Connect with us

ಪೆಟ್ಟಿ ಅಂಗಡಿ

ಉದಯ ಟಿವಿಯಲ್ಲಿಹೊಸ ಧಾರಾವಾಹಿ “ಜೈ ಹನುಮಾನ”

Published

on

ಅಕ್ಟೋಬರ್ ೮ರಿಂದ ರಾತ್ರಿ ೭.೩೦ಕ್ಕೆ
ಮನರಂಜನಾಕ್ಷೇತ್ರದ ಬದಲಾದ ಸನ್ನಿವೇಶದಲ್ಲಿಕಿರುತೆರೆಯೂ ಹಿರಿತೆರೆಯಷ್ಟು ಶ್ರೀಮಂತವಾಗಿದೆ. ವಿನೂತನಕಥೆ, ನಿರೂಪಣೆಗಳ ಜತೆಗೆಅದ್ಧೂರಿ ನಿರ್ಮಾಣಕ್ಕೂ ಹೆಚ್ಚಿನಒತ್ತು ನೀಡಲಾಗುತ್ತಿದೆ. ಈ ದಿಸೆಯಲ್ಲಿಕನ್ನಡ ಮನರಂಜನಾ ವಾಹಿನಿಗಳ ಹಿರಿಯಣ್ಣ ಉದಯ ಟಿವಿ ‘ಜೈ ಹನುಮಾನ್’ ಎಂಬ ಅದ್ಧೂರಿಧಾರಾವಾಹಿಯನ್ನುಕನ್ನಡದ ವೀಕ್ಷಕರಿಗೆ ನೀಡಲು ಸಿದ್ಧತೆ ನಡೆಸಿದೆ.


ಅಕ್ಟೋಬರ್೮ ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀ ದಿನ ರಾತ್ರಿ ೭.೩೦ಕ್ಕೆ ಜೈ ಹನುಮಾನ್‌ಉದಯ ಟಿವಿಯಲ್ಲಿಪ್ರಸಾರವಾಗಲಿದೆ. ಈಗಾಗಲೇ ಪ್ರೋಮೋಗಳು ಪ್ರೇಕ್ಷಕರ ಮನಸೂರೆಗೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ಹವಾ ಸೃಷ್ಟಿಸಿದೆ. ಎಲ್ಲ ವಯೋಮಾನದ ವೀಕ್ಷಕರಿಗೂಇಷ್ಟವಾಗುವಂಥಕಥೆ, ನಿರೂಪಣೆ ಹಾಗೂ ಕಣ್ಮನ ಸೆಳೆಯುವ ನಿರ್ಮಾಣ ಈ ಧಾರಾವಾಹಿಯ ವಿಶೇಷವಾಗಿದೆ.
ಮುಂಬೈ ಮೂಲದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕಾಂಟಿಲೋ ಈ ಧಾರಾವಾಹಿಯನ್ನು ನಿರ್‍ಮಾಣ ಮಾಡುತ್ತಿದೆ. ಈಗಾಗಲೇ ಐವತ್ತಕ್ಕೂ ಹೆಚ್ಚಿನ ಸಂಚಿಕೆಗಳ ಚಿತ್ರೀಕರಣ ಪೂರೈಸಿದ್ದು, ಪ್ರತೀ ಪ್ರೇಂನಲ್ಲೂ ಸಿನಿಮಾದಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ರೋಚಕ ಸನ್ನಿವೇಷಗಳನ್ನು ಹೆಣೆಯಲಾಗಿದ್ದು ಬಿಗಿಯಾದಚಿತ್ರಕಥೆ ಹಾಗೂ ಸತ್ವಯುತ ಸಂಭಾಷಣೆಳು ಈ ಧಾರಾವಾಹಿಯಇನ್ನಷ್ಟು ವಿಶೇಷಗಳಾಗಿವೆ ಎನ್ನುತ್ತಾರೆ ನಿರ್ಮಾಣ ಸಂಸ್ಥೆಯವರು.
ಹದಿನಾಲ್ಕು ಲೋಕಗಳನ್ನೂ ತನ್ನತೆಕ್ಕೆಗೆತೆಗೆದುಕೊಂಡು, ಅಜರಾಮರನಾಗುವ ವರ ಪಡೆದುಕೊಂಡಿದ್ದರಾವಣತನ್ನಅಧಿಕಾರ ಲಾಲಸೆಯಿಂದಇತರ ಜೀವಿಗಳ ಮೇಲೆ ಕ್ರೌರ್ಯಎಸಗುತ್ತಿದ್ದ. ಅವನನ್ನು ಸದೆಬಡಿಯಲು ಹನುಮಂತಜನ್ಮ ತಳೆಯುತ್ತಾನೆ. ಅವನ ಹುಟ್ಟಿನ ಹಿನ್ನೆಲೆ. ಮುಂದೆ ಸಾಗುವ ದಾರಿ, ಆತ ಹೇಗೆ ರಾಮನನ್ನು ಸಂಧಿಸುತ್ತಾನೆ? ರಾವಣನ ಸಂಹಾರಕ್ಕೆ ಹೇಗೆ ಸಾಥ್ ನೀಡುತ್ತಾನೆಇತ್ಯಾದಿ ಕುತೂಹಲಗಳಿಗೆ ಉತ್ತರ ನೀಡುತ್ತದೆಜೈ ಹನುಮಾನ್.


