Connect with us

ಪ್ರಚಲಿತ ವಿದ್ಯಮಾನ

ಇನ್ನೊಮ್ಮೆ ಫೈಟಿಂಗ್ ಮಾಡಿದ್ರೆ ಬುಡದಲ್ಲಿ ಬಾಸುಂಡೆ ಗ್ಯಾರೆಂಟಿ!

Published

on

ಅರೆಹುಚ್ಚನಾಗಿದ್ದ ವೆಂಕಟ ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಪರಿಪೂರ್ಣ ಹುಚ್ಚನಾಗಿ ಬದಲಾಗಿದ್ದಾನೆ. ಇದರ ಸಂಪೂರ್ಣ ಶ್ರೇಯಸ್ಸು ಬಿಗ್‌ಬಾಸ್ ಶೋನ ಆಯೋಜಕರಿಗೂ, ವೆಂಕಟನನ್ನು ಕಮಂಗಿಯಂತೆ ಕುಣಿಸಿದ ದೃಷ್ಯ ಮಾಧ್ಯಮಗಳಿಗೂ ಸಲ್ಲುತ್ತದೆ. ಬಿಗ್‌ಬಾಸ್ ಬಯಲಾಟ ಮುಗಿದ ಮೇಲೆ ಅಕ್ಷರಶಃ ಗುಜರಿ ಐಟಮ್ಮಿನಂತಾಗಿ ಹೋದ ವೆಂಕಟನಿಗೀಗ ಐಡೆಂಟಿಟಿ ಕ್ರೈಸಿಸ್‌ನ ಬಾಧೆ ಮತ್ತೆ ಹುಚ್ಚು ಕೆರಳುವಂತೆ ಮಾಡಿದೆ!

ಇಂಥಾ ವೆಂಕಟ ಉಲ್ಲಾಳದ ಬೇಕರಿಯೊಂದರ ಮುಂದೆ ಕಿರಿಕ್ಕು ತೆಗೆದು ಇಬ್ಬರಿಗೆ ಹೀನಾಮಾನ ಬಡಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಬೇಕರಿಯವನನ್ನು ಬೀದಿ ತುಂಬಾ ಅಟ್ಟಾಡಿಸಿದ ಈ ದೃಷ್ಯಾವಳಿಗಳ ಮೂಲಕ ಹುಚ್ಚಾ ವೆಂಕಟನ ಅನಾಹುತಕಾರಿ ಅವತಾರವೂ ಬಯಲಾಗಿತ್ತು. ಇದೀಗ ಈ ಬಗ್ಗೆ ಉಲ್ಲಾಳ ಪೊಲೀಸರು ವೆಂಕಟನನ್ನು ಕರೆಸಿಕೊಂಡು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನೊಂದು ಸಲ ಹೀಗೆ ಜುಟ್ಟು ಕೆದರಿಕೊಂಡು ಫೈಟ್ ಸೀನು ಕ್ರಿಯೇಟ್ ಮಾಡಿದರೆ ಬುಡದಲ್ಲಿ ಬಾಸುಂಡೆ ಏಳೋದನ್ನು ಯಾರೂ ತಪ್ಪಿಸಲಾಗೋದಿಲ್ಲ ಅಂತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಸಕರ ಹಿತದೃಷ್ಟಿಯಿಂದ ಖಂಡಿತಾ ಉಲ್ಲಾಳ ಪೊಲೀಸರ ಈ ನಡೆ ಸ್ವಾಗತಾರ್ಹ. ಸದ್ಯ ವೆಂಕಟನ ಸ್ಥಿತಿಯನ್ನು ಇಂಥಾ ಎಚ್ಚರಿಕೆಗಳಿಂದಲಷ್ಟೇ ಹತೋಟಿಯಲ್ಲಿಡಲು ಸಾಧ್ಯ ಎಂಬಂಥಾ ವಾತಾವರಣವಿದೆ. ಪೊಲೀಸರೇ ದೊಡ್ಡ ಮನಸು ಮಾಡಿ ಆತನಿಗೊಂದು ಮಾನಸಿಕ ಚಿಕಿತ್ಸೆ ಕೊಡಿಸೋ ವ್ಯವಸ್ಥೆ ಮಾಡಿದರೆ ಅದು ಇನ್ನೂ ಒಳ್ಳೆ ಕೆಲಸವಾಗುತ್ತೆ. ಹೀಗಂತ ಸಾರ್ವಜನಿಕರೇ ಅಭಿಪ್ರಾಯ ಪಡುತ್ತಿದ್ದಾರೆ.

