ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಷ್ ನಿರ್ದೇಶಕರೆಂದೇ ಹೆಸರಾಗಿರುವವರು ಇಂದ್ರಜಿತ್ ಲಂಕೇಶ್. ಈ ಬಿರುದಾವಳಿ ಇವರ ವ್ಯಕ್ತಿತ್ವಕ್ಕೆ ಅಂಟಿಕೊಂಡಿರುವುದು ಅವರ ದೈಹಿಕ ಅಂಲಂಕಾರಕ್ಕಾಗಲಿ, ಅಂದ ಚೆಂದಕ್ಕಾಗಲೀ ಅಲ್ಲ. ಬದಲಾಗಿ ಅವರೇ ಈವರೆಗೆ ನಿರ್ದೇಶನ ಮಾಡಿರುವ ಚಿತ್ರಗಳು ಮತ್ತು ಅವುಗಳ ಹೊಸತನವೇ ಇಂಥಾದ್ದೊಂದು ಇಮೇಜನ್ನ ಕಟ್ಟಿಕೊಟ್ಟಿವೆ.

ತುಂಟಾಟ ಸಿನಿಮಾ ರಲೀಸಾದ ನಂತರದ ವರ್ಷಗಳಲ್ಲಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳೋ ಪರಿಪಾಠವನ್ನು ಬೆಳೆಸಿಕೊಂಡುಬಂದಿದ್ದಾರೆ. ಅನಾಥಾಶ್ರಮದ ಮಕ್ಕಳಿಗೆ ಬಟ್ಟೆ-ಊಟ ವಿತರಿಸುವುದು, ರಾಷ್ಟ್ರಪಕ್ಷಿ ನವಿಲನ್ನು ದತ್ತು ಪಡೆಯೋದು, ವೀರ ಯೋಧ ಹನುಮಂತ ಕೊಪ್ಪದ್ ಮಡದಿಗೆ ಸನ್ಮಾನಿಸುವ ಮೂಲಕವೂ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಅಜಿತ್.

ಈ ಬಾರಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ, ಸಿದ್ದಗಂಗಾ ಮಠದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪಿ. ಲಂಕೇಶ್ ಅಂದರೇನೆ ಒಂದು ಯೂನಿವರ್ಸಿಟಿಗೆ ಸಮ. ಅವರು ಬರೆದ ಪುಸ್ತಕಗಳು ಇವತ್ತಿಗೂ ವಿಶ್ವವಿದ್ಯಾಲಯಗಳ ಪಠ್ಯವಾಗಿವೆ. ಸಿದ್ದಗಂಗಾ ಮಠದಲ್ಲಿ ಓದಿಬೆಳೆದ ಎಷ್ಟೋ ಜನ ಇಂದು ಪ್ರಪಂಚದ ನಾನಾ ಮೂಲೆಗಳಲ್ಲಿ ದೊಡ್ಡ ಹುದ್ದೆಗಳಲ್ಲಿರುವಂತೆಯೇ, ಲಂಕೇಶರ ಬರವಣಿಗೆಗಳನ್ನು ಓದುತ್ತಲೇ ಜ್ಞಾನ ವೃದ್ದಿಸಿಕೊಂಡ ಅಸಂಖ್ಯಾತರಿದ್ದಾರೆ. ಹೀಗಾಗಿ ತಮ್ಮ ತಂದೆ ಪಿ. ಲಂಕೇಶ್ ಅವರು ಬರೆದ ಪುಸ್ತಕಗಳನ್ನು ಸಿದ್ದಗಂಗಾಮಠದ ವಿದ್ಯಾರ್ಥಿಗಳಿಗೆ ವಿತರಿಸುವ ಮಹತ್ತರವಾದ ಪ್ಲಾನು ಇಂದ್ರಜಿತ್ ಅವರದ್ದು.

ನಾಳೆ, ಅಂದರೆ ಸೆಪ್ಟೆಂಬರ್ ೨೨ರಂದು ಇಂದ್ರಜಿತ್ ಲಂಕೇಶ್ ಸಿದ್ದಗಂಗಾ ಮಠದಲ್ಲಿ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

  #

LEAVE A REPLY

Please enter your comment!
Please enter your name here

19 − ten =