಂಡ ಕಾರಿದ್ದಾನೆ.
ಈದರೆ ಸನ್ನಿ ಆಪ್ತ ವಲಯ ಬೇರೆಯದ್ದೇ ಕಥೆ ಹೇಳುತ್ತಿದೆ. ಸನ್ನಿ ಲಯೋನ್ ಪಂಜಾಬಿ ಶಾದಿ ಹಾಡಿನಲ್ಲಿ ಕುಣಿಯಲು ಒಪ್ಪಿಕೊಂಡಿದ್ದದ್ದು ನಿಜ. ಡೇಟು ಸಮಸ್ಯೆ ಆಗಿದ್ದೂ ಹೌದು. ಆದರೆ ಅಡ್ವಾನ್ಸ್ ಹಣ ಇಸಿದುಕೊಂಡಿದ್ದ ಮುಲಾಜಿನಿಂದ ಸನ್ನಿ ಹೇಗೋ ಡೇಟು ನೀಡಿದರೂ ಚಿತ್ರತಂಡವೇ ರೆಡಿಯಾಗಿರಲಿಲ್ಲ. ಆಸದ್ದರಿಂದಲೇ ಹಾಡಿನಲ್ಲಿ ಕುಣಿಯಲು ಸಾಧ್ಯವಾಗಲಿಲ್ಲ ಅನ್ನೋದು ಸನ್ನಿ ಆಪ್ತರ ಮಾತು. ಒಟ್ಟಾರೆಯಾಗಿ ಪಂಜಾಬಿ ಶಾದಿ ಅಟ್ಟರ್ ಫ್ಲಾಪ್ ಆಗಿ ಪಾಪರೆದ್ದಿದ್ದಿ ಭರತ್ ಸನ್ನಿ ಮೇಲೆ ಗೂಬೆ ಕೂರಿಸೋ ಮೂಲಕ ಒಂದಷ್ಟು ಪ್ರಚಾರವನ್ನಂತೂ ಗಿಟ್ಟಿಸಿಕೊಂಡಿದ್ದಾನೆ!

Continue Reading

ಗಾಂಧಿನಗರ ಗಾಸಿಪ್

ಕಿರಾತಕನ ಕತ್ತು ಹಿಸುಕಿದರಾ ಯಶ್?

Published

on

ಈಗ ಎಲ್ಲೆಲ್ಲೂ ಕೆಜಿಎಫ್ ಸಿನಿಮಾದ ಹವಾ. ಕರ್ನಾಟಕದ ಗಡಿ ದಾಟಿ ಇಂಡಿಯಾ ಪೂರ್ತಿ ರಾಕಿಂಗ್ ಸ್ಟಾರ್ ಸಿನಿಮಾ ಸೌಂಡು ಮಾಡುತ್ತಿದೆ. ಕನ್ನಡ ನಾಡಿಗಷ್ಟೇ ಗೊತ್ತಿದ್ದ ಕಿರಾತಕನ ಪರಿಚಯ ದೇಶಾದ್ಯಂತ ಪಸರಿಸಿಕೊಂಡಿದೆ. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಯಾರಿಗೂ ಗೊತ್ತಿಲ್ಲದ ನ್ಯೂಸೊಂದು ಇಲ್ಲಿದೆ.

ಈ ವಾರ ತೆರೆಗೆ ಬರುತ್ತಿರೋ ಕೆ.ಜಿ.ಎಫ್ ನಂತರ ಯಶ್ ಸಿನಿಮಾ ಯಾವುದು? ಅಂದರೆ, ಅವರ ಅಭಿಮಾನಿಗಳೆಲ್ಲಾ `ಕಿರಾತಕ-೨’ ಅಂತಾ ಕೂಗಿ ಹೇಳುತ್ತಿದ್ದಾರೆ. ಆದರೆ `ಕಿರಾತಕ-೨’ ಅನ್ನೋ ಚಿತ್ರ ಯಾವ ಕಾರಣಕ್ಕೂ ಮುಂದುವರೆಯೋದಿಲ್ಲ ಅನ್ನೋ ಮಾತು ಖುದ್ದು ರಾಕಿಂಗ್ ಸ್ಟಾರ್ ಸರ್ಕಲ್ಲಿನಲ್ಲೇ ಮಾರ್ದನಿಸುತ್ತಿದೆ.

