Connect with us

ಪ್ರೆಸ್ ಮೀಟ್

ಹೆಚ್.ಎಸ್.ವಿ. ಅಭಿನಯದ ಅಮೃತವಾಹಿನಿ…

Published

on

ಈ ಹಿಂದೆ ಹಸಿರು ರಿಬ್ಬನ್ ಎಂಬ ಚಿತ್ರದ ಮೂಲಕ ಕನ್ನಡದ ಹಿರಿಯ ಕವಿ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಿತರಾದದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಅವರು ಚಲನಚಿತ್ರವೊಂದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲಿರುವ ಅವರು ಹೀರೋ ಆಗಿ ನಟಿಸುತ್ತಿದ್ದಾರಾ ಎಂದು ಆಶ್ಚರ್ಯವಾಗಬಹುದು. ಅದನ್ನು ನಾಯಕ ಎನ್ನುವುದಕ್ಕಿಂತ ಪ್ರಧಾನ ಪಾತ್ರ ಎನ್ನಬಹುದು. ‘ಅಮೃತವಾಹಿನಿ’ ಎಂಬ ಹೊಸ ಚಿತ್ರದಲ್ಲಿ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದವಾರ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.

ಈ ಹಿಂದೆ ಓ ಗುಲಾಬಿಯೇ, ಪಲ್ಲಕ್ಕಿ ಅಲ್ಲದೆ ಇತ್ತೀಚೆಗಷ್ಟೇ ರಿಲೀಸಾಗಿರುವ ಹಿಲ್ಟನ್ ಹೌಸ್ ಸೇರಿದಂತೆ ಹಲವರು ಚಿತ್ರಗಳನ್ನು ನಿರ್ದೇಶಿಸಿರುವ ನರೇಂದ್ರ ಬಾಬು, ಈ ‘ಅಮೃತವಾಹಿನಿ’ ಚಿತ್ರವನ್ನು ನಿರ್ದೇಶಿಸುತ್ತಿzರೆ. ಸಾಹಿತಿ ರಾಘವೇಂದ್ರ ಪಾಟೀಲರ ಜೀವನದ ಕಥೆಯನ್ನಾಧರಿಸಿ ಈ ಚಿತ್ರಕ್ಕೆ ಚಿತ್ರಕಥೆ ಮಾಡಲಾಗುತ್ತಿದೆ. ಈ ಚಿತ್ರವು ಸಾಹಿತಿಯೊಬ್ಬರ ಜೀವನದ ಸುತ್ತ ಸುತ್ತಲಿದ್ದು, ಆ ಸಾಹಿತಿಯ ಪಾತ್ರವನ್ನೇ ಹಿರಿಯ ಕವಿ ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿ ಅವರು ನಿರ್ವಹಿಸುತ್ತಿದ್ದಾರೆ.

ಹೆಚ್‌ಎಸ್‌ವಿ ಅವರೊಂದಿಗೆ ಡಾ. ವತ್ಸಲಾ ಮೋಹನ್, ಭಾರ್ಗವಿ ನಾರಾಯಣ, ಸ್ವಸ್ತಿಕ್ ಶಂಕರ್, ಜಯಪ್ರಕಾಶ್, ಸುಪ್ರಿಯಾ ರಾವ್, ಸಂತೋಷ್ ಕರ್ಕಿ, ಕಡೂರು ಪ್ರಶಾಂತ್ ಮುಂತಾದವರು ನಟಿಸುತ್ತಿzರೆ. ಉಪಾಸನಾ ಮೋಹನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಗಿರಿಧರ್ ದಿವಾನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಹೆಚ್.ಎಸ್.ವಿ. ಅವರೇ ಸಾಹಿತ್ಯವನ್ನೂ ರಚಿಸುತ್ತಿದ್ದಾರೆ. ದೊಡ್ಡ ಗಣಪತಿ ದೇವಸ್ಥಾನದ ಎದುರಿನ ನವ ಮಂತ್ರಾಲಯದಲ್ಲಿ ಪ್ರಾರಂಭವಾದ ಈ ಚಿತ್ರ ಮುಹೂರ್ತ ದೃಷ್ಯಕ್ಕೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕ್ಯಾಮರಾ ಚಾಲನೆ ಮಾಡಿದರೆ, ನಟ-ನಿರ್ದೇಶಕ ರಮೇಶ್ ಅರವಿಂದ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.