ಅದ್ಧೂರಿ ಸೆಟ್‌ಜತೆಗೆ ಪೂರಕವಾದ ಗ್ರಾಫಿಕ್ಸ್‌ಗಳು ಗತವೈಭವವನ್ನು ಮತ್ತೆತೆರೆಯ ಮೇಲೆ ತಂದರೆ, ಕಲಾವಿದರ ಪ್ರೌಢ ನಟನೆಇಡೀಧಾರಾವಾಹಿಯನ್ನು ಮತ್ತೊಂದುಎತ್ತರಕ್ಕೇಕೊಂಡೊಯುತ್ತದೆ. ಅದರಲ್ಲೂಇಲ್ಲಿನ ವೇಷ ಭೂಷಣಗಳು, ಚಿತ್ರ ವಿಚಿತ್ರ ಹೆಸರುಗಳು ಎಲ್ಲ ವರ್ಗಗಳ ವೀಕ್ಷಕರನ್ನೂ, ಮಕ್ಕಳನ್ನೂ ಹಿಡಿದಿಟ್ಟುಕೊಳ್ಳುತ್ತವೆ ಎನ್ನುತ್ತಾರೆ ನಿರ್ದೇಶಕ ವಾಸು.
ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿರುವವರು ಖ್ಯಾತ ನಿರ್ದೇಶಕ ಬುಕ್ಕಾಪಟ್ಟಣ ವಾಸು. ಕಿರುತೆರೆಯ ನುರಿತ ನರ್ದೇಶಕ, ಬರಹಗಾರ ಬ. ಲ. ಸುರೇಶ್ ‘ಜೈ ಹನುಮಾನ್’ ಗೆ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರಕಥೆ ನೀರಜ್ ಮತ್ತುತಂಡ ಮಾಡುತ್ತಿದ್ದರೆ, ನಿಷಿನ್ ಚಂದ್ರಡಿಓಪಿ ಆಗಿದ್ದಾರೆ. ಸಂತೋಷ್ ಸಂಕಲನದಜವಾಬ್ಧಾರಿ ಹೊತ್ತಿದ್ದಾರೆ. ಕಾಂಟಿಲೋ ಪ್ರೊಡಕ್ಷನ್ಸ್‌ನ ಮುಖ್ಯಸ್ಥಅಭಿಮನ್ಯು ಸಿಂಗ್ ಜತೆ ಯಶಸ್ವಿ ಹಿಂದಿ ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ಹಿಮಾನಿ, ಗೌತಮ್, ಮನಿಷ್ ಪೋಪಟ್ ಮುಂತಾದವರತಂಡಇದೆ.
ತಾರಾಗಣದಲ್ಲಿ ಬಾಲಕ ಹನುಮಾನ್ ಪಾತ್ರವನ್ನು ಪ್ರದ್ಯುಮ್ನ ನಿರ್ವಹಿಸುತ್ತಿದ್ದಾನೆ. ಅಂಜನಾ ಪಾತ್ರವನ್ನು ಪ್ರಿಯಾಂಕಾ ಚಿಂಚೋಳಿ, ಕೇಸರಿಯಾಗಿ ಪ್ರಸನ್ನ, ಶಿವನಾಗಿ ಮಧು, ರಾವಣನಾಗಿ ವಿನಯ್‌ಗೌಡ, ಕೈಕಸಿಯಾಗಿ ರಂಜಿತಾ ಸೂರ್ಯವಂಶಿ, ಪಾರ್ವತಿಯಾಗಿ ನಾಗಶ್ರಿ ವೀಕ್ಷಕರನ್ನುರಂಜಿಸಲಿದ್ದಾರೆ.
ದುಷ್ಟರ ಸಂಹಾರಕ್ಕಾಗಿಅವತರಿಸಿದ ಜೈ ಹನುಮಾನ ಇದೇಅಕ್ಟೋಬರ್ ೮ರಿಂದ ಸೋಮವಾರದಿಂದ ಶುಕ್ರವಾರರಾತ್ರಿ೭.೩೦ ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಪೆಟ್ಟಿ ಅಂಗಡಿ