ಬಿಗ್‌ಬಾಸ್ ಶೋ ಮತ್ತು ಆ ನಂತರದ ಬಿಲ್ಡಪ್ಪುಗಳು ವೆಂಕಟನೊಳಗಿದ್ದ ಭ್ರಮೆಗಳನ್ನು ಮತ್ತಷ್ಟು ಕೆರಳಿಸಿ ಬೀದಿಗೆ ಬಿಟ್ಟಿದ್ದವು. ಇದು ತನ್ನೊಳಗೆ ಸಾಕಿಕೊಂಡಿದ್ದ ಹೀರೋಯಿಸಂ ಎಲ್ಲವೂ ಭ್ರಮೆ ಎಂಬ ವಾಸ್ತವವನ್ನು ಹುಚ್ಚಾ ವೆಂಕಟ ಎದುರುಗೊಳ್ಳಲೇ ಬೇಕಾದ ಸ್ಥಿತಿ ಬಂದೊದಗಿದೆ. ಆ ಮಾನಸಿಕ ಒತ್ತಡ ಇಂಥಾ ವರ್ತನೆಗಳ ಮೂಲಕ ಹೊರ ಬರಲಾರಂಭಿಸಿದೆ ಅಂತ ಮಾನಸಿಕ ತಜ್ಞರೂ ಅಭಿಪ್ರಾಯ ಪಡುತ್ತಿದ್ದಾರೆ.

ಪ್ರಚಲಿತ ವಿದ್ಯಮಾನ

ನೆಮ್ಮದಿ ಅರಸಿ ವಿದೇಶಕ್ಕೆ ತರಳಿದರಾ ರಕ್ಷಿತ್ ಶೆಟ್ಟಿ?

Published

on

ಇಡೀ ರಾಜ್ಯದ ತುಂಬಾ ಸುದ್ದಿಯಾಗುವಂತೆ ಅದ್ದೂರಿಯಾಗಿ ರಶ್ಮಿಕಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಈಗ ಬ್ರೇಕಪ್ ಸಂಕಟದಲ್ಲಿದ್ದಾರೆ. ಈ ಬಗ್ಗೆ ಕ್ಷಣಕ್ಕೊಂದರಂತೆ ಹೊರ ಬೀಳುತ್ತಿರೋ ರೂಮರ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್‌ಗಳು… ಇದೆಲ್ಲದರಿಂದ ಕಂಗೆಟ್ಟಿರೋ ರಕ್ಷಿತ್ ನೆಮ್ಮದಿ ಅರಸಿಕೊಂಡು ವಿದೇಶದತ್ತ ತೆರಳಿದರಾ? ಇಂಥಾದ್ದೊಂದು ಪ್ರಶ್ನೆ ಅವರ ಅಭಿಮಾನಿ ಬಳಗದಲ್ಲಿಯೂ ಹುಟ್ಟಿಕೊಂಡಿದೆ.

ರಕ್ಷಿತ್ ಶೆಟ್ಟಿ ಇದೀಗ ಪುಷ್ಕರ್ ಮಲ್ಲಿಕಾರ್ಜುನಯ್ಯ, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದಾರೆ. ಅಲ್ಲಿಯೇ ಒಂದಷ್ಟು ಸ್ಥಳಗಳಿಗೆ ಭೇಟಿ ನೀಡಿ ನಿರಾಳವಾಗೋ ಯೋಜನೆಯನ್ನೂ ಹಾಕಿಕೊಂಡಿದ್ದಾರಂತೆ. ಹೀಗೊಂದು ಸುದ್ದಿ ಎಲ್ಲೆಡೆ ಹರಡಿಕೊಂಡಿದೆ. ಸದ್ಯದ ವಾತಾವರಣವೂ ಈ ಸುದ್ದಿಯನ್ನು ಪುಷ್ಟೀಕರಸುವಂತಿದೆ.