Continue Reading
Advertisement
Click to comment

Leave a Reply

Your email address will not be published. Required fields are marked *

ಪ್ರಚಲಿತ ವಿದ್ಯಮಾನ

ಲವರ್ ಬಾಯ್ಸ್ ವಿತ್ ಆರೆಂಜ್!

Published

on

 
ನಿಮ್ಮ ಸಿನಿಮಾ ಲಾಂಛನದಲ್ಲಿ ನವೀನ್ ಅವರು ನಿರ್ಮಿಸಿರುವ, ಗೋಲ್ದನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ‘ಆರೆಂಜ್‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ರಾಜ್ ಅವರೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಮುರಳಿ ನೃತ್ಯ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಗಣೇಶ್, ಪ್ರಿಯಾ ಆನಂದ್, ಸಾಧುಕೋಕಿಲ, ರಂಗಾಯಣ ರಘು, ಅವಿನಾಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದೇ ಪ್ರಶಾಂತ್ ರಾಜ್ ನಿರ್ದೇಶಿಸಿ, ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ ಜ಼ೂಮ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಯಶಸ್ವಿ ಜೋಡಿಯ ‘ಆರೆಂಜ್’ ತೆರೆಗೆ ಬರುತ್ತಿರೋದರಿಂದ ಪ್ರೇಕ್ಷಕ ವಲಯದಲ್ಲೂ ಒಂಥರಾ ಕುತೂಹಲ ಮನೆ ಮಾಡಿದೆ. ‘ಲವ್ ಗುರು’ ಸಿನಿಮಾದ ಮೂಲಕ ನಿರ್ದೇಶಕರಾಗಿ ಬಂದು ಗೆಲುವು ಕಂಡವರು ಪ್ರಶಾಂತ್ ರಾಜ್, ಲವರ್ ಬಾಯ್ ಆಗಿದ್ದುಕೊಂಡೇ ಸಿನಿಮಾ ಪ್ರೇಮಿಗಳ ಎದೆಗೆ ಮುಂಗಾರುಮಳೆ ಚುಮುಕಿಸಿದವರು ಗಣೇಶ್. ಈ ಇಬ್ಬರ ಕಾಂಬಿನೇಷನ್ ‘ಆರೆಂಜ್’ ಮೂಲಕ ಮತ್ತೆ ಒಂದಾಗಿರೋ ವಿಚಾರವೇ ಮಜಬೂತಾಗಿದೆ. ಈಗಾಗಲೇ ಹೊರಬಂದಿರುವ ಹಾಡುಗಳು ಕೇಳುಗರ ಕಿವಿಗೆ ನಾಟಿದ್ದು, ಮನಸ್ಸಿನಲ್ಲಿ ಹಿತವಾದ ಭಾವ ಹೊಮ್ಮಿಸಿದೆ. ಈ ವಾರವೇ ತೆರೆಗೆ ಬರುತ್ತಿರುವ ‘ಆರೆಂಜ್’ ನೋಡಿದ ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳುವ ಲಕ್ಷಣವೇ ಹೆಚ್ಚಾಗಿದೆ…

Continue Reading

ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಕೆಜಿಎಫ್ ಆಡಿಯೋ ಹಕ್ಕಿಗೆ ಮೂರು ಕೋಟಿ ಅರವತ್ತು ಲಕ್ಷ!