ಬಿಗ್‌ಬಾಸ್ ಮನೆ ತಲುಪಿದ ಸೂತಕದ ಸುದ್ದಿ!

Published

on

ಪ್ರಯಾಸ ಪಡುತ್ತಿದ್ದಾರೆ. ಎಲ್ಲರ ಮನಸಲ್ಲಿಯೂ ಹಿರಿಯಣ್ಣನನ್ನು ಕಳೆದುಕೊಂಡ ಖಾಲಿತನವೊಂದು ಆವರಿಸಿಕೊಂಡು ಬಿಟ್ಟಿದೆ. ಆದರೆ ಬಿಗ್‌ಬಾಸ್ ಮನೆಯೊಳಗೆ ಬಂಧಿಯಾಗಿ ತಮ್ಮದೇ ಕಿತ್ತಾಟ, ಕೊಸರಾಟಗಳಲ್ಲಿ ಕಳೆದು ಹೋಗಿರೋ ಸ್ಪರ್ಧಿಗಳ ಪಾಲಿಗೆ ಮಾತ್ರ ಹೊರ ಜಗತ್ತಿನ ಪರಿವೆಯೇ ಇಲ್ಲ. ಈ ಶನಿವಾರದ ಕಡೆಯ ಕ್ಷಣದ ವರೆಗೂ ಅವರ್‍ಯಾರಿಗೂ ಅಂಬಿ ಇನ್ನಿಲ್ಲವೆಂಬ ಸಣ್ಣ ಸುಳಿವೂ ಇರಲಿಲ್ಲ.

ಆದರೆ ಈ ಶನಿವಾರ ಎಲಿಮಿನೇಷನ್ ಜೊತೆಗೇ ಎಲ್ಲ ಸ್ಪರ್ಧಿಗಳಿಗೂ ಮತ್ತೊಂದು ಅನಿರೀಕ್ಷಿತ ಆಘಾತ ಕಾದಿತ್ತು. ಆನಂದ್ ಮನೆಯಿಂದ ಹೊರ ಬಿದ್ದ ಬಳಿಕ ಏಕಾಏಕಿ ಸ್ಕ್ರೀನಿನ ಮೇಲೆ ಅಂಬಿ ಅಂತಿಮ ದರ್ಶನದ ದೃಷ್ಯಾವಳಿಗಳು ತೆರೆದುಕೊಳ್ಳುತ್ತಲೇ ಸ್ತಬ್ಧರಾದ ಸ್ಪರ್ಧಿಗಳೆಲ್ಲ ಭೋರಿಟ್ಟು ಅತ್ತಿದ್ದಾರೆ.

ಅಂಬರೀಶ್ ಅಂತಿಮ ದರ್ಶನದ ವೇಳೆಯಲ್ಲಿ ಸುದೀಪ್ ಕೂಡಾ ಕಣ್ಣೀರಾಗಿದ್ದರು. ಹಾಗೆ ನೋಡಿದರೆ ಬಿಗ್‌ಬಾಸ್ ಮನೆ ಮಂದಿಗೆ ಇಂಥಾ ಹೊರ ಜಗತ್ತಿನ ಯಾವ ವಿದ್ಯಮಾನಗಳನ್ನೂ ತಿಳಿಸುವಂತಿಲ್ಲ. ಆದರೆ ಅದನ್ನು ಮೀರಿ ಅಂಬಿ ಇನ್ನಿಲ್ಲವೆಂಬ ವಿಚಾರವನ್ನು ಸುದೀಪ್ ಬಿಗ್‌ಬಾಸ್ ಸ್ಪರ್ಧಿಗಳಿಗೆ ತಿಳಿಸಿದ್ದಾರೆ.
ವಾರದ ಪಂಚಾಯ್ತಿಯೆಲ್ಲ ಮುಗಿದ ನಂತರ ಅಂಬರೀಶ್ ಅಂತಿಮ ದರ್ಶನದ ವೀಡಿಯೋವನ್ನು ಮನೆಯೊಳಗೆ ಭಿತ್ತವಾಗುವಂತೆ ಮಾಡೋ ಮೂಲಕ ಬಿಗ್‌ಬಾಸ್ ಸ್ಪರ್ಧಿಗಳೆಲ್ಲ ಕಂಗಾಲಾಗುವಂಥಾ ವಿಚಾರವೊಂದನ್ನು ಅವರ ಮುಂದೆ ತೆರೆದಿಟ್ಟಿದ್ದಾರೆ.