ಸದ್ಯದಲ್ಲಿಯೇ ಎಲ್ಲ ವಿಚಾರಗಳೂ ಬಯಲಾಗಲಿವೆ ಎಂಬರ್ಥದ ಹೇಳಿಕೆಯನ್ನು ಹೊರತಾಗಿಸಿ ಬೇರ್‍ಯಾವ ನಿಖರ ಉತ್ತರಗಳೂ ರಕ್ಷಿತ್ ಕಡೆಯಿಂದ ಬಂದಿಲ್ಲ. ಆದರೆ ಈ ಬಗ್ಗೆ ರಕ್ಷಿತ್ ಡಿಪ್ರೆಸ್ ಮೂಡಿಗೆ ಜಾರಿರೋದಂತೂ ನಿಜ. ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವಾರು ಗೆಳೆಯರು ರಕ್ಷಿತ್ ಪರವಾಗಿ ಮಾತಾಡಿದರೂ ಪ್ರಯೋಜನವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬ್ರೇಕಪ್ ಸುದ್ದಿ ರೆಕ್ಕೆ ಪುಕ್ಕದ ಸಮೇತ ಹಾರಾಡುತ್ತಿದೆ.

ಇಂಥಾದ್ದರಿಂದ ರಕ್ಷಿತ್ ಅದೆಷ್ಟು ಕಂಗಾಲಾಗಿದ್ದರೆಂದರೆ ಅವರು ವಾರದ ಹಿಂದೆ ಸಾಮಾಜಿಕ ಜಾಲತಾಣಗಳಿಂದ ಹೊರ ನಡೆದಿದ್ದರು. ಇದೀಗ ಬ್ರೇಕಪ್ ಬಗ್ಗೆ ನಿಖರವಾದ ಹೇಳಿಕೆ ನೀಡಲೇ ಬೇಕಾದ ಅನಿವಾರ್ಯತೆ ರಕ್ಷಿತ್‌ಗಿದೆ. ಈ ಬಗ್ಗೆ ಯಾವ ನಿಧಾರ ತಳೆಯೋದೆಂಬ ಆಲೋಚನೆಯ ಅಜೆಂಡಾವನ್ನೂ ಕೂಡಾ ರಕ್ಷಿತ್ ಅವರ ವಿದೇಶ ಪ್ರವಾಸ ಹೊಂದಿರುವಂತಿದೆ!

Continue Reading

ಪ್ರಚಲಿತ ವಿದ್ಯಮಾನ

ಕ್ರಿಕೆಟ್ ಕೋಚ್ ಬದುಕಿನ ಪಿಚ್ಚಿಗೆ ಬಂದವಳು ನಿಮ್ರತ್ ಕೌರ್!

Published

on

ಕೆಲ ದಿನಗಳಿಂದ ಭಾರತ ಕ್ರಿಕೆಟ್ ಟೀಮಿನ ಕೋಚ್ ರವಿ ಶಾಸ್ತ್ರಿಯ ಹೊಸಾ ಅಫೇರಿನ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು. ನಟಿ ನಿಮ್ರತ್ ಕೌರ್ ಜೊತೆ ರವಿಶಾಸ್ತ್ರಿ ಇರೋ ಫೋಟೋಗಳ ರೆಕ್ಕೆಪುಕ್ಕ ಕಟ್ಟಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದ್ದವು. ಇದೀಗ ಖುದ್ದು ರವಿ ಶಾಸ್ತ್ರಿಯೇ ನಟಿಯೊಂದಿಗಿನ ತಮ್ಮ ಮತ್ತೊಂದು ಲವ್ ಸ್ಟೋರಿಯನ್ನು ಒಪ್ಪಿಕೊಂಡಿದ್ದಾರೆ!

