One N Only Exclusive Cine Portal

ಆರ್ಥಿಕ ಶಿಕ್ಷಣ ನೀಡಲು ಮುಂದಾದರೇ ರವಿಮಾಮ?

ಕ್ರೇಜಿಸ್ಟಾರ್ ರವಿಚಂದ್ರನ್ ಸದಾ ಸಿನಿಮಾ ಧ್ಯಾನ ಬಿಟ್ಟರೆ ಬೇರ್‍ಯಾವುದರತ್ತಲೂ ಗಮನ ಹರಿಸುವವರಲ್ಲ. ಅದರಲ್ಲಿಯೇ ಈ ಕ್ಷಣವೂ ಕಳೆದು ಹೋಗಿರುವ ರವಿಚಂದ್ರನ್ ಇದೀಗ ಇಂಡಿಯನ್ ಮನಿ ಡಾಟ್ ಕಾಮ್ ಸಂಸ್ಥೆಯ ಕರ್ನಾಟಕದ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ.

ಜನಸಾಮಾನ್ಯರಿಗೆ ಆರ್ಥಿಕತೆಯ ಬಗ್ಗೆ ಶಿಕ್ಷಣ ಕೊಡುವಂಥಾ ಕೆಲಸವನ್ನು ಇಂಡಿಯನ್ ಮನಿ ಡಾಟ್ ಕಾಮ್ ಮಾಡಿಕೊಂಡು ಬರುತ್ತಿದೆ. ಆರ್ಥಿಕತೆ ಅಂದರೆ ಬರೀ ಕಾಸು ಮಾಡುವುದು ಮಾತ್ರ ಎಂಬ ಭಾವನೆ ಸಾರ್ವತ್ರಿಕವಾಗಿದೆ. ಆದರೆ ಅದರಾಚೆಗಿನ ನಿಜವಾದ ಆರ್ಥಿಕತೆ ಅಂದರೇನು ಎಂಬ ಬಗ್ಗೆ ಈ ಸಂಸ್ಥೆ ಜನಸಾಮಾನ್ಯರಿಗೂ ಅರಿವು ಮೂಡಿಸುತ್ತಿದೆ.

ಈ ಸಂಸ್ಥೆ ಇಂಥಾ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳನ್ನು ಮಾಡುತ್ತಿರೋದರಿಂದಾಗಿ ರವಿಚಂದ್ರನ್ ಇದರ ಬ್ರ್ಯಾಂಡ್ ಅಂಬಾಸಡರ್ ಆಗಲು ಒಪ್ಪಿಕೊಂಡಿದ್ದಾರಂತೆ. ಈ ಸಂಸ್ಥೆಯ ಸಿಇಓ ತಮ್ಮ ಸಂಸ್ಥೆಯ ಬಗ್ಗೆ ಖುದ್ದಾಗಿ ರವಿಚಂದ್ರನ್ ಅವರಿಗೆ ವಿವರಿಸಿದ್ದಾರೆ. ಜನರಿಗೆ ಉಪಯೋಗವಾಗೋ ಕೆಲಸ ಕಾರ್ಯ ಮಾಡುತ್ತಿರೋ ಕಾರಣದಿಂದಲೇ ಇದರಲ್ಲಿ ಭಾಗಿಯಾಗಲು ಕ್ರೇಜಿಸ್ಟಾರ್ ಒಪ್ಪಿಕೊಂಡಿದ್ದಾರೆ.

ಇಂಡಿಯನ್ ಮನಿ ಡಾಟ್ ಕಾಮ್ ಇಂದು ದೇಶಾಧ್ಯಂತ ಕಾರ್ಯ ನಿರ್ವಹಣೆ ಮಾಡುತ್ತಿದೆ. ಜನಸಾಮಾನ್ಯರಿಗೆ ಹಣದ ಮ್ಯಾನೇಜ್ ಮೆಂಟ್, ಅದನ್ನು ಇನ್ಶೂರೆನ್ಸ್ ಮುಂತಾದವುಗಳ ಮೂಲಕ ಎಲ್ಲಾ ಕಾಲಕ್ಕೂ ಉಪಯೋಗವಾಗುವಂತೆ ಕಾಪಾಡಿಕೊಳ್ಳುವ ಬಗೆಗಳ ಬಗ್ಗೆ ಶಿಕ್ಷಣ ನೀಡುತ್ತಿದೆ. ಪ್ರತೀ ದಿನ ಈ ಸಂಸ್ಥೆ ಹತ್ತೊಂಬತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಇಂಥಾ ಶಿಕ್ಷಣ ನೀಡುತ್ತಿದೆ. ಕರ್ನಾಟಕದಲ್ಲಿಯೂ ಹೆಚ್ಚು ಜನರಿಗೆ ಆರ್ಥಿಕ ಶಿಕ್ಷಣ ನೀಡುವ ಗುರಿ ಹೊಂದಿರೋ ಈ ಸಂಸ್ಥೆಗೆ ರವಿಚಂದ್ರನ್ ಇದೀಗ ಸಾಥ್ ನೀಡಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image