Continue Reading

ಪೆಟ್ಟಿ ಅಂಗಡಿ

ಬಿಗ್‌ಬಾಸ್ ಆಂಡಿ ಅಂದ್ರೆ ಪರಮ ಕ್ರೂರಿ ಅಂದೋರ್‍ಯಾರು?

Published

on


ಬಿಗ್‌ಬಾಸ್ ಶೋ ಎಂಬುದೇ ಹುಚ್ಚರ ಸಂತೆ. ಹುಚ್ಚಾ ವೆಂಕಟನಂಥವರನ್ನೇ ಜುಟ್ಟು ಕೆದರಿಕೊಂಡು ಬೀದಿಗೆ ಬಿಟ್ಟ ಖ್ಯಾತಿಯೂ ಈ ಶೋಗೇ ಸಲ್ಲುತ್ತೆ. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಈ ಶೋವನ್ನು ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ!

ಇಂಥಾ ಶೋನಲ್ಲಿ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ತುಂಬಿಕೊಳ್ಳೋದು ವಾಡಿಕೆ. ಈ ಬಾರಿಯೂ ಅಂಥಾದ್ದೇ ಒಂದು ಅಸಡ್ಡಾಳ ದೈತ್ಯಾಕೃತಿಯನ್ನು ಮನೊಯೊಳಗೆ ಬಿಟ್ಟುಕೊಳ್ಳಲಾಗಿದೆ. ಆತ ಆಂಡ್ರೀವ್ ಅಲಿಯಾಸ್ ಆಂಡಿ!

ಯಾವುದೇ ಮನುಷ್ಯ ಸಹ್ಯವಾಗೋದು, ಅಸಹ್ಯ ಅನ್ನಿಸೋದು ಅಂದ, ಚೆಂದ, ಆಕೃತಿಗಳಿಂದಲ್ಲ. ಆತನ ವರ್ತನೆಗಳಿಂದ. ಇಂಥಾ ಕಾಮನ್‌ಸೆನ್ಸ್ ಕೂಡಾ ಇಲ್ಲದ ಆಂಡಿಯೆಂಬಾತ ಕೇಲವ ಬಿಗ್‌ಬಾಸ್ ಸ್ಪರ್ಧಿಗಳಿಗೆ ಮಾತ್ರವಲ್ಲದೇ ಪ್ರೇಕ್ಷಕರಿಗೂ ಕಿರಿಕಿರಿಯುಂಟು ಮಾಡುತ್ತಿದ್ದಾನೆ. ಎಂಥಾ ಸಹನೆಯಿರುವವರೂ ಕೂಡಾ ಕಪಾಳ ಚೆದುರಿ ಹೋಗುವಂತೆ ಬಾರಿಸುವಂತೆ ಕಿರಿಕಿರಿ ಉಂಟು ಮಾಡುವ ಈತ ಅದನ್ನೇ ಗೇಮ್ ಪ್ಲ್ಯಾನ್ ಅಂದುಕೊಂಡಿದ್ದಾನೆ. ಉಕ್ಕಿನಂಥಾ ದೇಹ ಹೊಂದಿದ್ದರೂ ಮಗುವಿನಂಥಾ ಮನಸು ಹೊಂದಿರುವ, ಅದನ್ನೇ ಉಳಿಸಿಕೊಂಡು ಹೊರ ಬಂದಿರುವ ಜಿಮ್ ರವಿಯಂಥಾ ರವಿಯೇ ಆಂಡಿಯೊಬ್ಬ ಪರಮ ಕ್ರೂರಿ ಎಂಬರ್ಥದಲ್ಲಿ ಮಾತಾಡುತ್ತಾರೆಂದರೆ ಈತನ ವ್ಯಕ್ತಿತ್ವ ಎಂಥಾದ್ದೆಂಬುದು ಬಿಗ್‌ಬಾಸ್ ಶೋ ನೋಡದವರಿಗೂ ಗೊತ್ತಾಗಿ ಬಿಡುತ್ತೆ!