ಅಷ್ಟಕ್ಕೂ ಕ್ರಿಕೆಟರ್ ರವಿ ಶಾಸ್ತ್ರಿಯ ಪ್ರೇಮ ಪ್ರಕರಣಗಳಿಗೆ ದಶಕಗಳಷ್ಟು ಹಿಂದಿನ ಇತಿಹಾಸವಿದೆ. ಈತ ಕ್ರಿಕೆಟ್‌ಗಿಂತಲೂ ಹೆಚ್ಚಾಗಿ ಬಾಲಿವುಡ್ ನಟಿಯರೊಂದಿಗಿನ ಸಂಬಂಧದಿಂದಲೇ ಸದ್ದು ಮಾಡಿದ್ದು ಹೆಚ್ಚು. ಇಂಥಾ ರವಿ ಶಾಸ್ತ್ರಿ ಇದೀಗ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದದ್ದು ನಟಿ ನಿಮ್ರತ್ ಕೌರ್ ಜೊತೆ ಕಂಡ ಕಂಡಲ್ಲಿ ಓಡಾಡುವ ಮೂಲಕ. ಇದೀಗ ಇದರ ಹಿಂದಿನ ಅಸಲೀ ಸತ್ಯ ರಸಿಕ ರವಿ ಶಾಸ್ತ್ರಿ ಕಡೆಯಿಂದಲೇ ಜಾಹೀರಾಗಿದೆ.

ರವಿಶಾಸ್ತ್ರಿ ಮತ್ತು ನಟಿ ನಿಮ್ರತ್ ಕೌರ್ ಈಗ್ಗೆ ಎರಡು ವರ್ಷಗಳಿಂದ ರಿಲೇಷನ್ ಶಿಪ್ಪಲ್ಲಿದ್ದಾರಂತೆ. ೨೦೧೫ರಲ್ಲಿ ನಡೆದಿದ್ದ ಜರ್ಮನ್ ಕಂಪೆನಿಯ ಕಾರ್ ಒಂದರ ಲಾಂಚಿಂಗ್ ಪ್ರೋಗ್ರಾಮಿನಲ್ಲಿ ರವಿಶಾಸ್ತ್ರಿ ಮತ್ತು ನಿಮ್ರತ್ ಭೇಟಿ ಸಂಭವಿಸಿತ್ತು. ಸುಂದರಿಯೊಬ್ಬಳ್ಳು ಕಣ್ಣೆದುರು ನಿಂತರೆ ಶಾಸ್ತ್ರಿಗೆ ಲವ್ವಾಗಲು ಹೆಚ್ಚು ಕಾಲವೇನೂ ಹಿಡಿಯೋದಿಲ್ಲ. ನಟಿ ನಿಮ್ರತ್ ಕೌರ್ ಮೇಲೆ ಕಣ್ಣಿಟ್ಟ ರವಿಶಾಸ್ತ್ರಿ ಮಾತಾಡಿಸಿದ್ದೇ ಅಲ್ಲೊಂದು ಗೆಳೆತನ ಮೂಡಿಕೊಂಡಿತ್ತಂತೆ. ಅದು ಪ್ರೇಮಕ್ಕೆ ತಿರುಗಿ ಮದುವೆಯ ಹಂಗಿಲ್ಲದೆ ಒಟ್ಟಿಗಿರೋವಷ್ಟರ ಮಟ್ಟಿಗೆ ಇಬ್ಬರೂ ಹತ್ತಿರಾಗಿದ್ದಾರಂತೆ!