ಈ ಹಿಂದೆ ದಿಲ್ ವಾಲಾ, ಮಾಲಾಶ್ರೀಯ ಶಕ್ತಿ ಮತ್ತು ರ್‍ಯಾಂಬೋ-೨ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ಅದಕ್ಕೂ ಮುಂಚೆ ಡೈಲಾಗ್ ರೈಟರ್ ಆಗಿ ಅಬ್ಬರಿಸಿದ್ದ ಅನಿಲ್ ಕುಮಾರ್ `ಕಿರಾತಕ-೨’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಕೆ.ಜಿ.ಎಫ್ ಶೂಟಿಂಗ್ ಮುಗಿದ ಕೂಡಲೇ `ಕಿರಾತಕ-೨’ ಆರಂಭವಾಗಿತ್ತು. ಮೂರು ವರ್ಷಗಳಿಂದ ಪೊದೆಯಂತೆ ಬೆಳೆದುಕೊಂಡಿದ್ದ ಗಡ್ಡವನ್ನು ಬೋಳಿಸಿಕೊಂಡುಬಂದು ಹತ್ತು ದಿನಗಳ ಕಾಲ ಚಿತ್ರೀಕರಣವನ್ನೂ ನಡೆಸಿಕೊಟ್ಟಿದ್ದರು ಯಶ್. ಈ ನಡುವೆ ಕೆ.ಜಿ.ಎಫ್. ಪರಭಾಷೆಗಳಿಗೂ ಡಬ್ ಆಗಿ ಟಾಕ್ ಕ್ರಿಯೇಟ್ ಮಾಡಲು ಶುರು ಮಾಡಿತು ನೋಡಿ… ಯಶ್‌ಗೆ `ಕಿರಾತಕ’ನ ಮೇಲೆ ಅಸಡ್ಡೆ ಶುರುವಾಯಿತು. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ತಯಾರುಮಾಡಿದ ಕೆ.ಜಿ.ಎಫ್ ಸಿನಿಮಾ ಈ ಪರಿ ಹೈಪು ಕ್ರಿಯೇಟ್ ಮಾಡಿರೋವಾಗ `ಕಿರಾತಕ’ನಂಥ ಸಾಧಾರಣ ಸಿನಿಮಾವನ್ನು ಮಾಡಬೇಕಾ ಅನ್ನೋ ಚಿಂತೆ ಯಶ್‌ಗೆ ಶುರುವಾಯಿತಂತೆ.

ಹೀಗಾಗಿ `ಹತ್ತು ದಿನ ಶೂಟಿಂಗ್ ಮಾಡಿರೋದಷ್ಟೇ ಅಲ್ವಾ? ಇಲ್ಲಿಗೇ ನಿಲ್ಲಿಸಿಬಿಡೋಣ’ ಅಂತ ತೀರ್ಮಾನಿಸಿದರು ಅನ್ನುತ್ತಿದೆ ಮೂಲ. ಇನ್ನೊಂದು ವಿಚಾರವೆಂದರೆ, ಈ ಸಿನಿಮಾಗೆ ಜಯಣ್ಣ ಬ್ಯಾನರಿನ ಹೆಸರು ಬಳಸಿಕೊಳ್ಳಲಾಗಿತ್ತಾದರೂ ಸ್ವತಃ ಯಶ್ ನಿರ್ಮಾಪಕರಾಗಿದ್ದರು ಅನ್ನೋದು.