ಕಿಚ್ಚಾ ಕೇಳಿದೊಂದು ಪ್ರಶ್ನೆಗೆ ಉತ್ತರಿಸಿದ ಜಿಮ್ ರವಿ ಆಂಡಿ ಒಬ್ಬ ಕ್ರೂರಿ, ಕಿರಿಕಿರಿಯ ಆಸಾಮಿ ಅಂತ ನೇರವಾಗಿಯೇ ಹೇಳಿದ್ದಾರೆ. ಅದು ಪ್ರತಿಯೊಬ್ಬ ಪ್ರೇಕ್ಷಕನಿಗೂ ನೂರಕ್ಕೆ ನೂರರಷ್ಟು ಸತ್ಯವೇ ಅನ್ನಿಸಿದೆ. ಆರಂಭದಲ್ಲಿ ಕವಿತಾ ಗೌಡಳನ್ನು ಪುಟ್ಟ ತಂಗಿ ಅಂತ ಪುಂಗಿದ್ದ ಆಂಡಿ ನಂತರ ಅವಳ ಮೇಲೆಯೇ ಲವ್ವಾದಂಥಾ ಡ್ರಾಮಾ ಶುರು ಮಾಡಿದ್ದ. ಈ ಹಿಂದಿನ ಸೀಜನ್ನುಗಳಲ್ಲಿ ಇಂಥಾ ಲವ್ ಸ್ಟೋರಿಗಳ ರೂವಾರಿಗಳನ್ನು ಬರಖತ್ತು ಮಾಡಲಾಗಿತ್ತಲ್ಲಾ? ಅಂಥಾದ್ದೊಂದು ಪ್ಲಾನು ಮಾಡಿಯೇ ಈತ ಕವಿತಾ ಮೇಲೆ ಕ್ಷಶ್ ಆದಂತೆ ನಾಟಕ ಶುರುವಿಟ್ಟಿದ್ದಾನೆಂಬುದು ಯಾರಿಗಾದರೂ ಅರ್ಥವಾಗುವಂತಿದೆ.

ಎಲ್ಲರನ್ನೂ ಇರಿಟೇಟ್ ಮಾಡುತ್ತಾ, ಪಕ್ಕಾ ನರಿ ಬುದ್ಧಿ ಪ್ರದರ್ಶಿಸೋ ಆಂಡಿಗೆ ಇದೀಗ ಸಣ್ಣಗಾಗಿರೋ ಬುಲೆಟ್ ಪ್ರಕಾಶ್ ಜಾಗದಲ್ಲಿ ತನ್ನ ಅಗಾಧ ದೇಹವನ್ನು ಪ್ರತಿಷ್ಠಾಪಿಸೋ ಬಯಕೆ. ಥೇಟು ಬುಲೆಟ್ ಪ್ರಕಾಶನ ಸೋದರ ಸಂಬಂಧಿಯಂತೆ ದೇಹ ಕುಲುಕಿಸಿ ನಗುವ ಆಂಡಿ ಪಾಲಿಗೆ ಬಿಗ್‌ಬಾಸ್ ಶೋನಿಂದಲೇ ಹಾಸ್ಯ ಕಲಾವಿದನಾಗಿ ನೆಲೆಗೊಳ್ಳೋ ತಲುಬು. ಇದರಿಂದಾಗಿಯೇ ಪಚಪಚನೆ ಮಾತಾಡುತ್ತಾ, ಇರಿಟೇಟ್ ಮಾಡೋದನ್ನೇ ಹಾಸ್ಯ ಅಂದುಕೊಂಡಿರೋ ಪರಮ ಮುಠ್ಠಾಳ ಆಂಡಿ!

