One N Only Exclusive Cine Portal

ಹೆಣ್ಮಕ್ಕಳಿಗಾಗಿ ಜೈಲುಪಾಲಾಗಲೂ ಸಿದ್ಧ ಅಂದ ಹುಚ್ಚಾ ವೆಂಕಟ!

ಕೆಲ ದಿನಗಳಿಂದ ಯಾವ ರಗಳೆ ರಾಮಾಯಣಗಳೂ ಇಲ್ಲದೆ ತನ್ನ ಪಾಡಿಗೆ ತಾನಿದ್ದಂತಿದ್ದ ಹುಚ್ಚಾ ವೆಂಕಟ ಮತ್ತೆ ಪ್ರತ್ಯಕ್ಷವಾಗಿದ್ದಾನೆ. ಹಾಗಂತ ಈ ಬಾರಿ ಆತ ರಾವುದೇ ರಂಖಲು ಮಾಡಿಕೊಂಡು ಗೊಣ್ಣೆ ಸುರಿಸುತ್ತಾ ಮಾಧ್ಯಮದವರನ್ನು ಭೇಟಿಯಾಗಿಲ್ಲ. ಬದಲಾಗಿ ಬೆಂಗಳೂರಿನಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಕೋರಿ ಧರಣಿ ಕೂತಿರೋ ಬಿಸಿಯೂಟದ ಕಾರ್ಯಕರ್ತೆಯರ ಬೆಂಬಲಕ್ಕೆ ನಿಲ್ಲೋ ಮೂಲಕ ಹುಚ್ಚಾ ವೆಂಕಟ್ ಮತ್ತೆ ಸದ್ದು ಮಾಡಿದ್ದಾನೆ!

ವೆಂಕಟ ಎಲ್ಲಿಗೇ ಹೋದರೂ ಆತನ ಬೆನ್ನ ಹಿಂದೆ ಕಲ್ಪಿತ ವೆಂಕಟ್ ಸೇನೆ, ಮೂಗಿನ ತುದೀಲಿ ಸಿಂಬಳ ಮತ್ತು ಯಾರಿಗೋ ಬಿಟ್ಟಿ ಅವಾಜು ಇದ್ದಿದ್ದೇ. ಆದರೆ ಈ ಬಾರಿ ಮಾತ್ರ ವೆಂಕಟ ಮಾತಾಡಿರೋದನ್ನು ಯಾರಾದರೂ ಒಪ್ಪಿಕೊಳ್ಳಲೇ ಬೇಕು. ಬಿಸಿಯೂಟದ ಕಾರ್ಯಕರ್ತೆಯರು ತಿಂಗಳಿಗೆ ಎರಡು ಸಾವಿರ ಸಂಬಳ ಮಾತ್ರವೇ ಪಡೆಯುತ್ತಾ ಜೀವನ ಸಾಗಿಸಲು ಹರ ಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲೆಂದೇ ಬೆಂಗಳೂರಿಗೆ ಬಂದು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಮಳೆಯಲ್ಲಿ ಒದ್ದೆಯಾಗಿ ಇವರೆಲ್ಲ ರಣ ಹಿಂಸೆ ಅನುಭವಿಸಿದ್ದರೂ ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಇಂಥಾ ಹೊತ್ತಿನಲ್ಲಿ ಧರಣಿ ಸ್ಥಳಕ್ಕೆ ಏಕಾಏಕಿ ಎಂಟ್ರಿ ಕೊಟ್ಟಿದ್ದು ಹುಚ್ಚಾ ವೆಂಕಟ. ಈ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಮಾತಾಡಿರೋ ವೆಂಕಟ್ ‘ಹೆಣ್ಣುಮಕ್ಕಳನ್ನು ಈ ಥರ ಬೀದಿಗೆ ತಂದು ಕೂರುವಂತೆ ಮಾಡೋದು ತಪ್ಪು. ಕೇವಲ ಎರಡು ಸಾವಿರದ ಇನ್ನೂ ರು ರೂಪಾಯಿ ಕೊಟ್ಟರೆ ಅವರಲ್ಲ ಯಾರಾದರೂ ಜೀವನ ನಡೆಸೋದು ಸಾಧ್ಯವಾ? ಅಂತ ಸರ್ಕಾರವನ್ನು ಪ್ರಶ್ನಿಸಿದ್ದಾನೆ. ಈ ಮಹಿಳೆಯರ ಬೇಡಿಕೆ ಈಡೇರಿಸೋದು ಮಾತ್ರವಲ್ಲದೇ ಬೀದಿಯಲ್ಲಿ ಕೂರುವಂತೆ ಮಾಡಿದ್ದಕ್ಕಾಗಿ ಕ್ಷಮೆ ಕೇಳ ಬೇಕೆಂದೂ ಸರ್ಕಾರವನ್ನು ಆಗ್ರಹಿಸಿದ್ದಾನೆ. ಹೆಣ್ಣು ಮಕ್ಕಳಿಗೆ ತೊಂದರೆಯಾದರೆ ಸದಾ ಸಹಾಯಕ್ಕೆ ನಿಲ್ಲೋದಾಗಿ ಹೇಳಿರೋ ವೆಖಟ, ಹೆಣ್ಣು ಮಕ್ಕಳಿಗಾಗಿ ಜೈಲಿಗೆ ಹೋಗಲೂ ಸಿದ್ಧ ಅಂದಿದ್ದಾನೆ!

ವೆಂಕಟನ ಹುಚ್ಚಾಟಗಳು ಏನೇ ಇದ್ದಿರೂ ಈ ವಿಚಾರದಲ್ಲಿ ಮಾತ್ರ ಆತನ ನಡೆಯನ್ನು ಯಾರಾದರೂ ಮೆಚ್ಚಿಕೊಳ್ಳಲೇ ಬೇಕು. ಯಾಕೆಂದರೆ ಆತ ಒಂದಷ್ಟು ಕಾಳಜಿ ಇಟ್ಟುಕೊಂಡೇ ಬಿಸಿಯೂಟದ ಕಾರ್ಯಕರ್ತೆಯರ ಧರಣಿಗೆ ಬೆಂಬಲ ಸೂಚಿಸಿದ್ದಾನೆ. ಅವರ ಪರವಾಗಿಯೂ ಮಾತಾಡಿದ್ದಾನೆ. ಇಂಥಾ ಸಾಮಾಜಿಕ ಸುಖ ಕಷ್ಟಗಳಿಗೆ ಒಳ್ಳೆ ಮನಸಿನಿಂದ ಮಿಡಿದರೆ ಹುಚ್ಚಾ ವೆಂಕಟನ ಹುಚ್ಚು ತಕ್ಕ ಮಟ್ಟಿಗೆ ಇಳಿದೀತೇನೋ!

Leave a Reply

Your email address will not be published. Required fields are marked *


CAPTCHA Image
Reload Image