ಏಕಾಏಕಿ ಸಿನಿಮಾ ನಿಂತುಹೋಗುತ್ತದೆ, ಅದೂ ಒಬ್ಬ ಸ್ಟಾರ್ ಸಿನಿಮಾ ಡ್ರಾಪ್ ಆಯಿತೆಂದರೆ ಅದರ ನಿರ್ದೇಶಕನ ಭವಿಷ್ಯಕ್ಕೆ ಕತ್ತಲು ಕವಿಯೋದು ಗ್ಯಾರೆಂಟಿ. ಹೀಗಾಗಿ `ಕಿರಾತಕ’ ನಿಲ್ಲಿಸಿದರು ಅನ್ನೋದನ್ನು ಮರೆ ಮಾಚಲಾಗಿದೆ. ಇತ್ತ ನಿರ್ದೇಶಕ ಅನಿಲ್ ಕುಮಾರ್ ಸೈಲೆಂಟಾಗಿ ರಾಮ್ ಕುಮಾರ್ ಪುತ್ರ ಧೀರನ್’ನನ್ನು ಹಾಕಿಕೊಂಡು `ದಾರಿ ತಪ್ಪಿದ ಮಗ’ ಅನ್ನೋ ಚಿತ್ರವನ್ನು ಆರಂಭಿಸಿದ್ದಾರೆ. ಯಶ್ ಸಿನಿಮಾ ಮುಂದುವರೆಯುವಂತಾಗಿದ್ದರೆ ಅನಿಲ್ ತಾನೆ ಮತ್ತೊಂದು ಸಿನಿಮಾ ಕೆಲಸ ಆರಂಭಿಸೋ ಪ್ರಮೇಯವೆಲ್ಲಿ ಬರುತ್ತಿತ್ತು? ಈ ವಿಚಾರವಾಗಿ ಮಾಧ್ಯಮದ ಮಂದಿ ಡೈರೆಕ್ಟರ್ ಅನಿಲ್ ಅವರನ್ನು ಪ್ರಶ್ನಿಸಿದರೆ `ಯಶ್ ಅವರು ಒಂಚೂರು ಬ್ಯುಸಿ ಇದಾರೆ’ ಅದಕ್ಕೇ ಮತ್ತೊಂದು ಸಿನಿಮಾ ಮಾಡ್ತಿದೀನಿ ಅಂತಾ ಸಬೂಬು ಹೇಳಿ ಸಿನಿಮಾ ನಿಂತುಹೋದ ವಿಚಾರವನ್ನು ಮರೆಮಾಚುತ್ತಿದ್ದಾರೆ.

ಒಟ್ಟಾರೆಯಾಗಿ ನೋಡಿದರೆ ಸದ್ಯದ ಪರಿಸ್ಥಿತಿಯಲ್ಲಿ `ಕಿರಾತಕ-೨’ ಮುಂದುವರೆಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಒಂದುವೇಳೆ ಕೆ.ಜಿ.ಎಫ್. ನಿರೀಕ್ಷೆಯಂತೇ ಗೆದ್ದರೆ, ಅದರ ಮುಂದುವರಿದ ಅಧ್ಯಾಯದಲ್ಲಿ ಯಶ್ ಬ್ಯುಸಿಯಾಗುತ್ತಾರೆ. ಪ್ರಶಾಂತ್ ನೀಲ್ ಸಿನಿಮಾ ಅಂದರೆ ಗೊತ್ತಲ್ಲ? ಹೆಚ್ಚೂಕಮ್ಮಿ ಅದು ಪಂಚವಾರ್ಷಿಕ ಯೋಜನೆಯಿದ್ದಂತೆ. ಅಲ್ಲಿಗೆ ಕಿರಾತಕ ಖತಂ ಅನ್ನೋದು ನಿಜವಾದಂತೆ!

Continue Reading
Advertisement
f2f 300 x 600
drive 300 x 600

Trending

Copyright © 2018 Cinibuzz