ಹಾಸ್ಯ ಹುಟ್ಟೋದಕ್ಕೆ ಸೆನ್ಸ್ ಆಫ್ ಹ್ಯೂಮರ್ ಅತ್ಯಗತ್ಯ. ಆದರೆ ಈ ಆಂಡಿಗೆ ಕಾಮನ್ ಸೆನ್ಸೇ ಕಡಿಮೆ ಪ್ರಮಾಣದಲ್ಲಿದೆ. ಅಸಹ್ಯವನ್ನೇ ಹಾಸ್ಯ ಅಂದುಕೊಂಡಿರೋ ಈ ಆಸಾಮಿಯನ್ನು ಹಾಸ್ಯ ನಟನಾಗಿ ನೋಡುವಂತಾದರೆ ಆ ಅಪಹಾಸ್ಯದ ಫಾಯಿದೆ ಬಿಗ್‌ಬಾಸ್ ಮಂದಿಗಲ್ಲದೆ ಬೇರ್‍ಯಾರಿಗೂ ಸಿಕ್ಕಲು ಸಾಧ್ಯವಿಲ್ಲ!

Continue Reading

ಪೆಟ್ಟಿ ಅಂಗಡಿ

ಬಿಗ್‌ಬಾಸ್: ಮಾಡರ್ನ್ ರೈತ ಶಶಿಯ ಒರಿಜಿನಲ್ ಹಿಸ್ಟರಿ!

Published

on


ನಿಜವಾದ ರೈತರು ನಾನಾ ಸಂಕಷ್ಟಗ ಸುಳಿಯಲ್ಲಿ ಸಿಕ್ಕಿ ಏದುಸಿರು ಬಿಡುತ್ತಾ ತಮ್ಮ ಪಾಡಿಗೆ ತಾವು ದುಡಿಯುತ್ತಿದ್ದಾರೆ. ಆದರೆ ಅಂಥಾ ರೈತರ ಹೆಸರು ಹೇಳಿಕೊಂಡು ನಾನಾ ಥರದ ಫಾಯಿದೆ ಗಿಟ್ಟಿಸಿಕೊಳ್ಳುವವರು ಮಾತ್ರ ಎಲ್ಲೆಲ್ಲಿಯೂ ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ. ಹೀಗೆ ರೈತರ ಹೆಸರಿನಲ್ಲಿ ಲಾಭ ಗುಂಜಿಕೊಳ್ಳೋ ಬುದ್ಧಿ ರಾಜಕಾರಣ, ಸಂಘಟನೆಗಳಲ್ಲಿ ಮಾಮೂಲು. ಇದೀಗ ಅದು ಜನಪ್ರಿಯ ಶೋ ಬಿಗ್‌ಬಾಸ್‌ಗೂ ಅಂಟಿಕೊಂಡಿತಾ ಅಂತೊಂದು ಪ್ರಶ್ನೆ ಹುಟ್ಟಲು ಕಾರಣ ಈ ಸಲದ ಸ್ಪರ್ಧಿಯಾಗಿರೋ ಶಶಿ ಅಲಿಯಾಸ್ ಶಶಿಕುಮಾರ್!

ನೋಡಲು ಹ್ಯಾಂಡ್ಸಮ್ ಆಗೇ ಇರೋ ಶಶಿ ಎಂಬ ಹುಡುಗ ಈಗ ಬಿಗ್ ಬಾಸ್ ಸ್ಪರ್ಧಿ. ಆತ ಈ ಶೋಗೆ ಪ್ರವೇಶ ಪಡೆದುಕೊಂಡಿದ್ದೇ ತಾನೊಬ್ಬ ಮಾಡರ್ನ್ ರೈತ ಎಂಬ ಟ್ರಂಪ್ ಕಾರ್ಡ್ ಮೂಲಕ. ಕೃಷಿಯ ವಿಚಾರದಲ್ಲಿಯೇ ಪದವಿ ಪಡೆದು ಆಧುನಿಕ ಪದ್ಧತಿಗಳ ಮೂಲಕ ಕೃಷಿ ಮಾಡುತ್ತಿರೋದಾಗಿ ಈತ ಬೊಂಬಡಾ ಬಜಾಯಿಸಿದ್ದ. ಇಡೀ ರೈತ ಸಂಕುಲಕ್ಕೇ ಮಾಡರ್ನ್ ಕೃಷಿ ಪದ್ಧತಿಯ ಕ್ರಾಂತಿ ಹರಡಲೆಂದೇ ತಾನು ಬಿಗ್ ಬಾಸ್ ಶೋಗೆ ಬಂದಿರೋದು ಎಂಬರ್ಥದಲ್ಲಿಯೂ ಮಾತಾಡಿದ್ದ. ಆದರೀಗ ಈ ಮಾಡರ್ನ್ ರೈತ ಒರಿಜಿನಲ್ ರೈತನಲ್ಲ ಎಂಬಂಥಾ ಗುಮಾನಿಯೊಂದು ವ್ಯಾಪಕವಾಗಿಯೇ ಹರಿದಾಡುತ್ತಿದೆ!