Published

on

ಕನ್ನಡದ ಮಟ್ಟಿಗೆ ಲಹರಿ ಆಡಿಯೋ ಸಂಸ್ಥೆ ಸಾರ್ವಕಾಲಿಕ ದಾಖಲೆಗಳ ರೂವಾರಿ. ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಳ್ಳೋದು ಲಹರಿಯ ಸ್ಪೆಷಾಲಿಟಿ. ಆದರೆ ಈಗ ಈ ಸಂಸ್ಥೆ ಮಾಡಿರೋ ದಾಖಲೆ ಮಾತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳ ಚಿತ್ರರಂಗದವರೂ ಬೆರಗಾಗಿದ್ದಾರೆ!

ಅಂದಹಾಗೆ, ಕನ್ನಡದ ಕೆಜಿಎಫ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆಯಲ್ಲಾ? ಅದರಲ್ಲಿ ಹಿಂದಿ ಒಂದನ್ನು ಹೊರತು ಪಡಿಸಿ ಮಿಕ್ಕ ನಾಲಕ್ಕೂ ಭಾಷೆಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿದೆ. ಆ ಮೊತ್ತ ಬರೋಬ್ಬರಿ 3.60 ಕೋಟಿ!

ಇದು ನಿಜಕ್ಕೂ ದಾಖಲೆ. ಕನ್ನಡ, ತೆಲುಗು, ಮಲೆಯಾಳಂ ಮತ್ತು ತಮಿಳು ಭಾಷೆಗಳ ಕೆಜಿಎಫ್ ಆಡಿಯೋ ಹಕ್ಕನ್ನು ಈ ಪಾಟಿ ದೊಡ್ಡ ಮೊತ್ತಕ್ಕೆ ಖರೀದಿಸೋ ಮೂಲಕ ಲಹರಿ ಸಂಸ್ಥೆ ಕೆಜಿಎಫ್ ಚಿತ್ರಕ್ಕೆ ಮತ್ತಷ್ಟು ಖದರು ತಂದು ಕೊಟ್ಟಿರೋದಂತೂ ಸತ್ಯ.

ಈ ಮೂಲಕ ಲಹರಿ ವೇಲು ಈ ಹಿಂದೆ ತಾವೇ ಸೃಷ್ಟಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದಂತಾಗಿದೆ. 1992ರಲ್ಲಿ ದಳಪತಿ ಚಿತ್ರದ ಆಡಿಯೋ ಹಕ್ಕುಗಳನ್ನು ಈ ಸಂಸ್ಥೆ ಎಪ್ಪತೈದು ಲಕ್ಷ ಕೊಟ್ಟು ಖರೀದಿಸಿತ್ತು. ಈ ಸುದ್ದಿ ಕೇಳಿ ಎಲ್ಲರೂ ಬೆರಗಾಗಿದ್ದರು. ಇಂಥಾದ್ದೊಂದು ದಾಖಲೆಯ ನಂತರ ಬಾಹುಬಲಿ ಚಿತ್ರದ ಆಡಿಯೋ ಹಕ್ಕುಗಳನ್ನೂ ಕೂಡಾ ಭಾರೀ ಮೊತ್ತಕ್ಕೇ ಖರೀದಿಸಲಾಗಿತ್ತು. ಇದೀಗ ಖುದ್ದು ಲಹರಿ ಸಂಸ್ಥೆ ಕೆಜಿಎಫ್ ಮೂಲಕ ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಂಡಿದೆ.

ಕೆಜಿಎಫ್ ಚಿತ್ರದ ಟೀಸರ್‌ಗೆ ದೇಶಾಧ್ಯಂತ ವ್ಯಾಪಕ ಮೆಚ್ಚುಗೆ ಕೇಳಿ ಬರುತ್ತಿದೆ. ಕನ್ನಡ ಚಿತ್ರವೊಂದು ಬೇರೆ ಭಾಷೆಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ, ಕನ್ನಡ ಚಿತ್ರರಂಗದ ಗರಿಮೆಯನ್ನು ಎತ್ತಿ ಹಿಡಿಯುತ್ತಿರೋದರಿಂದ ಖುಷಿಗೊಂಡಿರೋ ವೇಲು ಅವರು ದಾಖಲೆ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿ ಮಾಡಿದ್ದಾರಂತೆ.

