One N Only Exclusive Cine Portal

ಜಾನ್ವಿ ಕಪೂರ್ ಕೈಗೊಂಡ ಪ್ರತಿಜ್ಞೆಯೇನು ಗೊತ್ತಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಜಾನ್ವಿ ಜಿಮ್‌ಹೊಸಾ ವರ್ಷ ಬಂತೆಂದರೆ ಬಹುತೇಕರು ಹೊಸಾ ಹೊಸಾ ಪ್ರತಿಜ್ಞೆಗಳನ್ನ ಕೈಗೊಳ್ಳೋದು ಮಾಮೂಲು. ಇದಕ್ಕೆ ಸೆಲೆಬ್ರಿಟಿ ಅನ್ನಿಸಿಕೊಂಡ ನಟ ನಟಿಯರೂ ಹೊರತಾಗಿಲ್ಲ. ಬಾಲಿವುಡ್‌ನಲ್ಲಿ ಯಾರ‍್ಯಾರು ಅದೇನೇನು ಪ್ರತಿಜ್ಞೆ ಮಾಡಿದ್ದಾರೋ ಅದೆಷ್ಟು ಮಂದಿ ಅದನ್ನ ಮುರಿದು ಮಾಮೂಲು ಹಾದಿಯಲ್ಲೆ ಮುಂದುವರೆಯುತ್ತಿದ್ದಾರೋ ಗೊತ್ತಿಲ್ಲ. ಆದರೆ, ಜಾನ್ವಿ ಕಪೂರ್ ಮಾತ್ರ ಇದೀಗ ಹೊಸಾ ವರ್ಷದ ಪ್ರತಿಜ್ಞೆಯನ್ನ ಸೀರಿಯಸ್ಸಾಗಿ ಜಾರಿಯಲ್ಲಿಟ್ಟಿದ್ದಾಳೆ!


ಅಷ್ಟಕ್ಕೂ ಜಾನ್ವಿ ಕಪೂರ್ ಕೈಗೊಂಡಿರೋ ಪ್ರತಿಜ್ಞೆ ಏನು ಎಂಬ ಕುತೂಹಲ ಸಹಜವೇ. ಅಂದಹಾಗೆ ಆಕೆ ೨೦೧೮ನ್ನು ಫಿಟ್ನೆಸ್ ವರ್ಷ ಅಂತ ಪರಿಗಣಿಸಿ ಮೊದಲ ದಿನದಿಂದಲೇ ಜಿಮ್‌ಗೆ ಹೋಗಲಾರಂಭಿಸಿದ್ದಾಳೆ. ಆಕೆ ತೊಟ್ಟಿರೋ ಕ್ಯೂಟ್ ಆದ ಜಿಮ್ ಡ್ರೆಸ್ ಇದೀಗ ಪಡ್ಡೆಗಳು ಸ್ವಾಧೀನ ಕಳೆದುಕೊಳ್ಳುವಂತೆ ಮಾಡಿದೆ!
ಜಾನ್ವಿ ಜಿಮ್‌ಗೆ ತೆರಳುವಾಗ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿರೋ ಫೋಟೋ ಭರ್ಜರಿ ಫೇಮಸ್ಸಾಗಿದೆ. ಕಪ್ಪು ಬಣ್ಣದ ಕಾಂಬಿನೇಷನ್ನಿನ ಶಾರ್ಟ್ ಡ್ರೆಸ್‌ನಲ್ಲಿ ಕ್ಯೂಟ್ ಆಗಿ ಜಿಮ್ ಬ್ಯಾಗ್ ತಗುಲಿಸಿಕೊಂಡು ಪೋಸು ಕೊಟ್ಟಿರೋ ಜಾನ್ವಿ ಬಾಲಿವುಡ್‌ನ ಇತರೇ ನಟೀಮಣಿಯರಿಗೂ ಫಿಟ್‌ನೆಸ್ ಪಿತ್ಥ ಕೆರಳಿಕೊಳ್ಳುವಂತೆ ಮಾಡಿದ್ದಾಳೆ.
ಜಾನ್ವಿ ಮೂಲಕ ಇದೀಗ ಬಾಲಿವುಡ್‌ನಲ್ಲಿ ಫಿಟ್ನೆಸ್ ಸೂತ್ರ ಭಲೇ ಫೇಮಸ್ಸಾಗಿದೆ. ಜಾನ್ವಿ ಕೈಗೊಂಡಿರೋ ಹೊಸಾ ವರ್ಷದ ಈ ಪ್ರತಿಜ್ಞೆ ಬಾಲಿವುಡ್ ತುಂಬಾ ಸದ್ದು ಮಾಡಿದೆ. ಇದರಿಂದಲೇ ಸ್ಫೂರ್ತಿಗೊಂಡಿರೋ ಇನ್ನೂ ಒಂದಿಷ್ಟು ನಟೀಮಣಿಯರೂ ಜಿಮ್ ದಾರಿ ಹಿಡಿದಿದ್ದಾರಂತೆ.


ಜಗತ್ತಿನ ಯಾವ ಮೇಕಪ್ಪುಗಳೂ ಮರೆಮಾಚದಂತೆ ಚಿತ್ರ ವಿಚಿತ್ರ ಬಾಡಿ ಶೇಪ್ ಹೊಂದಿರೋ ಅನೇಕ ನಟಿಯರಿಗೂ ಇದೀಗ ಜಾನ್ವಿ ಬದಲಾಗಲು ಸ್ಫೂರ್ತಿಯಾಗಿದ್ದಾಳೆ. ಒಂದು ಮೂಲದ ಪ್ರಕಾರ ತನ್ನ ದೇಹವನ್ನು ತಿದ್ದಿ ತೀಡಿ ರೂಪಿಸಿಕೊಳ್ಳುತ್ತಿರೋ ಜಾನ್ವಿ ಹೊಸಾ ಚಿತ್ರವೊಂದಕ್ಕಾಗಿ ಈ ಕಸರತ್ತು ಆರಂಭಿಸಿದ್ದಾಳೆ ಅನ್ನುವವರೂ ಇದ್ದಾರೆ. ಅಂತೂ ಈ ವರ್ಷ ಫಿಟ್ ಆಗಿರೋದರ ಜೊತೆ ಜೊತೆಗೇ ಅರೆಕ್ಷಣವೂ ಫ್ರೀ ಆಗಿರದಂತೆ ಅವಕಾಶಗಳನ್ನು ಪಡೆದು ಬಾಲಿವುಡ್ಡಲ್ಲಿ ಬ್ಯುಸಿಯಾಗಿರೋ ಆಲೋಚನೆ ಜಾನ್ವಿಯದ್ದಂತೆ!


ಅಂದಹಾಗೆ ಈ ಜಾನ್ವಿ ಅಭಿಶೇಕ್ ಬಚ್ಚನ್ ಮದುವೆಯಾದಾಗ ಬಚ್ಚನ್ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳೋ ಡ್ರಾಮಾ ಮಾಡಿ ಅಭಿಷೇಕ್ ನನ್ ಗಂಡ ಅಂತ ಪ್ರಚಾರ ಪಡೆದಿದ್ದ ಮಾಡೆಲ್!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image