ಕೃಷಿ ವಿಚಾರದಲ್ಲಿ ಎಂಎಸ್‌ಸಿ ಪದವಿ ಪಡೆದುಕೊಂಡಿರೋ ಶಶಿ ತಾನು ಅಪ್ಪಟ ರೈತ ಅಂತ ಹೇಳಿಕೊಂಡು ಈ ಕ್ಷಣಕ್ಕೂ ಅದನ್ನೇ ನಿರೂಪಿಸಲು ಪ್ರಯತ್ನಿಸುತ್ತಿದ್ದಾನೆ. ಆದರೆ ಈತ ಬಿಗ್‌ಬಾಸ್‌ಗೆ ಬರೋದಕ್ಕೂ ಮುನ್ನ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾನೆಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳೂ ಆರಂಭವಾಗಿದೆ. ಕೆಲ ಮಂದಿ ರೈತನೇನು ಧಾರಾವಾಹಿನಗಳಲ್ಲಿ ನಟಿಸ ಬಾರದಾ ಎಂಬಂಥಾ ಸಿನಿಕ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ.

 

ರೈತನಾದವನು ಧಾರಾವಾಹಿಗಲ್ಲಿ ನಟಿಸಿದರೂ ತಪ್ಪಿಲ್ಲ. ಸಿನಿಮಾ ಹೀರೋ ಆಗಿ ಅವತರಿಸಿದರೂ ಖಂಡಿತೂ ಅದು ತಪ್ಪಲ್ಲ. ಆದರೆ ಬಿಗ್‌ಬಾಸ್ ಸ್ಪರ್ಧಿ ಶಶಿ ವಿಚಾರದಲ್ಲಿ ಇಂಥಾದ್ದೊಂದು ಪ್ರಶ್ನೆ ಎದ್ದಿರೋದೇ ಬೇರೆ ಕಾರಣಗಳಿಂದ. ಶಶಿ ತಾನು ಮಾಡರ್ನ್ ರೈತ ಅಂತ ಹೇಳಿಕೊಂಡಿದ್ದರ ಜೊತೆಗೇ ತಾನು ಜಾನಪದ ಕಲಾವಿದ ಅಂತೊಂದು ವಿಚಾರವನ್ನು ಜಾಹೀರು ಮಾಡಿದ್ದ. ಆದರೆ ಅದೇ ಹೊತ್ತಿನಲ್ಲಿ ತಾನು ಒಂದಷ್ಟು ಧಾರಾವಾಹಿಗಳಲ್ಲಿಯೂ ನಟಿಸಿದ್ದೇನೆ, ತಾನು ನಟನೂ ಹೌದು ಅಂತ ಯಾಕೆ ಹೇಳಿಕೊಂಡಿಲ್ಲ? ಇದು ತಾನು ರೈತ ಅಂತ ಗಿಟ್ಟಿಸಿಕೊಳ್ಳಲು ನೋಡುತ್ತಿರೋ ಫಾಯಿದೆ ಅಸ್ತವ್ಯಸ್ತವಾದೀತೆಂಬ ಭಯದ ಸೂಚನೆಯಲ್ಲವೇ?
ಬಿಗ್‌ಬಾಸ್ ಮನೆಯೊಳಗೂ ಕೂಡಾ ಶಶಿ ತಾನು ಆಧುನಿಕ ರೈತ ಅಂತ ಬಿಂಬಿಸಿಕೊಳ್ಳೋದಕ್ಕಾಗಿಯೇ ಲಾಗಾ ಹಾಕುತ್ತಿದ್ದಾನೆ. ಇತ್ತೀಚೆಗೊಂದು ದಿನ ನವರಸ ನಾಯಕ ಜಗ್ಗೇಶ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರಲ್ಲಾ? ಆ ಸಂದರ್ಭದಲ್ಲಿ ಜಗ್ಗೇಶ್ ಅವರೇ ನಟನಂತೆ ಕಾಣ್ತೀಯಲ್ಲಪ್ಪಾ? ಅಂದಾಗಲೂ ಶಶಿ ನಾನು ಮಾಡರ್ನ್ ರೈತ ಅಂದಿದ್ದ. ಕಳೆದ ವಾರ ನಟಿ ಆಶಿಕಾ ರಂಗನಾಥ್ ನೀವು ಆಕ್ಟರ್ರಾ ಅಂತ ಕೇಳಿದಾಗಲೂ ಈತ ಇಲ್ಲ ನಾನು ಮಾಡರ್ನ್ ಫಾರ್ಮರ್ ಅಂತಲೇ ಹೇಳಿಕೊಂಡಿದ್ದ. ಈತನಿಗೆ ತಾನು ರೈತ ಅಂತ ಭೆನಿಫಿಟ್ ಗಿಟ್ಟಿಸಿಕೊಳ್ಳೋ ಇರಾದೆ ಇಲ್ಲದೇ ಹೋಗಿದ್ದರೆ `ನಾನೂ ಒಂದಷ್ಟು ಸೀರಿಯಲ್ ಗಳಲ್ಲಿ ನಟಿಸಿದ್ದೇನೆ’ ಅಂತ ಹೇಳಿಕೊಳ್ಳಬಹುದಿತ್ತಲ್ಲಾ?

ಇದೆಲ್ಲವೂ ಕೂಡಾ ಶಶಿಯ ಗೇಮ್‌ಪ್ಲಾನನ್ನು ಜಾಹೀರು ಮಾಡುತ್ತವೆ. ಅಷ್ಟಕ್ಕೂ ಈತ ತನ್ನೂರಲ್ಲಿ ಅದೇನು ಕೃಷಿ ಮಾಡಿದ್ದಾನೋ, ಅದ್ಯಾವ ಥರದಲ್ಲಿ ಉಳುಮೆ ಮಾಡಿದ್ದಾನೋ ಎಂಬುದು ಬಿಗ್‌ಬಾಸ್ ಆಯೋಜಕರಿಗೂ ಗೊತ್ತಿದೆ ಅನ್ನಲಾಗೋದಿಲ್ಲ. ಕೃಷಿಯಲ್ಲಿ ಎಂಎಸ್‌ದಸಿ ಮಾಡಿಕೊಂಡ ಮಾತ್ರಕ್ಕೆ, ಊರಲ್ಲಿ ಒಂದಷ್ಟು ಜಮೀನಿಟ್ಟುಕೊಂಡು ಎತ್ತು ಕಟ್ಟೋ ಜಾಗದಲ್ಲಿ ಟ್ರ್ಯಾಕ್ಟರು ನಿಂತೇಟಿಗೆ ಅಂಥವರನ್ನು ಮಾಡರ್ನ್ ರೈತ ಅನ್ನಲಾಗೋದಿಲ್ಲ. ರೈತರ ಶ್ರಮವನ್ನು ಗಿಮಿಕ್ಕುಗಳ ಮೂಲಕ ಯಾರು ಏನಕ್ಕೆ ಬಳಸಿಕೊಂಡರೂ ಅದು ಕ್ಷಮಾರ್ಹವಲ್ಲ. ಒಟ್ಟಾರೆಯಾಗಿ ಬಿಗ್‌ಬಾಸ್ ಪ್ರೇಕ್ಷಕರಿಗೂ ಕೂಡಾ ಶಶಿಯ ಮೇಲೊಂದು ಬಲವಾದ ಗುಮಾನಿ ಇದ್ದೇ ಇದೆ.

ಪರ ವಿರೋಧದ ಚರ್ಚೆಗಳೇನೇ ಇದ್ದರೂ ಶಶಿ ನಿಖರವಾಗಿಯೇ ತಾನೊಬ್ಬ ನಟ ಎಂಬ ವಿಚಾರವನ್ನು ಮುಚ್ಚಿಟ್ಟು ರೈತನ ಅವತಾರವೆತ್ತಿದ್ದಾನೆ. ಇಂಥಾ ಆತ್ಮವಂಚನೆಯ ಜೊತೆಗೇ ಬಿಗ್‌ಬಾಸ್ ಹೊಸ್ತಿಲು ದಾಟಿದವ ರಿಂದ ಅದೆಂಥಾ ಪ್ರಾಮಾಣಿಕ ಸ್ಪರ್ಧೆ ನಿರೀಕ್ಷಿಸಲಾದೀತು?

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz