One N Only Exclusive Cine Portal

ಬೆಚ್ಚಿ ಬೀಳಿಸುತ್ತಲೇ ಬೆರಗು ಹುಟ್ಟಿಸುವ ಜಯಮಹಲ್!

ಹಾಡುಗಳ ಮೂಲಕವೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದುಕೊಂಡು ಚಿರಪರಿಚಿತರಾಗಿರುವವರು ಹೃದಯಶಿವ. ಅವರು ಮೊದಲ ಸಲ ನಿರ್ದೇಶನ ಮಾಡಿರುವ ಜಯಮಹಲ್ ಚಿತ್ರ ಭಾರೀ ನಿರೀಕ್ಷೆಯ ಒಡ್ಡೋಲಗದಲ್ಲಿ ತೆರೆ ಕಂಡಿದೆ. ಈ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಹಾರರ್ ಚಿತ್ರವೊಂದು ಪ್ರೇಕ್ಷಕರ ಮನ ಗೆದ್ದಿದೆ.

ಹೃದಯಶಿವ ಜಯಮಹಲ್ ಚಿತ್ರಕ್ಕೆ ಹಾರರ್ ಬೇಸಿನ ಕಥಾನಕವೊಂದನ್ನು ಆರಿಸಿಕೊಂಡ ಸುದ್ದಿ ಹೊರ ಬಿದ್ದೇಟಿಗೆ ಹಲವರು ಬೆರಗಾಗಿದ್ದರು. ಈ ಚಿತ್ರ ಬಿಡುಗಡೆಯ ಹಂತ ತಲುಪೋ ಹೊತ್ತಿಗೆ ಅಂಥಾ ಅಚ್ಚರಿಗಳೆಲ್ಲವೂ ಸಾರ್ವತ್ರಿಕ ನಿರೀಕ್ಷೆಯಾಗಿ ಲಕಲಕಿಸಲಾರಂಭಿಸಿತ್ತು.

ಇಂಗ್ಲೆಂಡ್‌ನಲ್ಲಿ ಸೈಕಾಲಜಿ ಪ್ರೊಫೆಸರ್ ಆರಿರುವ ನಾಯಕನ ಕುಟುಂಬ ತಮ್ಮ ಮೂಲ ಹುಡುಕಿಕೊಂಡು ಜಯಮಹಲ್ ಎಂಬ ಅರಮನೆಯಂಥಾ ಬಂಗಲೆಗೆ ಬಂದು ಸೇರಿಕೊಳ್ಳುತ್ತೆ. ನಾಯಕ ವೃತ್ತಿಗೆ ತಕ್ಕಂತೆ ದೇವರು ದೆವ್ವ ಭೂತಗಳನ್ನೆಲ್ಲ ನಂಬೋ ಜಾಯಮಾನದವನಲ್ಲ. ಆದರೆ ಅದ್ಯಾವುದೋ ಆದೃಷ ಶಕ್ತಿ ಅವರ ಅರಿವನ್ನು ಮೀರಿ ಆತನನ್ನು ಮತ್ಯಾವುದೊ ಶಕ್ತಿಯ ತೆಕ್ಕೆ ಸೇರಿಸುತ್ತೆ. ಆತನೊಳಗೆ ಆ ವಂಶದ ರಾಣಿಯೊಬ್ಬಳ ಆತ್ಮ ಆವಾಹನೆಯಾಗುತ್ತೆ. ಇಂತಾ ರೋಚಕ ಭೂತ ಚೇಷ್ಟೆಯಿಂದಲೇ ಈ ಚಿತ್ರ ಇಂಟರ್ವೆಲ್ ಹೊತ್ತಿಗೆಲ್ಲಾ ತಣ್ಣಗೆ ಭಯ ಹುಟ್ಟಿಸಿ ಬೆಚ್ಚಿ ಬೀಳಿಸಿ ಮುಂದೇನೆಂಬ ಕುತೂಹಲದ ವಶವಾಗಿಸಿರುತ್ತೆ.

ಆ ನಂತರವೂ ಚಿತ್ರ ಎಲ್ಲಿಯೂ ಹಿಡಿತ ತಪ್ಪದೆ ಅಂತಿಮ ಘಟ್ಟ ತಲುಪುತ್ತದೆ. ಅದುವರೆಗೂ ಪ್ರೇಕ್ಷಕರನ್ನು ತುದಿ ಸೀಟಿನಲ್ಲಿಯೇ ಪ್ರತಿಷ್ಠಾಪಿಸುತ್ತದೆ ಎಂಬುದು ಜಯಮಹಲ್‌ನ ಗೆಲುವಿನ ಸಂಕೇತ. ನೀನಾಸಂ ಅಶ್ವತ್ಥ್ ಈ ಪಾತ್ರವನ್ನು ನುಂಗಿಕೊಂಡು ನಟಿಸಿದ್ದಾರೆ. ಇದಕ್ಕೆ ಹೃದಯಶಿವ ಅಭಿನಯಿಸಿರೋ ಪಾತ್ರ ಸ್ಪರ್ಧೆ ಒಡ್ಡುವಂತಿರುವುದೂ ಗಮನೀಯ ವಿಚಾರ. ಇನ್ನುಳಿದಂತೆ ಶುಭಾ ಪೂಂಜಾ, ಕರಿಸುಬ್ಬು, ಕೌಸಲ್ಯಾ ಮುಂತಾದವರ ಪತ್ರಗಳೂ ಗಮನಾರ್ಹವಾಗಿವೆ.

ದೆವ್ವ ಮತ್ತು ಅದರ ಸುತ್ತಲಿನ ಪಾತ್ರಗಳ ಮೂಲಕ ಇಡೀ ಜಯಮಹಲ್ ಅನ್ನೇ ಕಂಟ್ರೋಲಿಗೆ ತೆಗೆದುಕೊಂಡು ರೋಚಕವಾಗಿ ಕತೆ ಹೊಸೆಯುವ ಮೂಲಕ ಹೃದಯಶಿವ ಖಂಡಿತವಾಗಿ ನಿರ್ದೇಶಕರಾಗಿ ನೆಲೆ ನಿಲ್ಲುವ ಸ್ಪಷ್ಟ ಸೂಚನೆ ನೀಡಿದ್ದಾರೆ. ಕನ್ನಡದಲ್ಲಿ ಹಾರರ್ ಚಿತ್ರಗಳು ಸದಾ ಒಂದು ಹವಾ ಸೃಷ್ಟಿಸುತ್ತವೆ. ಆದರೆ ಜಯಮಹಲ್ ಒಂದು ದೊಡ್ಡ ಮಟ್ಟದ ಗೆಲುವು ದಾಖಲಿಸೋದರಲ್ಲಿ ಯಾವ ಸಂಶಯವೂ ಇಲ್ಲ.

Leave a Reply

Your email address will not be published. Required fields are marked *


CAPTCHA Image
Reload Image