Continue Reading

ಪ್ರೆಸ್ ಮೀಟ್

ಬುಡು ಬುಡುಕೆ ಬಡಿಯೋರ ಬದುಕಿನ ಬಗ್ಗೆ ನಿಮಗೆಷ್ಷು ಗೊತ್ತು?

Published

on


ಈ ಹಿಂದೆ ರಥಾವರ ಚಿತ್ರ ನಿರ್ದೇಶನ ಮಾಡಿದ್ದ ಚಂದ್ರಶೇಖರ ಬಂಡಿಯಪ್ಪರ ಹೊಸಾ ಚಿತ್ರ ತಾರಕಾಸುರ. ಈಗಾಗಲೇ ಭಿನ್ನವಾದ ಕಥೆಯೊಂದರ ಸುಳಿವಿನಿಂದ, ಎಂಥವರನ್ನೂ ಬೆರಗಾಗಿಸುವಂಥಾ ಪೋಸ್ಟರುಗಳಿಂದ ಈ ಚಿತ್ರ ಜನಮನ ಸೆಳೆದುಕೊಂಡಿದೆ. ಈ ಚಿತ್ರ ಈ ವಾರವೇ ತೆರೆ ಕಾಣಲಿದೆ.

ಈ ಚಿತ್ರದ ನಿರ್ಮಾಪಕರು. ಇವರ ಪುತ್ರ ವೈಭವ್ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ವೈಭವ್ ಥರ ಥರದ ಶೇಡುಗಳಿರೋ ಭಿನ್ನವಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದ್ಯಾವುದೋ ಲೇಖನವೊಂದನ್ನು ಓದುವಾಗ ನಶಿಸಿ ಹೋಗುತ್ತಿರೋ ವಿಶಷ್ಟ ಜಾನಪದ ಪ್ರಾಕಾರವೊಂದು ಬಂಡಿಯಪ್ಪನವರ ಕಣ್ಣಿಗೆ ಬಿದ್ದಿತ್ತು. ಎಂದಿನ ಕುತೂಹಲದಿಂದ ಅದರ ಬೆಂಬಿದ್ದವರಿಗೆ ಸಿಕ್ಕಿದ್ದು ವಿಸ್ಮಯಕರ ಮಾಹಿತಿ. ಇದರ ಮೂಲಕವೇ ತಾರಕಾಸುರ ಎಂಬ ಅಚ್ಚರಿಯ ಕಥೆಯೊಂದಕ್ಕೆ ಬಂಡಿಯಪ್ಪ ಜೀವ ತುಂಬಿದ್ದರು. ಈ ಹಿಂದೆ ರಥಾವರ ಚಿತ್ರದಲ್ಲಿ ಮಂಗಳಮುಖಿಯರ ಜಗತ್ತನ್ನು ತೆರೆದಿಟ್ಟಿದ್ದರಲ್ಲಾ? ಅಂಥದ್ದೇ ರೋಚಕತೆಯೊಂದಿಗೆ ಈ ಚಿತ್ರದಲ್ಲಿ ಬುಡುಬುಡ್ಕೆ ಸಮುದಾಯದ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

ಒಂದು ಸಮುದಾಯದ ಸುತ್ತಲಿನ ಕಥಾ ಹಂದರ ಹೊಂದಿದ್ದರೂ ತಾರಕಾಸುರ ಪಕ್ಕಾ ಕಮರ್ಶಿಯಲ್ ಚಿತ್ರ. ಹಾಲಿವುಡ್‌ನ ಖ್ಯಾತ ನಟ ಡ್ಯಾನಿ ಸಫಾನಿ ಈ ಚಿತ್ರದಲ್ಲಿ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಅದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದಾಗಿದೆ. ಇದೂ ಸೇರಿದಂತೆ ತಾರಕಾಸುರನ ಬಗ್ಗೆ ಇಂಥಾದ್ದೊಂದು ಕೌತುಕ ಹುಟ್ಟಿಕೊಳ್ಳಲು ನಾನಾ ಕಾರಣಗಳಿವೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz