One N Only Exclusive Cine Portal

ಹುಚ್ಚ-2 ತಡವಾಗಲು ನಾನೇ ಕಾರಣ ಅಂದ್ರು ಓಂಪ್ರಕಾಶ್!

ಬಹಳಷ್ಟು ಕಾಲದ ನಂತರ ಸಿನಿಮಾ ಬಗ್ಗೆ ಸೀರಿಯಸ್ ಮೂಡಿನಲ್ಲಿ ನಿರ್ದೇಶಕ ಓಂಪ್ರಕಾಶ್ ರಾವ್ ಮಾತಿಗೆ ಸಿಕ್ಕಿದ್ದಾರೆ. ಹುಚ್ಚ-೨ ಚಿತ್ರ ಕೊಂಚ ತಡವಾದುದರ ಭಾರವನ್ನೂ ಧಾರಾಳವಾಗಿ ತಾವೇ ಹೊತ್ತುಕೊಂಡಿರೋ ಅವರು ಇನ್ನೇನು ಬಿಡುಗಡೆಯಾಗಲಿರೋ ಚಿತ್ರದ ಬಗ್ಗೆ ಒಂದಷ್ಟು ಮಾತಾಡಿದ್ದಾರೆ.

ಯಾವುದೇ ಚಿತ್ರ ನಿರ್ದೇಶನ ಮಾಡೋದಕ್ಕಿಂತಲೂ ಮುನ್ನ ಆ ಚಿತ್ರದ ಟೈಟಲ್ಲು ಪ್ರೇಕ್ಷಕರಲ್ಲಿ ಯಾವ ರೀತಿಯ ನಿರೀಕ್ಷೆ ಹುಟ್ಟು ಹಾಕುತ್ತದೆಂಬುದನ್ನು ಅರಿಯಬೇಕು. ಆ ನಂತರದಲ್ಲಿ ಅದೆಲ್ಲವನ್ನು ನೀಗುವಂಥಾ ರೀತಿಯಲ್ಲಿ ಚಿತ್ರವನ್ನು ರೂಪಿಸಬೇಕು. ಈ ಥರದ ಮನಸ್ಥಿತಿ ಹೊಂದಿದ್ದರಿಂದಲೇ ಚಿತ್ರೀಕರಣಕ್ಕೆ ಹೋಗೋದೇ ಕೊಂಚ ತಡವಾಯ್ತು. ಅದಕ್ಕೆ ಕಾರಣ ನಾನೇ. ಆದರೆ ಚೂರು ತಡವಾದರೂ ಅಂದುಕೊಂಡ ರೀತಿಯಲ್ಲೇ ಚಿತ್ರ ಮಾಡಿದ ಖುಷಿ ಇದೆ… ಇದು ನಿರ್ದೇಶಕ ಓಂಪ್ರಕಾಶ್ ರಾವ್ ಹುಚ್ಚ-೨ ಚಿತ್ರ ತಡವಾದುದರ ಬಗ್ಗೆ ಕೊಟ್ಟಿರೋ ಕ್ಲಾರಿಫಿಕೇಷನ್ನು!

ಈ ಹಿಂದೆ ಸುದೀಪ್ ನಟಿಸಿದ್ದ ಹುಚ್ಚ ಚಿತ್ರವನ್ನು ಹುಚ್ಚೇಳುವಂತೆ ಕಟ್ಟಿ ಕೊಟ್ಟಿದ್ದವರು ಓಂಪ್ರಕಾಶ್ ರಾವ್. ಅದೇ ನಿರ್ದೇಶಕರಿಂದು ಮದರಂಗಿ ಕೃಷ್ಣ ಮುಖ್ಯಭೂಮಿಕೆಯಲ್ಲಿರುವ ಹುಚ್ಚ-೨ ಚಿತ್ರ ಮಾಡಿದ್ದಾರೆಂದ ಮೇಲೆ ಅದರ ಬಗೆಗೊಂದು ನಿರೀಕ್ಷೆ ಹುಟ್ಟೋದು ಸಹಜವೇ. ಅಂದಹಾಗೆ ಹುಚ್ಚ ಚಿತ್ರದ ಪ್ರತೀ ಪಾತ್ರಗಳೂ ಕಾಡುವಂತಿದ್ದವಲ್ಲಾ? ಹುಚ್ಚ-೨ ಅಂಥಾದ್ದೇ ಪಾತ್ರಗಳು ಬೇರೊಂದು ನೇಟಿವಿಟಿಯಿಂದ ಬಿಚ್ಚಿಕೊಳ್ಳುತ್ತದೆಯಂತೆ. ಎ ಎಂ ಉಮೇಶ್ ರೆಡ್ಡಿ ನಿರ್ಮಾಣದ ಈ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರದು ತೀರಾ ತಡವಾದಾಗ ಈ ಚಿತ್ರದ ಕಥೆ ಏನು, ನಿಂತು ಹೋಯ್ತಾ ಅಂತೆಲ್ಲ ನಾನಾ ಗುಮಾನಿಗಳು ಹುಟ್ಟಿಕೊಂಡಿದ್ದವು.

“ಸ್ವಲ್ಪ ತಡ ಆಯ್ತು ಕಾರಣ : ಕಾರಣ ನಾವೇ. ಸ್ವಲ್ಪ ದಿನ ಮೈಂಡ್ ಫ್ರೆಷ್ ಮಾಡಿಕೊಂಡು ಮುಂದುವರೆಸೋಣ ಅಂತಾ ಸುಮ್ಮನಾಗಿದ್ವಿ. ನಮ್ಮ ‘ಕಟ್ಟೆ’ ಸಿನಿಮಾ ಫ್ಲಾಪ್ ಆಗಿತ್ತು. ಆ ಸಿನಿಮಾ ನಮ್ಮ ತಪ್ಪು ನಿರ್ಧಾರ ಅಂತಾ ಗೊತ್ತಾಗಿತ್ತು. ಹೀಗಾಗಿ ಲೇಟಾಯ್ತು. ಆದರೆ ಹಾಗೆ ತಡವಾದದ್ದೂ ಕೂಡಾ ಅಚ್ಚುಕಟ್ಟಿನ ಕಾರಣದಿಂದಲೇ” ಎಂಬ ವಿಚಾರವನ್ನು ಸ್ವತಃ ಓಂಪ್ರಕಾಶ್ ರಾವ್ ಅವರೇ ಬಿಚ್ಚಿಟ್ಟಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image