ರವಿಶಾಸ್ತ್ರಿ ಹಳೇ ಪ್ರೇಮ ಪುರಾಣಗಳು, ಆತನ ಅಫೇರುಗಳನ್ನು ಬಲ್ಲವರಿಗೆ ಈ ಹೊಸಾ ಸ್ಟೋರಿ ಕೇಳಿ ಯಾವ ಅಚ್ಚರಿಯೂ ಕಾಡುವುದಿಲ್ಲ. ಈತ ಬಹು ಹಿಂದೆಯೇ ಕೈಹಿಡಿದಿದ್ದ ಪತ್ನಿ ರಿತುಗೆ ಡಿವೋರ್ಸ್ ಕೊಟ್ಟಿದ್ದ. ಆ ನಂತರದಲ್ಲಿ ಈ ತ ಭಾರಿ ಸುದ್ದಿಗೆ ಬಂದಿದ್ದದ್ದು ಸೈಫ್ ಅಲಿಖಾನ್ ಮಾಜಿ ಹೆಂಡತಿ ಅಮೃತಾ ಸಿಂಗ್ ಜೊತೆಗಿನ ಸಂಬಂಧದಿಂದ. ಆ ನಂತರ ಹೆಣ್ಣುಗಳನ್ನು ಬದಲಾಯಿಸುತ್ತಾ ಸಾಗಿದ ರವಿಶಾಸ್ತ್ರಿ ಸದ್ಯಕ್ಕೆ ನಿಮ್ರತ್ ಜೊತೆಗೆ ಅಡ್ಡಾಡುತ್ತಿದ್ದಾರೆ!

Continue Reading

ಪ್ರಚಲಿತ ವಿದ್ಯಮಾನ

ಕೊಪ್ಪಳದಲ್ಲಿ ನೀನಾಸಂ ಸತೀಶ್ ವಿಜಯೋತ್ಸವ!

Published

on

ಪರಭಾಷಾ ಮೋಹದ ಒಂದಷ್ಟು ಅಡೆತಡೆಗಳನ್ನು ಅಯೋಗ್ಯ ಚಿತ್ರ ದಾಟಿಕೊಂಡಿದೆ. ನೀನಾಸಂ ಸತೀಶ್ ಅಭಿನಯದ ಈ ಚಿತ್ರ ಯಶಸ್ವಿಯಾಗಿ ಮೂರನೇ ವಾರವನ್ನು ಪೂರೈಸಿಕೊಂಡಿದೆ. ಈ ಸಂಭ್ರಮವನ್ನು ನೀನಾಸಂ ಸತೀಶ್ ಕೊಪ್ಪಳದ ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸಿಕೊಂಡಿದ್ದಾರೆ.

ನೀನಾಸಂ ಸತೀಶ್ ಕೊಪ್ಪಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಭಾಗದಲ್ಲಿ ಅಯೋಗ್ಯ ಸಿನಿಮಾ ಬಿಡುಗಡೆಯಾದಂದಿನಿಂದಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳೆಲ್ಲ ನೀನಾಸಂ ಸತೀಶ್ ಅವರನ್ನು ಸಂಭ್ರಮದಿಂದ ಸ್ವಾಗತಿಸಿ ಕುಣಿದಾಡಿದ್ದಾರೆ.

ಮೂರನೇ ವಾರ ದಾಟಿಕೊಂಡ ನಂತರವೂ ಅಯೋಗ್ಯ ಚಿತ್ರ ಅತೀ ಹೆಚ್ಚು ಚಿತ್ರ ಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ಮೂಲಕವೇ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಜೋಡಿ ಪ್ರೇಕ್ಷಕರ ಮನಗೆದ್ದಿದೆ. ಹಾಡುಗಳಿಂದಲೇ ಶುರುವಾಗಿದ್ದ ಅಯೋಗ್ಯನ ಅಬ್ಬರ ಇದೀಗ ಥೇಟರುಗಳಲ್ಲಿಯೂ ಅದೇ ರೀತಿಯಾಗಿ ಮುಂದುವರೆದಿದೆ. ಈ ಸಿನಿಮಾ ಕಲೆಕ್ಷನ್ನಿನಲ್ಲಿಯೂ ದಾಖಲೆ ಬರೆಯುತ್ತಿದೆ. ಒಟ್ಟಾರೆಯಾಗಿ ಇಡೀ ಕರ್ನಾಟಕದ ತುಂಬಾ ಅಯೋಗ್ಯ ಯಶಸ್ವಿಯಾಗಿರೋದರಿಂದ ನೀನಾಸಂ ಸತೀಶ್ ಭರಪೂರವಾದ ಗೆಲುವು ಸಿಕ್ಕಿದ ಖುಷಿಯಲ್ಲಿದ್ದಾರೆ.

Continue Reading

Trending

Copyright © 2018 Cinibuzz