One N Only Exclusive Cine Portal

ಕಾಮುಕರ ವಿರುದ್ಧ ಅಖಾಡಕ್ಕಿಳಿದ ಜಗ್ಗೇಶ್!

ಶ್ರುತಿ ಹರಿಹರನ್ ಇಂಡಿಯಾ ಟುಡೆ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿರೋ ಲೈಂಗಿಕ ಕಿರುಕುಳದ ವಿಚಾರವೀಗ ನಾನಾ ದಿಕ್ಕಿನಲ್ಲಿ ಚರ್ಚೆಗೆ ಕಾರಣವಾಗಿದೆ. ಅದೊಂದು ರಾಷ್ಟ್ರೀಯ ವಾಹಿನಿಯಾದ್ದರಿಂದ ಅದರಲ್ಲಿ ಶ್ರುತಿ ಕನ್ನಡ ಚಿತ್ರರಂಗದ ಕಾಮುಕರ ವಿರುದ್ಧ ಮಾತಾಡಿದ್ದರಿಂದ ಇಲ್ಲಿನ ಬಗ್ಗೆ ಕೆಟ್ಟ ದೃಷ್ಟಿಯಲ್ಲೇ ನೋಡುವ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದಲೇ ಚಿತ್ರರಂಗದಲ್ಲಿರೋ ಕೆಟ್ಟ ಹುಳಗಳನ್ನು ಇಲ್ಲಿಯೇ ಹೊಸಕಿ ಹಾಕಲು ನವರಸ ನಾಯಕ ಜಗ್ಗೇಶ್ ಮುಂದಾಗಿದ್ದಾರೆ!


ಶ್ರುತಿ ಹರಿಹರನ್ ಆಡಿರೋ ಮಾತುಗಳ ಹಿಂದೇ ಅದೇನು ಸತ್ಯವಿದೆಯೋ ಅದು ಆಕೆಗಷ್ಟೇ ಗೊತ್ತಿರೋ ವಿಚಾರ. ಆದರೆ ಚಿತ್ರರಂಗದಲ್ಲಿ ಇಂಥಾ ಸ್ತ್ರೀ ಪೀಡಕರದ್ದೊಂದು ದಂಡೇ ಇದೆ ಎಂಬುದು ಸುಳ್ಳಲ್ಲ. ಆದರೆ ಇಂಥಾ ಕೆಲ ಮಂದಿಯಿಂದ ಕನ್ನಡ ಚಿತ್ರರಂಗದ ಮಾನ ಹರಾಜಾಗೋದನ್ನು ತಪ್ಪಿಸಿ, ಅಂಥಾ ಕಿರುಕುಳಗಳ ಬಗ್ಗೆ ನಟಿಯರು ಧೈರ್ಯವಾಗಿ ದೂರು ನೀಡುವಂಥಾದ್ದೊಂದು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಗ್ಗೇಶ್ ಪ್ರಯತ್ನಿಸಿದ್ದಾರೆ.


ಕನ್ನಡ ಚಿತ್ರರಂಗದಲ್ಲಿ ನಟಿಯರ ಸಮಸ್ಯೆಗಳ ಬಗ್ಗೆ ಜಗ್ಗೇಶ್ ಈಗಾಗಲೇ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಮುನಿರತ್ನ ಜೊತೆ ಚರ್ಚೆ ನಡೆಸಿದ್ದಾರಂತೆ. ಈ ವಿಚಾರವನ್ನು ಗಂಭೀರಜವಾಗಿ ತೆಗೆದುಕೊಂಡಿರುವ ಮುನಿರತ್ನ ಕೂಡಾ ಇದರ ಬಗ್ಗೆ ಸದ್ಯದಲ್ಲಿಯೇ ಸಭೆ ಕರೆದು ಸೂಕ್ತವಾದೊಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರಂತೆ. ಈ ಸಭೆಯಲ್ಲಿ ಪಾಲ್ಗೊಂಡು ತಮಿಗಾದ ಅನ್ಯಾಯ ಏನಿದ್ದರೂ ಬಿಚ್ಚು ಮನಸಿನಿಂದ ಹೇಳಿಕೊಳ್ಳುವಂತೆ ಜಗ್ಗೇಶ್ ಶ್ರುತಿ ಹರಿಹರನ್‌ಗೂ ತಿಳಿಸಿದ್ದಾರಂತೆ.


ಒಂದು ವೇಳೆ ಶ್ರುತಿಗೆ ನಿರ್ಮಾಪಕನೊಬ್ಬನಿಂದ ಕಿರುಕುಳ ನಡೆದದ್ದು ಹೌದೇ ಆದಲ್ಲಿ ಆ ಬಗೆಗಿನ ಸಂಪೂರ್ಣ ವಿವರವನ್ನು ಆಕೆ ಈ ಸಂಭೆಯಲ್ಲಿ ಹೇಳಿಕೊಂಡು ಆತನಿಗೊಂದು ಗತಿ ಕಾಣಿಸಬಹುದು. ಜೊತೆಗೆ ಮುಂದೆಯೂ ಇಂಥಾ ಸಮಸ್ಯೆಗಳಾದಾಗ ನಟಿಯರು ತಕ್ಷಣವೇ ದೂರು ಕೊಟ್ಟು ಕಾಮುಕರನ್ನು ಮಟ್ಟ ಹಾಕುವಂಥಾದ್ದೊಂದು ವ್ಯವಸ್ಥೆಗೂ ಜಗ್ಗೇಶ್ ಶಿಫಾರಸ್ಸು ಮಾಡಿದ್ದಾರಂತೆ.
ಈ ಮೂಲಕ ನಟ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಯಾರೇ ನಟಿ ಇಂಥಾ ಕಿರುಕುಳವಾದರೂ ಆರಂಭದಲ್ಲೇ ಅಂಜದೇ ಹೇಳಿಕೊಳ್ಳಬಹುದು. ಅಂಥವರ ಬೆಂಬಲಕ್ಕೆ ನಾವಿದ್ದೇವೆ ಎಂಬ ಸಕಾರಾತ್ಮಕ ಸಂದೇಶವನ್ನೂ ರವಾನಿಸಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image